ಎಸ್.ಎಸ್.ಆರ್.ಎಫ್. ಕಾರ್ಯಾಗಾರದಲ್ಲಿ ಸನಾತನದ ಸಂತ
ಪೂ.ರಾಜೇಂದ್ರ ಶಿಂದೆಯವರು ಮಾಡಿದ ಮಾರ್ಗದರ್ಶನ!
ಸನಾತನದ ರಾಮನಾಥಿ ಆಶ್ರಮದಲ್ಲಿ ಮಾರ್ಗಶಿರ ಕೃಷ್ಣ ಚತುರ್ದಶಿ, ಕಲಿಯುಗ ವರ್ಷ ೫೧೧೨ (೩.೧.೨೦೧೧) ರಂದು ಎಸ್.ಎಸ್.ಆರ್.ಎಫ್.ನ ವಿದೇಶಿ ಸಾಧಕರ ಕಾರ್ಯಾಗಾರವನ್ನು ಸನಾತನದ ಸಂತ ಪೂ.ರಾಜೇಂದ್ರ ಶಿಂದೆಯವರು ಉದ್ಘಾಟಿಸಿದರು. ಪೂ.ರಾಜೇಂದ್ರ ಶಿಂದೆಯವರು ಕಾರ್ಯಾಗಾರದ ವೇಳೆ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ. (ಮುಂದುವರಿದ ಭಾಗ, ಕಳೆದ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: http://kannadasanatanprabhat.blogspot.com/2011/01/blog-post_2288.html)
ಊ. ಸಾಧಕರೇ ಮನಸ್ಸಿನ ಶಕ್ತಿಯ ಉಳಿತಾಯ ಮಾಡಿರಿ!: ಸಾಧನೆ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಮನಸ್ಸಿನ ಶಕ್ತಿ ಉಳಿಸಿದರೆ ಅದನ್ನು ಸಾಧನೆಗಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಯೋಗ್ಯ ರೀತಿಯಿಂದ ನಡೆಸಿದರೆ ಸಾಧಕರ ಮನಸ್ಸಿನ ಶಕ್ತಿಯ ಉಳಿತಾಯವಾಗುತ್ತದೆ ಮತ್ತು ಅದರಿಂದ ಅವನ ಮನೋ ಬಲ ಹೆಚ್ಚಾಗುತ್ತದೆ. ಹಾಗಾಗಿ ನಮ್ಮೆಲ್ಲರಿಂದ ಉತ್ತಮ ಸಾಧನೆಯಾಗಲು ಮನಸ್ಸಿನ ಶಕ್ತಿಯನ್ನು ಉಳಿತಾಯ ಮಾಡೋಣ.
ಎ.ನಿರುತ್ಸಾಹದಿಂದ ಅಥವಾ ಬರೆಯಬೇಕು ಎಂದು ತಖ್ತೆಯಲ್ಲಿ ತಪ್ಪು ಬರೆಯುವುದನ್ನು ತಡೆಗಟ್ಟಲು ತಪ್ಪುಗಳನ್ನು ಕೂಡಲೇ ಬರೆಯಬೇಕು ಮತ್ತು ಅದೇ ಸಮಯದಲ್ಲಿ ಆತ್ಮಪರೀಕ್ಷೆಯನ್ನು ಮಾಡಿಕೊಳ್ಳಬೇಕು. ಇದರಿಂದ ನಮ್ಮಿಂದ ಅದೇ ಅದೇ ತಪ್ಪುಗಳು ಆಗುತ್ತಿವೆಯೇ ಎಂಬುದು ಗಮನಕ್ಕೆ ಬರುತ್ತದೆ.
ಏ.ತನ್ನ ಸ್ವಭಾವದೋಷ ನಿರ್ಮೂಲನ ತಖ್ತೆಯ ಅಧ್ಯಯನ ಮಾಡುವುದರಿಂದ ಸಾಧನೆಗೆ ಸಹಾಯವೇ ಆಗುತ್ತದೆ.
೧೧.ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಪರಿಣಾಮವನ್ನು ಹೇಗೆ ಹೆಚ್ಚಿಸಬೇಕು?
ಅ.ಸಾಧಕರು ಗಡಿಬಿಡಿಯಿಂದ ಮತ್ತು ಅವಸರದಿಂದ ಸ್ವಯಂಸೂಚನೆಯ ಸತ್ರಗಳನ್ನು ಮಾಡುತ್ತಾರೆ. ಯಾವ ದಿನ ಸ್ವಭಾವದೋಷ ನಿರ್ಮೂಲನದ ಮಹತ್ವವು ಗಮನಕ್ಕೆ ಬರುತ್ತದೆಯೋ ಆಗ ಸಾಧಕರಿಂದ ಯೋಗ್ಯ ರೀತಿಯಲ್ಲಿ ಮತ್ತು ನಿಯಮಿತವಾಗಿ ಸತ್ರಗಳಾಗುತ್ತವೆ.
(ಪೂಜ್ಯ ರಾಜೇಂದ್ರದಾದಾ ಇವರು ರೈಲು ನಿಲ್ದಾಣದ ‘ಫೂಟಪಾತ್’ನ ಮೇಲೆಯೂ ಸ್ವಭಾವದೋಷ ನಿರ್ಮೂಲನದ ತಖ್ತೆಯನ್ನು ಬರೆಯುತ್ತಿದ್ದರು. ಹಾಗೆಯೇ ಅವರು ಮುಂಬೈಯ ಅತ್ಯಂತ ಜನನಿಬಿಡವಾಗಿರುವ ಲೋಕಲ್ ರೈಲಿ ನಲ್ಲಿಯೂ ಕುಳಿತು ತಖ್ತೆಯನ್ನು ತುಂಬಿಸುತ್ತಿದ್ದರು.-ಸಂಕಲನಕಾರರು)
ಆ.ನಮ್ಮ ಭಾವವು ಹೆಚ್ಚಾಗಿರುವ ಸಮಯದಲ್ಲಿಯೂ ಸತ್ರ ಮಾಡಬೇಕು. ಆಗ ಸ್ವಭಾವದೋಷ ಸತ್ರಗಳ ಪರಿಣಾಮವು ಹೆಚ್ಚಾಗುತ್ತದೆ.
ಇ.ಸ್ವಯಂಸೂಚನೆಯ ಸತ್ರ ಮಾಡುವುದು ಎಂದರೆ ಸೇವೆಯನ್ನು ಮಾಡಿದಂತೆಯೇ ಆಗಿದೆ. ವಾಸ್ತವದಲ್ಲಿ ಯಾವುದಾದರೊಂದು ಸ್ವಭಾವದೋಷವನ್ನು ತೊಲಗಿಸಲು ಬಹಳ ಕಾಲಾವಧಿಯು ಬೇಕಾಗುತ್ತದೆ. ಆದರೆ ನಾವು ಸಾಧನೆಯನ್ನು ಮಾಡುತ್ತಿದ್ದೇವೆ ಮತ್ತು ಇದೆಲ್ಲವನ್ನೂ ಸಾಧನೆಗಾಗಿಯೇ ಮಾಡುತ್ತಿದ್ದೇವೆ. ಹಾಗಾಗಿ ನಮ್ಮಲ್ಲಿರುವ ದೋಷಗಳು ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ನಿರ್ಮೂಲನವಾಗಲು ಸಾಧ್ಯವಿದೆ.
ಈ.ಸ್ವಯಂಸೂಚನೆಯ ಸತ್ರ ಮಾಡುವುದು ಎಂದರೆ ನಮ್ಮತ್ತ ಚೈತನ್ಯದ ಸ್ರೋತವನ್ನು ಆಕರ್ಷಿಸುವುದು: ಸ್ವಯಂಸೂಚನೆಯ ಸತ್ರವನ್ನು ಮಾಡುವಾಗ ಶೇ.೩೦ರಷ್ಟು ಶಕ್ತಿ ಪ.ಪೂ.ಡಾಕ್ಟರರಿಂದ, ಶೇ.೩೦ರಷ್ಟು ಗುರುತತ್ತ್ವದಿಂದ ಕಾರ್ಯ ನಿರತವಾಗಿರುತ್ತದೆ. ಅಂದರೆ ಒಂದು ಸತ್ರ ದಲ್ಲಿ ಶೇ.೬೦ರಷ್ಟು ಚೈತನ್ಯವು ಪ್ರಯತ್ನ ವಿಲ್ಲದೇ ಸಿಗುತ್ತದೆ. ದಿನದಲ್ಲಿ ಐದು ಸತ್ರ ಮಾಡುವವನಿಗೆ ಅದರಿಂದ ಐದು ಪಟ್ಟು ಹೆಚ್ಚು ಚೈತನ್ಯ ಸಿಗುತ್ತದೆ. ಸಾಧಕರು ಇದನ್ನು ಗಮನದಲ್ಲಿರಿಸಿಕೊಂಡು ನಿಯಮಿತವಾಗಿ ಸತ್ರಗಳನ್ನು ಮಾಡಬೇಕು.
ಸಾಧಕರ ಸಂದೇಹ ನಿವಾರಣೆ
ಅ.ಪ್ರಾಧಾನ್ಯತೆಯನ್ನು ನಿರ್ಧರಿಸುವಾಗ ಸೇವೆಯ ‘ಸಮಷ್ಟಿ ಫಲನಿಷ್ಪತ್ತಿ ಮತ್ತು ಅದಕ್ಕೆ ತಗಲುವ ಸಮಯ’ವನ್ನು ಗಮನ ದಲ್ಲಿಟ್ಟುಕೊಳ್ಳುವುದು ಅವಶ್ಯಕ.
ಪ್ರಶ್ನೆ: ನಮ್ಮ ಬಳಿ ಯಾವುದಾದರೊಂದು ಸೇವೆಯಿದೆ ಮತ್ತು ಒಬ್ಬ ಜಿಜ್ಞಾಸುವಿಗೆ ಸಹಾಯ ಮಾಡುವ ಅವಕಾಶವೂ ಇದೆ. ಆಗ ಯಾವುದಕ್ಕೆ ಪ್ರಾಧಾನ್ಯತೆಯನ್ನು ನೀಡಬೇಕು?
ಉತ್ತರ: ಇಂತಹ ಪರಿಸ್ಥಿತಿಯಲ್ಲಿ ಸಮಷ್ಟಿಗೆ ಹೆಚ್ಚು ಯೋಗ್ಯವಾದುದು ಯಾವುದು ಎಂದು ತಿಳಿದುಕೊಂಡು ಆ ಸೇವೆಗೆ ಪ್ರಾಧಾನ್ಯತೆ ನೀಡಬೇಕು. ಈ ಸ್ಥಿತಿಯಲ್ಲಿ ಸಮಷ್ಟಿ ಸೇವೆಯನ್ನು ಆರಿಸಿದರೆ ಅದರ ಸಮಷ್ಟಿ ಫಲನಿಷ್ಪತ್ತಿ ಮತ್ತು ಅದಕ್ಕೆ ಎಷ್ಟು ಸಮಯ ತಗಲುತ್ತದೆ ಎಂಬ ವಿಚಾರ ಮಾಡುವುದೂ ಅವಶ್ಯವಾಗಿರುತ್ತದೆ. ಜಿಜ್ಞಾಸುವಿಗೆ ಇತರ ರೀತಿಯಲ್ಲಿ ಉದಾ. ಯಾವುದಾದರೊಂದು ವಿ-ಅಂಚೆ ಅಥವಾ ಕಡತವನ್ನು ಕಳುಹಿಸಿ ಏನಾದರೂ ಸಹಾಯ ಮಾಡಬಹುದೇ ಎಂದು ನೋಡಬೇಕು. (ಮುಂದುವರಿಯುವುದು)
ಸಾಧನೆಯಲ್ಲಿ ಸಹಾಯಕರಿಂದ ಬರುವ ಅಡಚಣೆಗಳು ಅಥವಾ ಸಾಂಸಾರಿಕ ಅಡಚಣೆಗಳು ಪ್ರಾರಬ್ಧದಿಂದಾಗಿವೆ ಎಂದು ಸಾಧಕರು ಸ್ವೀಕರಿಸುವುದು ಆವಶ್ಯಕ!-ಪೂ.ರಾಜೇಂದ್ರ ದಾದಾ
No comments:
Post a Comment