ಪೂಜಾಮಂಟಪದಲ್ಲಿ ದೇವತೆಗಳ ಸಂರಚನೆ ಯಾವ ಪ್ರಕಾರ ಇರಬೇಕು?

ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಪೂಜಾ ಮಂಟಪದಲ್ಲಿ ದೇವತೆಗಳ ಸಂರಚನೆ  ಶಂಕು ವಿನಂತೆ ಇರಬೇಕು ಎಂದು ಹೇಳಲಾಗಿದೆ. 1)  ಪೂಜಾಮಂಟಪದ ಮಧ್ಯಭಾಗದಲ್ಲಿ ಶ್ರೀ ಗಣೇಶನ ಚಿತ್ರ ಅಥವಾ ಮೂರ್ತಿಯಿರಲಿ.
2)  ನಿಮ್ಮ ಬಲಬದಿಗೆ ಸ್ತ್ರೀ ದೇವತೆಗಳ ಪ್ರತಿಮೆ ಅಂದರೆ ಕುಲದೇವಿಯ ಪ್ರತಿಮೆಯನ್ನು ಇಡಿರಿ.
3)  ಅದರ ನಂತರ ಒಂದರ ಹಿಂದೆ ಒಂದು ಅನ್ನಪೂರ್ಣೇಶ್ವರಿ ಮಾತೆ, ದುರ್ಗಾಮಾತೆ  ಮುಂತಾದವರ ಪ್ರತಿಮೆಗಳನ್ನು ಇಡಿರಿ.
4)  ನಮ್ಮ ಎಡಬದಿಗೆ ಪುರುಷ ದೇವತೆ ಗಳ ಪ್ರತಿಮೆ ಅಂದರೆ ಕುಲದೇವರ ಪ್ರತಿಮೆಯನ್ನು ಇಡಿ.

5)  ಅನಂತರ ಹನುಮಾನ, ಬಾಲ ಗೋಪಾಲ  ಇತ್ಯಾದಿ ದೇವತೆಗಳ ಪ್ರತಿಮೆ ಗಳನ್ನು ಇಡಿ.
6)  ಕೆಲವು ಬಾರಿ ಒಂದೇ ಚಿತ್ರದಲ್ಲಿ ಶಿವನು ಶಕ್ತಿ ಸಹಿತವಿರುತ್ತಾರೆ. ಉದಾ. ಸೀತಾ-ರಾಮ, ಲಕ್ಷಿ -ನಾರಾಯಣ ಇತ್ಯಾದಿ.
7) ಯಾವ ಚಿತ್ರದಲ್ಲಿ ದೇವಿಯು, ದೇವರ ಎಡಬದಿಯಲ್ಲಿರುತ್ತಾಳೆಯೋ ಅಲ್ಲಿ ಅವಳು ತನ್ನ ಸ್ವಾಮಿಯೊಂದಿಗೆ ಭಕ್ತರಿಗೆ ಆಶೀರ್ವಾದವನ್ನು ನೀಡುತ್ತಾಳೆ. ಅಂದರೆ ಇದು ಶಕ್ತಿಯ ತಾರಕರೂಪವಾಗಿದೆ.
8) ಇಂತಹ ಚಿತ್ರಗಳಲ್ಲಿ ಪುರುಷದೇವತೆ ಯನ್ನೇ ಪ್ರಧಾನದೇವತೆ ಎಂದು ಪರಿಗಣಿಸಿ ಆ ಚಿತ್ರವನ್ನು ಗಣಪತಿಯ ಬಲಬದಿಗೆ ಇಡಬೇಕು.
9)   ಕೆಲವು ಚಿತ್ರಗಳಲ್ಲಿ ದೇವಿಯು ದೇವರ ಬಲಬದಿಗೆ ಇರುತ್ತಾಳೆ. ಇದು ಶಕ್ತಿಯ ಮಾರಕರೂಪವಾಗಿದೆ.
10)   ಚಿತ್ರದಲ್ಲಿ ದೇವಿಯು ದೇವರ ಬಲ ಬದಿಯಲ್ಲಿದ್ದಲ್ಲಿ ಅವಳನ್ನು ಚಿತ್ರದಲ್ಲಿನ ಪ್ರಧಾನದೇವತೆ ಎಂದು ಪರಿಗಣಿಸಿ ಚಿತ್ರವನ್ನು ಗಣಪತಿಯ ಎಡಬದಿಗಿಡಬೇಕು.
11)  ದೇವತೆಗಳಿಗೆ ಎರಡು ರೂಪಗಳಿರು ತ್ತವೆ, ಒಂದು ತಾರಕ ರೂಪ, ಮತ್ತೊಂದು ಮಾರಕ ರೂಪ. ಭಕ್ತರಿಗೆ ಆಶೀರ್ವಾದವನ್ನು ನೀಡುವ ರೂಪ ಅಂದರೆ ತಾರಕರೂಪ. ಉದಾಹರಣೆಗೆ ಸಾಮಾನ್ಯವಾಗಿ ಆಶೀರ್ವಾದದ ಮುದ್ರೆಯಲ್ಲಿ ಕಾಣಿಸುವ ದೇವಿ. ಶ್ರೀ ಮಹಾಲಕ್ಷಿ .
12) ಅಸುರರ ಸಂಹಾರ ಮಾಡುವ ದೇವಿ, ಉದಾಹರಣೆಗೆ ಮಹಿಷಾಸುರನನ್ನು ಸಂಹರಿಸಿದ ಮಹಿಷಾಸುರಮರ್ದಿನಿ ದೇವಿ. ಇದು ದೇವಿಯ ಮಾರಕ ರೂಪವಾಗಿದೆ.
13)  ದೇವತೆಯ ಯಾವ ರೂಪವನ್ನು ನಾವು ಪೂಜಿಸಬೇಕೋ ಆ ಚಿತ್ರವನ್ನು ಪೂಜಾಮಂಟಪದಲ್ಲಿಡಿರಿ.

ಹಿಂದೂ ಜನಜಾಗೃತಿ ಸಮಿತಿಯು ಅಲ್ಲಲ್ಲಿ ಧರ್ಮಸತ್ಸಂಗ ವರ್ಗಗಳನ್ನು ತೆಗೆದು ಕೊಳ್ಳುತ್ತಿದೆ. ಅಲ್ಲದೇ ಹಿಂದೂಗಳಿಗೆ ಧರ್ಮದ ಕುರಿತು ಮಾಹಿತಿ ನೀಡಲು ಅನುಕೂಲವಾಗ ಲೆಂದು ಈ ಲೇಖನಮಾಲೆಯ ಪ್ರತಿಯನ್ನು ಸಂಗ್ರಹಿಸಿಟ್ಟುಕೊಳ್ಳಿ. ಹಿಂದೂಗಳೇ, ಈ ಮಾಹಿತಿಯನ್ನು ಹೆಚ್ಚೆಚ್ಚು ಹಿಂದೂಗಳ ವರೆಗೆ ತಲುಪಿಸಿ ಧರ್ಮಶಿಕ್ಷಣ ನೀಡಲು ಮುಂದಾಗಿ !

No comments:

Post a Comment