ತಮ್ಮ ಕುಟುಂಬದವರ ಬಗ್ಗೆಯೂ ಭಾವನೆಯಲ್ಲಿ ಸಿಲುಕದೆ ಅವರಿಗೆ
ಸಾಧನೆಯ ದೃಷ್ಟಿಕೋನ ನೀಡುವ ಶ್ರೀ.ಚೇತನ ಜನಾರ್ದನ!
ಭಾಗ್ಯನಗರದ (ಆಂಧ್ರಪ್ರದೇಶ) ಸಾಧಕಿ ಸೌ.ಪದ್ಮಾ ಜನಾರ್ದನರವರ ಸ್ವಭಾವದೋಷದಿಂದಾಗಿ ಅವರು ಸೇವೆ ಮಾಡುವಾಗ ಹಾಗೂ ಅವರು ಸ್ವಲ್ಪ ಸಮಯ ಬೆಂಗಳೂರಿನಲ್ಲಿರುವಾಗ ಅವರಿಂದ ಅನೇಕ ತಪ್ಪುಗಳಾದವು. ಈ ತಪ್ಪುಗಳ ಬಗ್ಗೆ ಅವರ ಮಗ ಶ್ರೀ.ಚೇತನ ಜನಾರ್ದನರವರು ಸೌ.ಪದ್ಮಕ್ಕರವರೊಂದಿಗೆ ಸಭೆ ಮಾಡಿ ಅವರ ಸಾಧನೆಯಲ್ಲಾಗುವ ತಪ್ಪುಗಳು ಹಾಗೂ ಅವುಗಳ ಹಿಂದಿನ ದೋಷಗಳು ಮತ್ತು ಅವುಗಳಿಗೆ ಪರಿಹಾರೋಪಾಯವನ್ನು ಸ್ಪಷ್ಟವಾಗಿ ಹೇಳಿದರು ಹಾಗೂ ಅವರಲ್ಲಿ ಪರಿವರ್ತನೆಯಾಗಬೇಕೆಂದು ಅವರನ್ನು ಕರ್ನಾಟಕದಲ್ಲಿನ ಮೂಲ್ಕಿ ಕೇಂದ್ರಕ್ಕೆ ಸೇವೆ ಮಾಡಲು ಕಳುಹಿಸಿದರು.-ಶ್ರೀ.ರಾಜೇಂದ್ರ ಶಿಂದೆ, ಪ್ರಸಾರ ಸೇವಕರು (ತನ್ನ ತಾಯಿಯಿಂದಾದ ತಪ್ಪುಗಳನ್ನು ಭಾವನೆಯಲ್ಲಿ ಸಿಲುಕದೆ ಓರ್ವ ಸಾಧಕರೆಂದು ತೋರಿಸಿಕೊಡುವ ಶ್ರೀ.ಚೇತನ ಜನಾರ್ದನರ ಆದರ್ಶವನ್ನು ಪಡೆದು ತಮ್ಮ ಕುಟುಂಬ ದಲ್ಲಿ ಸಾಧನೆ ಮಾಡುವವರಿಗೆ ಸಾಧನೆಯಲ್ಲಿ ಹೀಗೆಯೇ ಸಹಾಯ ಮಾಡಿದರೆ ಕುಟುಂಬದಲ್ಲಿನ ಎಲ್ಲರೂ ಮಾಯೆಯಿಂದ ಬಿಡುಗಡೆಯಾಗಿ ಶೀಘ್ರಗತಿಯಲ್ಲಿ ಪ್ರಗತಿ ಮಾಡಿಕೊಳ್ಳಲು ಸಾಧ್ಯವಾಗುವುದು.-ಡಾ.ಆಠವಲೆ)
No comments:
Post a Comment