ಸಾಧಕರೇ, ಪ್ರಸ್ತುತ ಕಾಲವು ಪ್ರತಿಕೂಲವಿದ್ದರೂ ಧೃತಿಗೆಡದೇ ಈಶ್ವರನ ಮೇಲೆ
ಶ್ರದ್ಧೆಯನ್ನಿಟ್ಟು ಸಾಧನೆಯಲ್ಲಿ ಸಾತತ್ಯವಿಡಿರಿ!
ಕಳೆದ ಅನೇಕ ವರ್ಷಗಳಿಂದ ಸಾಧಕರು ಸನಾತನ ಸಂಸ್ಥೆಯ ಮಾರ್ಗದರ್ಶದಲ್ಲಿ ‘ಗುರುಕೃಪಾಯೋಗಾನುಸಾರ ಸಾಧನೆ’ಯನ್ನು ಮಾಡುತ್ತಿದ್ದಾರೆ. ಸಾಧನೆ ಮಾಡುವುದೆಂದರೆ ಈಶ್ವರಪ್ರಾಪ್ತಿಯತ್ತ ಮಾರ್ಗಕ್ರಮಣ ಮಾಡುವುದು. ಈ ಮಾರ್ಗದಲ್ಲಿ ಸಹಸ್ರಾರು ಸಾಧಕರು ಈಶ್ವರನ ಅಸ್ತಿತ್ವದ ಅನುಭೂತಿ ಪಡೆದಿದ್ದಾರೆ. ಸಾಧಕರೇ, ನಿರ್ಬಂಧ ಹೇರುವುದು ಧರ್ಮ ಹಾಗೂ ಅಧರ್ಮಗಳ ನಡುವಿನ ಯುದ್ಧದ ಒಂದು ಭಾಗವಾಗಿದೆ. ಇಂತಹ ಯುದ್ಧದಲ್ಲಿ ಧರ್ಮವೇ ಜಯ ಹೊಂದುತ್ತದೆಯೆಂದು ಇತಿಹಾಸ ಸಾರುತ್ತದೆ. ಇವೆಲ್ಲದರ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಯ ಮೇಲೆ ಹೇರಲಿರುವ ನಿರ್ಬಂಧವೂ ಒಂದು ಧರ್ಮಯುದ್ಧವೇ ಆಗಿದ್ದು ಅದರಲ್ಲಿ ಧರ್ಮವೇ (ಈಶ್ವರನ ಪಕ್ಷ) ಅಂದರೆ ಸನಾತನ ಸಂಸ್ಥೆಯ ಜಯವಾಗುವುದು, ಇದು ಖಚಿತವಿದೆ. ಆದುದರಿಂದ ಪ್ರಸ್ತುತ ಪ್ರತಿಕೂಲ ಕಾಲವಿದ್ದರೂ ಅದಕ್ಕೆ ಹೆದರದೇ ಈಶ್ವರನ ಮೇಲೆ ಸಂಪೂರ್ಣ ಶ್ರದ್ಧೆಯನ್ನಿಟ್ಟು ಸಾಧನೆಯಲ್ಲಿ ಸಾತತ್ಯತೆಯನ್ನು ಇಟ್ಟುಕೊಳ್ಳಿ. ಈ ವಿಶ್ವದಲ್ಲಿ ಈಶ್ವರನಷ್ಟು ಶ್ರೇಷ್ಠ ಹಾಗೂ ಸರ್ವಶಕ್ತಿಶಾಲಿಗಳು ಯಾರೂ ಇಲ್ಲ.
No comments:
Post a Comment