ಸಾಧಕರೇ, ಸನಾತನದ ಮೇಲಿನ ನಿರ್ಬಂಧದ ಸಂಕಟ ದೂರವಾಗಲು ಈಶ್ವರನ ಮೇಲಿನ ಭಕ್ತಿ
ಮತ್ತು ಶರಣಾಗತಭಾವವನ್ನು ಹೆಚ್ಚಿಸಿರಿ!
‘ಸನಾತನದ ಮೇಲಿನ ನಿರ್ಬಂಧದ ಆಘಾತದಿಂದ ಕೇವಲ ಈಶ್ವರನೇ ಉಳಿಸಬಲ್ಲನು. ಅದಕ್ಕಾಗಿ ಸಾಧಕರು ಭಕ್ತಿಭಾವ ಮತ್ತು ಶರಣಾಗತಭಾವವನ್ನು ಹೆಚ್ಚಿಸಿ ಸಾಧನೆ ಮತ್ತು ಸೇವೆಯ ಬಗ್ಗೆ ಕ್ರಿಯಾಶೀಲರಾಗಿರಬೇಕು. ಮೇಲಿ ನಂತೆ ಎರಡೂ ಹೆಚ್ಚಾದರೆ ಈಶ್ವರನು ಹೇಗೆ ಸಹಾಯ ಮಾಡುತ್ತಾನೆ, ಎಂಬುದು ಮಹಾಭಾರತದಲ್ಲಿನ ಮುಂದಿನ ಎರಡು ಉದಾಹರಣೆಗಳಿಂದ ತಿಳಿಯಬಹುದು.
೧. ನಾರಾಯಣಾಸ್ತ್ರ್ತ್ರಕ್ಕೆ ಅನನ್ಯಭಾವ ದಿಂದ ಶರಣಾದುದರಿಂದ ಪಾಂಡವರು ಮತ್ತು ಅವರ ಸೈನ್ಯಗಳ ರಕ್ಷಣೆಯಾಗು ವುದು : ಮಹಾಭಾರತದ ಯುದ್ಧದ ಸಮಯದಲ್ಲಿ ದ್ರೋಣಾಚಾರ್ಯನ ವಧೆ ಯಾಯಿತು. ಅವನ ಮಗ ಅಶ್ವತ್ಥಾಮನಿಗೆ ಅದು ತಿಳಿದ ನಂತರ ಅದರ ಸೇಡು ತೀರಿಸಲು ಅವನು ಪಾಂಡವರ ಸೈನ್ಯದ ಮೇಲೆ ನಾರಾಯಣಾಸ್ತ್ರ ಬಿಡುತ್ತಾನೆ. ಅದು ಪಾಂಡವ ಸೈನ್ಯವನ್ನು ಧ್ವಂಸ ಮಾಡುತ್ತಿರು ತ್ತದೆ. ಪಾಂಡವರಲ್ಲಿ ಈ ಅಸ್ತ್ರದ ಯುಕ್ತಿಯಿಲ್ಲ ದಿರುವುದರಿಂದ ಅವರು ಹತಾಶರಾಗಿ ಎಲ್ಲರೂ ನೋಡುತ್ತಿದ್ದರು. ಕೊನೆಗೆ ಯುಧಿ ಷ್ಠಿರನು ಭಗವಾನ ಶ್ರೀಕೃಷ್ಣನಲ್ಲಿ ಹೋಗುತ್ತಾನೆ ಮತ್ತು ಅವನಿಗೆ, ‘ಈ ಅಸ್ತ್ರವು ಪ್ರತ್ಯಕ್ಷ ನಿಮ್ಮದೇ ಆಗಿದೆ. ನೀವು ಅದರ ಮೇಲೆ ಅಂಕುಶವಿಡಬಹುದು’, ಎಂದು ವಿನಂತಿಸು ತ್ತಾನೆ. ಆಗ ಶ್ರೀಕೃಷ್ಣನು, ‘ಅಸ್ತ್ರವು ನನ್ನದಾದರೂ ನಾನು ಅದರ ಮೇಲೆ ಅಂಕುಶವಿಡಲು ಆಗುವುದಿಲ್ಲ’, ಎಂದು ಹೇಳುತ್ತಾನೆ. ಆಗ ಯುಧಿಷ್ಠಿರನು, ‘ನಾನು ಏನು ಮಾಡಿದರೆ ಈ ಅಸ್ತ್ರದ ಪ್ರಭಾವವು ಕಡಿಮೆಯಾಗಬ ಹುದು’, ಎಂದು ನೀವೇ ಕೃಪೆ ತೋರಿಸಿ ಹೇಳಬೇಕು ಮತ್ತು ಈ ಸಂಕಟದಿಂದ ಎಲ್ಲ ಸೈನ್ಯ ಮತ್ತು ಪಾಂಡವರ ರಕ್ಷಣೆ ಮಾಡಿ’, ಎಂದು ಹೇಳುತ್ತಾನೆ. ಆಗ ಶ್ರೀಕೃಷ್ಣನು, ‘ನೀವು ನಿಮ್ಮ ಎಲ್ಲ ಸೈನ್ಯಕ್ಕೆ ರಥದಿಂದ ಇಳಿದು ಭೂಮಿಯ ಮೇಲೆ ಬರಲು ತಿಳಿಸಿ ಹಾಗೂ ಎಲ್ಲರೂ ತಮ್ಮ ಶಸ್ತ್ರಗಳನ್ನು ಭೂಮಿಯ ಮೇಲೆ ಇಡಬೇಕು ಮತ್ತು ಅನನ್ಯಭಾವದಿಂದ ನಾರಾಯಣಅಸ್ತ್ರಕ್ಕೆ ಶರಣಾಗಬೇಕು. ಆಗ ಅದು ಶಾಂತವಾ ಗುವುದು’, ಎಂದು ಹೇಳಿದನು. ನಂತರ ಯುಧಿಷ್ಠಿರ ಮತ್ತು ಎಲ್ಲ ಸೈನ್ಯವು ಅದರಂತೆ ಮಾಡುತ್ತಾರೆ. ಆಗ ನಾರಾಯಣಅಸ್ತ್ರವು ಶಾಂತವಾಗುತ್ತದೆ ಮತ್ತು ಅದು ಉಳಿಯು ವುದಿಲ್ಲ. ಹೀಗೆ ಪಾಂಡವರ ಮೇಲಿನ ಸಂಕಟವು ದೂರವಾಗುತ್ತದೆ. ಇದರಿಂದ ಶರಣಾಗತಭಾವದ ಮಹತ್ವವು ಗಮನಕ್ಕೆ ಬರುತ್ತದೆ. ಪ್ರಾರ್ಥನೆ, ನಾಮಜಪ ಮತ್ತು ಭಾವ ಹೆಚ್ಚಾಗಲು ಪ್ರಯತ್ನಿಸುವಾಗ, ಸೇವೆ ಮಾಡುವಾಗ ಭಗವಂತನು ಸಾಧಕರಿಗೆ ಕೆಟ್ಟ ಶಕ್ತಿಗಳಿಂದಾಗುವ ಆಕ್ರಮಣವನ್ನು ಹೇಗೆ ನಿವಾರಿಸುತ್ತಾನೆ, ಎಂಬುದನ್ನು ಭಗವಾನ ಶ್ರೀಕೃಷ್ಣನು ತೋರಿಸಿ ಕೊಟ್ಟನು.
೨. ಅರ್ಜುನನು ಯುದ್ಧದಲ್ಲಿ ಕ್ರಿಯಾ ಶೀಲನಾಗಿದ್ದರಿಂದ ಶ್ರೀಕೃಷ್ಣನು ವೈಷ್ಣ ವಾಸ್ತ್ರದಿಂದ ಅವನ ರಕ್ಷಣೆ ಮಾಡುವುದು : ಮಹಾಭಾರತದ ಯುದ್ಧದಲ್ಲಿ ಅರ್ಜುನ ಮತ್ತು ಕರ್ಣ ಇವರಿಬ್ಬರ ಯುದ್ಧ ನಡೆಯು ತ್ತಿರುತ್ತದೆ. ಕರ್ಣನು ಅರ್ಜುನನ ಮೇಲೆ ವೈಷ್ಣವಾಸ್ತ್ರವನ್ನು ಬಿಡುತ್ತಾನೆ. ಆ ಅಸ್ತ್ರವನ್ನು ಎದುರಿಸುವ ಕ್ಷಮತೆ ಅರ್ಜುನನಲ್ಲಿ ಇರುವು ದಿಲ್ಲ. ಅವನು ಕೇವಲ ಆ ಅಸ್ತ್ರವನ್ನೇ ನೋಡುತ್ತಿರುತ್ತಾನೆ. ಆ ಅಸ್ತ್ರವು ಅವನ ಹತ್ತಿರ ಬರುತ್ತದೆ. ಈಗ ಆ ಅಸ್ತ್ರವು ಅವನ ವಧೆ ಮಾಡುತ್ತದೆ ಎಂಬುವಷ್ಟರಲ್ಲಿ ಆ ಅಸ್ತ್ರ ಮತ್ತು ಅರ್ಜುನನ ನಡುವೆ ಭಗವಾನ ಶ್ರೀಕೃಷ್ಣನು ನಿಲ್ಲುತ್ತಾನೆ ಮತ್ತು ಆ ಅಸ್ತ್ರದ ಪ್ರಭಾವವು ಇಲ್ಲದಂತೆ ಮಾಡಿ ಅರ್ಜುನನ ರಕ್ಷಣೆ ಮಾಡುತ್ತಾನೆ. ಅರ್ಜುನನು ಯುದ್ಧದಲ್ಲಿ ಕ್ರಿಯಾಶೀಲನಾಗಿರುವುದರಿಂದ ಭಗವಂತನು ಅವನ ರಕ್ಷಣೆ ಮಾಡುತ್ತಾನೆ. ನಾವೂ ಭಕ್ತಿ-ಭಾವ ಮತ್ತು ಶರಣಾಗತಭಾವದಿಂದ ಸೇವೆ ಮತ್ತು ಸಾಧನೆಯನ್ನು ಮಾಡಿದರೆ, ಅವನು ನಿರ್ಬಂಧದ ಸಂಕಟವನ್ನು ದೂರ ಮಾಡಲಾರನೇನು ? ಅದಕ್ಕಾಗಿ ಎಲ್ಲರೂ ಸತತ ಪ್ರಾರ್ಥನೆ, ನಾಮಜಪ, ಶರಣಾಗತ ಭಾವ ಮತ್ತು ಸೇವೆಯನ್ನು ಹೆಚ್ಚಿಸಲು ಪ್ರಯತ್ನಿಸಿ ಸನಾತನದ ಮೇಲಿನ ನಿರ್ಬಂಧದ ಸಂಕಟವು ದೂರವಾಗಲು ಈಶ್ವರರೂಪಿ ಪ.ಪೂ. ಡಾಕ್ಟರರಿಗೆ ಮತ್ತು ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡೋಣ’ - ಕು. ಪ್ರಿಯಾಂಕಾ ಲೊಟಲೀಕರ, ಸನಾತನ ಆಶ್ರಮ, ಗೋವಾ.
No comments:
Post a Comment