ಈಗ ದೊಡ್ಡ ನಗರಗಳಲ್ಲಷ್ಟೇ ಸೀಮಿತವಾಗಿರದೇ ಚಿಕ್ಕ ಚಿಕ್ಕ
ಚಾಮರಾಜನಗರ : ೧೨.೧.೨೦೧೧ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಚಾಮರಾಜನಗರದಲ್ಲಿನ ರಕ್ಷಿತಾ ಮಹಲನಲ್ಲಿ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯು ಸಾಯಂ. ೫ ಗಂಟೆಗೆ ಶಂಖನಾದದಿಂದ ಪ್ರಾರಂಭವಾಯಿತು. ಹಿಂದೂ ಜನಜಾಗೃತಿ ಸಮಿತಿಯ, ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡರವರು ದೀಪಪ್ರಜ್ವಲನೆ ಮಾಡಿದರು. ಸನಾತನ ಸಂಸ್ಥೆಯ ವತಿಯಿಂದ ಸೌ. ಸುಮಾ ಮಂಜೇಶ ಇವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು.
ಹಿಂದೆ ವಿದೇಶಿಯರಿಂದ ಅತ್ಯಾಚಾರ, ಆದರೆ ಈಗ ಸ್ವಕೀಯರಿಂದಲೇ ಅತ್ಯಾಚಾರ - ಶ್ರೀ. ಮೋಹನ ಗೌಡ
ನಾವು ಇದುವರೆಗೆ ಮೊಗಲರ, ಬ್ರಿಟೀಷರ ಹಾಗೂ ಪೊರ್ಚುಗೀಸರಿಂದ ದೌರ್ಜನ್ಯಗಳಿಗೆ ಒಳಗಾಗಿದ್ದೇವೆ. ಆದರೆ ಈಗ ನಾವು ಸ್ವಕೀಯರಿಂದಲೇ ಭಯಂಕರವಾದ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದೇವೆ.

No comments:
Post a Comment