ಪರೀಕ್ಷೆಯ ಪೇಪರಿನಲ್ಲಿ ಸೂಕ್ಷ್ಮದಿಂದ ನಾಮಜಪ ಬರೆಯಿರಿ!

ಓರ್ವ ಸಾಧಕಿಯು ಎಮ್. ಎ. ಮೊದಲನೇ ವರ್ಷದ ಪರೀಕ್ಷೆಯ ಸಮಯದಲ್ಲಿ ಪೇಪರಿನ ನಾಲ್ಕು ಬದಿಗೆ ಪೆನ್ನಿನಿಂದ ಚಿಕ್ಕ ಅಕ್ಷರದಲ್ಲಿ ‘ಪ.ಪೂ.ಡಾಕ್ಟರ’ ಎಂದು ನಾಮಜಪ ಬರೆದಳು. ಆದುದರಿಂದ ಪರೀಕ್ಷೆಯ ಮಂಡಳಿಯ ಪರೀಕ್ಷೆಯ ನಿಯಮ ಕ್ಕನುಸಾರ ಅವಳು ‘ಕಾಪಿ’ ಮಾಡಿದ್ದಾಳೆ ಎಂದು ಪರೀಕ್ಷಕರು ಹೇಳಿ ಅವಳನ್ನು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣಗೊಳಿಸಿದರು. ಪೇಪರಿನ ಮೇಲೆ ಏನೂ ಬರೆಯಬಾರದು, ಎಂದು ಪರೀಕ್ಷಾ ಮಂಡಳಿಯ ನಿಯಮವಿದೆ. ಆದುದರಿಂದ ಸಾಧಕರು ಪರೀಕ್ಷೆಯ ಪೇಪರಿನ ಮೇಲೆ ಸ್ಥೂಲದಿಂದ ಜಪವನ್ನು ಬರೆಯದೇ ಸೂಕ್ಷ್ಮದಿಂದ ಬರೆಯಿರಿ. ‘ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠವಾಗಿದೆ’ ಎಂಬುದನ್ನು ಗಮನದಲ್ಲಿಟ್ಟು ಸೂಕ್ಷ್ಮದಿಂದ ಮಾನಸ ಜಪ ಬರೆಯಬಹುದು.

No comments:

Post a Comment