ನನಗೆ ಯಾರಾದರೂ ತನ್ನ ತಪ್ಪು ಹೇಳಲು ಬಂದರೆ ನಾನು ಅವರಿಗೆ ‘ನನಗೆ ತಪ್ಪು ಹೇಳಬೇಡಿ. ನಿಮಗೆ ತಿಳಿದರೆ ಸಾಕು. ತಪ್ಪು ಮರುಕಳಿಸದಂತೆ ಪ್ರಯತ್ನ ಮಾಡಿ’ ಎಂದು ಹೇಳುತ್ತೇನೆ. ನಾನು ಹೀಗೇಕೆ ಹೇಳುತ್ತೇನೆ ಎಂಬುದು ಇಂದು ಆಕಸ್ಮಿಕ ವಾಗಿ ಗಮನಕ್ಕೆ ಬಂದಿತು. ಅದರ ಕಾರಣ ವೇನೆಂದರೆ ಮನಸ್ಸಿನ ಆನಂದವಾಸ್ಥೆ ಯನ್ನು ಬಿಟ್ಟು ಸ್ವಲ್ಪ ಸಮಯ ಸಾಧಕರ ತಪ್ಪನ್ನು ಕೇಳಲು ನನಗೆ ಬೇಸರವಾಗು ತ್ತದೆ. ದೇವರು ಮಾತ್ರ ಯುಗಾನುಯುಗ ಗಳಿಂದ ವಿಶ್ವದಲ್ಲಿನ ಎಲ್ಲ ಭಕ್ತರು ಆತ್ಮ ನಿವೇದನೆಯಿಂದ ಹೇಳಿದ ಅವರ ಅನೇಕ ತಪ್ಪುಗಳನ್ನು ಶಾಂತವಾಗಿ ಕ್ಷಣಕ್ಷಣಕ್ಕೂ ಕೇಳುತ್ತಿರುತ್ತಾನೆ. ಇದು ಗಮನಕ್ಕೆ ಬಂದ ಮೇಲೆ “ದೇವರು ಎಷ್ಟು ಶ್ರೇಷ್ಠನಿದ್ದಾನೆ", ಎಂದು ತಿಳಿಯಿತು. ನಂತರ, ‘ಬಹಳ ಜನರ ಆತ್ಮನಿವೇದನೆಯು ಭಾವಪೂರ್ಣ ಮತ್ತು ತಳಮಳದಿಂದ ಕೂಡಿರದ ಕಾರಣ ಅವು ದೇವರಲ್ಲಿಗೆ ತಲುಪುವುದೇ ಇಲ್ಲ. ಅದ ರಿಂದ ಅವನಿಗೆ ಬೇಸರವಾಗುವ ಪ್ರಶ್ನೆಯೇ ಬರುವುದಿಲ್ಲ !’ ಎಂದು ಅನಿಸಿತು.
ಅನಂತರ ಗಮನಕ್ಕೆ ಬಂದುದೇನೆಂದರೆ, ‘ದೇವರು ಅಂತರ್ಯಾಮಿಯಾಗಿರುವುದರಿಂದ ಯಾರು ಏನೂ ಹೇಳದಿದ್ದರೂ ಅವನಿಗೆ ಎಲ್ಲ ತಿಳಿದಿರುತ್ತದೆ ಆದರೂ ಅವನಿಗೆ ಬೇಸರವಾಗುವುದಿಲ್ಲ.’ ಮಕ್ಕಳಿಗೆ ಪದೇ ಪದೇ ಹೇಳಿಯೂ ಮಕ್ಕಳು ಸುಧಾರಣೆ ಯಾಗದಿದ್ದರೆ ತಾಯಿ-ತಂದೆಯರಿಗೆ ಬೇಸರವಾಗುತ್ತದೆ. ಆದರೆ ವಿಶ್ವದ ಪಿತನಾಗಿರುವ ಈಶ್ವರನಿಗೆ ಬೇಸರವಾಗು ವುದಿಲ್ಲ. ಇದರಿಂದ ಈಶ್ವರನ ವೈಶಿಷ್ಟ ಗಮನಕ್ಕೆ ಬಂದಿತು. ‘ಸಗುಣ- ನಿರ್ಗುಣ ದಲ್ಲಿ ಭೇದಭಾವವಿಲ್ಲ’ ಇದನ್ನು ಸಾಧ್ಯ ಪಡಿಸುವುದು ಎಷ್ಟು ಕಷ್ಟವಿದೆ. - ಡಾ. ಆಠವಲೆ (ಆಷಾಢ ಕೃ. ಕಲಿಯುಗ ವರ್ಷ ೫೧೧೨ (೨೯.೮.೨೦೧೦))ರಾಜಕೀಯ ಪಕ್ಷ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಗಳಲ್ಲಿ ವ್ಯತ್ಯಾಸ!
೧. ರಾಜಕೀಯ ಪಕ್ಷಗಳು ಕೇವಲ ಚುನಾವಣೆಯ ಸಮಯದಲ್ಲಿ ೫ ವರ್ಷಕ್ಕೊಮ್ಮೆ ಮತ ಯಾಚಿಸಲು ಸಭೆಯನ್ನು ಕರೆಯುತ್ತವೆ. ತದ್ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಚುನಾವಣೆ ಇರಲಿ-ಇರದಿರಲಿ ಪ್ರತೀ ವರ್ಷ ಭಾರತದೆಲ್ಲೆಡೆ ಧರ್ಮಸಭೆಯನ್ನು ಆಯೋಜಿಸುತ್ತದೆ.
೨. ರಾಜಕೀಯ ಪಕ್ಷಗಳು ‘ನಾವು ಇದನ್ನು ನೀಡುತ್ತೇವೆ, ಅದನ್ನು ನೀಡುತ್ತೇವೆ’ ಎಂಬ ಸುಳ್ಳು ಆಶ್ವಾಸನೆ ನೀಡುತ್ತವೆ. ತದ್ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ‘ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ. ಅದರಿಂದ ತಮ್ಮದೇ ಸಾಧನೆಯಾಗುವುದು’, ಎಂಬ ಚಿರಂತನ ಸತ್ಯವನ್ನು ಹೇಳುತ್ತದೆ. - ಡಾ. ಆಠವಲೆ
No comments:
Post a Comment