ಸಾಧಕರೇ, ಕಾರಾಗೃಹಕ್ಕೆ ಹೋಗುವಾಗ ಮುಂದಿನ ದೃಷ್ಟಿಕೋನವನ್ನಿಟ್ಟುಕೊಳ್ಳಿ!

೧. ಈಗ ಗುರುಗಳು ಆಪತ್ಕಾಲದ ಪ್ರತೀಕೂಲ ವಾತಾವರಣದಲ್ಲಿಯೂ ಸಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಮಗೆ ಕಲಿಸುತ್ತಿದ್ದಾರೆ ! : ‘ಸಾಧಕರೇ, ನಾವು ಸಂಪತ್ಕಾಲದಲ್ಲಿ ಸಾಧನೆ ಯನ್ನು ಮಾಡಿದ್ದೇವೆ. ಆದುದರಿಂದ ಸಾಧನೆ ಗಾಗಿ ಅನುಕೂಲ ವಾತಾವರಣವು ಹೇಗಿರು ತ್ತದೆ ಎಂಬುದನ್ನು ನಾವು ಅನುಭವಿಸಿದ್ದೇವೆ. ಈಗ ಆಪತ್ಕಾಲದ ಪ್ರತಿಕೂಲ ವಾತಾವರಣ ದಲ್ಲಿ ಸಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಗುರುಗಳು ನಮಗೆ ಕಲಿಸುತ್ತಿ ದ್ದಾರೆ ಮತ್ತು ಅಲ್ಲಿಯೂ ಗುರುಗಳು ನಮ್ಮ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ ಎಂಬ ಭಾವವನ್ನಿಟ್ಟುಕೊಳ್ಳಿ.

೨. ‘ಗುರುಗಳು ನಮ್ಮ ಪ್ರಾರಬ್ಧವನ್ನು ಬೇಗನೇ ಮುಗಿಸುತ್ತಿದ್ದಾರೆ’, ಎಂಬ ಭಾವವನ್ನಿಟ್ಟುಕೊಳ್ಳಿ ! : ನಮಗೆ ಸುಖ- ದುಃಖ, ಮಾನ-ಅಪಮಾನ, ಲಾಭ-ನಷ್ಟ ಇವೆಲ್ಲವುಗಳ ಆಚೆಗೆ ಹೋಗಬೇಕಾಗಿದೆ. ಆತ್ಮಜ್ಞಾನಿ ವ್ಯಕ್ತಿಗೆ ಸುಖ-ದುಃಖ, ಮಾನ- ಅಪಮಾನಗಳೆಲ್ಲವೂ ಸಮಾನವಾಗಿರುತ್ತದೆ. ಆ ಸ್ಥಿತಿಗೆ ನಮ್ಮನ್ನು ಬೇಗನೆ ಕೊಂಡೊ ಯ್ಯಲು ‘ಗುರುಗಳು ನಮ್ಮ ಪ್ರಾರಬ್ಧವನ್ನು ಬೇಗನೇ ಮುಗಿಸುತ್ತಿದ್ದಾರೆ’, ಎಂಬ ಭಾವವನ್ನಿಟ್ಟುಕೊಳ್ಳಿ.
೩. ಪ್ರಾರಬ್ಧವನ್ನು ಭೋಗಿಸಲೆಂದೇ ಭೂಲೋಕಕ್ಕೆ ಬಂದಿದ್ದೇವೆ; ಆದರೆ ಗುರುಗಳು ತಮ್ಮ ಕೃಪೆಯಿಂದ ನಮ್ಮ ಕೈಯನ್ನು ಹಿಡಿದಿದ್ದಾರೆ ! : ರಾವಣನು ದೇವತೆಗಳನ್ನೂ ಬಂಧಿಸಿದ್ದನು. ಅವರ ಎದುರು ನಾವಂತೂ ಸಣ್ಣಪುಟ್ಟ ಸಾಧಕರಾಗಿ ದ್ದೇವೆ. ದೇವರಿಗೂ ಭೋಗವನ್ನು ತಪ್ಪಿಸ ಲಾಗಲಿಲ್ಲ, ನಾವಂತೂ ಮನುಷ್ಯರಾಗಿ ದ್ದೇವೆ. ಪ್ರಾರಬ್ಧವನ್ನು ಭೋಗಿಸಲೆಂದೇ ಭೂಲೋಕಕ್ಕೆ ಬಂದಿದ್ದೇವೆ; ಆದರೆ ಗುರು ಗಳು ತಮ್ಮ ಕೃಪೆಯಿಂದ ನಮ್ಮ ಕೈಯನ್ನು ಹಿಡಿದಿದ್ದಾರೆ. ಅವರು ನಮ್ಮ ಕೈಯನ್ನು ಎಂದಿಗೂ ಬಿಡಲಾರರು ಎಂಬ ಭರವಸೆ ಯನ್ನಿಟ್ಟುಕೊಳ್ಳಿ.
೪. ಸಹಸ್ರಾರು ವರ್ಷಗಳ ಕಾಲ ಸಾಧನೆಯನ್ನು ಮಾಡಿರುವ ಪಾತಾಳ ದಲ್ಲಿನ ಬಲಾಢ್ಯ ಮಾಂತ್ರಿಕರಿಗೆ ಸಾಧಕರ ಕೂದಲನ್ನೂ ಮುಟ್ಟಲಾಗಲಿಲ್ಲ, ಇದರಿಂದಲೇ ನಮ್ಮ ಗುರುಗಳ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಅರಿತುಕೊಳ್ಳಿ ! : ಪ.ಪೂ. ಡಾಕ್ಟರರು, ‘ಈಗಿನ ಕಲಿಯುಗ ದಲ್ಲಿ ಮೋಕ್ಷದ ಮಾರ್ಗವು ‘ದಕ್ಷಿಣ ಮಾರ್ಗ’ ವಾಗಿದೆ, ಅಂದರೆ ಸಪ್ತಪಾತಾಳಗಳಿಂದಲೇ ಸಾಧಕರು ಮೋಕ್ಷಕ್ಕೆ ಹೋಗಬೇಕಾಗಿದೆ’ ಎಂದು ಹೇಳಿದ್ದರು. ಪೊಲೀಸರಲ್ಲಿ ಅಥವಾ ಕಾರಾಗೃಹದಲ್ಲಿ ಎಲ್ಲಕ್ಕಿಂತ ಹೆಚ್ಚು ರಜ-ತಮ ವಿರುತ್ತದೆ. ಇದಕ್ಕನುಸಾರ ಅಲ್ಲಿನ ರಜ- ತಮವನ್ನು ಸಹಿಸುವಂತಹ ಕ್ಷಮತೆಯನ್ನು ಗುರುಗಳು ನಮಗೆ ಮೊದಲೇ ಕೊಟ್ಟಿದ್ದಾರೆ, ಎಂಬ ಭಾವವನ್ನಿಟ್ಟುಕೊಳ್ಳಿ. ೬-೭ ನೇ ಪಾತಾಳದ ಮಾಂತ್ರಿಕರು ಸಾಧಕರ ದೇಹ ದಲ್ಲಿದ್ದುಕೊಂಡು, ಸಾಧಕರಿಗೆ ವಿವಿಧ ರೀತಿಯ ಪರಾಕಾಷ್ಠೆಯ ಆಧ್ಯಾತ್ಮಿಕ ತೊಂದರೆಗಳನ್ನು ಕೊಡುತ್ತಿದ್ದಾರೆ, ಆದರೂ ಈ ತೊಂದರೆಗಳಿಂದ ಕೇವಲ ಗುರುಕೃಪೆ ಯಿಂದಲೇ ಜೀವಂತವಾಗಿದ್ದೇವೆ ಎಂಬ ಅನುಭೂತಿಯನ್ನು ನಾವು ಸತತವಾಗಿ ಪಡೆಯುತ್ತಿದ್ದೇವೆ. ಸಹಸ್ರಾರು ವರ್ಷಗಳ ಸಾಧನೆಯನ್ನು ಮಾಡಿರುವ ಪಾತಾಳದಲ್ಲಿನ ಬಲಾಢ್ಯ ಮಾಂತ್ರಿಕರಿಗೆ ಸಾಧಕರ ಕೂದಲನ್ನೂ ಮುಟ್ಟಲು ಆಗಲಿಲ್ಲ, ಇದರಿಂದಲೇ ನಮ್ಮ ಗುರುಗಳ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಅರಿತುಕೊಳ್ಳಿ. ಯಾವ ಗುರುಗಳು ನಮ್ಮನ್ನು ಸೂಕ್ಷ ವಾಗಿರುವ (ನಮಗೆ ಕಾಣಿಸದಿರುವ) ಪಾತಾಳದಲ್ಲಿನ ಬಲಾಢ್ಯ ಮಾಂತ್ರಿಕರಿಂದ ಸತತ ರಕ್ಷಣೆಯನ್ನು ಮಾಡುತ್ತಿದ್ದಾರೆಯೋ, ಅವರು ಸ್ಥೂಲದಲ್ಲಿನ ಕೆಟ್ಟ ಶಕ್ತಿಗಳಿಂದ ಅಥವಾ ಕೆಟ್ಟ ಪರಿಸ್ಥಿತಿಗಳಿಂದ ನಮ್ಮ ರಕ್ಷಣೆ ಯನ್ನು ಮಾಡುವುದಿಲ್ಲವೇ ? ಖಂಡಿತ ವಾಗಿಯೂ ಮಾಡುವರು.
೫. ಕಠಿಣ ಪ್ರಸಂಗದಲ್ಲಿಯೂ ಭಕ್ತ ರನ್ನು ರಕ್ಷಿಸುವ ಭಗವಂತನು ‘ಇವನು ನನ್ನ ಭಕ್ತನಾಗಿದ್ದಾನೆ’ ಎಂದು ಎಲ್ಲರಿಗೂ ತೋರಿಸಿಕೊಡುತ್ತಾನೆ ! : ಭಕ್ತ ಪ್ರಹ್ಲಾದ ನಿಗೆ ಎಷ್ಟೋ ಕಠಿಣ ಪ್ರಸಂಗಗಳು ಬಂದವು. ಅವನನ್ನು ಕುದಿಯುತ್ತಿರುವ ಎಣ್ಣೆಗೆ ಹಾಕಿ ದರು, ಬೆಟ್ಟದಿಂದ ದೂಡಿದರು ಆದರೆ ಪ್ರತಿ ಬಾರಿ ಭಗವಂತನು ಅವನನ್ನು ರಕ್ಷಿಸಿದನು. ಭಕ್ತನಿಗೆ ಕಠಿಣ ಪ್ರಸಂಗಗಳು ಬರುವುದು ತಪ್ಪುವುದಿಲ್ಲ; ಆದರೆ ಕಠಿಣ ಪ್ರಸಂಗ ದಲ್ಲಿಯೂ ಭಕ್ತರ ರಕ್ಷಣೆ ಮಾಡಿ ಭಗವಂತನು ಎಲ್ಲರಿಗೂ ಇವನು ನನ್ನ ಭಕ್ತ ನಾಗಿದ್ದಾನೆ ಎಂದು ತೋರಿಸಿ ಕೊಡುತ್ತಾನೆ. ಅದಕ್ಕಾಗಿಯೇ ಕಠಿಣ ಪ್ರಸಂಗದ ಪ್ರಯೋಜನವಿದೆ. ‘ನ ಮೇ ಭಕ್ತಃ ಪ್ರಣಶ್ಯತಿ|’ ಎಂದರೆ ‘ನನ್ನ ಭಕ್ತರ ನಾಶವಾಗುವುದಿಲ್ಲ’, ಎಂದು ಭಗವಂತನು ಮೊದಲೇ ಹೇಳಿದ್ದಾನೆ.
೬. ಶಿಷ್ಯ ಮಟ್ಟದವರೆಗಾದರೂ ಬನ್ನಿ ! : ಓರ್ವ ಶಿಷ್ಯನು ಗುರುಗಳಿಗೆ ಅತೀ ಪ್ರಿಯನಾಗಿದ್ದನು. ಆದುದರಿಂದ ಇತರ ಶಿಷ್ಯರು ಅವನನ್ನು ದ್ವೇಷಿಸುತ್ತಿದ್ದರು. ಗುರುಗಳು ಸರ್ವಜ್ಞಾನಿಯಾಗಿದ್ದರಿಂದ ಅವರಿಗೆ ಇತರ ಶಿಷ್ಯರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿಯಿತು. ಒಮ್ಮೆ ಅವರು ಒಂದು ಸೌತೆಕಾಯಿಯನ್ನು ತಂದರು. ಅದನ್ನು ಎರಡು ಸಮಪಾಲು ಮಾಡಿದರು. ಒಂದು ಸಂಪೂರ್ಣ ಪಾಲನ್ನು ಪ್ರಿಯ ಶಿಷ್ಯ ನಿಗೆ ಮತ್ತು ಇನ್ನೊಂದು ಪಾಲನ್ನು ೧೫- ೨೦ ತುಂಡು ಮಾಡಿ ಉಳಿದ ಶಿಷ್ಯರಿಗೆ ನೀಡಿದರು. ಆಗ ಇತರ ಶಿಷ್ಯರ ಮನಸ್ಸಿನಲ್ಲಿ ‘ಅವನು ಗುರುಗಳಿಗೆ ಮುದ್ದಿನ ಶಿಷ್ಯನಾದುದ ರಿಂದ ಅವನಿಗೆ ಸೌತೆಯ ದೊಡ್ಡ ತುಂಡನ್ನು ಕೊಟ್ಟರು ಮತ್ತು ನಮಗೆ ಸಣ್ಣ ಸಣ್ಣ ತುಂಡು ಕೊಟ್ಟರು’ ಎಂಬ ವಿಚಾರ ಬಂದಿತು. ಆದರೆ ಪ್ರತ್ಯಕ್ಷದಲ್ಲಿ ಆ ಶಿಷ್ಯರು ಸೌತೆಕಾಯಿ ಯನ್ನು ತಿನ್ನಲಾರಂಭಿಸಿದಾಗ ಅದನ್ನು ಕೂಡಲೇ ಉಗುಳಿದರು. ಏಕೆಂದರೆ ಸೌತೆ ಕಾಯಿ ತುಂಬಾ ಕಹಿಯಾಗಿತ್ತು. ಆ ಪ್ರಿಯ ಶಿಷ್ಯನನ್ನು ಇತರ ಶಿಷ್ಯರು ನೋಡಿದಾಗ ಅವನಂತೂ ಮನಸ್ಪೂರ್ವಕವಾಗಿ ಆನಂದ ದಿಂದ ತಿನ್ನುತ್ತಿದ್ದನು. ಆಗ ಗುರುಗಳು ‘ಮಗುವೇ, ನಿನಗೆ ಈ ಸೌತೆಕಾಯಿ ಕಹಿ ಯಾಗಲಿಲ್ಲವೇ ? ಇವರೆಲ್ಲರೂ ಉಗುಳಿ ದರು’ ಎಂದರು. ಅದಕ್ಕೆ ಶಿಷ್ಯನು ‘ಗುರುದೇವಾ, ಸೌತೆಕಾಯಿ ಬಹಳ ಕಹಿ ಯಾಗಿದೆ’ ಎಂದನು. ಆಗ ಗುರುಗಳು ‘ಹಾಗಾದರೆ ನೀನು ಅದನ್ನು ಹೇಗೆ ತಿನ್ನುತ್ತಿ ದ್ದೀಯಾ’ ಎಂದು ಕೇಳಿದರು. ಅದಕ್ಕೆ ಅವನು ‘ಗುರುದೇವಾ, ಈ ಸೌತೆಯನ್ನು ನೀವು ನನಗೆ ನೀಡಿದ್ದೀರಿ. ಆದುದರಿಂದ ಇದು ನನಗೆ ಪ್ರಸಾದವೇ ಆಗಿದೆ. ನೀವು ಯಾವ ರೀತಿ ನನಗೆ ಹೋಳಿಗೆ ನೀಡುತ್ತೀರೋ ಅದೇ ಪ್ರೀತಿಯಿಂದ ಸೌತೆಕಾಯಿಯನ್ನು ನೀಡಿದ್ದೀರಿ. ಸೌತೆಯಿರಲಿ ಅಥವಾ ಹೋಳಿಗೆ ಇರಲಿ ನಿಮಗೆ ನನ್ನ ಮೇಲಿರುವ ಪ್ರೀತಿ ಸಮಾನವಾಗಿದೆ; ಹಾಗಾಗಿ ನಾನು ಸೌತೆ ತಿನ್ನಬಲ್ಲೆ’ ಎಂದನು. ಇದರಿಂದ ಆ ಶಿಷ್ಯನು ಗುರುಗಳಿಗೆ ಏಕೆ ಪ್ರಿಯನಾಗಿದ್ದಾ ನೆಂದು ಗುರುಗಳು ಇತರರ ಗಮನಕ್ಕೆ ತಂದುಕೊಟ್ಟರು. ಸಾಧಕರೇ, ನಾವು ಯಾವುದೇ ಪ್ರಸಂಗದಲ್ಲಿದ್ದರೂ ನಮ್ಮ ಗುರು ಗಳಿಗೆ ನಮ್ಮ ಮೇಲೆ ಅತೀ ಪ್ರೀತಿಯಿದ್ದೇ ಇರುತ್ತದೆ ಎಂಬುದನ್ನು ಗಮನದಲ್ಲಿಡಿ. ಆದುದರಿಂದ ಪ್ರತಿಕೂಲ ಪರಿಸ್ಥಿತಿಯೂ ನಮಗಾಗಿ ಅನುಕೂಲವಾಗುವುದು.
೭. ದುಷ್ಟ ರಾಜಕಾರಣಿಗಳ ಪಾಪದ ಕೊಡವು ಬೇಗನೇ ತುಂಬಿ ಈಶ್ವರೀ ರಾಜ್ಯವು ಬೇಗನೆ ಬರಲಿದ್ದರೆ ನಾವು ಸೆರೆಮನೆಯನ್ನೂ ಆನಂದದಿಂದ ಎದುರಿ ಸೋಣ : ಸಾಧಕರ ಬಂಧನ ಮತ್ತು ಅವರ ಸೆರೆಮನೆವಾಸದಿಂದಾಗಿ ದುಷ್ಟ ರಾಜಕಾರಣಿಗಳ ಪಾಪದ ಕೊಡವು ಬೇಗ ತುಂಬಿ ಈಶ್ವರೀ ರಾಜ್ಯವು ಬೇಗನೆ ಬರಲಿದ್ದರೆ ನಾವು ಸೆರೆಮನೆಯನ್ನೂ ಆನಂದದಿಂದ ಎದುರಿಸೋಣ; ಏಕೆಂದರೆ ಇದರಿಂದ ನಾವು ನಮ್ಮ ಧ್ಯೇಯವನ್ನು ಬೇಗನೇ ಸಾಧಿಸುವೆವು.
೮. ಸೆರೆಮನೆಯ ೧ ನಿಮಿಷವೆಂದರೆ ೧ ದಿನದ ಸಾಧನೆಯ ಫಲವನ್ನು ನೀಡುವಂತಿದೆ ! : ಸಾಧಕರೇ, ಇದನ್ನು ಗಮನದಲ್ಲಿಟ್ಟುಕೊಳ್ಳಿ, ನಾವೇನೂ ಅಪರಾಧ ಮಾಡದಿರುವಾಗ ನಾವು ಭೋಗಿಸಲಿರುವ ಸೆರೆಮನೆಯಲ್ಲಿನ ೧ ನಿಮಿಷವು ನಮಗೆ ೧ ದಿನದ ಸಾಧನೆಯ ಫಲವನ್ನು ನೀಡಲಿದೆ. ಅದರ ಹಿಂದೆ ಗುರು ಗಳು ನಮಗೆ ಲಾಭವನ್ನೇ ಮಾಡುತ್ತಿದ್ದಾರೆ.
೯. ಸೆರೆಮನೆಯಲ್ಲಿಯೂ ಪ.ಪೂ. ಡಾಕ್ಟರರು ನಮ್ಮೊಂದಿಗೆ ಸೂಕ್ಷ ದಿಂದ ಇರುತ್ತಾರೆ, ನಮ್ಮ ಕಾಳಜಿ ತೆಗೆದುಕೊಳ್ಳು ತ್ತಾರೆ ಮತ್ತು ನಮ್ಮ ಪ್ರಗತಿಯನ್ನೂ ಮಾಡಿಸಿಕೊಳ್ಳುತ್ತಾರೆ ! : ಸಾಧಕರೇ, ಪ.ಪೂ. ಡಾಕ್ಟರರು ಸಾಕ್ಷಾತ್ ಈಶ್ವರನಿದ್ದು ನಮ್ಮೆಲ್ಲರದ್ದೂ ಈ ಘೋರ ಕಲಿಯುಗದ ಕಾಲದಲ್ಲಿ ಅಲ್ಪ ಸಾಧನೆಯಿಂದ ಈಶ್ವರ ಪ್ರಾಪ್ತಿಯಾಗಬೇಕು ಎಂದು ಅವರು ಚಡಪಡಿಸುತ್ತಿದ್ದರು. ಅವರು ಕೇವಲ ನಮಗಾಗಿ ಭೂಮಿಯ ಮೇಲೆ ಬಂದಿದ್ದಾರೆ. ಅವರಷ್ಟು ಆತ್ಮೀಯರು ನಮಗೆ ಯಾರೂ ಇಲ್ಲ. ಅವರು ಸೆರೆಮನೆಯಲ್ಲಿಯೂ ನಮ್ಮೊಂದಿಗೆ ಇರುತ್ತಾರೆ, ನಮ್ಮ ಕಾಳಜಿ ತೆಗೆದುಕೊಳ್ಳುತ್ತಾರೆ ಮತ್ತು ನಮ್ಮ ಪ್ರಗತಿಯನ್ನೂ ಮಾಡಿಸಿಕೊಳ್ಳುತ್ತಾರೆ.
೧೦. ನಮ್ಮ ಗುರುಗಳು ನಮಗಾಗಿ ಇಷ್ಟು ಕಷ್ಟ ಅನುಭವಿಸಲು ಸಿದ್ಧರಿದ್ದಾರೆ, ಹಾಗಾದರೆ ನಾವೂ ಸಿದ್ಧರಾಗೋಣ, ಸತತವಾಗಿ ಈಶ್ವರನ ಅನುಸಂಧಾನದ ಲ್ಲಿದ್ದು ಜೀವನದಲ್ಲಿನ ಪ್ರತಿಯೊಂದು ಘಟನೆಗಳನ್ನು ಸಾಕ್ಷೀಭಾವದಿಂದ ನೋಡೋಣ! : ಈ ಘೋರ ಕಲಿಯುಗದ ಕಾಲದಲ್ಲಿ ರಾಜಕಾರಣಿಗಳು ಸಾಧನೆ ಮಾಡದಿರುವುದರಿಂದ ಅವರಿಗೆ ಸಂತರ ಮಹತ್ವವು ತಿಳಿಯುವುದಿಲ್ಲ. ತದ್ವಿರುದ್ದ ಅವರು ದುರ್ಜನರಿರುವುದರಿಂದ ಸಂತರಿಗೆ ತೊಂದರೆ ನೀಡುತ್ತಾರೆ. ಇದರ ಉದಾಹರಣೆಯೆಂದರೆ ಪ.ಪೂ. ಡಾಕ್ಟರ ರಿಗೆ ಪೊಲೀಸರ ವಿಚಾರಣೆ ಎದುರಿಸಬೇಕಾ ಯಿತು. ಹಾಗೆಯೇ ಅವರ ಮೇಲೆಯೂ ಪೊಲೀಸರು ‘ಚ್ಯಾಪ್ಟರ್ ಕೇಸ್’ ಹಾಕಿ ಅವರಿಗೆ ತೊಂದರೆ ನೀಡಲು ಪ್ರಾರಂಭಿಸಿ ದ್ದಾರೆ. ಅವರಿಗೂ ವಿನಾಕಾರಣ ಸೆರೆಮನೆ ಭೋಗಿಸಬೇಕಾಗಬಹುದು. ನಮ್ಮ ಗುರು ಗಳು ನಮಗಾಗಿ ಇಷ್ಟೆಲ್ಲ ಕಷ್ಟ ಅನುಭವಿ ಸಲು ಸಿದ್ಧರಿರುವಾಗ ನಾವೂ ಸಿದ್ಧರಾಗೋಣ. ನಾವು ಸತತ ಈಶ್ವರನ ಅನುಸಂಧಾನ ದಲ್ಲಿದ್ದು ನಮ್ಮ ಜೀವನದಲ್ಲಿನ ಘಟನೆಗಳನ್ನು ಸಾಕ್ಷಿಭಾವದಿಂದ ನೋಡೋಣ. ಪ.ಪೂ. ಡಾಕ್ಟರರೇ, ನಮ್ಮ ಜೀವನದಲ್ಲಿ ಬರುವ ಒಳ್ಳೆಯ-ಕೆಟ್ಟ ಪ್ರಸಂಗದಲ್ಲಿ ನಮಗೆ ಸತತ ನಿಮ್ಮ ಸ್ಮರಣೆಯಾಗಲಿ. ಆ ಪ್ರಸಂಗದಲ್ಲಿ ಸಕಾರಾತ್ಮಕ ಮತ್ತು ಸ್ಥಿರವಾಗಿದ್ದು ಅದರಿಂದ ಕಲಿತು ಮುಂದೆ ಹೋಗಲು ಕಲಿಸಿರಿ. ಪ್ರತಿ  ಪ್ರಸಂಗವನ್ನು ಸಾಧನೆಯ ದೃಷ್ಟಿಯಿಂದ ನೋಡಲು ಕಲಿಸಿ. ಅದರಿಂದ ಸಾಧನೆಗಾಗಿ ಲಾಭ ಪಡೆಯಲು ಕಲಿಸಿ. ಪ್ರತಿ ಕ್ಷಣ ನಮ್ಮ ಭಕ್ತಿಭಾವ ಮತ್ತು ಶರಣಾಗತಭಾವ ನಿಮ್ಮ ಚರಣಗಳಲ್ಲಿ ದೃಢವಾಗಲಿ. ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ. (ಮಾಘ ಕೃಷ್ಣ ಷಷ್ಠಿ, ಕಲಿಯುಗ ವರ್ಷ೫೧೧೧ (೪. ೨.೨೦೧೦))

No comments:

Post a Comment