ಶೇ. ೬೦ ರ ಆಧ್ಯಾತ್ಮಿಕ ಮಟ್ಟ ತಲುಪಿದ ಕರ್ನಾಟಕದ ಸನಾತನದ ಇನ್ನೋರ್ವ ಸಾಧಕ ಶ್ರೀಕಾಂತ ....

ಶೇ. ೬೦ ರ ಆಧ್ಯಾತ್ಮಿಕ ಮಟ್ಟ ತಲುಪಿದ ಕರ್ನಾಟಕದ 
ಸನಾತನದ ಇನ್ನೋರ್ವ ಸಾಧಕ ಶ್ರೀಕಾಂತ ಹುಲ್ಲೋಳಿಯವರ ಸತ್ಕಾರ !

ಗೋಕಾಕ (ಬೆಳಗಾವಿ ಜಿಲ್ಲೆ)ಶ್ರೀಕಾಂತ ಹುಲ್ಲೋಳಿಯವರ ಸತ್ಕಾರ!
ಬೆಳಗಾವಿ: ಜಿಲ್ಲೆಯ ಗೋಕಾಕ ಎಂಬಲ್ಲಿನ ಸನಾತನದ ಸಾಧಕರಾದ ಶ್ರೀ. ಶ್ರೀಕಾಂತ ಹುಲ್ಲೋಳಿಯವರು ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆಂದು ಇತ್ತೀಚೆಗೆ ಘೋಷಿಸಲಾಯಿತು. ಆ ನಿಮಿತ್ತ ಶಹಾಪೂರ ಎಂಬಲ್ಲಿನ ಶ್ರೀರಾಮ ದೇವಸ್ಥಾನದಲ್ಲಿ ಶ್ರೀ ಸ್ವಾಮಿ ಸಮರ್ಥ ಸಂಪ್ರದಾಯದ ಶ್ರೀ. ಬಾಪೂ ಸಾವಂತ ಇವರ ಹಸ್ತದಿಂದ ಶ್ರೀ. ಹುಲ್ಲೋಳಿಯವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸನಾತನದ ಶೇ.೬೨ರ ಆಧ್ಯಾತ್ಮಿಕ ಮಟ್ಟದ ಸಾಧಕ ಶ್ರೀ.ಶಂಕರ ನರೂಟೆಯವರು ಶ್ರೀ.ಹುಲ್ಲೋಳಿಯವರ ಆಧ್ಯಾತ್ಮಿಕ ಮಟ್ಟದ ಬಗ್ಗೆ ಉಪಸ್ಥಿತರಿಗೆ ಮಾಹಿತಿಯನ್ನು ನೀಡಿದರು.
ಸತ್ಕಾರಕ್ಕೆ ಉತ್ತರ ನೀಡುತ್ತ ಶ್ರೀ.ಹುಲ್ಲೋಳಿಯವರು, ‘ಈ ಸತ್ಕಾರವು ನನ್ನದಲ್ಲ, ಸಾಧಕರ ಪ್ರೀತಿ ಮತ್ತು ಪ.ಪೂ.ಗುರುದೇವರದ್ದಾಗಿದೆ’ ಎಂದು ಹೇಳಿದರು. ಈ ಸಮಯದಲ್ಲಿ ಸೌ.ಸಂಗೀತಾ ಘೋಂಗಾಣೆ - ಜಾಧವ ಸಹಿತ ೫೦ ಸಾಧಕರು ಉಪಸ್ಥಿತರಿದ್ದರು. ಶ್ರೀ.ಹುಲ್ಲೋಳಿಯವರ ಗುಣವೈಶಿಷ್ಟ್ಯಗಳನ್ನು ಮುಂದಿನ ವಾರದ ಸಂಚಿಕೆಯಲ್ಲಿ ಓದಿ.

No comments:

Post a Comment