ಸಂತ ನಿರ್ಮಿತಿಯ ಸನಾತನದ ಗುರುಕುಲದಲ್ಲಿ ಕು. ರಶ್ಮಿ ನಾಯಕ (ಮಂಗಳೂರು), ಮಹಾಲೋಕದಿಂದ ಬಂದಿರುವ ಜೀವ
‘ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಸನಾತನವು ಕೈಗೆತ್ತಿ ಕೊಂಡಿರುವ ನಿರ್ವಾಹಣೆಯಲ್ಲಿ, ಎಲ್ಲಕ್ಕಿಂತ ವೈಶಿಷ್ಟ್ಯ ಪೂರ್ಣ ಭಾಗವೆಂದರೆ ಸಂತ ನಿರ್ಮಿತಿಯ ಸನಾತನದ ಗುರುಕುಲ! ಸನಾತನದ ಉಚ್ಛ ಮಾಧ್ಯಮಿಕ ಗುರುಕುಲವು ೨೬ಜುಲೈ ೨೦೧೦, ಅಂದರೆ ಗುರುಪೂರ್ಣಿಮೆಯಂದು ಪ್ರಾರಂಭವಾಯಿತು ಹಾಗೂ ಮಾಧ್ಯಮಿಕ ಗುರುಕುಲವು ಸೆಪ್ಟೆಂಬರ್ ೨೪ರಂದು ಪ್ರಾರಂಭವಾಯಿತು. ಈ ಗುರುಕುಲದ ವ್ಯಾಪ್ತಿಯು ಹೆಚ್ಚಾಗುತ್ತಿದೆ ಹಾಗೂ ಮುಂದೆ ಇದು ಹೆಚ್ಚಾಗಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಸ್ವರೂಪವು ಪಡೆಯಲಿದೆ. ಈ ವಿಶ್ವವಿದ್ಯಾಲಯದ ವೈಶಿಷ್ಟ್ಯವೆಂದರೆ ಇದರಿಂದ ಶಿಕ್ಷಣವನ್ನು ಪಡೆದು ಹೊರ ಬರುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಸಂತರಾಗಿರುತ್ತಾರೆ.
ಅಂದರೆ ಸಂತರೆಂದು ಪದವಿಯನ್ನು ಪಡೆಯುವ ಈ ಜೀವವು ಉಚ್ಚಲೋಕದಿಂದ ಬಂದಿದೆ. ಆದ್ದರಿಂದ ಈ ಜೀವಗಳಲ್ಲಿ ಈಶ್ವರನ ಬಗೆಗಿರುವ ಭಾವ, ಈಶ್ವರ ಪ್ರಾಪ್ತಿಯ ತಳಮಳ ಎಂಬ ಘಟಕಗಳು ಹೆಚ್ಚಾಗಿದ್ದು ಅವರ ಅಹಂಭಾವವು ಕಡಿಮೆಯಿರುತ್ತದೆ. ಈ ವೈಶಿಷ್ಟ್ಯಗಳಿಂದ ಗುರುಕುಲದಲ್ಲಿ ಕು. ರಶ್ಮಿ ನಾಯಕರಿಗೆ ಮಾಧ್ಯಮಿಕ ಗುರುಕುಲದಲ್ಲಿ ಪ್ರವೇಶ ಸಿಕ್ಕಿದೆ. ಈ ಕೆಳಗೆ ಸ್ವಲ್ಪದರಲ್ಲಿ ನೀಡಿರುವ ಗುಣವೈಶಿಷ್ಟ್ಯಗಳನ್ನು ಓದಿ ಗುರುಕುಲದಲ್ಲಿ ಪ್ರವೇಶವನ್ನು ಪಡೆಯಲು ದೇವರು ಎಷ್ಟು ಯೋಗ್ಯವಾಗಿರುವವರನ್ನು ಆರಿಸುತ್ತಾರೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ.’
ಈಶ್ವರ ಪ್ರಾಪ್ತಿಯ ನಿಶ್ಚಯ ಹಾಗೂ ತಳಮಳವಿರುವ ಕು. ರಶ್ಮಿ ನಾಯಕ (೧೩ ವರ್ಷ)
ಜಿಜ್ಞಾಸು+ತಳಮಳ+ಪಟ್ಟುಹಿಡಿಯುವಿಕೆ=ರಶ್ಮಿ!’, ಇದು ರಶ್ಮಿಯ ಸೂತ್ರವಾಗಿದೆ. ಸತತವಾಗಿ ನಿರೀಕ್ಷಣೆ ಮಾಡಿ ಕಲಿಯುವ ಹಾಗೂ ಕಲಿತದ್ದನ್ನು ತತ್ಪರತೆಯಿಂದ ಕೃತಿಯಲ್ಲಿ ತರುವ, ಹಾಗೆಯೇ ನಿರ್ಮಲ ಮನಸ್ಸು ಹಾಗೂ ಬುದ್ಧಿಯ ಪರಿಪಕ್ವತೆಯನ್ನು ಒಟ್ಟುಗೂಡಿಸಿ ಅದಕ್ಕೆ ಭಾವವನ್ನು ಸೇರಿಸಿ ಪ್ರಯತ್ನಗಳಿಗೆ ಒಂದು ದಿಶೆಯನ್ನು ಹೇಗೆ ನೀಡಬೇಕು ಎಂಬುದು ಕು. ರಶ್ಮಿ ಯಿಂದ ಕಲಿಯಬಹುದು. ಬುದ್ಧಿಯಿಂದ ಈಶ್ವರಪ್ರಾಪ್ತಿ ಮಾಡಿಕೊಳ್ಳ ಬೇಕೆಂದು ಮಾಡಿರುವ ಸಂಕಲ್ಪ ಹಾಗೂ ಮನಸ್ಸಿನಲ್ಲಿರುವ ಈಶ್ವರ ಪ್ರಾಪ್ತಿಯ ಬಗೆಗಿನ ತಳಮಳವು ಅವಳ ವರ್ತನೆ ಹಾಗೂ ಮಾತುಗಳಿಂದ ತಿಳಿದುಬರುತ್ತದೆ. ಇಂತಹ ಜ್ಞಾನಿ ಹಾಗೂ ಗುಣವಂತಳಾಗಿರುವ ರಶ್ಮಿಯ ವೈಶಿಷ್ಟ್ಯಗಳನ್ನು ಈಗ ನೋಡೋಣ.
೧.ಅವಳಿಗೆ ಮರಾಠಿ ಭಾಷೆ ಬರುವುದಿಲ್ಲ. ಆದ್ದರಿಂದ ಬಂದ ತಕ್ಷಣ ಮರಾಠಿ ಭಾಷೆಯನ್ನು ಕಲಿತುಕೊಳ್ಳಲು ಪ್ರಾರಂಭಿಸಿದಳು. ಅವಳಿಗೆ ಭಾಷೆಯ ತೊಂದರೆಯಾಗಬಾರದು ಎಂಬುದಕ್ಕಾಗಿ ನಾವು ಅವಳೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಿದ್ದೆವು. ಆದರೆ ಅವಳು ‘ನೀವು ಮರಾಠಿಯಲ್ಲಿಯೇ ಮಾತನಾಡಿ. ನನಗೆ ಮರಾಠಿ ಕಲಿಯಬೇಕಾಗಿದೆ’ ಎಂದು ಹೇಳುತ್ತಿದ್ದಳು.
೨.ದೈನಿಕದಲ್ಲಿ ಅವಳ ವಿಷಯ ಮುದ್ರಿಸಿ ಬಂದಾಗ ಎಲ್ಲರೂ ಅವಳನ್ನು ಹೊಗಳುತ್ತಿದ್ದರು; ಆದರೆ ಅವಳ ಮುಖದಲ್ಲಿ ಆಗ ಯಾವುದೇ ಪ್ರಕಾರದ ಭಾವವಿರಲಿಲ್ಲ. ಇದರ ಬಗ್ಗೆ ಅವಳಲ್ಲಿ ಕೇಳಿದಾಗ ಅವಳು, ‘ನನ್ನ ಬಗ್ಗೆ ಅಲ್ಲ, ನನ್ನ ಸಹೋದರಿಯ ಬಗ್ಗೆ ಬಂದಿದೆ’ ಎಂದು ಹೇಳಿದಳು. ಇದರಿಂದ ಅವಳಲ್ಲಿ ಅಹಂಭಾವ ಎಷ್ಟು ಕಡಿಮೆಯಿದೆ ಎಂದು ತಿಳಿದು ಬಂದಿತು.
೩.‘ಅವಳ ಪ್ರತಿಯೊಂದು ಕೃತಿಯು ಪರಿಪೂರ್ಣವಾಗಿರುತ್ತದೆ. ಒಮ್ಮೆ ಅವಳಿಗೆ ಆಲುಗಡ್ಡೆಯಿಂದ ತಯಾರಿಸಿದ ಚಿಪ್ಸ್ ಪೊಟ್ಟಣವನ್ನು ಕತ್ತರಿಸಲಿಕ್ಕಿತ್ತು. ಆಗ ಅವಳು ಅದನ್ನು ಸರಿಯಾಗಿ ಮಾಡಲು ಕತ್ತರಿಯನ್ನು ಹುಡುಕುತ್ತಿದ್ದಳು. ನಾವಾಗಿದ್ದರೆ ಕೈಯಿಂದ ಕಿತ್ತು ಬಿಡುತ್ತಿದ್ದೆವು. ಇದರ ಬಗ್ಗೆ ಅವಳಿಗೆ ಹೇಳಿದಾಗ ಅವಳ ಮುಖದಲ್ಲಿ ಯಾವುದೇ ಭಾವವಿರಲಿಲ್ಲ. - ಸೌ. ಅಶ್ವಿನಿ ಪವಾರ, ಸನಾತನ ಗುರುಕುಲ, ರಾಮನಾಥಿ, ಗೋವಾ.
No comments:
Post a Comment