ಸಾಧಕರಿಗೆ ಸೂಚನೆಗಳು

ಶ್ರೀಕೃಷ್ಣನೊಂದಿಗೆ ಮಾತನಾಡುವುದೆಂದರೆ ಆತ್ಮನಿವೇದನೆ ಅಥವಾ ಅನುಸಂಧಾನವಾಗಿರುವುದರಿಂದ ಅವನು ಮಾತನಾಡದಿದ್ದರೆ ಬೇಸರಪಡಬೇಡಿ!
‘ಸದ್ಯ ಹೆಚ್ಚಿನ ಸಾಧಕರು ಶ್ರೀಕೃಷ್ಣ ನೊಂದಿಗೆ ಮಾತನಾಡುತ್ತಾರೆ. ಕೆಲವರಿಗೆ ಮಾತನಾಡುವಾಗ ಶ್ರೀಕೃಷ್ಣ ಕಾಣಿಸುತ್ತಾನೆ ಮತ್ತು ಅವನೂ ಅವರೊಂದಿಗೆ ಮಾತ ನಾಡುತ್ತಾನೆ, ಆಟವಾಡುತ್ತಾನೆ, ಸಿಟ್ಟು ಮಾಡಿಕೊಳ್ಳುತ್ತಾನೆ, ಹಠ ಮಾಡುತ್ತಾನೆ, ನಗುತ್ತಾನೆ ಇತ್ಯಾದಿ. ಯಾರಿಗೆ ಶ್ರೀಕೃಷ್ಣ ಕಾಣಿಸುವುದಿಲ್ಲವೋ ಅಂತಹವರಿಗೆ, ‘ನಮ್ಮೊಂದಿಗೆ ಶ್ರೀಕೃಷ್ಣ ಮಾತನಾಡುವುದಿಲ್ಲ, ಅಂದರೆ ನಾವು ಸಾಧನೆಯಲ್ಲಿ ಕಡಿಮೆ ಬಿದ್ದೆವು’ ಎಂದೆನಿಸುತ್ತದೆ. ಇಲ್ಲಿ ಮಹತ್ವದ ಅಂಶವೆಂದರೆ ‘ಶ್ರೀಕೃಷ್ಣ ಮಾತನಾಡದಿದ್ದರೂ ಅವನೊಂದಿಗೆ ಮಾತನಾಡುವುದು ಒಂದು ರೀತಿಯಲ್ಲಿ ಆತ್ಮನಿವೇದನೆ ಅಥವಾ ಅನುಸಂಧಾನವೇ ಆಗಿದೆ. ಶ್ರೀಕೃಷ್ಣ ಏನು ಹೇಳಿದನು ಎನ್ನುವುದಕ್ಕಿಂತ ಅವನೊಂದಿಗೆ ಅನುಸಂಧಾನವಿರುವುದು ಹೆಚ್ಚು ಮಹತ್ವ ದ್ದಾಗಿದೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಯಾರೊಂದಿಗೆ ಶ್ರೀಕೃಷ್ಣನು ಮಾತನಾಡುವುದಿಲ್ಲವೋ ಅವರು ಬೇಸರ ಪಡಬಾರದು.’
- ಡಾ. ಆಠವಲೆ (ಭಾದ್ರಪದ ಕೃಷ್ಣ ೨, ಕಲಿಯುಗ ವರ್ಷ ೫೧೧೨ (೨೫.೯.೨೦೧೦))

No comments:

Post a Comment