ಸಕ್ಕರೆಗಿಂತ ಬೆಲ್ಲವನ್ನು ಉಪಯೋಗಿಸುವುದು ಆರೋಗ್ಯಕ್ಕೆ ಹಿತಕಾರಿ!

ಸಕ್ಕರೆಯನ್ನು ತಯಾರಿಸುವಾಗ ಅದರಲ್ಲಿ ವಿವಿಧ ರಾಸಾಯನಿಕ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಗಳಿಂದ ಸಕ್ಕರೆ ದೇಹಕ್ಕೆ ಹಾನಿಕರವಾಗಿದೆ. ಸಾಧ್ಯವಿದ್ದಷ್ಟು ಸಕ್ಕರೆಯ ಬದಲು (ಉದಾ. ಕಷಾಯ ಇತ್ಯಾದಿಯಲ್ಲಿ) ಬೆಲ್ಲವನ್ನು ಉಪಯೋಗಿಸುವುದು ಆರೋಗ್ಯಕ್ಕೆ ಹಿತಕಾರಿಯಾಗಿದೆ. ರಾಸಾಯನಿಕಗಳನ್ನು (‘ಕೆಮಿಕಲ್ಸ್’) ಉಪಯೋಗಿಸಿ ತಯಾರಿಸಿದ ಹಳದಿ ಬಣ್ಣದ ಬೆಲ್ಲಕ್ಕಿಂತ ಕಪ್ಪು ಬಣ್ಣದ ಹಾಗೂ ಬೇಸಿಗೆಯಲ್ಲಿ ಕಬ್ಬಿಣದ ಬಾಣಲೆಯಲ್ಲಿ ತಯಾರಿಸಿದ ಬೆಲ್ಲವು ಆರೋಗ್ಯಕ್ಕೆ ಒಳ್ಳೆಯದು. ಹೊಸ ಬೆಲ್ಲಕ್ಕಿಂತ ಒಂದು ವರ್ಷದ ಹಿಂದಿನ ಬೆಲ್ಲವು ಔಷಧ ಮತ್ತು ರೋಗ ನಿವಾರಕವಾಗಿದೆ.

No comments:

Post a Comment