ಧರ್ಮಸತ್ಸಂಗ
ವಿಶಿಷ್ಟ ಧಾರ್ಮಿಕ ಕೃತಿಯನ್ನು ಮಾಡುವುದರಿಂದ ಯಾವ ಲಾಭವಾಗುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ. ನಾವು ಕೇವಲ ಅನುಕರಣೆ ಮಾಡುತ್ತಿರುತ್ತೇವೆ. ನಮಗೇನಾದರೂ ಯಾವುದಾದರೂಂದು ವಿಶಿಷ್ಟ ಧಾರ್ಮಿಕ ಕೃತಿಯಿಂದಾಗುವ ಲಾಭವು ತಿಳಿದರೆ ನಾವು ಆ ಕೃತಿಯನ್ನು ಶ್ರದ್ಧಾಪೂರ್ವಕವಾಗಿ ಮಾಡುತ್ತೇವೆ. ಆದುದರಿಂದ ಧಾರ್ಮಿಕ ಕೃತಿಗಳಿಗೆ ಸಂಬಂಧಿಸಿದ ಅಧ್ಯಾತ್ಮಶಾಸ್ತ್ರವನ್ನು ಸ್ಪಷ್ಟಗೊಳಿಸುವುದು ಈ ಸತ್ಸಂಗದ ಪ್ರಧಾನ ಉದ್ದೇಶವಾಗಿದೆ. ಈ ಲೇಖನಮಾಲೆಯಲ್ಲಿ ನಾವು ಇಂದು ಧಾರ್ಮಿಕ ಕೃತಿಗಳಿಗೆ ಸಂಬಂಧಿಸಿದ ಅಧ್ಯಾತ್ಮಶಾಸ್ತ್ರವನ್ನು ನಾವು ಸೂಕ್ಷ ಚಿತ್ರಗಳಿಂದ ತಿಳಿದುಕೊಳ್ಳೋಣ.ಸೂಕ್ಷ ಚಿತ್ರ
‘ಸೂಕ್ಷ ಚಿತ್ರ’ ಎಂದರೆ ಸೂಕ್ಷ ದಿಂದ, ಅಂದರೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನು ಮೀರಿದ ಜ್ಞಾನದಿಂದ ಬಿಡಿಸಿದ ಚಿತ್ರ. ಅರ್ಥಾತ್ ಸೂಕ್ಷ ದ ಸ್ತರ ದಲ್ಲಿ ಏನು ನಡೆಯುತ್ತದೆಯೋ ಅದರ ಚಿತ್ರ. ನಾವು ಯಾವುದಾದರೂ ಕ್ಯಾಮೆರಾ ದಿಂದ ಛಾಯಾಚಿತ್ರವನ್ನು ತೆಗೆದಾಗ ನಮಗೆ ಆ ಛಾಯಾಚಿತ್ರದಲ್ಲಿ ನಮ್ಮ ಕಣ್ಣುಗಳಿಗೆ ಕಾಣಿಸುವ ದೃಶ್ಯಗಳು ಕಾಣಿಸುತ್ತವೆ. ಸೂಕ್ಷ ಚಿತ್ರವೆಂದರೆ ಯಾವುದೇ ಕ್ಯಾಮೆರಾದಿಂದ ತೆಗೆಯಲು ಸಾಧ್ಯವಿಲ್ಲದಂತಹ ಮತ್ತು ಅದನ್ನು ಸ್ಥೂಲ ಕಣ್ಣುಗಳಿಂದಲೂ ನೋಡಲು ಸಾಧ್ಯ ವಿಲ್ಲದಂತಹ ಚಿತ್ರ ವಾಗಿದೆ. ಸೂಕ್ಷ ಚಿತ್ರದಲ್ಲಿ ಮನಸ್ಸು ಮತ್ತು ಬುದ್ಧಿಯನ್ನು ಮೀರಿದ, ಆಧ್ಯಾತ್ಮಿಕ ಸ್ತರದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ತೋರಿಸಲಾಗುತ್ತದೆ. ನಾವು ಒಂದು ಉದಾಹರಣೆಯ ಆಧಾರದಿಂದ ಈ ವಿಷಯವನ್ನು ತಿಳಿದುಕೊಳ್ಳೋಣ.
ನಾವು ಈಗ ಶ್ರಾದ್ಧವಿಧಿಯ ಅಂತರ್ಗತ ಯಜಮಾನನು ತನ್ನ ಸುತ್ತಲೂ ತಿರುಗಿ ಎಂಟೂ ದಿಕ್ಕಿಗಳಿಗೆ ಕಪ್ಪು ಎಳ್ಳನ್ನು ಸಿಂಪಡಿ ಸುವಾಗ ಆಗುವ ಸೂಕ್ಷ ಪ್ರಕ್ರಿಯೆಯನ್ನು ಈ ಮೂಲಕ ತಿಳಿದುಕೊಳ್ಳೋಣ
ನಾವು ಈಗ ಶ್ರಾದ್ಧವಿಧಿಯ ಅಂತರ್ಗತ ಯಜಮಾನನು ತನ್ನ ಸುತ್ತಲೂ ತಿರುಗಿ ಎಂಟೂ ದಿಕ್ಕಿಗಳಿಗೆ ಕಪ್ಪು ಎಳ್ಳನ್ನು ಸಿಂಪಡಿ ಸುವಾಗ ಆಗುವ ಸೂಕ್ಷ ಪ್ರಕ್ರಿಯೆಯನ್ನು ಈ ಮೂಲಕ ತಿಳಿದುಕೊಳ್ಳೋಣ
ಪ್ರತಿಯೊಂದು ಕೃತಿಯನ್ನು ಶಾಸ್ತ್ರಕ್ಕನುಸಾರ ಮಾಡುವುದರಿಂದ ಆ ಕೃತಿಯಿಂದ ಆಧ್ಯಾತ್ಮಿಕ ಲಾಭವು ಅಧಿಕವಾಗಿ ಸಿಗುತ್ತದೆ. ಇದೇ ಉದ್ದೇಶದಿಂದ ನಾವು ಈ ಸತ್ಸಂಗಗಳ ಮಾಧ್ಯಮ ದಿಂದ ವಿವಿಧ ಪ್ರಾಯೋಗಿಕ ಕೃತಿಗಳ ಸಂದರ್ಭದಲ್ಲಿ ಧರ್ಮಶಾಸ್ತ್ರದ ದೃಷ್ಟಿಕೋನದಿಂದ ವಿಸ್ತೃತ ರೂಪದಲ್ಲಿ ಅರಿವು ಮಾಡಿಕೊಡುತ್ತೇವೆ. ಇದರಿಂದ ಕೇವಲ ಶಾಸ್ತ್ರದ ಮಾಹಿತಿ ಯೊಂದಿಗೆ ಅಧಿಕಾಧಿಕ ಆಧ್ಯಾತ್ಮಿಕ ಲಾಭವೂ ಆಗುತ್ತದೆ. (ಮುಂದುವರಿಯುವುದು)

No comments:
Post a Comment