ಜನರೇ, ಈ ದರೋಡೆಕೋರರನ್ನು ಈಗ ನೀವೇ ನಿಭಾಯಿಸಿರಿ!


ವಿದೇಶಿ ಅಧಿಕೋಶಗಳಲ್ಲಿರುವ ಭಾರತದ ೩೦೦ ಲಕ್ಷ ಕೋಟಿ ರೂಪಾಯಿಗಳನ್ನು ಭಾರತಕ್ಕೆ ಹಿಂತಿರುಗಿ ತರಬೇಕು ಎಂದು ತಳಮಳದಿಂದ ಪ್ರಯತ್ನಿಸುತ್ತಿರುವ ಪ್ರಖರ ರಾಷ್ಟ್ರಪ್ರೇಮಿ ಸಂತ ಹಾಗೂ ಪತಂಜಲಿ ಯೋಗಪೀಠ ಮತ್ತು ದಿವ್ಯ ಯೋಗ ಟ್ರಸ್ಟಿನ ಸಂಸ್ಥಾಪಕ ಯೋಗಗುರು ಪೂಜ್ಯ ರಾಮದೇವಬಾಬಾ ಇವರ ಮೇಲೆ ‘ಜನ್ಮದಿಂದ ಹಿಂದೂ ಆದರೆ ಆಚಾರ ವಿಚಾರದಿಂದ ಧರ್ಮಾಂಧರಾಗಿರುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮತ್ತು ಸಹಚರರು ಮಾತ್ರ ಕಿಡಿ ಕಾರುತ್ತಿದ್ದಾರೆ.
ಕಪ್ಪು ಹಣದ ವಿಷಯದಲ್ಲಿ ಚಳುವಳಿ ನಡೆಸುವ ಮೊದಲು ಪೂಜ್ಯ ರಾಮದೇವ ಬಾಬಾರವರು ತಮ್ಮ ಸ್ವಂತದ ಸಂಪತ್ತು ಹಾಗೂ ಅದರ ಮೂಲವನ್ನು ಘೋಷಿಸಬೇಕು, ಅವರ ಸಂಪತ್ತಿನ ಬಗ್ಗೆ ಕೇಂದ್ರಿಯ ತನಿಖಾ ದಳದ ಮೂಲಕ ವಿಚಾರಣೆ ನಡೆಸಬೇಕು ಎಂಬ ಸಂತರನ್ನು ಅವಮಾನಿಸುವಂತಹ ರಾಷ್ಟ್ರದ್ರೋಹಿ ಹೇಳಿಕೆಯನ್ನು ಸಿಂಗ್ ಇವರು ನೀಡಿದ್ದಾರೆ. ಸಿಂಗ್ ಅಥವಾ ಕಾಂಗ್ರೆಸ್‌ನ ಯಾವುದೇ ನೇತಾರರು ಧರ್ಮಾಂಧರ ಗುರುಗಳನ್ನು ಅಥವಾ ಯಾವುದೇ ಕ್ರೈಸ್ತ ಪಾದ್ರಿಗಳನ್ನು ಟೀಕಿಸುವ ಅಥವಾ ಅವರ ಸಂಪತ್ತಿನ ಬಗ್ಗೆ ಪ್ರಶ್ನಿಸುವ ಧೈರ್ಯವನ್ನು ಎಂದೂ ತೋರಿಸಲಿಲ್ಲ. ಸಿಂಗ್ ಮತ್ತು ಅವರ ಸಹಚರರ ಈ ಹೇಳಿಕೆಗಳಿಂದ ಅವರ ಹಿಂದೂದ್ವೇಷವೇ ಪ್ರಕಟವಾಗುತ್ತಿದೆ.

ವಿಚಾರಣೆಗೆ ಆಗ್ರಹ, ಇದು ರಾಷ್ಟ್ರಪ್ರೇಮಿ ಸಂತರನ್ನು ಮುಗಿಸುವ ಷಡ್ಯಂತ್ರ !
ಕೇಂದ್ರೀಯ ತನಿಖಾ ದಳವು ಅಧಿಕಾರಾರೂಢರ ಕೈಯಲ್ಲಿರುವ ಬೆದರು ಗೊಂಬೆಯಾಗಿದೆ. ಈ ದಳದ ಅಧಿಕಾರಿಗಳು ರಾಜಕಾರಣಿಗಳ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಈ ದಳವು ರಾಷ್ಟ್ರದ್ರೋಹ ಬಗೆಯುವ ಕ್ವತ್ರೋಚಿಯನ್ನು ಮುಕ್ತಗೊಳಿಸುತ್ತದೆ, ರಾಜಕಾರಣಿಗಳಿಗೆ ಅಪಾಯ ತಂದೊಡ್ಡುವ ಪ್ರಕರಣಗಳನ್ನು ಮುಚ್ಚಿಹಾಕುತ್ತದೆ; ಆದರೆ ರಾಷ್ಟ್ರಪ್ರೇಮಿಗಳನ್ನು ಸುಳ್ಳು ಆರೋಪದಡಿಯಲ್ಲಿ ಸಿಲುಕಿಸಿ ಅವರ ಮಾನಹಾನಿಗೈಯ್ಯಲು ಹಿಂದೆ ಮುಂದೆ ನೋಡುವುದಿಲ್ಲ. ಸ್ವಲ್ಪದರಲ್ಲಿ ಹೇಳುವುದಾದರೆ ರಾಜಕಾರಣಿಗಳ ಕೈಗೊಂಬೆಯಾಗಿರುವ ಈ ದಳದಿಂದ ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ತನಗೆ ಬೇಕಾದಂತೆ ವರದಿಯನ್ನು ತಯಾರಿಸಿಕೊಳ್ಳಲಿದೆ ಮತ್ತು ಪೂಜ್ಯ ರಾಮದೇವಬಾಬಾರನ್ನು ಅವಮಾನಿಸಲು ಪ್ರಯತ್ನಿಸಲಿದೆ. ಸದ್ಯದ ಸ್ಥಿತಿಯಲ್ಲಿ ಜನತೆಯಲ್ಲಿ ಜಾತ್ಯತೀತ ರಾಜಕಾರಣಿಗಳ ಭ್ರಷ್ಟ ಕಾರುಬಾರಿನ ಬಗ್ಗೆ ಜಿಗುಪ್ಸೆ ಮೂಡುತ್ತಿದೆ. ಇದರಿಂದ ರಾಜಕಾರಣಿಗಳ ಭ್ರಷ್ಟ ಕಾರುಬಾರುಗಳಿಂದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಇಂತಹ ಹೀನ ಮಟ್ಟದ ಪ್ರಯತ್ನ ಮಾಡುತ್ತಿದೆ. ಜನತೆಯೇ ಈಗ ಯೋಗಗುರು ರಾಮದೇವಬಾಬಾ ಇವರ ಹಿಂದೆ ದೃಢವಾಗಿ ನಿಂತು ಅವರನ್ನು ಬೆಂಬಲಿಸಿ ಜಾತ್ಯತೀತ ರಾಜಕಾರಣಿಗಳಿಗೆ ಅವರ ಯೋಗ್ಯಜಾಗವನ್ನು ತೋರಿಸಿ ಕೊಡಬೇಕು.
ಕಪ್ಪು ಹಣದ ವಾಸ್ತವಿಕತೆ !
ಮಹಾಧಿಕಾರಿಯಾಗಲು ನೋಡುತ್ತಿರುವ ಭಾರತದ ತುಲನೆಯಲ್ಲಿ ನೈಜೀರೀಯಾ ಒಂದು ಚಿಕ್ಕ ಹಾಗೂ ಹಿಂದುಳಿದ ಆಫ್ರಿಕಾಖಂಡದ ದೇಶ ವಾಗಿದೆ. ಈ ದೇಶದ ತತ್ಕಾಲೀನ ರಾಷ್ಟ್ರಾಧ್ಯಕ್ಷ ಸಾನಿ ಆಬಾ ಇವರು ೧೫ ಅಬ್ಜ ರೂಪಾಯಿಗಳನ್ನು ಸ್ವಿಸ್ ಅಧಿಕೋಶದಲ್ಲಿ ಇರಿಸಿದ್ದರು. ಹೊಸ ದಾಗಿ ಅಧಿಕಾರಕ್ಕೆ ಬಂದಿರುವ ರಾಜಕಾರಣಿಗಳು ತೀವ್ರ ಕಾನೂನು ಹೋರಾಟ ನಡೆಸಿ ಈ ಹಣವನ್ನು ತಮ್ಮ ದೇಶಕ್ಕೆ ಹಿಂತಿರುಗಿ ತಂದರು. ಜರ್ಮನಿಯೂ ಕ್ರಿ.ಶ. ೨೦೦೭ ರಲ್ಲಿ ವಿದೇಶದಲ್ಲಿ ಕಪ್ಪು ಹಣವನ್ನು ಇರಿಸಿದವರ ಪಟ್ಟಿಯನ್ನು ಪಡೆದಿತ್ತು. ಈ ಪಟ್ಟಿಯಲ್ಲಿ ಭಾರತ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಈ ದೇಶಗಳ ನಾಗರಿಕರದ್ದೂ ಹೆಸರುಗಳಿದ್ದವು. ಜರ್ಮನಿಯೂ ಈ ಹೆಸರನ್ನು ನೀಡಲು ಸಿದ್ಧವಿತ್ತು. ಅಮೇರಿಕಾವು ಈ ಹೆಸರುಗಳನ್ನು ಪಡೆದು ಕ್ರಿ.ಶ. ೨೦೦೯ ರಲ್ಲಿ ಸ್ವಿಝರ್ಲ್ಯಾಂಡ್‌ನಲ್ಲಿರುವ ಯುಬಿಎಸ್ ಈ ಸ್ವಿಸ್ ಅಧಿಕೋಶಗಳ ಸಂಘಟನೆಗಳಿಂದ ಅಮೇರಿಕಾದ ನಾಗರಿಕರ ೩೫ ಅಬ್ಜ ಕಪ್ಪು ಹಣವನ್ನು ದೇಶಕ್ಕೆ ಹಿಂತಿರುಗಿ ತಂದಿತ್ತು. ಈ ಸಂಘಟನೆಯು ೯೦ ಸಾವಿರ ಕೋಟಿ ರೂಪಾಯಿಗಳ ಕಪ್ಪುಹಣದ ಸಂಪೂರ್ಣ ಮಾಹಿತಿಯನ್ನು ಅಮೇರಿಕಾಕ್ಕೆ ನೀಡಿತ್ತು. ಭಾರತವು ಈ ಮಾಹಿತಿ ಸಿಗುತ್ತಿರುವ ಪಟ್ಟಿಯನ್ನು ಪಡೆಯಲು ಒಂದು ವರ್ಷ ಕಾಲಹರಣ ಮಾಡಿತು ಮತ್ತು ಪಟ್ಟಿ ಪಡೆದ ನಂತರ ಅದರ ಬಗ್ಗೆ ಇಂದಿನ ತನಕ ಯಾವುದೇ ಕಾರ್ಯಾಚರಣೆಯನ್ನು ನಡೆಸಲಿಲ್ಲ. ಇದುವೇ ಭಾರತದ ಅಂದರೆ ಅಹೋರಾತ್ರಿ ದೇಶವನ್ನು ಲೂಟಿಗೈಯ್ಯುವ ಜಾತ್ಯತೀತ ರಾಜಕಾರಣಿಗಳ ನಿಜರೂಪವಾಗಿದೆ. ಅನೇಕ ತಜ್ಞರ ಸ್ಪಷ್ಟ ಅಭಿಪ್ರಾಯವೇನೆಂದರೆ ವಿದೇಶದಲ್ಲಿ ಕಪ್ಪು ಹಣವನ್ನು ಇರಿಸುವವರಲ್ಲಿ ಅಧಿಕಾರಾರೂಢ ಪಕ್ಷ ಮತ್ತು ಅವರೊಂದಿಗೆ ಸಂಬಂಧಿತ ಅಧಿಕಾರಿಗಳು ಮತ್ತು ಉದ್ಯಮಿಗಳು ಸೇರಿದ್ದಾರೆ. ಇದರಿಂದಲೇ ಕಪ್ಪು ಹಣದ ಸಂದರ್ಭದಲ್ಲಿ ಯಾರಾದರೂ ಮಾತನಾಡಿದ ತಕ್ಷಣ ಕಪ್ಪು ಹಣದ ಸಂದರ್ಭದಲ್ಲಿ ಮಾತನಾಡುವವರು ವಿದೇಶಿ ಶಕ್ತಿಗಳ ಕೈಗೊಂಬೆಗಳಾಗಿದ್ದಾರೆ ಎಂದು ನರಿಗಳಂತೆ ಊಳಿಡಲು ಕಾಂಗ್ರೆಸ್‌ನವರು ಪ್ರಾರಂಭಿಸುತ್ತಾರೆ. ಪೂಜ್ಯ ರಾಮದೇವಬಾಬಾರವರ ಮೇಲೆ ಸಿಂಗ ಮತ್ತು ಅವರ ಸಹಚರರ ಆರೋಪವು ಇದೇ ಮಾನಸಿಕತೆಯದ್ದಾಗಿದೆ.
ಕಾಂಗ್ರೆಸ್‌ನವರು ಪೂಜ್ಯ ರಾಮದೇವಬಾಬಾರವರ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿ !
ಸಿಂಗ ಮತ್ತು ಅವರ ಭ್ರಷ್ಟ ಸಹಚರರು ನೀಡಿದ ಸವಾಲನ್ನು ಪೂಜ್ಯ ರಾಮದೇವ ಬಾಬಾರವರು ಸ್ವೀಕರಿಸಿದ್ದಾರೆ. ಅವರು ಯಾವುದೇ ವಿಚಾರಣೆಯನ್ನು ಎದುರಿಸಲು ಸಿದ್ಧತೆಯನ್ನು ತೋರಿಸಿದ್ದಾರೆ. ಈ ಸಿದ್ಧತೆಯನ್ನು ತೋರಿಸುವಾಗ ಪೂಜ್ಯ ರಾಮದೇವಬಾಬಾರವರು ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನವರ ಸವಾಲನ್ನು ಸ್ವೀಕರಿಸುವ ಧೈರ್ಯವನ್ನು ತೋರಿಸಬೇಕು. ಆದರೆ ಕಾಂಗ್ರೆಸ್‌ನವರು ಇದನ್ನು ಎಂದೂ ಸ್ವೀಕರಿಸಲಾರರು ಎಂಬುದು ಖಚಿತ. ಕಪ್ಪು ಹಣವನ್ನು ಭಾರತಕ್ಕೆ ತರಲು ಮತ್ತು ಸುದೃಢ ಭಾರತವನ್ನು ತರಲು ಮತ್ತು ಬಲಶಾಲಿ ಭಾರತದ ನಿರ್ಮಾಣಕ್ಕಾಗಿ ಒಂದೇ ಪರ್ಯಾಯ ಮತ್ತು ಅದುವೇ ಜಾತ್ಯತೀತ ರಾಜಕಾರಣಿಗಳನ್ನು ತೊಲಗಿಸಿ ರಾಷ್ಟ್ರ ಮತ್ತು ಧರ್ಮ ಪ್ರೇಮಿ ರಾಜಕಾರಣಿಗಳ ಕೈಗೆ ಅಧಿಕಾರವನ್ನು ಒಪ್ಪಿಸಲು ಪ್ರಯತ್ನಿಸುವುದು.

ಅಧ್ಯಾತ್ಮದ ಬಗೆಗಿನ ಅಜ್ಞಾನದಿಂದ ಭಾಜಪದ ಅಧ್ಯಕ್ಷ ನಿತಿನ ಗಡಕರಿಯಿಂದ

ಅಧ್ಯಾತ್ಮದ ಬಗೆಗಿನ ಅಜ್ಞಾನದಿಂದ ಭಾಜಪದ ಅಧ್ಯಕ್ಷ ನಿತಿನ ಗಡಕರಿಯಿಂದ ಹಿಂದೂಗಳಿಗೆ ತಪ್ಪು ಮಾರ್ಗದರ್ಶನ!
ಆಕಳಿನಲ್ಲಿ ೩೩ ಕೋಟಿ ದೇವರಿರುತ್ತಾರೆಂಬ ಪರಿಭಾಷೆಗಳೆಲ್ಲ ಈಗ ನಡೆಯುವುದಿಲ್ಲವಂತೆ!
ಹೊಸದೆಹಲಿ : ಆಕಳಿಗೆ ನಮಸ್ಕಾರ ಮಾಡಿ ಅದರಲ್ಲಿ ೩೩ ಕೋಟಿ ದೇವತೆಗಳಿರುತ್ತಾರೆ  ಎಂದು ನನಗೆ ಯಾರಾದರೂ ಹೇಳಿದರೆ ‘ಎಲ್ಲಿದ್ದಾರೆ ಆ ದೇವತೆಗಳು ? ಇಂತಹ ಪರಿಭಾಷೆಯು ಈಗ ನಡೆಯುವುದಿಲ್ಲ’ ಎಂದು ಹೇಳುವೆನು. (ಆಕಳಿನಲ್ಲಿ ೩೩ ಕೋಟಿ ದೇವತೆಗಳಿರುತ್ತಾರೆ, ಇದರ ಅಧ್ಯಾತ್ಮಶಾಸ್ತ್ರೀಯ ಅರ್ಥವು ಹೀಗಿದೆ. ‘ಆಕಳು ಎಷ್ಟು ಸಾತ್ತ್ವಿಕವಿರುತ್ತದೆಯೆಂದರೆ ೩೩ ಕೋಟಿ ದೇವತೆಗಳ ಸ್ಪಂದನಗಳು ಆಕಳಿನಲ್ಲಿ ಆಕರ್ಷಿತವಾಗುತ್ತವೆ’. ಇದು ಅಧ್ಯಾತ್ಮಶಾಸ್ತ್ರೀಯ ಪರಿಭಾಷೆಯಿದೆ ಮತ್ತು ಧಾರ್ಮಿಕ ವಿಷಯದಲ್ಲಿ ಅಧ್ಯಾತ್ಮ ಶಾಸ್ತ್ರೀಯ ಪರಿಭಾಷೆಯನ್ನೇ ಪರಿಗಣಿಸಬೇಕು. ವಿಜ್ಞಾನ, ಸಂಗೀತ ಇತ್ಯಾದಿ ವಿಷಯಗಳಲ್ಲಿ ತಮ್ಮದೇ ಪರಿಭಾಷೆಗಳಿರುತ್ತವೆ ಮತ್ತು ಆಯಾ ಕ್ಷೇತ್ರದಲ್ಲಿ ಅವುಗಳನ್ನೇ ಪರಿಗಣಿಸಲಾಗುತ್ತದೆ. - ಸಂಪಾದಕರು) ಹೊಸ ಪೀಳಿಗೆಯನ್ನು ರಾಷ್ಟ್ರರಚನೆಯ ಪ್ರವಾಹದಲ್ಲಿ ಸೇರಿಸಲು ಹೊಸ ಸಂದರ್ಭದ ವಿಚಾರ ನೀಡಲು ನಾವು ಕಡಿಮೆ ಬೀಳುತ್ತಿದ್ದೇವೆ ಎಂದು ಭಾಜಪದ ರಾಷ್ಟ್ರೀಯ ಅಧ್ಯಕ್ಷ ನಿತಿನ ಗಡಕರಿಯವರು ಹೇಳಿದ್ದಾರೆ. ಲೇಖಕ ಶ್ರೀ. ಮಹೇಶ ಶರ್ಮಾ ಇವರ ‘ಪಂಡಿತ ದೀನದಯಾಳ ಉಪಾಧ್ಯಾಯ ಮತ್ತು ನಿಯತಕಾಲಿಕೆ’ ಎಂಬ ಪುಸ್ತಕದ ಪ್ರಕಾಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿತಿನ ಗಡಕರಿಯವರು ಮೇಲಿನ ಮಾತನ್ನು ಹೇಳಿದ್ದಾರೆ.

ಕಾಸರಗೋಡಿನಲ್ಲಿ ಧರ್ಮಾಂಧನಿಂದ ವಿವಾಹಿತ ಹಿಂದೂ ಮಹಿಳೆಯ ಮೇಲೆ ...

ಕಾಸರಗೋಡಿನಲ್ಲಿ ಧರ್ಮಾಂಧನಿಂದ ವಿವಾಹಿತ 
ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ವಾಸನಾಂಧ ಧರ್ಮಾಂಧರು
ಕಾಸರಗೋಡು : ವಿವಾಹಿತೆಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಆಕೆಗೆ ತಿಳಿಯದೆ ಆಕೆಯ ನಗ್ನ ಚಿತ್ರಗಳನ್ನು ತೆಗೆದು ಬಳಿಕ ಆಕೆಗೆ ಬೆದರಿಕೆಯೊಡ್ಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಯುವಕನೂ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ನಗರದ ತಳಂಗರೆಯ ಕೆ.ಕೆ. ಪುರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ೨೩ ರ ಹರೆಯದ ವಿವಾಹಿತ ಮಹಿಳೆ ನೀಡಿದ ದೂರಿನಂತೆ ಆಲುವಾ ಪಡಿಂ ಇಬಾರ್ ನಿವಾಸಿ ಎ.ಕೆ. ಅಶ್ರಫ್ (೨೯), ಈತನ ಸಂಬಂಧಿಕರಾದ ಕಳಮಶ್ಶೇರಿ ಚೇರ ಮಲ್ಲೂರ್ ನಿವಾಸಿ ಮೊಯ್ದೀನ್ (೪೦), ಫಾತಿಮ (೪೪) ಎಂಬವರ ವಿರುದ್ಧ ನ್ಯಾಯಾಲಯದ ಆದೇಶದಂತೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಅಶ್ರಫ್ ಮತ್ತು ದೂರು ನೀಡಿದ ಮಹಿಳೆಯ ಪತಿ ಆಲುವಾದ ಕಂಪೆನಿಯೊಂದರಲ್ಲಿ ಜೊತೆಯಾಗಿ ದುಡಿಯುತ್ತಿದ್ದಾರೆ. ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಈ ಮಹಿಳೆ ಆಲುವಾಕ್ಕೆ ಹೋಗಿದ್ದರು. ಅಲ್ಲಿ ಅವರು ವಾಸ್ತವ್ಯವಿದ್ದ ಕೊಠಡಿಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕೆಗೆ ತಿಳಿಯದಂತೆ ಅಶ್ರಫ್ ಆಕೆಯ ಚಿತ್ರಗಳನ್ನು ತೆಗೆದ ಬಳಿಕ ಆಕೆಗೆ ಬೆದರಿಕೆಯೊಡ್ಡಿ ಆಟೋರಿಕ್ಷಾದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಕಿರಿಮಂಜೇಶ್ವರ ಹಿಂದೂ ಧರ್ಮಜಾಗೃತಿ ಸಭೆ!

ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ರವೀಂದ್ರ ಕಾಮತ (ಎಡದಿಂದ) ಸೌ. ಸಂಗೀತಾ ಪ್ರಭು, ಶ್ರೀ. ಯು ಚಂದ್ರಶೇಖರ ಹೊಳ್ಳ
ಕಿರಿಮಂಜೇಶ್ವರ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಫೆಬ್ರವರಿ ೨೦ ರಂದು ಇಲ್ಲಿನ ಶ್ರೀ ಅಗಸ್ತೇಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಸಮಯದಲ್ಲಿ ವ್ಯಾಸಪೀಠದ ಮೇಲೆ ಕುಂದಾಪುರ ತಾಲೂಕಿನ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ. ಚಂದ್ರಶೇಖರ ಹೊಳ್ಳ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರವೀಂದ್ರ ಕಾಮತ ಮತ್ತು ಸನಾತನ ಸಂಸ್ಥೆಯ ಸೌ. ಸಂಗೀತಾ ಪ್ರಭು ಇವರು ಉಪಸ್ಥಿತರಿದ್ದರು. ಶ್ರೀ. ಯು. ಚಂದ್ರಶೇಖರ ಹೊಳ್ಳರವರು ಸನಾತನ ಸಂಸ್ಥೆ ನಿರ್ಮಿತ ‘ಅಗ್ನಿಹೋತ್ರ’  ಗ್ರಂಥವನ್ನು ಬಿಡುಗಡೆಗೊಳಿಸಿದರು. ಈ ಸಭೆಗೆ ೮೫೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು.
ಶ್ರೀ. ಯು. ಚಂದ್ರಶೇಖರ ಹೊಳ್ಳರವರು ಮಾತನಾಡುತ್ತಾ, ‘ಸನಾತನ ಧರ್ಮದ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಬೇಕು. ಇದಕ್ಕಾಗಿ ನಾವು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಹಿಂದೂಗಳ ಶ್ರೇಷ್ಠ ಪರಂಪರೆಯಲ್ಲಿ ಹಿರಿಯರು, ಗುರುವರ್ಯರಿಗೆ ಕೃತಜ್ಞತೆಯನ್ನು ಅರ್ಪಿಸುವ ಸಂಸ್ಕಾರವಿದೆ; ಆದರೆ ಪ್ರಸ್ತುತ ಇದು ಕ್ಷೀಣವಾಗುತ್ತಿದೆ. ಧರ್ಮಾಚರಣೆಯಿಂದ ಈ ಸಂಸ್ಕಾರ ಮೂಡುವುದು’ ಎಂದರು.

ಗಮನಾರ್ಹ ಅಂಶಗಳು
ಹಿಂದೂ ಧರ್ಮಜಾಗೃತಿ ಸಭೆಗೆ ಬಂದ ಓರ್ವ ಧರ್ಮಾಭಿಮಾನಿಯು ಸಭೆಯಿಂದ ಪುನಃ ತನ್ನ ಊರಾದ ಮಸ್ಕಿಗೆ ಹೋಗಿ ಸಭೆಗೆಂದು ಊರಿನ ೩೦ ಜನರನ್ನು ವಾಹನದಲ್ಲಿ ಕರೆದುಕೊಂಡು ಬಂದರು.

೨೦೧೦ ರಲ್ಲಿ ೨೭೮ ರೈತರ ಆತ್ಮಹತ್ಯೆ! - ಕ್ರಿಕೆಟ್‌ಪ್ರೇಮಿ ಕೃಷಿಮಂತ್ರಿ ಶರದ ಪವಾರ ಇವರ ಒಪ್ಪಿಗೆ!

ರೈತರ ಆತ್ಮಹತ್ಯೆ ತಡೆಯಲಾಗದ ಜಗತ್ತಿನ ಏಕೈಕ ದೇಶ ಭಾರತ
ಹೊಸದೆಹಲಿ : ೨೦೧೦ ರ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಕೃಷಿ ಸಂಬಂಧಿ ತೊಂದರೆಗಳಿಂದಾಗಿ ಇಡೀ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ೨೭೮; ಅದರಲ್ಲಿ ಅಗ್ರ ಸ್ಥಾನ ಮಹಾರಾಷ್ಟ್ರದ್ದಾದರೆ, ಎರಡನೇ ಸ್ಥಾನ ಕರ್ನಾಟಕದ್ದು. ಹೀಗೆಂದು ಸಂಸತ್ತಿಗೆ ಕೃಷಿ ಮಂತ್ರಿ ಶರದ ಪವಾರರವರು ಲೋಕಸಭೆಯ ಪ್ರಶ್ನೋತ್ತರದ ವೇಳೆ ಲಿಖಿತವಾಗಿ ಉತ್ತರ ನೀಡಿದ್ದಾರೆ.
೨೦೦೯ ರ ಇಡೀ ವರ್ಷದಲ್ಲಿ ದೇಶದಲ್ಲಿ ೮೯೭ ರೈತರು ಆತ್ಮಹತ್ಯೆಗೆ ಶರಣಾಗಿದ್ದರು.ಅದರಲ್ಲಿ ಮಹಾರಾಷ್ಟ್ರ ದಲ್ಲಿ ೫೦೩ ಹಾಗೂ ಕರ್ನಾಟಕದಲ್ಲಿ ೧೧೪ ರೈತರು ಕೃಷಿ ಸಂಬಂಧಿ ಸಮಸ್ಯೆಗಳಿಂದ ಪ್ರಾಣ ಹರಣ ಮಾಡಿಕೊಂಡಿದ್ದರು.
೨೦೧೦ ರ ಅಕ್ಟೋಬರ್ ತಿಂಗಳ ವರೆಗೆ ಆಂಧ್ರಪ್ರದೇಶದಲ್ಲಿ ಇಂತಹ ೧೮ ಘಟನೆಗಳು ನಡೆದಿವೆ. ಅದಕ್ಕೂ ಹಿಂದಿನ ವರ್ಷ, ಅಂದರೆ ೨೦೦೯ ರಲ್ಲಿ ೨೪೮ ರೈತರು ಆತ್ಮಹತ್ಯೆ ಮಾಡಿಕೊಂಡರು.
ರೈತರ ಆತ್ಮಹತ್ಯೆಗಳನ್ನು ತಡೆಯಲು ಕೇಂದ್ರಸರಕಾರ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ೩೧ ಜಿಲ್ಲೆ ಗಳು ಕೃಷಿ ಬಾಧಿತರ ಪರಿಹಾರಕ್ಕಾಗಿ ೨೦೦೬ ರಿಂದ ೧೯,೧೬೩.೯೧ ಕೋಟಿ ರೂಪಾಯಿಗಳನ್ನು ವಿವಿಧ ಪ್ಯಾಕೇಜಿಗಾಗಿ ಬಿಡುಗಡೆ ಮಾಡಿದೆ. (ಸಾವಿರಾರು ಕೋಟಿ ರೂಪಾಯಿ ಒದಗಿಸಿದರೂ ಪ್ರತಿ ವರ್ಷ ರೈತರು ಇಷ್ಟು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇದರರ್ಥ ಈ ಹಣ ಅವರ ತನಕ ತಲುಪುತ್ತಿಲ್ಲ ಅಥವಾ ಈ ನಿಧಿಗಿಂತ ಹೆಚ್ಚು ಹಣದ ಆವಶ್ಯಕತೆ ಇದೆ. ರೈತರ ಸಮಸ್ಯೆಯನ್ನು ಸಂಪೂರ್ಣ ಬಿಡಿಸದ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ನಿರರ್ಥಕಗೊಳಿಸುತ್ತಿದ್ದಾರೆ. - ಸಂಪಾದಕರು)