ಕೇವಲ ಪ.ಪೂ. ಡಾಕ್ಟರರ ಕೃಪೆಯಿಂದಲೇ ಸನಾತನದಲ್ಲಿ ಎಲ್ಲ ಸಾಧಕರೊಂದಿಗೆ....

ಕೇವಲ ಪ.ಪೂ. ಡಾಕ್ಟರರ ಕೃಪೆಯಿಂದಲೇ ಸನಾತನದಲ್ಲಿ ಎಲ್ಲ ಸಾಧಕರೊಂದಿಗೆ
ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಮಾತನಾಡುತ್ತಿದ್ದಾನೆ !
ಹಿಂದೆ ಋಷಿಮುನಿಗಳು ವರ್ಷಗಟ್ಟಲೆ ತಪಶ್ಚರ್ಯ ಮಾಡುತ್ತಿದ್ದರು ಮತ್ತು ನಂತರವೇ ದೇವರು ಅವರಿಗೆ ಪ್ರಸನ್ನರಾಗಿ ದರ್ಶನ ನೀಡಿ ಅವರು ಬೇಡಿದ ವರವನ್ನು ನೀಡುತ್ತಿದ್ದರು. ನಮ್ಮೆಲ್ಲ ಸಾಧಕರು ಅವರಂತೆ ಯಾವುದೇ ತಪಶ್ಚರ್ಯವಿಲ್ಲದೇ ದೇವರಿಗೆ ಕೇವಲ ಪ್ರಾರ್ಥನೆ ಮಾಡಿದರೂ ಅವರು ನಮ್ಮ ಸಾಧನೆಯಲ್ಲಿನ ಇಚ್ಚೆಯನ್ನು ಪೂರ್ಣಗೊಳಿಸುತ್ತಾರೆ. ಈಗಂತೂ ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಸಾಧಕರೊಂದಿಗೆ ಮಾತನಾಡುತ್ತಾನೆ ಮತ್ತು ಅವರಿಗೆ ಸಾಧನೆಯಲ್ಲಿ ಮಾರ್ಗದರ್ಶನವನ್ನೂ ಮಾಡುತ್ತಾನೆ. ಆದುದರಿಂದ ಸಾಧಕರಲ್ಲಿ ಭಕ್ತಿ ಭಾವ, ಶ್ರದ್ಧೆ ಹೆಚ್ಚಾಗುತ್ತಿದೆ.
ಸಾಧಕರು ಆನಂದಾವಸ್ಥೆಯನ್ನು ಅನುಭವಿಸುತ್ತಿದ್ದಾರೆ. ಕೇವಲ ಪ.ಪೂ. ಡಾಕ್ಟರರ ಕೃಪೆಯೇ ಇದರ ಕಾರಣವಾಗಿದೆ.
ಸಾಧಕರೇ, ನಮಗೆ ಈ ಜನ್ಮದಲ್ಲಿ ಪ.ಪೂ.ಡಾಕ್ಟರರಂತಹ ಮಹಾನ ಗುರುಗಳು ದೊರಕಿರುವುದು ನಮ್ಮೆಲ್ಲರ ದೊಡ್ಡ ಭಾಗ್ಯವೇ ಆಗಿದೆ. ಇದಕ್ಕಾಗಿ ನಾವು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಸತತ ಕೋಟಿ ಕೋಟಿ ಕೃತಜ್ಞರಾಗಿ ಇರೋಣ. - ಶ್ರೀ. ಶಂಕರ ನರೂಟೆ, ಬೆಳಗಾವಿ.

No comments:

Post a Comment