ಸಾಧಕರೇ, ಯಾರಾದರೊಬ್ಬರಲ್ಲಿ ಸಾಧನೆಯಿಂದಾದ ಬದಲಾವಣೆಗಳನ್ನು ಗುರುತಿಸಲು ಕಲಿಯಿರಿ ...

ಸಾಧಕರೇ, ಯಾರಾದರೊಬ್ಬರಲ್ಲಿ ಸಾಧನೆಯಿಂದಾದ ಬದಲಾವಣೆಗಳನ್ನು
ಗುರುತಿಸಲು ಕಲಿಯಿರಿ ಮತ್ತು ಅದಕ್ಕನುಸಾರ ಮಾರ್ಗದರ್ಶನ ಮಾಡಿರಿ!
ಉಚ್ಚಶಿಕ್ಷಿತ ಹಾಗೂ ಶ್ರೀಮಂತ ಕುಟುಂಬದ ಸಾಧಕಿಯೊಬ್ಬಳು ರಾಮನಾಥಿ ಆಶ್ರಮಕ್ಕೆ ಮೊದಲಬಾರಿಗೆ ವಾಸ್ತವ್ಯಕ್ಕಾಗಿ ಬಂದಿದ್ದಳು. ಅವಳಿಗೆ ಆಶ್ರಮದ ಅನೇಕ ವಿಷಯಗಳು ಇಷ್ಟವಾದವು ಮತ್ತು ಅದ ರಿಂದ ಅವಳ ನಾಮಜಪ, ಪ್ರಾರ್ಥನೆ ಚೆನ್ನಾಗಿ ಆಗತೊಡಗಿತು. ಮೊದಲೂ ಅವಳು ನಾಮಜಪ ಮತ್ತು ಪ್ರಾರ್ಥನೆ ಮಾಡುತ್ತಿ ದ್ದಳು; ಆದರೆ ಆಶ್ರಮದಿಂದ ಮನೆಗೆ ಹೋದ ನಂತರವೂ ಅವಳ ನಾಮಜಪ ಮತ್ತು ಪ್ರಾರ್ಥನೆ ಚೆನ್ನಾಗಿ ಆಗುತ್ತಿತ್ತು. ಇದರಿಂದ ಅವಳಲ್ಲಿ ಮುಂದಿನ ಬದಲಾವಣೆಗಳಾದವು.

೧.ಮನಸ್ಸಿನ ನಿರಾಶೆಯು ಕಡಿಮೆಯಾಗಿ ಅವಳ ಸ್ವಭಾವವು ಶಾಂತವಾಯಿತು. ಇದರಿಂದ ಎಷ್ಟು ಬೇಕೋ ಅಷ್ಟೇ ಮಾತ ನಾಡತೊಡಗಿದಳು.
೨.ವ್ಯಾವಹಾರಿಕ ವ್ಯಕ್ತಿಗಳೊಂದಿಗೆ ಬೆರೆಯುವುದು ಬೇಡ ಅನಿಸತೊಡಗಿತು.
೩.‘ಪಾರ್ಟಿ, ಸ್ನೇಹಿತ-ಸ್ನೇಹಿತೆಯ ರೊಂದಿಗೆ ಅವಶ್ಯವಿರುವಾಗ ಮಾತ್ರ ಹೋಗೋಣ’ ಎಂದೆನಿಸತೊಡಗಿತು.
೪.ತಮ್ಮ ಸಮಸ್ಯೆಗಳತ್ತ ಗಮನವು ಕಡಿಮೆಯಾಗತೊಡಗಿತು.
೧.ಸಾಧಕಿಯಲ್ಲಾದ ಬದಲಾವಣೆಗೆ ಕಾರಣವೇನು ಎಂದು ಗೊತ್ತಾಗದೇ ಇತರರು ನೀಡಿದ ಅಯೋಗ್ಯ ಪ್ರತಿಕ್ರಿಯೆ ಗಳು: ಸಾಧಕಿಯಲ್ಲಿ ಮೇಲಿನಂತೆ ಬದಲಾವಣೆಯಾದುದರಿಂದ ಅವಳೊಂದಿ ಗಿದ್ದ ಎಲ್ಲ ಜನರು ಹಾಗೂ ಸಾಧನೆಯನ್ನು ಮಾಡುತ್ತಿದ್ದ ಬಂಧುಬಳಗದವರು ಅವಳ ಬಗ್ಗೆ ಮುಂದಿನಂತೆ ಹೇಳತೊಡಗಿದರು.
ಅ.ನೀನು ಮನಸ್ಸಿನಿಂದ ಮುದುಕಿ ಆಗಿದ್ದಿಯ.
ಆ.ನೀನು ನಿರಾಶೆ ಹಾಗೂ ಏಕಾಂಗಿ ಇದ್ದೀಯ.
ಇ.ತಮಾಷೆ ಇತ್ಯಾದಿ ಮಾಡದ ಕಾರಣ ನೀನು ಆನಂದದಲ್ಲಿರುವುದು ಕಾಣಿಸುತ್ತಿಲ್ಲ.
೨.ಇತರರು ತನ್ನ ಬಗ್ಗೆ ನೀಡಿದ ಪ್ರತಿಕ್ರಿಯೆಯಿಂದ ಸಾಧಕಿಯ ಮನಸ್ಸಿನಲ್ಲಿ ತನ್ನಲ್ಲಾದ ಬದಲಾವಣೆಯು ಯೋಗ್ಯ ವಾಗಿದೆಯೋ ಇಲ್ಲವೋ ಎಂಬ ಪ್ರಶ್ನೆ ಉತ್ಪನ್ನವಾಯಿತು: ಮೇಲಿನಂತೆ ಎಲ್ಲರ ಅಭಿಪ್ರಾಯ ಕೇಳಿದ ನಂತರ ಸಾಧಕಿಯ ಮನಸ್ಸಿನಲ್ಲಿ ಗೊಂದಲವು ನಿರ್ಮಾಣ ವಾಯಿತು. ‘ತನ್ನಲ್ಲಾದ ಬದಲಾವಣೆಯು ಯೋಗ್ಯವಾಗಿದೆಯೋ ಇಲ್ಲವೋ ಎಂಬ ಸಂದೇಹವು ಅವಳ ಮನಸ್ಸಿನಲ್ಲಿ ನಿರ್ಮಾಣ ವಾಯಿತು. ಅಧ್ಯಾತ್ಮದ ದೃಷ್ಟಿಕೋನ ‘ಪರೇಚ್ಛೆಯಿಂದ ವರ್ತಿಸುವುದು’ ಎಂಬಂತೆ ಅವಳು ವರ್ತಿಸಲು ಆರಂಭಿಸಿದಳು; ಆದರೆ ಅವಳಿಗೆ ಅದು ಸಾಧ್ಯವಾಗಲಿಲ್ಲ. ಮನಸ್ಸಿನ ಸ್ಥಿತಿ ಒಂದು ಮತ್ತು ವರ್ತನೆ ಬೇರೆ ಇದ್ದುದ ರಿಂದ ಅವಳ ಮನಸ್ಸಿನಲ್ಲಿ ದುಗುಡವುಂಟಾ ಯಿತು. ಅದರಿಂದ ಅವಳ ಮನಸ್ಸಿನಲ್ಲಿ ಮುಂದಿನ ಪ್ರಶ್ನೆಗಳು ಉದ್ಭವಿಸಿದವು.
ಅ.ನನ್ನ ಸಾಧನೆಯು ಯೋಗ್ಯ ರೀತಿ ಯಲ್ಲಾಗುತ್ತಿದೆಯೋ ಇಲ್ಲವೋ?
ಆ.ನಾನು ನಿರಾಶಳಿದ್ದೇನೆಯೇ?
ಇ.ಮನಸ್ಸಿನ ವಿರುದ್ಧ ಪಾರ್ಟಿಗಳಿಗೆ ಹೋಗಬೇಕೇ?
ಈ.ಇದೆಲ್ಲವೂ ನನ್ನ ಅಹಂಭಾವದ ಲಕ್ಷಣವೇ?
ಉ.ನಾನು ಉತ್ತಮ ಪುತ್ರಿಯಾಗ ಲಾರೆ. ನನ್ನ ಹೆತ್ತವರಿಗೆ ಆನಂದದಲ್ಲಿರಿಸಲು ನನ್ನಿಂದಾಗದು ಇತ್ಯಾದಿ.
೩.ಸಾಧಕಿಯಲ್ಲಾದ ಬದಲಾ ವಣೆಯು ಯೋಗ್ಯವಾಗಿದ್ದು ಅವಳು ಸಾಧನೆಯತ್ತ ಗಮನ ನೀಡಬೇಕು!: ಸಾಧನೆಯಿಂದ ಅಂತರ್ಮುಖತೆ ಬರಲು ಪ್ರಾರಂಭವಾದರೆ ನಮ್ಮಲ್ಲಿ ಮೇಲಿನ ಬದಲಾವಣೆಗಳು ಕಾಣಿಸುತ್ತವೆ. ಈ ಬದಲಾವಣೆಗಳು ಯೋಗ್ಯವಾಗಿರುತ್ತವೆ. ನಮ್ಮೊಂದಿಗಿರುವ ವ್ಯಕ್ತಿಗಳು ಒಂದು ವೇಳೆ ನಮ್ಮ ಬಗ್ಗೆ ಮೇಲಿನಂತೆ ಹೇಳಿದರೂ ನಾವು ಸಾಧನೆಯತ್ತ ಗಮನ ಹರಿಸಬೇಕು.
ಅ.ಸಾಧನೆಯಲ್ಲಿ ಯೋಗ್ಯ ವ್ಯಕ್ತಿಗಳ ಸಹಾಯ ಪಡೆಯಬೇಕು.
ಆ.ನಮ್ಮೊಂದಿಗಿರುವ ವ್ಯಕ್ತಿಗಳು ಕೆಲವು ದಿನ ಮಾತನಾಡುತ್ತಾರೆ ಅನಂತರ ಮರೆತು ಬಿಡುತ್ತಾರೆ. ಇದರಿಂದ ಅದರತ್ತ ಹೆಚ್ಚು ಗಮನ ಕೊಡಬಾರದು.
ಇ.ಇತರರ ಇಂತಹ ಮಾತುಗಳೆಂದರೆ ನಾವು ಮಾಡುತ್ತಿರುವ ಪ್ರಯತ್ನಗಳಿಗೆ ನೀಡಿದ ರಶೀದಿಯಾಗಿದೆ’, ಎಂಬ ಸಕಾರಾತ್ಮಕ ವಿಚಾರ ಮಾಡಿ ಪ್ರಯತ್ನಿಸಬೇಕು.
ಈ.ದೇವರಲ್ಲಿ ಮುಂದಿನಂತೆ ಪ್ರಾರ್ಥನೆ ಮಾಡಬೇಕು, ‘ಇಂತಹ ಪ್ರಸಂಗಗಳು ನನ್ನ ಜೀವನದಲ್ಲಿ ಪದೇಪದೇ ಬಾರದಿರಲಿ ಅಥವಾ ಅದನ್ನು ಎದುರಿಸುವ ಶಕ್ತಿಯನ್ನು ನನಗೆ ನೀಡು.’
ಹಾಗಾಗಿ ಎಲ್ಲರೂ ಸಾಧಕರಲ್ಲಾಗುವ ಬದಲಾವಣೆಗನುಸಾರವಾಗಿ ಅವರೊಂದಿಗೆ ವರ್ತಿಸಬೇಕು. ಸಾಧನೆಯಿಂದ ತಮ್ಮ ಮಕ್ಕಳಲ್ಲಿ ಇಂತಹ ರೀತಿಯ ಬದಲಾವಣೆ ಯಾಗಿದ್ದರೆ ಅವರನ್ನು ಪ್ರೋತ್ಸಾಹಿಸಬೇಕು.
-ಡಾ.(ಕು.) ಮಾಯಾ ಪಾಟೀಲ

No comments:

Post a Comment