‘ನಾವು ಯಾವುದಾದರೊಂದು ಕೃತಿ ಯನ್ನು ಮಾಡುವಾಗ ಬೇರೆ ಬೇರೆ ಘಟನೆಗಳನ್ನು ಎದುರಿಸಬೇಕಾಗುತ್ತದೆ. ಅದು ವ್ಯವಹಾರವಾಗಿರಲಿ ಅಥವಾ ಅಧ್ಯಾತ್ಮವಾಗಿರಲಿ. ‘ಎಲ್ಲಿ ಹಿರಿಮೆ ಇರುತ್ತೆಯೋ ಅಲ್ಲಿ ಕಠಿಣ ಸಂಕಟವಿರುತ್ತದೆ’ ಎಂಬಂತೆ ನಾವು ಯಾವುದಾದರೊಂದು ಮಹಾನ ಕಾರ್ಯವನ್ನು ಮಾಡಲು ಹೋದಾಗ ಅದಕ್ಕೆ ಅಡಚಣೆಯೂ ಹೆಚ್ಚಿರುತ್ತದೆ. ಅದು ನಿಸರ್ಗ ನಿಯಮವೇ ಆಗಿದೆ. ಇದರ ಕೆಲವು ಉದಾಹರಣೆಗಳನ್ನು ನೋಡೋಣ.
೧. ನಾವು ಯಾವುದಾದರೊಂದು ಭಾರವಾದ ವಸ್ತುವನ್ನು ದೂಡುವಾಗ ಸ್ವಲ್ಪ ಪ್ರಮಾಣದಲ್ಲಿ ಶಕ್ತಿಯನ್ನು ಉಪಯೋಗಿಸು ತ್ತೇವೆ. ಆದರೆ ಒಂದು ವೇಳೆ ಅದನ್ನೇ, ಇಬ್ಬರು ವ್ಯಕ್ತಿಗಳಿಗೆ ‘ಯಾರಲ್ಲಿ ಹೆಚ್ಚು ಶಕ್ತಿ ಯಿದೆ ಎಂಬುದನ್ನು ನೋಡೋಣ’ ಎಂದು ಹೇಳಿದಾಗ ಏನಾಗಬಹುದು ? ಇಬ್ಬರೂ ತಮ್ಮ ಪೂರ್ಣ ಶಕ್ತಿಯನ್ನು ಉಪಯೋಗಿಸಲು ಪ್ರಯತ್ನಿಸುತ್ತಾರೆ. ಅಂದರೆ ಸ್ಪರ್ಧೆ ಯಿದ್ದರೆ ಮಾತ್ರ ನಾವು ನಮ್ಮ ಎಲ್ಲ ಶಕ್ತಿ ಯನ್ನು ಉಪಯೋಗಿಸಲು ಪ್ರಯತ್ನಿಸುತ್ತೇವೆ.
೨. ವಿಮಾನವು ಆಕಾಶದಲ್ಲಿ ಹಾರು ವಾಗ ಗಾಳಿಯ ಒತ್ತಡವನ್ನು ವಿರೋಧಿಸುತ್ತ ಮುಂದೆ ಹೋಗುತ್ತದೆ. ನಮ್ಮ ಶಕ್ತಿಯನ್ನು ಯಾರಿಗಾದರೂ ತೋರಿಸುವುದಿದ್ದರೆ, ಯಾರಾದರೂ ನಮ್ಮನ್ನು ಆಹ್ವಾನಿಸ ಬೇಕಲ್ಲವೇ ?
೩. ಸಂಸಾರ ನಡೆಸುವಾಗ ನಾವು ವಿರೋಧವನ್ನು ಎದುರಿಸುತ್ತೇವೆ. ವಿರೋಧ ವಾಗುತ್ತದೆ ಎಂದು ನಾವು ಸಂಸಾರವನ್ನು ಬಿಡುತ್ತೇವೆಯೇ ?
೪. ಧರ್ಮದ್ರೋಹಿಗಳಿಗೆ ಈಶ್ವರನ ಶಕ್ತಿಯನ್ನು ನೋಡಲು ಇಚ್ಛೆಯಾಗಿದೆ ! : ಶತ್ರುಗಳಿಲ್ಲದೇ ಯುದ್ಧವು ಅಸಂಭವವಾ ಗಿದೆ. ನಮ್ಮದು ಧರ್ಮಯುದ್ಧವಾಗಿದೆ ಮತ್ತು ನಮಗೆ ಧರ್ಮದ್ರೋಹಿಗಳು ಕರೆ ನೀಡುತ್ತಿದ್ದಾರೆ. ಅವರಿಗೆ ಈಶ್ವರನ ಶಕ್ತಿ ಯನ್ನು ನೋಡುವ ಇಚ್ಛೆಯಾಗಿದೆ. ನಮ್ಮೆಲ್ಲ ರಿಗೆ ಸಾಧನೆಯೇ ಶಸ್ತ್ರವಾಗಿದೆ. ಯುದ್ಧ ಮಾಡುವುದಿದ್ದರೆ ಶಸ್ತ್ರಗಳನ್ನು ಹೆಚ್ಚಿಸಲೇ ಬೇಕು, ನಂತರ ಏನು ಬೇಕಾದರೂ ಆಗಲಿ.
೫. ಚಿನ್ನವು ಬೆಂಕಿಯಲ್ಲಿ ಸುಟ್ಟು ಹೊರಗೆ ಬಂದಾಗಲೇ ಝಗಝಗಿಸು ತ್ತದೆ, ಅದರಂತೆ ಸಂತರಿದ್ದಾರೆ !
ಚಿನ್ನವು ಬೆಂಕಿಯಲ್ಲಿ ಸುಟ್ಟು ಹೊರಗೆ ಬಂದಾಗಲೇ ಅದು ಹೊಳೆಯುತ್ತದೆ. ಅದೇ ರೀತಿ ನಮ್ಮ ಸಂತರಿದ್ದಾರೆ. ಯಾರಾದರೂ ಚಿನ್ನಕ್ಕೆ ತಾಮ್ರವೆಂದರೆ ಚಿನ್ನದ ಗುಣವು ಬದಲಾಗುವುದಿಲ್ಲ. ಸಮುದ್ರ ಮಂಥನದ ಸಮಯದಲ್ಲಿ ಎಲ್ಲ ವಿಷವನ್ನು ಹೊರಗೆ ತೆಗೆದಾಗ ಅಮೃತ ದೊರಕಿತು.
೬. ಧರ್ಮದ್ರೋಹಿಗಳೇ, ಓರ್ವ ಸಂತರ ಶಕ್ತಿ ಕಡಿಮೆಯಲ್ಲ, ಅವರಿಗೆ ತೊಂದರೆ ನೀಡುವ ಮೊದಲು ದೇವ ರಿಂದ ಮಹಿಷಾಸುರರಂತೆ ಸಾಯಲು ಸಿದ್ಧರಾಗಿ ! : ಸಂತರಿಗೆ ಕೊಲೆ ಬೆದರಿಕೆ ನೀಡುವುದು, ಸಂತರನ್ನು ಆರೋಪಿಸು ವುದು ನಮಗೆ ಒಳ್ಳೆಯದೇ ಆಗಿದೆ. ಅದರಿಂದ ಧರ್ಮದ್ರೋಹಿಗಳ ಪಾಪದ ಕೊಡವು ಬೇಗನೇ ತುಂಬುತ್ತದೆ ಮತ್ತು ಅದರಲ್ಲಿಯೇ ಅವರು ಮುಳುಗಿ ಸಾಯು ತ್ತಾರೆ. ನಮ್ಮ ಸಾಧನೆಗೆ ಆಗುತ್ತಿರುವ ಈ ವಿರೋಧವು ಮನಸ್ಸಿನಲ್ಲಿ ಸಾಕ್ಷಿಭಾವವನ್ನು ನಿರ್ಮಾಣ ಮಾಡುತ್ತಿದೆ. ಧರ್ಮದ್ರೋಹಿ ಗಳೇ, ಓರ್ವ ಸಂತರ ಶಕ್ತಿಯು ಕಡಿಮೆ ಯಲ್ಲ; ಆದರೆ ದುರ್ಗಾದೇವಿಗೆ ಶಕ್ತಿಯಿದ್ದೂ ಮಹಿಷಾಸುರನನ್ನು ಆಟವಾಡಿಸಿ ಕೊಂದಳು, ಅದರಂತೆ ನಿಮ್ಮನ್ನು ದೇವರು ಆಟವಾಡಿಸಿ ಕೊಲ್ಲುವರು ಎಂಬುದನ್ನು ಗಮನದಲ್ಲಿಡಿ. ಆದುದರಿಂದ ಸಂತರನ್ನು ಪೀಡಿಸುವ ಮೊದಲು ಈ ರೀತಿ ಸಾಯುವ ಸಿದ್ಧತೆ ಯಲ್ಲಿರಿ. ಸಾಧಕರೇ, ನಾವು ಕೇವಲ ಕೋಲನ್ನು ತಗಲಿಸೋಣ. ಶ್ರೀಕೃಷ್ಣ, ಈಶ್ವರನು ಈಶ್ವರೀ ರಾಜ್ಯ ಸ್ಥಾಪನೆಯ ಪರ್ವತವನ್ನು ಎತ್ತಲು ಸಮರ್ಥನಿದ್ದಾನೆ. ಶ್ರೀ ಗುರುಚರಣಗಳಲ್ಲಿ ಅರ್ಪಣೆ !’
- ಸೌ. ದುರ್ಗಾ ಸರದೇಸಾಯಿ, ಅಮೇರಿಕಾ (ಮಾಘ ಶುಕ್ಲ ೧೪, ಕಲಿಯುಗ ವರ್ಷ ೫೧೧೧ (೨೯.೧. ೨೦೧೦) ಬೆಳಗ್ಗೆ ೬.೩೦)ಪೂರಕವೇ ಆಗಿದೆ!
No comments:
Post a Comment