ಸಾಧಕರೇ, ನನ್ನ ಬಂಧನವಾದರೂ ಭಾವನಾಸ್ತರದಲ್ಲಿ ಕೃತಿ ಮಾಡಬೇಡಿ! - ಪ.ಪೂ. ಡಾ. ಜಯಂತ...


 
ಸಾಧಕರೇ, ನನ್ನ ಬಂಧನವಾದರೂ ಭಾವನಾಸ್ತರದಲ್ಲಿ ಕೃತಿ ಮಾಡಬೇಡಿ! - ಪ.ಪೂ. ಡಾ. ಜಯಂತ ಆಠವಲೆ,
 ಪೊಲೀಸರು ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ವನ್ನು ರೂಪಿಸಿದ್ದಾರೆ. ಸಂತ ಜ್ಞಾನೇಶ್ವರ, ಸಂತ ತುಕಾರಾಮ ಮಹಾರಾಜರಂತಹ ಶ್ರೇಷ್ಠ ಸಂತರ ಹಾಗೂ ಇತ್ತೀಚೆಗೆ ಜಗದ್ಗುರು ಶಂಕಾರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿಯವರನ್ನು ಪೀಡಿಸಿರುವಾಗ ನನ್ನನ್ನು ಪೀಡಿಸಿದರೆ ಅದು ಸಹಜವೇ ಆಗಿದೆ.

ಸಾಧಕರೇ ನನಗೆ ಏನೇ ಆದರೂ ಭಾವನೆಯ ಸ್ತರದಲ್ಲಿ ಕೃತಿ ಮಾಡದೇ ಅದರೆಡೆಗೆ ‘ಈಶ್ವರೀ ರಾಜ್ಯ ಸ್ಥಾಪನೆಯ ಒಂದು ಅನಿವಾರ್ಯ ಘಟನೆ’ ಎಂಬ ದೃಷ್ಟಿಕೋನದಿಂದ ನೋಡಿರಿ, ಪ್ರಾರ್ಥನೆ ಮತ್ತು ನಾಮಜಪ ಇವುಗಳ ಕಡೆಗೆ ಗಮನ ನೀಡಿರಿ ! ‘ಭಕ್ತಿಯೇ ನಮ್ಮ ಶಕ್ತಿಯಾಗಿದೆ’ ಎಂಬ ಬೋಧನೆಯನ್ನು ಮರೆಯದಿರಿ. ‘ಯಾರಾದರೂ ನನ್ನ ಕೊಲೆ ಮಾಡಿ ದರೂ ಯಾರಿಗೆ ಕೆಡುಕೆನಿಸುವುದಿಲ್ಲವೋ ಅವನೇ ನನ್ನ ನಿಜವಾದ ಶಿಷ್ಯ’ ಎಂಬುದು ಪ.ಪೂ. ಭಕ್ತರಾಜ ಮಹಾರಾಜರ ಬೋಧನೆಯಾಗಿದೆ. ಅದನ್ನು ಆಚರಣೆಯಲ್ಲಿ ತನ್ನಿರಿ ! ೨೦೧೨ ರ ತನಕ ಕಾಲವು ಪ್ರತಿಕೂಲ ವಿದೆ. ಅಲ್ಲಿಯ ವರೆಗೆ ಇಂತಹ ಅನಿಷ್ಟ ಘಟನೆಗಳು ಘಟಿಸುತ್ತಲೇ ಇರು ತ್ತವೆ. ಇಂತಹ ಘಟನೆಗಳಿಂದ ನಾವು ಕಷ್ಟನಷ್ಟಗಳನ್ನು ಸಹಿಸಿ ಗೆದ್ದ ನಂತರ ನಮ್ಮ ವೈಯಕ್ತಿಕ ಆಧ್ಯಾತ್ಮಿಕ ಪ್ರಗತಿ ಹಾಗೂ ಈಶ್ವರೀ ರಾಜ್ಯದ ಸ್ಥಾಪನೆಯು ಶೀಘ್ರವಾಗಿ ಆಗುವುದು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ನಾನು ಎಲ್ಲರಿಗೂ ಶ್ರೀಕೃಷ್ಣನತ್ತ ಹೋಗಲು ಏಕೆ ಹೇಳುತ್ತಿರುತ್ತೇನೆ ಎಂಬುದು ಈಗ ಗಮನಕ್ಕೆ ಬಂದಿರಬಹುದು.
- ಪ.ಪೂ. ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ (ಭಾದ್ರಪದ ಶುಕ್ಲ ೧೦ ಕಲಿಯುಗ ವರ್ಷ ೫೧೧೨ (೧೭.೯.೨೦೧೦))

No comments:

Post a Comment