ವೃತ್ತಿಯಲ್ಲಿ ಶರಣಾಗತ ಭಾವ ತರಲು ಮಾಡಬೇಕಾಗಿರುವ ಪ್ರಯತ್ನಗಳು !
೧. ಪ್ರತಿಯೊಬ್ಬ ವ್ಯಕ್ತಿಯಿಂದ ಸತತ ವಾಗಿ ಕಲಿಯುವ ಸ್ಥಿತಿಯಲ್ಲಿರುವುದು೨. ಪ್ರತಿಯೊಂದು ಕೃತಿಯನ್ನು ನಮ್ರತೆಯಿಂದ ಮಾಡುವುದು
೩. ಸಮಾಜದಲ್ಲಿನ ಪ್ರತಿಯೊಂದು ವ್ಯಕ್ತಿ ಹಾಗೂ ಸಾಧಕರನ್ನು ಗುರುಗಳಂತೆ ಗೌರವಿಸುವುದು
೪. ಸತತವಾಗಿ ಆಜ್ಞೆ ಪಾಲಿಸು ವುದು ಹಾಗೂ ಅದನ್ನು ಅಂತಃಕರಣ ದಿಂದ ಮಾಡುವುದು, ಅದರಲ್ಲಿ ಬುದ್ಧಿ ಯನ್ನು ಉಪಯೋಗಿಸದೇ ‘ಸಾಧನೆ’ ಎಂದು ಆಜ್ಞೆಯನ್ನು ಪಾಲಿಸುವುದು. ಸತತ ಆಜ್ಞಾಪಾಲನೆ ಮಾಡುವುದರಿಂದ ನೀವು ಕಡಿಮೆ ಸಮಯದಲ್ಲಿ ಒಳ್ಳೆಯ ಶಿಷ್ಯರಾಗಿ ನನ್ನಂತಹ ಭಕ್ತರಾಗುವಿರಿ.
ಇದರಿಂದ ಆಗುವ ಉಪಯೋಗಗಳು
೧. ಸ್ವಭಾವದೋಷ ಹಾಗೂ ಅಹಂನ ಪ್ರಮಾಣ ಕಡಿಮೆಯಾಗುತ್ತದೆ.೨. ಕೆಟ್ಟ ಶಕ್ತಿಗಳಿಂದ ಆಗುವ ತೊಂದರೆಗಳು ಕಡಿಮೆಯಾಗುವವು.
೩. ಅಂತರಂಗದಲ್ಲಿ ಭಕ್ತಿ ಭಾವದ ವಾತಾವರಣ ನಿರ್ಮಾಣವಾಗುವುದು.
೪. ಗುರುಗಳ ಹಾಗೂ ನನ್ನ ಕೃಪಾಶೀರ್ವಾದ ಸತತವಾಗಿ ಸಿಗುವುದು. - ಹನುಮಂತ (ಕು.ಮೇಘಾ ನಕಾತೆ ಯವರ ಮಾಧ್ಯಮದಿಂದ)
ಶರಣಾಗತಭಾವವನ್ನು ದೃಢಪಡಿಸಿಕೊಳ್ಳಿ!
‘ಸಾಧಕರೇ, ಯಾವ ಜೀವದಲ್ಲಿ ಶರಣಾಗತ ಭಾವವಿರುತ್ತದೆಯೋ ಆ ಜೀವವು ಸ್ವತ: ದಾಸ್ಯತ್ವವನ್ನು ತನ್ನಲ್ಲಿ ತಂದುಕೊಂಡು ದಾಸ್ಯ ಭಕ್ತಿಯನ್ನು ಮಾಡು ತ್ತದೆ. ಆ ಜೀವವು ಅವನ ಹೃದಯದಲ್ಲಿ ಭಗವಂತನ ಹಾಗೂ ಭಗವಂತನ ಚರಣ ಗಳಲ್ಲಿ ತನ್ನ ಸ್ಥಾನ ಹಾಗೂ ಅಸ್ತಿತ್ವವನ್ನು ನಿರ್ಮಾಣ ಮಾಡಬಹುದು.’ - ಹನುಮಂತ (ಕು. ಮೇಘಾ ನಕಾತೆಯವರ ಮಾಧ್ಯಮ ದಿಂದ ೩೦.೯. ೨೦೦೫, ರಾತ್ರಿ ೩.೦೫) (ಸನಾತನ ನಿರ್ಮಿತ ಗ್ರಂಥ - ವ್ಯಷ್ಟಿ ಸಾಧನೆಗಾಗಿ ಆವಶ್ಯಕ ಗುಣಗಳು)
No comments:
Post a Comment