![]() |
| ಶ್ರೀ. ರಾಜೇಂದ್ರ ಶಿಂದೆ |
ಹಿಂದೂಗಳಲ್ಲಿ ನವಚೈತನ್ಯವು ಜಾಗೃತವಾಗಬೇಕು, ಅವರು ಧರ್ಮಕ್ಕಾಗಿ ಸಮಯ ನೀಡಲು ಪ್ರವೃತ್ತರಾಗ ಬೇಕು, ಧರ್ಮರಕ್ಷಣೆಗಾಗಿ ಕೃತಿಪ್ರವೃತ್ತರಾಗಬೇಕು ಹಾಗೆಯೇ ಧರ್ಮಶಿಕ್ಷಣ ಪಡೆದು ಧರ್ಮಾಚರಣೆ ಮಾಡಬೇಕು ಮತ್ತು ಕ್ರಮೇಣ ಸಾಧನೆಯನ್ನು ಪ್ರಾರಂಭಿಸಿ ಜೀವನವನ್ನು ಸಾರ್ಥಕಗೊಳಿಸಬೇಕು, ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೇಕ ಚಳುವಳಿಗಳನ್ನು ನಡೆಸಲಾಗುತ್ತದೆ ಮತ್ತು ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುತ್ತದೆ. ಈ ಉದ್ದೇಶಗಳು ಪೂರ್ಣಗೊಳ್ಳಬೇಕು ಎಂದು ಕಾರ್ಯಕರ್ತರು ಮುಂದಿನಂತೆ ಪ್ರಯತ್ನಿಸಬೇಕು.
೧. ಜನಸಂಪರ್ಕದ ಆಯೋಜನೆ
ವಿವಿಧ ಕಾರ್ಯಕ್ರಮಗಳ ನಿಮಿತ್ತ ನಾವು ಅನೇಕ ಸಂಘಟನೆಗಳ ಪದಾಧಿಕಾರಿ ಗಳನ್ನು ಮತ್ತು ಪ್ರಮುಖರನ್ನು ಭೇಟಿಯಾಗು ತ್ತೇವೆ. ಆದರೆ ಬಹುಮುಖ್ಯವಾಗಿರುವ ಸಾಮಾನ್ಯ ಹಿಂದೂಗಳ ಬಹುದೊಡ್ಡ ಪ್ರವಾಹವು ಈ ಹಿಂದುತ್ವದ ಕಾರ್ಯದ ಯಾವುದೇ ಪ್ರಮುಖ ವಾಹಿನಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಅವರ ತನಕ ತಲುಪಲು ನಾವು ಮುಂದಿನಂತೆ ಪ್ರಯತ್ನಿಸಬೇಕಾಗಿದೆ.
೨. ನಿಯಮಿತವಾಗಿ ಕಿರುಸಂದೇಶಗಳನ್ನು ಕಳುಹಿಸುವುದು
ಇತ್ತೀಚೆಗೆ ಹೆಚ್ಚುಕಡಿಮೆ ಪ್ರತಿಯೊಬ್ಬರ ಬಳಿ ಸಂಚಾರಿವಾಣಿಯಿರುತ್ತದೆ. ಸಮಿತಿ ಯಿಂದ ಹಿಂದೂಗಳಲ್ಲಿ ಜಾಗೃತಿ ಮೂಡಿಸು ವಂತಹ ಕಿರುಸಂದೇಶಗಳನ್ನು (ಎಸ್. ಎಮ್.ಎಸ್.) ಕಳುಹಿಸಬಹುದು. ಕಿರು ಸಂದೇಶಕ್ಕೆ ಉತ್ತಮ ಪ್ರತಿಕ್ರಿಯೆ ನೀಡುವ ಧರ್ಮಾಭಿಮಾನಿಗಳ ಹೆಸರುಗಳನ್ನು ಪ್ರತ್ಯೇಕವಾಗಿ ನೋಂದಣಿ ಮಾಡಿಟ್ಟು ಕೊಂಡು ಅವರಿಗೆ ನಿಯಮಿತವಾಗಿ ಸಂಚಾರಿ ವಾಣಿಯ ಮೂಲಕ ಅಥವಾ ಪ್ರತ್ಯಕ್ಷ ಭೇಟಿಯಾಗಿ ಸಂಪರ್ಕಿಸಬೇಕು. ಜಿಲ್ಲೆಗಳಲ್ಲಿ ೨ ರಿಂದ ೪ ಸಾವಿರ ಕಿರುಸಂದೇಶಗಳ ಸಂಪರ್ಕವಿದ್ದಲ್ಲಿ ನಮ್ಮ ಜಿಲ್ಲೆಯಲ್ಲಿ ಬಹಳ ಜನರನ್ನು ಸಂಪರ್ಕಿಸಿದ್ದೇವೆ ಎಂದು ನಮಗೆ ಅನಿಸುತ್ತದೆ. ಆದರೆ ನಾವು ನಡೆಸಿದ ಚಳುವಳಿಗಳು, ಆಯೋಜಿಸಿದಂತಹ ಫ್ಯಾಕ್ಟ್‌ನಂತಹ ಇತರ ಕಾರ್ಯಕ್ರಮಗಳು, ಜಿಲ್ಲೆಯಲ್ಲಿನ ಕಾರ್ಯಕರ್ತರ ಸಂಖ್ಯೆ, ಅವರ ಮಿತ್ರರು, ಬಂಧುಗಳು ಇವೆಲ್ಲವನ್ನೂ ನೋಡಿದಾಗ ಜಿಲ್ಲೆಗಳಲ್ಲಿ ೨೫ ರಿಂದ ೫೦ ಸಾವಿರದ ತನಕ ಕಿರುಸಂದೇಶಗಳಿ ಗಾಗುವಷ್ಟು ಸಂಚಾರಿವಾಣಿ ಸಂಖ್ಯೆಗಳಿರ ಬೇಕು. ಅನೇಕರಿಗೆ ಈ ರೀತಿ ಕಿರುಸಂದೇಶ ಗಳನ್ನು ಇತರರಿಗೆ ತಲುಪಿಸಬೇಕು ಎಂದು ಅನಿಸುತ್ತದೆ. ಆದರೆ ಅವರ ಸಂಚಾರಿ ವಾಣಿಯಲ್ಲಿ ಸೌಲಭ್ಯವಿಲ್ಲದಿರುವುದು, ಸಮಯಮಿತಿ ಮುಂತಾದ ಅಡಚಣೆಗಳಿರು ತ್ತವೆ. ಇಂತಹವರನ್ನು ನಾವು ಸಂಪರ್ಕಿಸಿ ಅಥವಾ ಕಿರುಸಂದೇಶ ಕಳುಹಿಸಿ ಅಥವಾ ವಿ-ಅಂಚೆ ಕಳುಹಿಸಿ ಅವರಲ್ಲಿರುವ ಸಂಪರ್ಕ ಸಂಖ್ಯೆಗಳನ್ನು ನಮಗೆ ಕೊಡಲು ಹೇಳ ಬಹುದು. ಈ ರೀತಿ ಪ್ರಯತ್ನಿಸಿ ಚೆನೈಯಲ್ಲಿರುವ ಓರ್ವ ಧರ್ಮಾಭಿಮಾನಿಗಳು ೫೦ ಸಂಪರ್ಕ ಸಂಖ್ಯೆಯನ್ನು ನೀಡಿದರು.
೩. ಕಿರುಸಂದೇಶಗಳನ್ನು ಯಾರಿಗೆಲ್ಲ ಕಳುಹಿಸಬಹುದು ಎಂಬುದರ ವಿಂಗಡನೆ
೩ ಅ. ಅವರವರ ಆಸಕ್ತಿಗನುಸಾರ ಜನರ ಗುಂಪುಗಳನ್ನಾಗಿಸುವುದು
ಅ.ಧರ್ಮಶಿಕ್ಷಣದ ಆಸಕ್ತಿಯಿ ರುವವರು
ಆ. ಧರ್ಮಹಾನಿಯ ಬಗ್ಗೆ ಮಾಹಿತಿ ಬೇಕಾಗಿರುವವರು
ಇ. ಕಾರ್ಯಕ್ರಮಕ್ಕೆ ಉಪಸ್ಥಿತರಿರಲು ಇಚ್ಛೆಯುಳ್ಳವರು
ಈ. ಚಳುವಳಿಯಲ್ಲಿ ಪಾಲ್ಗೊಳ್ಳಲು ಇಚ್ಛೆಯುಳ್ಳವರು
೩ ಆ. ವಯಸ್ಸಿಗನುಸಾರ ಗುಂಪುಗಳ ನ್ನಾಗಿಸುವುದು
ಇಂದು ೧೦ ನೇ ತರಗತಿಯ ವರೆಗಿನ ಮಕ್ಕಳ ಬಳಿಯೂ ಸಂಚಾರಿವಾಣಿ ಯಿರುತ್ತದೆ. ಅದೇ ರೀತಿ ಶಾಲಾಮಕ್ಕಳು, ಮಹಾವಿದ್ಯಾಲಯದ ವಿದ್ಯಾರ್ಥಿಗಳು, ನೌಕರಿ ಮಾಡುತ್ತಿರುವ ಯುವಕರು, ಮಧ್ಯ ವಯಸ್ಕ ಹಾಗೂ ವಯಸ್ಸಾದವರು ಈ ರೀತಿ ಗುಂಪುಗಳನ್ನಾಗಿಸಿ ಆಯಾಯ ವಯಸ್ಸಿಗನುಸಾರ ಅವರಿಗೆ ಕಿರುಸಂದೇಶ ಗಳನ್ನು ಕಳುಹಿಸಬಹುದು.
೪. ನಿಯಮಿತವಾಗಿ ವಿ-ಅಂಚೆ ಕಳುಹಿಸುವುದು
ಕಿರುಸಂದೇಶಗಳಿಗಿಂತ ವಿ-ಅಂಚೆಯಲ್ಲಿ ಹೆಚ್ಚು ವಿವರವಾಗಿ ಮಾಹಿತಿಯನ್ನು ಕಳುಹಿ ಸಬಹುದು. ನಗರಗಳಲ್ಲಿ ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸ ಬಹುದು. ಉದಾ. ಚೆನ್ನೆ ಮತ್ತು ಭಾಗ್ಯನಗರ ಗಳಲ್ಲಿ ನಿಯಮಿತವಾಗಿ ೧೦೦ ಕ್ಕಿಂತಲೂ ಹೆಚ್ಚು ಜನರನ್ನು ವಿ-ಅಂಚೆಯ ಮೂಲಕ ಸಂಪರ್ಕಿಸಲಾಗುತ್ತದೆ. ಇದರಲ್ಲಿ ಸಾಧನೆ, ಧರ್ಮಜಾಗೃತಿ, ವಿವಿಧ ಚಳುವಳಿಗಳು ಮುಂತಾದ ವಿಷಯಗಳ ಮಾಹಿತಿಯನ್ನು ಕಳುಹಿಸಲಾಗುತ್ತದೆ. ನಮ್ಮ ಪ್ರದೇಶದಲ್ಲಿ ಜರುಗುವ ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ನಾವು ಸಂಗಣಕೀಯ ಆಮಂತ್ರಣ ಪತ್ರಿಕೆಯನ್ನು ಕಳುಹಿಸಬಹುದು. ಹಾಗೆಯೇ ಕಾರ್ಯಕ್ರಮವಾದ ನಂತರ ಆಯ್ದ ಛಾಯಾ ಚಿತ್ರಗಳ ಸಹಿತ ಚಿಕ್ಕ ವರದಿ ಹಾಗೂ ವೈಶಿಷ್ಟ ಪೂರ್ಣ ಅಂಶಗಳನ್ನು ಕಳುಹಿಸ ಬಹುದು. ಇತರ ಕಡೆಗಳಲ್ಲಿ ಸಮಿತಿಗೆ ಪ್ರಾಪ್ತವಾದ ಯಶಸ್ಸು ಮತ್ತು ವೈಶಿಷ್ಟ ಪೂರ್ಣ ಘಟನೆಗಳನ್ನೂ ವಿ-ಅಂಚೆಯ ಮೂಲಕ ಕಳುಹಿಸಬಹುದು. ಕಿರುಸಂದೇಶ ಗಳಂತೆಯೇ ಇದರ ವಾಚಕರನ್ನೂ ಆಸಕ್ತಿಗನುಸಾರ ಗುಂಪು ಮಾಡಬಹುದು.
ಉದಾ.
೧. ಧರ್ಮಶಿಕ್ಷಣದಲ್ಲಿ ಆಸಕ್ತಿ ಯಿರುವವರು
೨. ಧರ್ಮಜಾಗೃತಿಯ ಆಸಕ್ತಿ ಯಿರುವವರು
೩. ವಿವಿಧ ‘ಆನ್‌ಲೈನ್’ ಚಳುವಳಿ ಗಳಲ್ಲಿ ಪಾಲ್ಗೊಳ್ಳುವವರು
೫. ಶುಭದಿನಗಳಂದು ಸಂದೇಶ ಕಳುಹಿಸುವುದು ಅಥವಾ ಭೇಟಿಯಾಗುವುದು
ಯುಗಾದಿ, ಗಣಪತಿ, ದಸರಾ, ದೀಪಾವಳಿ, ಮಕರಸಂಕ್ರಾಂತಿ ಮುಂತಾದ ಹಬ್ಬದ ದಿನಗಳಂದು ಆಯಾಯ ಉತ್ಸವಗಳ ಮಹತ್ವವನ್ನು ಹೇಳಿ ಶುಭಾಶಯಗಳನ್ನು ನೀಡುವ ವಿ-ಅಂಚೆಯನ್ನು ಮತ್ತು ಕಿರು ಸಂದೇಶಗಳನ್ನು ಕಳುಹಿಸಬಹುದು. ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಭೇಟಿಯಾಗಿ ಶುಭಾಶಯಗಳನ್ನು ನೀಡಬೇಕು. ಮಹತ್ವದ ಹಿಂದುತ್ವ ವಾದಿಗಳ ಪಟ್ಟಿಯನ್ನು ಮಾಡಿ ಸ್ಥಳೀಯ ವಾಗಿ ಇಬ್ಬಿಬ್ಬರ ಗುಂಪು ಮಾಡಿ ಹೋಗಿ ಶುಭಾಶಯ ಹಾಗೂ ಶುಭಾಶಯ ಪತ್ರಗಳನ್ನು ನೀಡಬೇಕು. ಅನೌಪಚಾರಿಕವಾಗಿ ಭೇಟಿಯಾಗಿ ಉತ್ತಮವಾದ ಆತ್ಮೀಯತೆ ಯನ್ನು ಬೆಳೆಸಲು ಸಹಾಯವಾಗುತ್ತದೆ.
೬. ಧರ್ಮಜಾಗೃತಿ ಸಭೆಯು ಧರ್ಮಾಭಿಮಾನಿಗಳನ್ನು ಕೃತಿಶೀಲಗೊಳಿಸಲು ಅಮೂಲ್ಯ ಅವಕಾಶವಾಗಿದೆ
೬ ಅ. ಕೃತಿ ಮಾಡಲು ಉದ್ಯುಕ್ತ ಗೊಳಿಸುವುದು : ಧರ್ಮಜಾಗೃತಿ ಸಭೆಯ ನಿಮಿತ್ತದಿಂದ ಧರ್ಮಾಭಿಮಾನಿಗಳ ಸಭೆ ತಗೆದುಕೊಳ್ಳುತ್ತೇವೆ. ಅದಕ್ಕಾಗಿ ಅನೇಕ ಜನರನ್ನು ಭೇಟಿಯಾಗಿ ಆಮಂತ್ರಣ ನೀಡು ತ್ತೇವೆ. ಪ್ರತೀಬಾರಿ ಭೇಟಿಯಾಗುವಾಗ ಅವರಿಗೆ ವಿಷಯವನ್ನು ಹೇಳಲಾಗುತ್ತದೆ. ಅವರಿಗೆ ಇತರ ಕಡೆಗಳಲ್ಲಿ ಆಮಂತ್ರಣ ನೀಡಲು ಕರೆಯುವುದು. ಸಭೆ ಸಮಯದಲ್ಲಿ ಸಿದ್ಧತೆಗಾಗಿ ಕರೆಯುವುದು ಅಥವಾ ಧರ್ಮಾಭಿಮಾನಿಗಳನ್ನು ಕರೆದುಕೊಂಡು ಬರುವ ಸೇವೆ ನೀಡುವುದು, ಅದೇರೀತಿ ಸಭೆಯಲ್ಲಿ ಯಾವ ವಿಷಯದ ಮೇಲೆ ಚರ್ಚೆಯಾಗುವುದೋ ಆ ಪ್ರತಿಯೊಂದು ವಿಷಯದ ಬಗ್ಗೆ ಯಾರು ಸಹಾಯ ಮಾಡ ಬಹುದು ಎಂದು ವಿಚಾರಿಸಿ ಪ್ರತ್ಯಕ್ಷ ಆಯೋಜನೆಯಲ್ಲಿ ಅವರನ್ನು ಸೇರಿಸಿಕೊ ಳ್ಳುವುದು, ಈ ರೀತಿಯಲ್ಲಿ ಕೃತಿ ಮಾಡಲು ಉದ್ಯುಕ್ತಗೊಳಿಸಬೇಕು. ಅನೇಕ ಧರ್ಮಾಭಿ ಮಾನಿಗಳಿಗೆ ಸಮಾಜದಲ್ಲಿ ಉತ್ತಮ ಪರಿಚಯವಿರುತ್ತದೆ. ಇದರ ಲಾಭವನ್ನು ಪಡೆದುಕೊಳ್ಳಬಹುದು. ಕಾರ್ಯಕರ್ತರ ಗುಂಪು ತಯಾರಿಸಿ ವಿವಿಧ ವಿಷಯಗಳ ಪ್ರಾಯೋಜಕತ್ವವನ್ನು ಪಡೆದುಕೊಳ್ಳುವುದು, ಅರ್ಪಣೆ ಪಡೆದುಕೊಳ್ಳುವುದು, ಹಾಗೆಯೇ ಫ್ಲೆಕ್ಸ್ ಮತ್ತು ಭಿತ್ತಿಪತ್ರಗಳನ್ನು ಹಾಕುವುದು ಇವೆಲ್ಲವುಗಳ ಆಯೋಜನೆಯನ್ನು ಧರ್ಮಾಭಿಮಾನಿಗಳನ್ನು ಸೇರಿಸಿಕೊಂಡೇ ಮಾಡಬೇಕು. ಪ್ರತಿಯೊಂದು ಊರಿನಲ್ಲಿ ಯುವಕರ ಸಂಘಟನೆಗಳಿರುತ್ತವೆ. ಅವರನ್ನೂ ಧರ್ಮಸಭೆಗೆ ಕರೆಯಬೇಕು.
೬ ಆ. ಕಾರ್ಯಕರ್ತರ ಪ್ರತ್ಯಕ್ಷ ಕಾರ್ಯವನ್ನು ಸಮೀಪದಿಂದ ನೋಡಲು ಅವಕಾಶ ನೀಡುವುದು : ಧರ್ಮಸಭೆಯ ಸಮಯದಲ್ಲಿ ಎಲ್ಲಿ ನಿವಾಸವ್ಯವಸ್ಥೆಯಿರು ತ್ತದೆಯೋ ಅಲ್ಲಿ ಧರ್ಮಾಭಿಮಾನಿಗಳನ್ನು ಒಂದು ದಿನಕ್ಕಾದರೂ ನಿವಾಸಕ್ಕಾಗಿ ಅಥವಾ ಭೇಟಿಗಾಗಿ ಕರೆಯಬೇಕು. ನಿವಾಸವ್ಯವಸ್ಥೆ ಯಲ್ಲಿನ ಸ್ವಚ್ಛತೆ, ಸಾತ್ತ್ವಿಕತೆ, ಸಮರ್ಪಣಾ ಭಾವದಿಂದ ಧರ್ಮಕಾರ್ಯ ಮಾಡುವ ಕಾರ್ಯಕರ್ತರು, ಬೆಳಗ್ಗಿನಿಂದ ರಾತ್ರಿಯ ತನಕ ಸೇವೆಯಲ್ಲಿರುವ ಶಿಸ್ತು, ಪ್ರತಿದಿನದ ಆರತಿ, ಸಮಯ ಸಿಕ್ಕಿದಂತೆ ಮಾಡುವಂತಹ ಪ್ರಾರ್ಥನೆ, ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಾರ್ಯಕರ್ತರ ಮನಸ್ಥಿತಿ, ಮತ್ತು ಧರ್ಮಕಾರ್ಯದ ತಳಮಳ ಇವೆಲ್ಲವುಗಳಿಂದ ಪರೋಕ್ಷವಾಗಿ ಬಹಳ ಉತ್ತಮ ಪರಿಣಾಮವು ಅಲ್ಲಿಗೆ ಬರುವ ಧರ್ಮಾಭಿಮಾನಿಗಳ ಮೇಲಾಗುತ್ತದೆ. ಸಮಿತಿಯ ಕಾರ್ಯದ ಮತ್ತು ಕಾರ್ಯ ಕರ್ತರ ಸೇವಾಭಾವದ ಒಂದು ಅದ್ಭುತ ಪರಿಚಯವು ಈ ನಿಮಿತ್ತದಿಂದಾಗುತ್ತದೆ. ಈ ಸಂಘಟನೆಯು ಇತರ ಎಲ್ಲರಿಗಿಂತ ವಿಭಿನ್ನವಾಗಿದೆ ಮತ್ತು ನಿರಪೇಕ್ಷಭಾವದಿಂದ ಎಲ್ಲವೂ ನಡೆಯುತ್ತದೆ ಎಂಬುದನ್ನು ನೋಡಿ ಅವರು ಪ್ರಭಾವಿತರಾಗುತ್ತಾರೆ ಮತ್ತು ಕಾರ್ಯದಲ್ಲಿ ಇನ್ನೂ ಹೆಚ್ಚು ಉತ್ತಮವಾಗಿ ಜೋಡಿಸಲ್ಪಡುತ್ತಾರೆ ಎಂಬ ಅನುಭವ ವಿದೆ. ಇಂತಹ ರೀತಿಯಲ್ಲಿ ಅನೇಕ ಧರ್ಮಾ ಭಿಮಾನಿಗಳು ಪ್ರತ್ಯಕ್ಷವಾಗಿ ಜೋಡಿಸಲ್ಪಟ್ಟಿ ದ್ದಾರೆ ಮತ್ತು ಜವಾಬ್ದಾರಿ ವಹಿಸಿ ಸಮಿತಿಯ ಕಾರ್ಯ ಮಾಡುತ್ತಿದ್ದಾರೆ.
೬ ಇ. ಧರ್ಮಾಭಿಮಾನಿಗಳಿಗೆ ಪ್ರತ್ಯಕ್ಷ ಕೃತಿಯನ್ನು ಮಾಡಲು ಆಸಕ್ತಿಯಿದೆ ಎಂಬುದನ್ನು ಗಮನದಲ್ಲಿರಿಸುವುದು : ಹೊಸ ಸ್ಥಳಗಳಲ್ಲಿ ಸಭೆಯನ್ನು ತೆಗೆದು ಕೊಳ್ಳುವ ಮೊದಲು ಸಮಿತಿಯ ಯಾವುದಾ ದರೊಂದು ಉಪಕ್ರಮ ಅಥವಾ ಆಂದೋಲನ ಅಥವಾ ಸಭೆಯನ್ನು ಇಂತಹ ಸ್ಥಳಗಳಲ್ಲಿ ಮುಂಗಡವಾಗಿ ಘೋಷಿಸಿ ಅದರಂತೆ ಪ್ರತ್ಯಕ್ಷ ಕೃತಿಯನ್ನು ಆರಂಭಿಸಿದರೆ ಧರ್ಮಾ ಭಿಮಾನಿಗಳು ಉತ್ತಮ ರೀತಿಯಲ್ಲಿ ಕಾರ್ಯ ದೊಂದಿಗೆ ಜೋಡಿಸಲ್ಪಡುವರು. ಏಕೆಂದರೆ ಅನೇಕರಿಗೆ ಪ್ರತ್ಯಕ್ಷ ಕೃತಿಯನ್ನು ಮಾಡಲು ಹೆಚ್ಚು ಆಸಕ್ತಿಯಿರುತ್ತದೆ ಮತ್ತು ಇಂತಹ ಕಾರ್ಯಕ್ರಮಗಳಿಗೆ ಅವರು ಹೆಚ್ಚಿನ ಸಂಖ್ಯೆ ಯಲ್ಲಿ ಬರುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಧರ್ಮಶಿಕ್ಷಣ ವರ್ಗದ ಮಹತ್ವವು ಎಲ್ಲರಿಗೂ ಗಮನಕ್ಕೆ ಬರದ ಕಾರಣ ಧರ್ಮಶಿಕ್ಷಣ ವರ್ಗದಲ್ಲಿನ ಉಪಸ್ಥಿತಿಯು ಕುಂಠಿತವಾಗುತ್ತದೆ ಎಂಬ ಅಡಚಣೆಗೆ ಮೇಲಿನಂತೆ ಆಯೋಜನೆ ಮಾಡಿದರೆ ಪರಿಹಾರ ಸಿಗಬಹುದು.
೭. ವಿವಿಧ ಚಳುವಳಿಗಳಲ್ಲಿ ಧರ್ಮಾಭಿಮಾನಿಗಳ ಸಹಭಾಗ ವನ್ನು ಹೇಗೆ ಹೆಚ್ಚಿಸಬಹುದು ?
೭ ಅ. ಹಸ್ತಾಕ್ಷರ ಅಭಿಯಾನ : ಮಹಿಳೆಯರು ಅಥವಾ ಹೊಸದಾಗಿ ಪಾಲ್ಗೊಳ್ಳುವವರಿಗೆ ಸಹಿ ಅಭಿಯಾನದಲ್ಲಿ ಸೇರಿಸಿಕೊಂಡರೆ ಅವರು ಕೃತಿಶೀಲರಾಗಲು ಸಹಾಯವಾಗುತ್ತದೆ.
೭ ಆ. ಪ್ರತಿಭಟನಾ ಮೆರವಣಿಗೆ ಗಳು ಮತ್ತು ಆಂದೋಲನಗಳು : ಯುವಕರನ್ನು ಪ್ರತಿಭಟನಾ ಮೆರವಣಿಗೆ ಮತ್ತು ಆಂದೋಲನಗಳ ಮೂಲಕ ಜೋಡಿಸಿಕೊಳ್ಳಬೇಕು. ಉದಾ. ವಾಹನ ಮೆರವಣಿಗೆ ಇತ್ಯಾದಿ. ಇದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿಯಿರುತ್ತದೆ.
೭ ಇ. ಸಂಕೇತಸ್ಥಳದಲ್ಲಿನ ಚಳು ವಳಿಗಳು : ಸಂಗಣಕೀಯ ಸೇವೆಯ ಮಾಹಿತಿಯಿರುವವರು, ಕಡಿಮೆ ಸಮಯ ನೀಡುವವರು ಹಾಗೆಯೇ ಯುವಮಂಡಲಿ ಯವರನ್ನು ಚಳುವಳಿಗಳಲ್ಲಿ ಸೇರಿಸಿಕೊಳ್ಳಲು ನಿಯಮಿತವಾಗಿ ವಿ-ಅಂಚೆ ಕಳುಹಿಸಬೇಕು. ಹಳ್ಳಿಗಳಿಗಿಂತ ನಗರಗಳಲ್ಲಿ ಇದಕ್ಕೆ ಹೆಚ್ಚಿನ ಬೆಂಬಲ ಸಿಗುತ್ತದೆ.
೭ ಈ. ಪ್ರತಿಭಟನೆಯ ಬಗ್ಗೆ ದೂರವಾಣಿ ಕರೆ ಮಾಡುವುದು, ಪತ್ರ ಬರೆಯುವುದು ಇತ್ಯಾದಿ : ಮನೆಯಲ್ಲಿ ದ್ದರೂ ಹಿಂದುತ್ವದ ಆಸಕ್ತಿಯಿರುವವರಿಗೆ ಪ್ರತಿಭಟನೆಯ ಬಗ್ಗೆ ದೂರವಾಣಿ ಮಾಡಲು, ಪತ್ರ ಬರೆಯುವಂತಹ ಇತ್ಯಾದಿ ಸೇವೆಗ ಳನ್ನು ಹೇಳಬಹುದು.
೭ ಉ. ನಿವೇದನೆ ನೀಡುವುದು ಇತ್ಯಾದಿ : ಸಂಘಟನೆಯ ಪ್ರಮುಖರನ್ನು ಪತ್ರಿಕಾಗೋಷ್ಠಿ, ಶಿಷ್ಟಮಂಡಲದಲ್ಲಿ ಸೇರಿಸಿ ಕೊಂಡು ಜಿಲ್ಲಾಧಿಕಾರಿಗಳಿಗೆ ನಿವೇದನೆ ನೀಡುವುದು, ಮೆರವಣಿಗೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬಹುದು.
೭ ಊ. ಸಂತರಿಗೆ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳಿಗೆ ಪ್ರತ್ಯಕ್ಷ ಕಾರ್ಯಕ್ರಮದ ಸಮಯದಲ್ಲಿ, ಸಭೆಗಳಲ್ಲಿ ಉಪಸ್ಥಿತರಿರಲು ವಿನಂತಿ ಸಬೇಕು. ಹಾಗೆಯೇ ಪ್ರತಿಯೊಂದು ಚಳುವಳಿಯ ವಿಷಯದಲ್ಲಿ ಅವರೊಂದಿಗೆ ಚರ್ಚಿಸಬೇಕು.
೮. ಧರ್ಮಕ್ಕಾಗಿ ತ್ಯಾಗ ಮಾಡಲು ಪ್ರೇರೇಪಿಸುವುದು
ಅ. ಹಣದ ಸ್ವರೂಪದಲ್ಲಿ ಮಾಸಿಕ ಅರ್ಪಣೆ ನೀಡುವುದು
ಆ. ಧರ್ಮಜಾಗೃತಿ ಸಭೆಗಾಗಿ ತಗಲುವ ವಸ್ತು ಮತ್ತು ಸಾಹಿತ್ಯಗಳನ್ನು ಅರ್ಪಿಸುವುದು
ಇ. ಆಹಾರಧಾನ್ಯಗಳನ್ನು ಅರ್ಪಣೆ ನೀಡುವುದು
ಈ. ಪ್ರಸಾರ ವಸ್ತುಗಳ ಉದಾ. (ಭಿತ್ತಿಪತ್ರ, ಕರಪತ್ರ, ಫ್ಲೆಕ್ಸ್ ಇತ್ಯಾದಿ) ಪ್ರಾಯೋಜಕತ್ವ ತೆಗೆದುಕೊಳ್ಳುವುದು
ಉ. ದೇವಸ್ಥಾನದಲ್ಲಿ ಅಥವಾ ಇತರ ಕಡೆಗಳಲ್ಲಿ ಧರ್ಮಶಿಕ್ಷಣ ಫಲಕಗಳನ್ನು ಪ್ರಾಯೋಜಿಸುವುದು
ಊ. ಧರ್ಮಫಲಕ ಬರೆಯಲು ಸಮಯ ನೀಡುವುದು
ಎ. ಬಂಧುಮಿತ್ರರಿಗೆ ಕಿರುಸಂದೇಶ ಮತ್ತು ವಿ-ಅಂಚೆ ಕಳುಹಿಸುವುದು
ಏ. ತಮ್ಮ ವಾಹನ, ಸಭಾಗೃಹ ಅಥವಾ ಸ್ಥಳಗಳನ್ನು ಧರ್ಮಕಾರ್ಯಕ್ಕೆ ಉಪಯೋಗಿಸಲು ನೀಡುವುದು
ಒ. ಧರ್ಮಕಾರ್ಯದ ಪ್ರಸಾರಕ್ಕಾಗಿ ಹೋಗುವ ಕಾರ್ಯಕರ್ತರ ಭೋಜನ ಮತ್ತು ನಿವಾಸದ ವ್ಯವಸ್ಥೆ ಮಾಡುವುದು
ಓ. ಕಾರ್ಯಕ್ರಮ ಮತ್ತು ಆಂದೋಲ ನಗಳ ಸಂದೇಶ ನೀಡುವುದು
ಔ. ಭಾಷಾಂತರದ ಸೇವೆಯನ್ನು ಮಾಡುವುದು
ಅಂ. ಕಾರ್ಯದಲ್ಲಿ ಪಾಲ್ಗೊಳ್ಳುವುದು (ತನು, ಮನ ಮತ್ತು ಧನ ತ್ಯಾಗ)
ಅ. ಚಿಕ್ಕ ಚಿಕ್ಕ ಧರ್ಮಾಚರಣೆಯ ಕೃತಿಗಳನ್ನು ಮಾಡಲು ಹೇಳುವುದು, ಉದಾ. ಸಾತ್ತ್ವಿಕ ಉಡುಪು ಧರಿಸುವುದು, ಗಂಧ ಹಚ್ಚುವುದು, ನಮಸ್ಕಾರ ಮಾಡು ವುದು, ಪೂಜೆ ಮಾಡುವುದು ಇತ್ಯಾದಿ.
ಆ. ಮನೆಯಲ್ಲಿ ನಾಮಜಪದ ಛಾವಣಿ ಹಾಕಲು ಹೇಳುವುದು
ಇ. ವಾಸ್ತುಶುದ್ಧಿಯ ಚಿಕ್ಕ ಚಿಕ್ಕ ಉಪಾಯಗಳನ್ನು ಹೇಳುವುದು
ಈ. ಉಪ್ಪುನೀರು, ಊದುಬತ್ತಿ, ಪೆಟ್ಟಿಗೆ, ದೃಷ್ಟಿತೆಗೆಯುವುದು ಮುಂತಾದ ಉಪಾಯಗಳ ಮಹತ್ವವನ್ನು ತಿಳಿಸಿ ಅದನ್ನು ಮಾಡಲು ಹೇಳುವುದು
ಉ. ಹಿಂದೂ ಜಾಗೃತಿ, ಬಾಲಸಂಸ್ಕಾರ, ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್, ಫೋರಮ್ ಫಾರ್ ಹಿಂದೂ ಅವೇಕನಿಂಗ್ ಮುಂತಾದ ಸಂಕೇತಸ್ಥಳಗಳನ್ನು ನೋಡಲು ಹೇಳುವುದು
ಊ. ಸಾಧನೆಯ ಆಸಕ್ತಿ ಹುಟ್ಟಿಸುವುದು, ನಾಮಜಪ, ಸತ್ಸಂಗ ಮತ್ತು ಸೇವೆಗಳ ಮಹತ್ವ ಹೇಳುವುದು
ಏ. ಇತರ ಧರ್ಮಾಭಿಮಾನಿಗಳನ್ನು ಕೃತಿಶೀಲರಾಗಲು ಹೇಳುವುದು
- ಶ್ರೀ. ರಾಜೇಂದ್ರ ಶಿಂದೆ.

No comments:
Post a Comment