ಧಾರ್ಮಿಕ ಕೃತಿಗಳ ಶಾಸ್ತ್ರ

ಧರ್ಮಸತ್ಸಂಗ
ದೇವರ ಮಂಟಪದಲ್ಲಿ ದೇವತೆಗಳ ರಚನೆ
ಪ್ರತಿಯೊಬ್ಬ ಹಿಂದೂವಿಗೆ ತಮ್ಮ ಶ್ರದ್ಧಾಸ್ಥಾನವಿರುತ್ತದೆ. ಈ ಶ್ರದ್ಧಾಸ್ಥಾನಕ್ಕೆ ಬದ್ಧನಾಗಿರಲು ಹಾಗೂ ಅದರ ನಿತ್ಯ ಸ್ಮರಣೆಗೆಂದು ನಮ್ಮ ಪೂಜಾಮಂಟಪಗಳಲ್ಲಿ ದೇವತೆಗಳ ಪ್ರತಿಮೆಗಳೂ ಇರುತ್ತವೆ. ಈ ವಾರ ನಾವು ಪೂಜಾಮಂಟಪದಲ್ಲಿ ಇಡಲಾಗುವ ಮೂರ್ತಿಯ ಆಕಾರ ಹೇಗಿರಬೇಕು, ಪೂಜಾ ಮಂಟಪದಲ್ಲಿ ದೇವತೆಗಳ ಸಂರಚನೆ ಹೇಗಿರಬೇಕು, ಯಾವುದೆಲ್ಲ ದೇವತೆಗಳನ್ನು ಅದರಲ್ಲಿ ಜೋಡಿಸಬೇಕು ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯೋಣ.

ಪೂಜಾಮಂಟಪದಲ್ಲಿ ಇಡಲಾಗುವ  ಮೂರ್ತಿಯ ಆಕಾರ
ಮನೆಯಲ್ಲಿ ಪೂಜೆಗೆಂದು ಇರಿಸಲ್ಪಡುವ ದೇವತಾ ಮೂರ್ತಿಗಳು ಸುಮಾರು ೨ ರಿಂದ ೬ ಇಂಚುಗಳ ವರೆಗೆ ಎತ್ತರವಿದ್ದರೆ ಅದರ ಆಕಾರದಲ್ಲಿ ದೇವತಾತತ್ತ್ವವು ಅತ್ಯಧಿಕ ಪ್ರಮಾಣದಲ್ಲಿ ಘನೀಕರಿಸ ಲ್ಪಡುತ್ತದೆ. ಇದರಿಂದ ದೇವತಾಚೈತನ್ಯದ ಲಾಭವು ಎಲ್ಲರಿಗೂ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಮೂರ್ತಿಯು ಹೆಚ್ಚು ಎತ್ತರ ವಾದಂತೆ ಅದರಲ್ಲಿ ದೇವತಾತತ್ತ್ವವು ಘನೀಕೃತವಾಗುವ ಪ್ರಮಾಣ ಕಡಿಮೆ ಯಾಗುತ್ತಾ ಹೋಗುತ್ತದೆ.
ಪೂಜಾಮಂಟಪದಲ್ಲಿ ದೇವತೆಗಳ ಸಂರಚನೆ
ಕೆಲವು ಸಂಪ್ರದಾಯಗಳಲ್ಲಿ ಪೂಜಾ ಮಂಟಪದಲ್ಲಿ ದೇವತೆಗಳ ಪಂಚಾಯತನ  ಸಂರಚನೆಯು ಪ್ರಚಲಿತವಿದೆ. ಪಂಚ ಎಂದರೆ ಐದು. ಆಯತನ ಎಂದರೆ ಮನೆ. ಈ ಇವುಗಳಿಂದ ಪಂಚಾಯತನ ಶಬ್ದವು ಉಂಟಾಗಿದೆ. ಇದರಲ್ಲಿ ಶ್ರೀವಿಷ್ಣು, ಶಿವ, ಶ್ರೀಗಣೇಶ, ದೇವಿ ಹಾಗೂ ಸೂರ್ಯ ಈ ಐದು ದೇವತೆಗಳನ್ನು ಪ್ರಧಾನದೇವತೆ ಗಳೆಂದು ಪರಿಗಣಿಸಲಾಗಿದೆ. ಈ ಪ್ರಕಾರದ ಸಂರಚನೆಯಲ್ಲಿ ಈ ದೇವತೆಗಳ ಪೈಕಿ ಸಂಪ್ರದಾಯಕ್ಕನುಸಾರ, ಒಂದು ಉಪಾಸ್ಯ ದೇವತೆಯನ್ನು ಪ್ರಧಾನ ದೇವತೆ ಎಂದು ಪರಿಗಣಿಸಿ ಅದಕ್ಕೆ ಮಧ್ಯದ ಸ್ಥಾನವನ್ನು ನೀಡ ಲಾಗುತ್ತದೆ ಮತ್ತು ಅನ್ಯ ನಾಲ್ಕು ದೇವತೆ ಗಳನ್ನು ಪ್ರಧಾನದೇವತೆಯ ನಾಲ್ಕೂ ದಿಕ್ಕು ಗಳಲ್ಲಿ ಸ್ಥಾಪಿಸಲಾಗುತ್ತದೆ.
ಬಹಳಷ್ಟು ಬಾರಿ ನಮ್ಮ ಪೂಜಾ ಮಂಟಪದಲ್ಲಿ ದೇವತೆಗಳ ಪ್ರತಿಮೆಗಳಿ ರುತ್ತವೆ. ಆದರೆ ಅವುಗಳಲ್ಲಿ ಕುಲದೇವತೆ ಮತ್ತು ಶ್ರೀಗಣೇಶನ ಪ್ರತಿಮೆ ಅಥವಾ ಚಿತ್ರ ಗಳಿರುವುದಿಲ್ಲ. ಹಾಗಿದ್ದಲ್ಲಿ ಕುಲದೇವತೆ ಮತ್ತು ಶ್ರೀಗಣೇಶನ ಪ್ರತಿಮೆ ಅಥವಾ ಚಿತ್ರ ಗಳನ್ನು ನಿಮ್ಮ ಪೂಜಾಮಂಟಪದಲ್ಲಿ  ಶ್ರದ್ಧಾ ಪೂರ್ವಕವಾಗಿ ಸ್ಥಾಪಿಸಿರಿ. ನೀವೇನಾದರೂ ಕುಲಾಚಾರಕ್ಕನುಸಾರ ಬಾಲಗೋಪಾಲ, ಹನುಮಾನ ಅಥವಾ ಅನ್ನಪೂರ್ಣೇಶ್ವರಿ ಯಂತಹ ದೇವಿ-ದೇವತೆ ಹಾಗೂ ಶಿವ, ದುರ್ಗಾ ಮುಂತಾದ ಉಚ್ಚ ದೇವತೆಯ ಉಪಾಸನೆಯನ್ನು ಮಾಡಿದರೆ ಆ ದೇವತೆ ಯನ್ನೂ ಪೂಜಾಮಂಟಪದಲ್ಲಿ ಸ್ಥಾಪಿಸಿರಿ.
ಗಣಪತಿಯ ಮೂರ್ತಿಯನ್ನು ಏಕೆ ಸ್ಥಾಪಿಸಬೇಕು ?
ಮಾನವನು ಯಾವ ಭಾಷೆಯನ್ನು ಆಡುವನೋ ಅದು ಶಬ್ದಗಳಲ್ಲಿವೆ. ಅದು ‘ನಾದಭಾಷೆಯಾಗಿದೆ’; ಆದರೆ, ದೇವತೆಗಳ ಭಾಷೆಯು ‘ಪ್ರಕಾಶಭಾಷೆಯಾಗಿದೆ’. ನಮ್ಮ ನಾದಭಾಷೆಯನ್ನು ದೇವತೆಗಳ ಪ್ರಕಾಶ ಭಾಷೆಗೆ ಹಾಗೂ ದೇವತೆಗಳ ಪ್ರಕಾಶಭಾಷೆ ಯನ್ನು ನಮ್ಮ ನಾದಭಾಷೆಗೆ ರೂಪಾಂತರ ಮಾಡುವ ಕಾರ್ಯವನ್ನು ಗಣಪತಿಯು ಮಾಡುತ್ತಾರೆ; ಆದುದರಿಂದ ಪೂಜಾ ಮಂಟಪದಲ್ಲಿ ಗಣೇಶನ ಸ್ಥಾಪನೆಯನ್ನು ಅವಶ್ಯವಾಗಿ ಮಾಡಬೇಕು.

ಸಾಧಕರೇ, ನಮ್ಮಲ್ಲಿ ಭಕ್ತಿ ಹೆಚ್ಚಾದರೆ ಈಶ್ವರನು ಬೇಗನೇ ಅವತಾರ ತಾಳಿ ರಕ್ಷಿಸುವನು !

No comments:

Post a Comment