ತಮ್ಮ ಮಗು ಉಚ್ಚ ಸ್ವರ್ಗಲೋಕದಿಂದ ಅಥವಾ ಮಹಾಲೋಕದಿಂದ ಬಂದಿದೆಯೆಂದು...

ತಮ್ಮ ಮಗು ಉಚ್ಚ ಸ್ವರ್ಗಲೋಕದಿಂದ ಅಥವಾ ಮಹಾಲೋಕದಿಂದ ಬಂದಿದೆಯೆಂದು ಅನಿಸಿದರೆ ಅದರ ಬಗ್ಗೆ ಮಾಹಿತಿ ಕಳುಹಿಸುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಡಿ!
ಸದ್ಯ ಬಹಳಷ್ಟು ಸಾಧಕರು ತಮ್ಮ ಮಕ್ಕಳ ಗುಣವೈಶಿಷ್ಟ ಗಳನ್ನು ಬರೆದು ಕಳುಹಿಸುತ್ತಿದ್ದಾರೆ. ಮಗು ಆಧ್ಯಾತ್ಮಿಕ ದೃಷ್ಟಿ ಯಿಂದ ಉನ್ನತವಾಗಿದ್ದರೆ ಅದರ ಜನ್ಮಕ್ಕಿಂತ ಮೊದಲೇ ಪಾಲಕರಿಗೆ ಅವರ ಬಗ್ಗೆ ಶುಭ ಸಂಕೇತಗಳು ದೊರಕುತ್ತವೆ. ಇಂತಹ ಮಕ್ಕಳ ಬಗ್ಗೆ ಮಾಹಿತಿ ಕಳುಹಿಸುವಾಗ ಸಾಧಕರು ಮುಂದಿನ ಅಂಶಗಳ ಆಧಾರ ದಿಂದ ಕಳುಹಿಸಿದರೆ ಸಂಕಲನದ ದೃಷ್ಟಿ ಯಿಂದ ಸುಲಭವಾಗುವುದು.

ಮಗುವು ಗರ್ಭದಲ್ಲಿರುವಾಗಿನಿಂದ ಅವು ಜನ್ಮಕ್ಕೆ ಬಂದ ನಂತರದ ವಯ ಮಾನಕ್ಕನುಸಾರ ಮಾಹಿತಿ :
೧. ಗರ್ಭಧಾರಣೆಯ ಮೊದಲು ಏನಾದರೂ ಸಂಕೇತ ದೊರೆತಿದ್ದರೆ ಅದು ಅಥವಾ ಗರ್ಭದಲ್ಲಿರುವಾಗಿನ ಅನುಭವ, ತನ್ನ ಮಗು ಉನ್ನತನಾಗಿರಬೇಕೆಂದು ಏನಾದರೂ ಪ್ರತ್ಯೇಕ ಪ್ರಯತ್ನ ಮಾಡಿದ್ದರೆ ಅದನ್ನೂ ಬರೆಯಬೇಕು.
೨. ಹೆರಿಗೆ ಮತ್ತು ಹೆರಿಗೆಯ ನಂತರದ ಅನುಭವ
೩. ಈಗಷ್ಟೇ ಹುಟ್ಟಿದ ಮಗುವಿನ ಬಗ್ಗೆ ಏನಾದರೂ ವೈಶಿಷ್ಟ ಪೂರ್ಣ ಅಂಶಗಳಿದ್ದರೆ
೪. ಜನ್ಮದಿಂದ ೬ ತಿಂಗಳಿನ ವರೆಗೆ
೫. ೬ ತಿಂಗಳಿನಿಂದ ೧ ವರ್ಷದ ವರೆಗೆ
೬. ೧ ರಿಂದ ೩ ವರ್ಷದ ವರೆಗೆ
೭. ೪ ರಿಂದ ೬ ವರ್ಷದ ವರೆಗೆ
೮. ೭ ರಿಂದ ೧೦ ವರ್ಷದ ವರೆಗೆ
೯. ೧೧ ರಿಂದ ೧೪ ವರ್ಷದ ವರೆಗೆ
೧೦. ೧೫ ರಿಂದ ೨೩ ವರ್ಷದ ವರೆಗೆ
೧೧. ಇತರ ವೈಯಕ್ತಿಕ ವೈಶಿಷ್ಟ  ಪೂರ್ಣ ಅಂಶಗಳು
ಪ್ರತಿಯೊಬ್ಬ ಪಾಲಕ ಸಾಧಕರಲ್ಲಿ ಮೇಲಿನ ಅಂಶಗಳ ಬಗ್ಗೆ ವೈಶಿಷ್ಟ ಪೂರ್ಣ ಮಾಹಿತಿ ಇದ್ದೇ ಇರುತ್ತದೆ ಎಂದೇನಿಲ್ಲ; ಆದರೆ ಬರೆದು ಕೊಡುವಾಗ ಅದನ್ನು ಇದೇ ರೀತಿ ಯಲ್ಲಿ ಕೊಡಬೇಕು ಮತ್ತು ಸಂಕಲನ ಮಾಡುವ ಸಾಧಕರೂ ಈ ಅಂಶಗಳ ಆಧಾರದಲ್ಲಿಯೇ ಮಾಹಿತಿಯನ್ನು ಸಂಕಲನ ಮಾಡಬೇಕು.

No comments:

Post a Comment