ಭಾರೀ ಜನಬೆಂಬಲದೊಂದಿಗೆ ನಡೆಯುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಆಂದೋಲನ!
ಇತ್ತೀಚೆಗೆ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅನಧಿಕೃತವಾಗಿ ನಿರ್ಮಿಸಿದ ದೇವಸ್ಥಾನಗಳನ್ನು ತೆರವುಗೊಳಿಸಲು ಮಾರ್ಗಸೂಚಿಯನ್ನು ರೂಪಿಸಿದ್ದು, ಇದಕ್ಕನುಸಾರ ದಕ್ಷಿಣ ಕನ್ನಡ ಜಿಲ್ಲೆಯ ೬೪೦ಕ್ಕೂ ಹೆಚ್ಚು ದೇವಸ್ಥಾನ ಗಳನ್ನು ಅನಧಿಕೃತವೆಂದು ಘೋಷಿಸಿದೆ. ಇದರ ವಿರುದ್ಧ ಸಮಿತಿಯು ಆಂದೋಲನ ವನ್ನು ಪ್ರಾರಂಭಿಸಿದೆ. ಇದರ ಅಂತರ್ಗತ ಪ್ರಥಮವಾಗಿ ದಿನಾಂಕ ೨೧.೮.೨೦೧೦ ರಂದು ಮಂಗಳೂರಿನ ‘ವುಡ್‌ಲ್ಯಾಂಡ್ ಹೋಟೆಲ್’ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಇದರಲ್ಲಿ ೩೫ಮಾಧ್ಯಮದವರು ಉಪಸ್ಥಿತರಿದ್ದರು. ತದನಂತರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ದೇವಸ್ಥಾನಗಳ ವಿಶ್ವಸ್ಥರ ಸಭೆಯನ್ನು ಕರೆಯಲಾಯಿತು. ಇದರ ಸಂಕ್ಷಿಪ್ತ ವರದಿಯನ್ನು ನೀಡುತ್ತಿದ್ದೇವೆ.
ಪುತ್ತೂರು: ದಿನಾಂಕ ೨೬.೮. ೨೦೧೦ರಂದು ಬೆಳಗ್ಗೆ ೧೧.೦೦ಗಂಟೆಗೆ ಪೂತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಗೃಹದಲ್ಲಿ ವಿಶ್ವಸ್ಥರ ಸಭೆಯನ್ನು ಕರೆಯಲಾಯಿತು. ಇದರಲ್ಲಿ ಪ್ರಸಿದ್ದ ವಕೀಲರಾದ ಶ್ರೀ.ಜಗನಿವಾಸ ರಾವ್ ಇವರು ಮತ್ತು ಸಮಿತಿಯ ಶ್ರೀ.ಮೋಹನ ಗೌಡ ಹಾಗೂ ಶ್ರೀ.ರಾಮ ಭಟ್ ಇವರು ಉಪಸ್ಥಿತರಿದ್ದು, ಸುಮಾರು ೨೦ದೇವಸ್ಥಾನದ ವಿಶ್ವಸ್ಥರು ಇದರ ಲಾಭವನ್ನು ಪಡೆದುಕೊಂಡರು.
ಮಂಗಳೂರು: ೨೯.೮.೨೦೧೦ ರಂದು ಮಂಗಳೂರಿನ ಶ್ರೀ ಬಾಲಂ ಭಟ್ ಸಭಾಗೃಹದಲ್ಲಿ ಸಾಯಂಕಾಲ ೪.೦೦ ಗಂಟೆಗೆ ವಿಶ್ವಸ್ಥರ ಸಭೆಯನ್ನು ಕರೆಯ ಲಾಗಿತ್ತು. ಇದರಲ್ಲಿ ಮಂಗಳೂರು ತಾಲೂಕಿನ ೧೩೦ವಿಶ್ವಸ್ಥರು ಸಹಭಾಗಿ ಯಾಗಿದ್ದರು ಈ ಸಭೆಯ ವ್ಯಾಸಪೀಠದಲ್ಲಿ ಉದ್ಯಮಿ ಮತ್ತು ಧರ್ಮಾಭಿಮಾನಿ ಶ್ರೀ.ಅನಂತ ಕಾಮತ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಮತ್ತು ಶ್ರೀ.ರಾಮ ಭಟ್‌ರವರು ಉಪಸ್ಥಿತರಿದ್ದರು.
ಮೂಡಬಿದ್ರೆ: ದಿನಾಂಕ ೩೦.೮. ೨೦೧೦ರಂದು ಮೂಡಬಿದ್ರೆ ತಾಲೂಕಿನ ವಿಶ್ವಸ್ಥರಿಗಾಗಿ ನಗರದ ವೆಂಕಟರಮಣ ದೇವಸ್ಥಾನದ ಸಭಾಗೃಹದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸ್ಥಳೀಯ ವಕೀಲರಾದ ಶ್ರೀ.ನಾಗೇಶ ಶೆಟ್ಟಿ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ.ಚಂದ್ರ ಮೋಹನ ರೈ, ಶ್ರೀ.ಮೋಹನ ಗೌಡ ಮತ್ತು ವೆಂಕಟರಮಣ ದೇವಸ್ಥಾನದ ವಿಶ್ವಸ್ಥರಾದ ಶ್ರೀ.ಉಮೇಶ ಪೈಯವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು. ಇದರಲ್ಲಿ ಪುತ್ತೂರು ಮೂಡುಬಿದ್ರೆ ತಾಲೂಕಿನ ೪೮ದೇವಸ್ಥಾನ ಹಾಗೂ ಭಜನಾ ಮಂದಿರಗಳ ವಿಶ್ವಸ್ಥರು ಭಾಗವಹಿಸಿದ್ದರು.
ಉಡುಪಿ: ಇತ್ತೀಚೆಗೆ ಉಡುಪಿ ತಾಲೂಕಿನಲ್ಲಿಯೂ ಜಿಲ್ಲಾಧಿಕಾರಿಗಳು ದೇವಸ್ಥಾನಗಳ ತೆರವಿಗೆ ನೋಟಿಸು ಕಳುಹಿಸಿ ದ್ದನ್ನು ತಿಳಿದ ಸಮಿತಿಯ ಕಾರ್ಯಕರ್ತರು ತಕ್ಷಣ ಕಾರ್ಯಪೃವೃತ್ತರಾಗಿ ೩೧.೮. ೨೦೧೦ರಂದು ಸಾಯಂಕಾಲ ೩.೦೦ ಗಂಟೆಗೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ದ್ದರು. ಇದರಲ್ಲಿ ಸಮಿತಿಯ ಶ್ರೀ.ಮೋಹನ ಗೌಡ, ಶ್ರೀ.ವಿಜಯ ಕುಮಾರ ಮತ್ತು ಶ್ರೀ.ರಾಮ ಶೆಟ್ಟಿಗಾರ ಇವರು ಉಪಸ್ಥಿತ ರಿದ್ದರು. ಸುಮಾರು ೨೦ಪತ್ರಕರ್ತರು ಮಾಹಿತಿ ಪಡೆದುಕೊಂಡರು.
ಮುಂದಿನ ೮.೯.೨೦೧೦ರಂದು ಕಾರ್ಕಳ ತಾಲೂಕಿನ ದೇವಸ್ಥಾನಗಳ ವಿಶ್ವಸ್ತರ ಸಭೆಯನ್ನು ನಗರದ ಶ್ರೀ. ವೇಣು ಗೋಪಾಲ ದೇವಸ್ಥಾನದಲ್ಲಿ ಸಾಯಂಕಾಲ ೩.೦೦ಗಂಟೆಗೆ ನಡೆಸಲಾಯಿತು. ೨೯.೯. ೨೦೧೦ರಂದು ಜಿಲ್ಲೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ತಾಲೂಕಿನ ಎಲ್ಲಾ ಕೇಂದ್ರ ಗಳಲ್ಲಿ ತಾಲೂಕು ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲು ನಿರ್ಧರಿಸ ಲಾಯಿತು. ಅಲ್ಲದೇ ಹಸ್ತಾಕ್ಷರಸಂಗ್ರಹ, ಕರಪತ್ರ ವಿತರಣೆ ಮತ್ತು ಫ್ಲೆಕ್ಸ್ ಮೂಲಕ ಜನಜಾಗೃತಿ ಮಾಡಲು ನಿಶ್ಚಯಿಸಲಾಯಿತು.
No comments:
Post a Comment