ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ವತಿಯಿಂದ ತಯಾರಿಸಲಾದ ‘ಫಲಕಗ್ರಂಥ’ದಲ್ಲಿ ಅಂತ್ಯ ಸಂಸ್ಕಾರ ಎಂಬ ಧರ್ಮಶಿಕ್ಷಣ ಫಲಕಗಳ ಮಾಲಿಕೆಯಲ್ಲಿರುವ ‘ವ್ಯಕ್ತಿಯ ಮೃತ್ಯುವಿನ ನಂತರ ಏನು ಮಾಡಬೇಕು ?’ ಈ ಫಲಕದಲ್ಲಿ ಮೊದಲನೆಯ ಸಾಲಿನಲ್ಲಿ ‘ಮೃತದೇಹದ ತಲೆಯನ್ನು ಉತ್ತರಕ್ಕೆ ಮತ್ತು ಕಾಲುಗಳು ದಕ್ಷಿಣಕ್ಕೆ ಬರುವಂತೆ ಮಲಗಿಸಬೇಕು’ ಎಂದು ತಪ್ಪಾಗಿ ಸಂದೇಶ ಕೊಡಲಾಗಿದೆ. ಹಾಗೆಯೇ ‘ಮೃತದೇಹವನ್ನು ದಕ್ಷಿಣೋತ್ತರವಾಗಿ ಏಕೆ ಇಡಬೇಕು ?’ ಈ ಫಲಕದಲ್ಲಿ ಇರುವ ಮೃತದೇಹದ ಚಿತ್ರದಲ್ಲಿ ತಲೆಯು ಉತ್ತರ ದಿಕ್ಕಿಗೆ ಮತ್ತು ಕಾಲು ದಕ್ಷಿಣ ದಿಕ್ಕಿಗೆ ತಪ್ಪಾಗಿ ತೋರಿಸಲಾಗಿದೆ. ಈ ಗ್ರಂಥವನ್ನು ಖರೀದಿಸಿದವರು ‘ಮೃತದೇಹದ ತಲೆಯು ದಕ್ಷಿಣಕ್ಕೆ ಮತ್ತು ಕಾಲುಗಳು ಉತ್ತರ ದಿಕ್ಕಿಗೆ ಬರುವಂತೆ ಮಲಗಿಸಬೇಕು’ ಎಂದು ತಿದ್ದುಪಡಿ ಮಾಡಬೇಕೆಂದು ಸವಿನಯವಾಗಿ ವಿನಂತಿಸುತ್ತೇವೆ. ಇದೇ ರೀತಿ ಧರ್ಮಫಲಕದಲ್ಲಿಯೂ ಮೇಲಿನ ಫಲಕದ ಸಂದರ್ಭದಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾಗಿ ವಿನಂತಿ. ಈ ಫಲಕವನ್ನು ಪ್ರಾಯೋಜಿಸಿದ ಹಿತಚಿಂತಕರು ಈ ಬಗ್ಗೆ ಸ್ಥಳೀಯ ಸಮಿತಿಯ ಕಾರ್ಯಕರ್ತರನ್ನು ಹಾಗೂ ಸಾಧಕರನ್ನು ಸಂಪರ್ಕಿಸಬೇಕು. ಅಲ್ಲದೇ ಸಾಪ್ತಾಹಿಕ ಸನಾತನ ಪ್ರಭಾತದ ೧೨/೩೭ ಸಂಚಿಕೆಯಲ್ಲಿ ೧೨ ನೇ ಪುಟದಲ್ಲಿ ಫಲಕದ ಬಗ್ಗೆ ಹಾಕಿದ ಜಾಹೀರಾತಿನಲ್ಲಿಯೂ ಮೇಲಿನಂತೆ ಬದಲಾವಣೆ ಮಾಡಿಕೊಳ್ಳಬೇಕಾಗಿ ವಿನಂತಿ.
No comments:
Post a Comment