ಮಲಗಿರುವಾಗ ಸೂಕ್ಷ ದಿಂದ ಯಾರೋ ಒತ್ತುತ್ತಿರುವಂತೆ ಅನಿಸುತ್ತಿದ್ದರೆ ಅದಕ್ಕೆ ಮುಂದಿನಂತೆ...

ಮಲಗಿರುವಾಗ ಸೂಕ್ಷ್ಮದಿಂದ ಯಾರೋ ಒತ್ತುತ್ತಿರುವಂತೆ ಅನಿಸುತ್ತಿದ್ದರೆ ಅದಕ್ಕೆ ಮುಂದಿನಂತೆ ಆಧ್ಯಾತ್ಮಿಕ ಉಪಾಯ ಮಾಡಿ ಮತ್ತು ಅದರ ಬಗ್ಗೆ ಬರೆದು ಕಳುಹಿಸಿ!
ಮಲಗಿರುವಾಗ ಸೂಕ್ಷ್ಮ ದಿಂದ ಯಾರಾದರೂ ಒತ್ತಿದಂತೆ ಅನಿಸುವುದು
೧೫.೯.೨೦೧೦ ರಂದು ನನಗೆ ಯಾರೋ ಒತ್ತುತ್ತಿರುವಂತೆ ಅನಿಸಿತು. ಆಗ ಎಲ್ಲ ಕಡೆಯಿಂದಲೂ ನನಗೆ ಒಂದೇ ರೀತಿಯ ಒತ್ತಡದ ಅರಿವಾಯಿತು. ಆಗ ನನ್ನ ‘ಓಂ ನಮೋ ಭಗವತೇ ವಾಸು ದೇವಾಯ’, ಎಂಬ ನಾಮಜಪ ನಡೆಯು ತ್ತಿತ್ತು. ಒಮ್ಮೆ ನಾಮಜಪ ಮಾಡಿದ ನಂತರ ಆ ಒತ್ತಡ ತಕ್ಷಣ ಕಡಿಮೆಯಾಗಿ ಕೆಟ್ಟ ಶಕ್ತಿ ದೂರ ಹೊರಟು ಹೋದಂತೆ ಅನಿಸಿತು. ಅದರ ನಂತರ ನಿದ್ದೆಯಿಂದ ನನಗೆ ಎಚ್ಚರವಾಯಿತು.
ಸ್ವಲ್ಪ ಸಮಯದ ನಂತರ ಪುನಃ ಮಲಗಿದಾಗ ಪುನಃ ಯಾರೋ ಒತ್ತಲು ಬಂದು ನನ್ನನ್ನು ಸ್ಪರ್ಶಿಸಿದಂತಾ ಯಿತು. ಆಗ ನಾನು ಪುನಃ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ನಾಮ ಜಪ ಪ್ರಾರಂಭಿಸಿದೆ. ಅದರ ನಂತರ ಕೆಟ್ಟ ಶಕ್ತಿಯು ದೂರ ಹೋದಂತಾಯಿತು. ಬೆಳಗ್ಗೆ ಎಚ್ಚರವಾಗಿಯೂ ನನಗೆ ಏಳಲು ಶರೀರದಲ್ಲಿ ಶಕ್ತಿಯಿರಲಿಲ್ಲ. ತೀವ್ರ ಮೈ ಕೈ ನೋವು ಮತ್ತು ಆಯಾಸದಿಂದ ಎದ್ದ ನಂತರ ೧೫-೨೦ ನಿಮಿಷ ನನಗೆ ಮಾತನಾಡಲು ಆಗಲಿಲ್ಲ. ಪ.ಪೂ. ಡಾಕ್ಟರರಿಗೆ ತೊಂದರೆಯ ಬಗ್ಗೆ ಹೇಳಿದಾಗ ಅವರು ನಾಮಜಪ ಮಾಡಲು ಹೇಳಿದರು. ಅದನ್ನು ಮಾಡಿದಾಗ ಒಂದು ಗಂಟೆಯ ನಂತರ ನನಗೆ ಒಳ್ಳೆಯ ದೆನಿಸಿತು. - ಸೌ. ಶ್ರದ್ಧಾ
ಸದ್ಯ ಕೆಟ್ಟ ಶಕ್ತಿಯ ತೀವ್ರತೆ ಹೆಚ್ಚಾಗಿ ರುವುದರಿಂದ ಇಂತಹ ತೊಂದರೆಗಳಲ್ಲಿ ಈಗ ಹೆಚ್ಚಳವಾಗಿದೆ. ಅದಕ್ಕಾಗಿ ಸಾಧಕರು ಸತರ್ಕರಾಗಿ ಮುಂದಿನ ಆಧ್ಯಾತ್ಮಿಕ ಉಪಾಯ ಮಾಡಬೇಕು.
೧. ಮಲಗುವಾಗ ಹಾಸಿಗೆ ಮತ್ತು ಹೊದಿಕೆಗಳಿಗೆ ವಿಭೂತಿ ಸಿಂಪಡಿಸಬೇಕು.
೨. ಶ್ರೀಕೃಷ್ಣನ ನಾಮಪಟ್ಟಿಯ ಮಂಡಲ  ಹಾಕಬೇಕು ಮತ್ತು ಶ್ರೀಕೃಷ್ಣನ ಚಿತ್ರವನ್ನು ತಲೆಯ ಪಕ್ಕಕ್ಕೆ ಇಡಬೇಕು.
೩. ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಅಥವಾ ಪ.ಪೂ. ಡಾಕ್ಟರರ ‘ಸಾಧನೆ’ ಎಂಬ ವಿಷಯದ ಮೇಲಿನ ಪ್ರವಚನಗಳನ್ನು ಮಂದ ಧ್ವನಿಯಲ್ಲಿ ಹಾಕಿಡಬೇಕು.
೪. ಮಲಗುವ ಮೊದಲು ಕೋಣೆ ಯನ್ನು ಸನಾತನ-ನಿರ್ಮಿತ ಸಾತ್ತ್ವಿಕ ಊದುಬತ್ತಿಯಿಂದ ಶುದ್ಧಿ ಮಾಡಬೇಕು.
೫. ಈ ರೀತಿಯ ತೊಂದರೆ ಹೆಚ್ಚಾಗು ತ್ತಿದ್ದರೆ ಸಾಧಕರು ‘ಓಂ ಓಂ ನಮೋ ಭಗವತೇ ವಾಸುದೇವಾಯ ಓಂ’ ಮತ್ತು ‘ಓಂ ಓಂ ಗಂ ಗಣಪತಯೇ ನಮಃ’ ಎಂಬ ನಾಮಜಪ ‘ಮೂರು- ನಂತರ -ಮೂರು’ ಎಂಬ ಪದ್ಧತಿಯಂತೆ (ಮೂರು ಸಲ ಶ್ರೀಕೃಷ್ಣನ ನಾಮಜಪ ಮತ್ತು ಮೂರು ಸಲ ಗಣಪತಿಯ ನಾಮಜಪ) ಮಾಡಬೇಕು.
(ಸಾಧಕರು ಇಂತಹ ತೊಂದರೆ ಯಾದರೆ ಅದರ ವೈಶಿಷ್ಟ್ಯಪೂರ್ಣ ಅಂಶಗಳನ್ನು ಬರೆದು ಸನಾತನ ಪ್ರಭಾತಕ್ಕೆ ಕಳುಹಿಸಿರಿ. - ಸಂಕಲನಕಾರರು) - ಸೌ. ಶ್ರದ್ಧಾ

No comments:

Post a Comment