ಪ್ರಗತಿಯಾದ ಸಾಧಕರ ಮತ್ತು ಸಂತರ ಬಗ್ಗೆ ...

ಪ್ರಗತಿಯಾದ ಸಾಧಕರ ಮತ್ತು ಸಂತರ ಬಗ್ಗೆ ಸಂಶಯ ಇಡುವುದು, 
ಅಂದರೆ ಪ.ಪೂ. ಡಾಕ್ಟರರ ಬಗ್ಗೆ ಶ್ರದ್ಧೆ ಕಡಿಮೆಯಿದೆ ಎಂಬುದರ ಲಕ್ಷಣವಾಗಿದೆ!

ಧಾರವಾಡದ ಓರ್ವ ಜವಾಬ್ದಾರ ಸಾಧಕಿ ಸೌ. ರೇಖಾ ಮಾಣಗಾಂವಕರವರು ಓರ್ವ ಹೊಸ ಸಾಧಕಿಗೆ ‘ಪ.ಪೂ. ಡಾಕ್ಟರರು ಸಾಧಕರನ್ನು ಶೇ. ೬೦ ರ ಮಟ್ಟದವರೆಂದು ಹೇಗೆ ನಿರ್ಧರಿಸುತ್ತಾರೆ ? ಶೇ. ೬೦ ಮಟ್ಟದ ಸಾಧಕರು ಮತ್ತು ಸಂತರು ಇದೆಲ್ಲ ನಿಜವೇ ?’ ಎಂದು ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಸೌ. ರೇಖಾ ರವರನ್ನು ಜವಾಬ್ದಾರ ಸಾಧಕರು ಅದರ ಬಗ್ಗೆ ಕೇಳಿದಾಗ ಅವರು, ‘ನಾನು ಸಹಜವಾಗಿ ತಿಳಿದುಕೊಳ್ಳಲು ಕೇಳಿದ್ದು’ ಎಂದರು.
ತಮ್ಮ ಮನಸ್ಸಿನಲ್ಲಿ ಯಾವುದೇ ಮಹತ್ವದ ಅಂಶಗಳ ಬಗ್ಗೆ ಏನೇ ಅನುಮಾನವಿದ್ದರೂ, ತಾವು ಜವಾಬ್ದಾರ ಸಾಧಕರೊಂದಿಗೆ ಮಾತನಾಡುವುದು ಅಪೇಕ್ಷಿತವಿದೆ. ಹಾಗೆ ಮಾಡದೇ ಅದರ ಬಗ್ಗೆ ಹೊಸ ಸಾಧಕರೊಂದಿಗೆ ಮಾತನಾಡಿದರೆ ಆ ಸಾಧಕರು ವಿಕಲ್ಪಕ್ಕೊಳಗಾಗುತ್ತಾರೆ. ಸಾಧಕರು ಪ್ರಗತಿಯಾದ ಸಾಧಕರ ಮತ್ತು ಸಂತರ ಬಗ್ಗೆ ಸಂದೇಹ ವ್ಯಕ್ತ ಪಡಿಸುವುದೆಂದರೆ ಪ.ಪೂ. ಡಾಕ್ಟರರ ಬಗ್ಗೆ ಶ್ರದ್ಧೆ ಕಡಿಮೆಯಿದೆ ಎಂಬುದರ ಲಕ್ಷಣವಾಗಿದೆ. ಆದುದರಿಂದ ಇಂತಹ ಸಾಧಕರು ಸಾಧನೆಯನ್ನು ಮೊದಲಿನಿಂದ ಆರಂಭಿಸಿ ಭಾವದ ಸ್ತರದಲ್ಲಿ ಪ್ರಯತ್ನಿಸಲು ಗಮನ ನೀಡಬೇಕು. - ಶ್ರೀ. ಶಂಕರ ನರೂಟೆ, ಬೆಳಗಾವಿ

No comments:

Post a Comment