ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಂತಹ ಬಾಲಸಾಧಕ ಚಿ. ತೇಜಸ ಆನಂದ ಗೌಡ (ವಯಸ್ಸು ೧೦ ವರ್ಷ) ಇವನ ಗುಣವೈಶಿಷ್ಟ್ಯಗಳು
ಉಚ್ಚಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೂಕ ಹಾಗೂ ಕಿವುಡನಾಗಿರುವ ಉಜಿರೆಯ ಬಾಲಸಾಧಕ ಚಿ.ತೇಜಸ ಗೌಡ ಇವನ ಬಗ್ಗೆ ಅವನ ತಾಯಿಯಾದ ಸೌ.ವಿದ್ಯಾ ಇವರಿಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಚಿ.ತೇಜಸನ ಹೆರಿಗೆಯು ಸಹಜವಾಗಿ ಆಯಿತು. ಹುಟ್ಟಿದ ಮೂರು ದಿನದಲ್ಲಿ ಮಗುವಿಗೆ ಜ್ವರ ಪ್ರಾರಂಭವಾಗಿ ೭ ದಿನದಲ್ಲಿ ಆಸ್ಪತ್ರೆಗೆ ದಾಖಲಿಸಿ ನಂತರ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕಾಯಿತು. ಅನಂತರ ಮಾಡಿದ ನಾಟಿಮದ್ದಿನಿಂದ ಅವನ ಮೇಲೆ ಪರಿಣಾಮ ವಾಗಿ ಅವನು ಈಗ ಶಾಲೆಗೆ ಹೋಗುತ್ತಿದ್ದಾನೆ.
೧.ಪ.ಪೂ.ಡಾಕ್ಟರರ ಕೃಪೆಯಿಂದ ದೊಡ್ಡ ಶಸ್ತ್ರಚಿಕಿತ್ಸೆಯು ತಪ್ಪಿ ಕೇವಲ ನಾಟಿಔಷಧಿಯಿಂದ ರೋಗವು ಗುಣ ಮುಖವಾಗುವುದು: ‘ಮೂಕ ಹಾಗೂ ಕಿವುಡನಾಗಿರುವ ಚಿ.ತೇಜಸ ಆನಂದ ಗೌಡ ಹುಟ್ಟಿದ ಒಂದು ವಾರದ ನಂತರ (೨೪.೫.೨೦೦೦ ರಲ್ಲಿ) ಅನಾರೋಗ್ಯದಿಂದ ಮೂರು ತಿಂಗಳು ಮಂಗಳೂರಿನ ಕೆ.ಎಮ್.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ಆಗ ಡಾಕ್ಟರರು “ಅವನ ತಲೆಯ ಶಸ್ತ್ರಚಿಕಿತ್ಸೆಯನ್ನು ಮಾಡಿ ಸಣ್ಣ ನಳಿಕೆಯನ್ನು ಹಾಕಬೇಕಾಗುತ್ತದೆ. ಇಲ್ಲದಿದ್ದರೆ ತಲೆಯಲ್ಲಿ ನೀರು ತುಂಬಿ ತಲೆಯು ದೊಡ್ಡದಾಗಬಹುದು. ಶರೀರದ ಬೆಳವಣಿಗೆಯಾಗಲಿಕ್ಕಿಲ್ಲ ಹಾಗೂ ಅವನಿಗೆ ಮಲಗಿಯೇ ಇರಬೇಕಾಗಬಹುದು" ಎಂದು ಹೇಳಿದ್ದರು. ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿ ವೈದ್ಯರ ಬಳಿ ಹೋದಾಗ ಅವರು ‘ಮೂರು ದಿನ ಬಿಟ್ಟು ಶಸ್ತ್ರಚಿಕಿತ್ಸೆ ಮಾಡೋಣ’ ಎಂದರು. ನಂತರ ‘ಶಸ್ತ್ರಚಿಕಿತ್ಸೆ ಮಾಡದೇ ನಾಟಿಔಷಧಿ ಕೊಟ್ಟು ನೋಡೋಣ’, ಎಂದು ಮನಸ್ಸಿನಲ್ಲಿ ವಿಚಾರ ಬಂದಿತು. ಆಗ ಪ.ಪೂ.ಡಾಕ್ಟರರಿಗೆ ಪ್ರಾರ್ಥನೆಯನ್ನು ಮಾಡಿ ಔಷಧಿಯನ್ನು ನೀಡಲು ಆರಂಭಿಸಿದೆವು. ಔಷಧಿಯಿಂದ ಉತ್ತಮ ಪರಿಣಾಮವಾಗಿ ಈಗ ಅವನು ಶಾಲೆಗೆ ಹೋಗುತ್ತಿದ್ದಾನೆ.
೧.ಪ್ರಾರ್ಥನೆ ಮಾಡುವುದು : ಬೆಳಗ್ಗೆ ಎದ್ದ ಕೂಡಲೇ ಕು.ತೇಜಸ್ಸನು ಪ್ರಾರ್ಥನೆಯನ್ನು ಮಾಡುತ್ತಾನೆ. ಹಾಗೆಯೇ ಪ್ರತಿಯೊಂದು ಕೃತಿಯನ್ನು ಮಾಡುವಾಗ ಅಂದರೆ ಹಲ್ಲುಜ್ಜುವುದು, ನೀರು ಕುಡಿಯುವುದು, ಬೆಳಗ್ಗಿನ ತಿಂಡಿ, ಊಟ, ಶಾಲೆಗೆ ಹೋಗುವುದು, ವಾಹನದಲ್ಲಿ ಕುಳಿತುಕೊಳ್ಳುವುದು, ಕೆಳಗಿಳಿಯುವುದು, ಕುಂಕುಮದ ತಿಲಕವಿಡುವುದು ಇವೆಲ್ಲ ಕೃತಿಗಳನ್ನು ಮಾಡುವಾಗ ಪ್ರಾರ್ಥನೆಯನ್ನು ಮಾಡುತ್ತಾನೆ. ಅವನು ತಾಯಿಯೊಂದಿಗೆ ಸೇವೆಗೆ ಹೋಗುತ್ತಾನೆ. ಸೇವೆಯನ್ನು ಮಾಡುವ ಮೊದಲು ತಾಯಿಗೆ ಪ್ರಾರ್ಥನೆಯನ್ನು ಮಾಡಲು ನೆನಪಿಸುತ್ತಾನೆ ಹಾಗೂ ಸ್ವತಃ ಮಾಡುತ್ತಾನೆ.
೨.ನಮಸ್ಕಾರ ಮಾಡುವುದು : ಕು. ತೇಜಸನು ಎದುರು ಬಂದಂತಹ ಪ್ರತಿಯೊಬ್ಬ ವ್ಯಕ್ತಿಗೂ ನಮಸ್ಕಾರ ಮಾಡುತ್ತಾನೆ. ಅವನೊಂದಿಗೆ ಇದ್ದಂತಹ ಪ್ರತಿಯೊಬ್ಬರಿಗೂ ಅವನು ಕೈ ಸನ್ನೆಯಿಂದ ನಮಸ್ಕಾರ ಮಾಡಲು ಹೇಳುತ್ತಾನೆ. ಶಾಲೆಗೆ ಹೋಗುವಾಗ ಮನೆಯ ಎಲ್ಲ ಸದಸ್ಯರಿಗೆ ನಮಸ್ಕಾರ ಮಾಡುತ್ತಾನೆ.
೪.ಪ್ರೇಮಭಾವ : ಸಾಧಕರ ಕುರಿತು ಅವನಿಗೆ ತುಂಬ ಪ್ರೇಮಭಾವವಿದೆ. ಪ.ಪೂ. ಡಾಕ್ಟರರ ಛಾಯಾಚಿತ್ರಕ್ಕೆ ನಮಸ್ಕಾರ ಮಾಡಿ ಇತರರಿಗೂ ನಮಸ್ಕಾರ ಮಾಡಲು ಹೇಳುತ್ತಾನೆ. ಶಾಲೆಯಲ್ಲಿ ಮಕ್ಕಳು ಆಳುತ್ತಿದ್ದರೆ ಶಿಕ್ಷಕರ ಕೋಣೆಗೆ ಹೋಗಿ ಶಿಕ್ಷಕರ ಕೈ ಹಿಡಿದು ಕರೆದುಕೊಂಡು ಬರುತ್ತಾನೆ.
೫.ಕು.ತೇಜಸ್ಸಿಗೆ ತಪ್ಪನ್ನು ತೋರಿಸಿ ಕೊಟ್ಟರೇ ಅವನು ಕೈ ಮುಗಿದು ಕ್ಷಮೆಯನ್ನು ಕೇಳುತ್ತಾನೆ.
No comments:
Post a Comment