ಸಾಧಕರಿಗೆ ಸೂಚನೆ

ಸಾಧನೆಗಾಗಿ ಕಾರ್ಯಕ್ಷೇತ್ರ ಮಹತ್ವದ್ದಲ್ಲ. ‘ನಮ್ಮ ಸಾಧನೆ ಯಾವ ರೀತಿಯಲ್ಲಿ ನಡೆಯುತ್ತಿದೆ’ ಎಂಬುದು ಮಹತ್ವದ್ದಾಗಿದೆ.
ಇದುವರೆಗೆ ಪ್ರಸಾರದಲ್ಲಿನ ಕೆಲವು ಸಾಧಕರ ಪ್ರಗತಿಯಾಗಿದೆ. ಅದರಲ್ಲಿ ಮನೆಯಲ್ಲಿದ್ದು ಸಾಧನೆ ಮಾಡುವವರ ಸಾಧಕರ ಸಂಖ್ಯೆಯು ಹೆಚ್ಚಿದೆ; ಆದುದರಿಂದ ‘ಮನೆಯಲ್ಲಿದ್ದು ವ್ಯಷ್ಟಿ ಸಾಧನೆ ಮಾಡಿದರೂ ಪ್ರಗತಿಯಾಗುತ್ತದೆ’ ಎಂದು ವಿಚಾರ ಮಾಡಿ ಕೆಲವು ಸಾಧಕರು ‘ಮನೆಯಲ್ಲಿದ್ದು ಸಾಧನೆಯತ್ತ ಗಮನವಿಡುತ್ತೇವೆ’, ಎಂದು ಹೇಳುತ್ತಾರೆ. ಹೀಗೆ ಮನಸ್ಸಿನಿಂದ ನಿರ್ಧರಿಸುವುದು ತಪ್ಪಾಗಿದೆ. ‘ವ್ಯಕ್ತಿಗಳೆಷ್ಟೋ ಅಷ್ಟೇ ಪ್ರಕೃತಿ, ಅಷ್ಟೇ ಸಾಧನಾಮಾರ್ಗ’ ಎಂಬ ತತ್ತ್ವದಂತೆ ಪ್ರತಿಯೊಬ್ಬರ ಸಾಧನೆಯ ಮಾರ್ಗವನ್ನು ಈಶ್ವರನು ನಿರ್ಧರಿಸಿದ್ದಾನೆ. ಆದುದರಿಂದ ನಮಗೆ ನಮ್ಮ ಗುರುಗಳು ನೀಡಿದ ಸಾಧನೆಯ ಮಾರ್ಗವು (ಸೇವೆ) ಮಹತ್ವದ್ದಾಗಿದೆ. ಅದರಲ್ಲಿಯೇ ನಮ್ಮ ನಿಜವಾದ ಪ್ರಗತಿಯಿದೆ. ಇದು ವರೆಗೆ ಪ್ರಗತಿಯಾದ ಸಾಧಕರು ತಮ್ಮ ವಿವಿಧ ಗುಣವೈಶಿಷ್ಟ್ಯಗಳಿಂದ ಮುಂದೆ ಹೋಗಿದ್ದಾರೆ. ಅದರಂತೆ ನಾವೂ ನಮಗೆ ನೀಡಿದ ಸೇವೆಯಲ್ಲಿ ನಮ್ಮ ಗುಣಗಳನ್ನು ಬೆಳೆಸಿ ಪ್ರಗತಿ ಮಾಡಿಕೊಳ್ಳಬಹುದು. ಪ್ರಗತಿಗಾಗಿ ಕಾರ್ಯ ಕ್ಷೇತ್ರ ಮಹತ್ವದ್ದಲ್ಲ ‘ನಮ್ಮ ಸಾಧನೆ ಹೇಗೆ ನಡೆದಿದೆ’ ಎಂಬುದು ಮಹತ್ವದ್ದಾಗಿದೆ; ಆದುದರಿಂದ ನಾವು ನಮ್ಮ ಸಾಧನೆಯ ಕಡೆಗೆ ಗಮನ ನೀಡಿ ಮುಂದೆ ಹೋಗಬೇಕು. -ಶ್ರೀ.ಶಂಕರ ನರೂಟೆ, ಬೆಳಗಾವಿ.

No comments:

Post a Comment