ಸಾಧಕರೇ, ಸನಾತನದ್ವೇಷಿಗಳು, ಅಂದರೆ ಹಿಂದೂದ್ವೇಷಿ ಕಾಂಗ್ರೆಸ್
ಸರಕಾರವು ಸನಾತನದ ಮೇಲೆ ನಿರ್ಬಂಧ ಹೇರುವ ತರಾತುರಿಯಲ್ಲಿದೆ !
ಸರಕಾರವು ಸನಾತನದ ಮೇಲೆ ನಿರ್ಬಂಧ ಹೇರುವ ತರಾತುರಿಯಲ್ಲಿದೆ !
ಮುಂಬಯಿ : ಸನಾತನಕ್ಕೆ ವಿಶ್ವಾಸಾರ್ಹ ಮೂಲಗಳಿಂದ ದೊರೆತ ಮಾಹಿತಿಗನುಸಾರ ಕಾಂಗ್ರೆಸ್ ಸರಕಾರವು ಸನಾತನದ ಮೇಲೆ ನಿರ್ಬಂಧ ಹೇರುವ ತಯಾರಿಯಲ್ಲಿದೆ ಯೆಂದು ತಿಳಿದು ಬಂದಿದೆ. ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ಅಧಿಕಾರ ದಲ್ಲಿದೆ. ಕಾಂಗ್ರೆಸ್‌ನವರು ಧರ್ಮಾಂಧರನ್ನು ಸಂತೋಷಪಡಿಸಲು ಸನಾತನದ ಮೇಲೆ ನಿರ್ಬಂಧ ಹೇರಲು ಎಷ್ಟು ಆತುರದಲ್ಲಿದ್ದಾರೆ ಎಂಬುದು ಅವರ ಇಂದಿನ ವರೆಗಿನ ಕೃತಿಗಳಿಂದ ಸ್ಟಷ್ಟವಾಗಿದೆ.
ಆದುದರಿಂದ ಸನಾತನಕ್ಕೆ ನಿರ್ಬಂಧದ ಕರಿನೆರಳು ಮತ್ತೊಮ್ಮೆ ಎದುರಾಗಿದೆ. ಕಳೆದ ವರ್ಷ ಪೂರ್ತಿ ನಾವೆಲ್ಲರೂ ನಿರ್ಬಂಧಸದೃಶ ಸ್ಥಿತಿಯನ್ನೇ ಎದುರಿಸಿದ್ದೇವೆ. ನಾವು ಶ್ರೀಕೃಷ್ಣನ ಕೃಪೆ ಯಿಂದ ಈ ಕಠಿಣ ಪರಿಸ್ಥಿತಿಯಿಂದ ಪಾರಾ ದೆವು. ಇನ್ನು ಮುಂದೆಯೂ ಅವನೇ ನಮಗೆ ಆಧಾರವಾಗಿದ್ದಾನೆ, ಎಂಬುದನ್ನು ಸಾಧಕರು ಗಮನದಲ್ಲಿಡಬೇಕು ಹಾಗೂ ಈ ಸ್ಥಿತಿಯನ್ನು ಎದುರಿಸುವುದಕ್ಕಾಗಿ ಪ್ರಾರ್ಥನೆ, ಕೃತಜ್ಞತೆ ಮತ್ತು ನಾಮಜಪಗಳನ್ನು ಹೆಚ್ಚಿಸಬೇಕು. ಆಂಗ್ಲದಲ್ಲಿ ಒಂದು ಗಾದೆಯಾದ ‘ನಾಯಿಗೆ ಹುಚ್ಚು ಹಿಡಿದಿದೆ ಎನ್ನಿ ಅದನ್ನು ಕೊಂದು ಹಾಕಿರಿ’ ಎಂಬಂತೆ ಪ್ರಖರ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಸನಾತನದ ಮೇಲೆ ಭಯೋತ್ಪಾದನೆಯಂತಹ ಆಧಾರಹೀನ ಆರೋಪ ಹೊರಿಸಿ ನಿರ್ಬಂಧ ಹೇರಲು ಕಾಂಗ್ರೆಸ್‌ನವರು ಆಕಾಶ-ಪಾತಾಳ ಒಂದು ಮಾಡುತ್ತಿದ್ದಾರೆ. ಕೇವಲ ಹೆಸರಿಗೆ ಕಾಂಗ್ರೆಸ್ ಆದರೆ ಕೃತಿಯಿಂದ ‘ಮುಸ್ಲಿಂ ಲೀಗ್’ ಆಗಿರುವ ಕಾಂಗ್ರೆಸ್ಸಿನಿಂದ ಇಂದಲ್ಲ ನಾಳೆ ಸನಾತನದ ಮೇಲೆ ನಿರ್ಬಂಧ ಹೇರುವುದು ಖಚಿತ. ಸಂಘದಂತಹ ಬಲಾಢ್ಯ ಹಿಂದುತ್ವ ವಾದಿ ಸಂಘಟನೆಯ ಮೇಲೆ ಎರಡು ಬಾರಿ ಹಾಗೂ ತುರ್ತು ಪರಿಸ್ಥಿತಿಯ ಕಾಲದಲ್ಲಿ ಪ್ರಸಾರಮಾಧ್ಯಮಗಳನ್ನು ಹತ್ತಿಕ್ಕಿ ತನ್ನ ವಿರೋಧಿಗಳನ್ನು ಸೆರೆಮನೆಗೆ ತಳ್ಳುವ ಕಾಂಗ್ರೆಸ್ ಸನಾತನದ ಮೇಲೆ ನಿರ್ಬಂಧ ಹೇರದಿದ್ದರೆ ಅದು ಆಶ್ಚರ್ಯದ ವಿಷಯವಾಗುವುದು! ಅದಕ್ಕಾಗಿ ಸಾಧಕರು ಎಲ್ಲ ರೀತಿಯ ತಯಾರಿಯಲ್ಲಿರಬೇಕು. ನಿರ್ಬಂಧದ ಅವಧಿ ಯಲ್ಲಿ ಕೆಲವು ಸಾಧಕರು ಸೆರೆಮನೆಗೂ ಹೋಗಬೇಕಾಗಬಹುದು. ಹಾಗಾಗಿ ನಾವು ಸೆರೆಮನೆಯಲ್ಲಿರಲಿ ಮನೆಯಲ್ಲಿರಲಿ, ಯಾವುದೇ ಸ್ಥಿತಿಯಲ್ಲಿ ನನ್ನ ಸಾಧನೆ ಹೇಗೆ ಆಗುವುದು ಎಂಬುದು ಇಂದಿನ ತನಕ ‘ಸನಾತನ ಪ್ರಭಾತ’ದಿಂದ ಸಿಕ್ಕಿದ ಮಾರ್ಗ ದರ್ಶನದಂತೆ ನಡೆಯಲು ಪ್ರಯತ್ನಿಸೋಣ.
ಸಾಧಕರೇ ಜಾತ್ಯತೀತ ಕಾಂಗ್ರೆಸ್ ನಿರ್ಬಂಧ ಹೇರಿದರೂ, ಬಂಗಾರವು ಅಗ್ನಿಯ ಸಂಸ್ಕಾರದಿಂದ ಪ್ರಜ್ವಲಿಸಿ ಹೊರ ಬರುವಂತೆ ಕಾಂಗ್ರೆಸ್ಸಿನ ಜಾತ್ಯತೀತ ಆಡಳಿತದ ನಂತರ ಅಧಿಕಾರಕ್ಕೆ ಬರುವ ರಾಷ್ಟ್ರ ಹಾಗೂ ಧರ್ಮ ಪ್ರೇಮಿಗಳ ಆಡಳಿತದ ಕಾಲದಲ್ಲಿ ಸನಾತನದ ಕಾರ್ಯವು ಹೊಸ ಹುರುಪಿ ನಿಂದ ಪ್ರಾರಂಭವಾಗುವುದು. ಕೊನೆಗೆ ಸತ್ಯಕ್ಕೇ ಜಯವಾಗುವುದು ನಿಶ್ಚಿತ! ಇದನ್ನ ರಿತು ಈ ಸ್ಥಿತಿಯಲ್ಲೂ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡಲು ನೋಡೋಣ!
No comments:
Post a Comment