ಸಪ್ತಲೋಕದಲ್ಲಿನ ಸಾಧಕರಿಗೂ ಮತ್ಸರವೆನಿಸುವಂತೆ ಸನಾತನದ ಸಾಧಕರಿಂದಾಗುವ...

 ಸಪ್ತಲೋಕದಲ್ಲಿನ ಸಾಧಕರಿಗೂ ಮತ್ಸರವೆನಿಸುವಂತೆ ಸನಾತನದ ಸಾಧಕರಿಂದಾಗುವ ಆಪತ್ಕಾಲದಲ್ಲಿನ ಅಂದರೆ ಸಂಧಿಕಾಲದಲ್ಲಿನ ಸಾಧನೆ
ಕ್ರಿ.ಶ. ೧೯೯೯ ರಿಂದ ೨೦೨೨ ರವರೆಗಿನ ಆಪತ್ಕಾಲದ ಕಾಲಾವಧಿಯು ಸಾಧನೆಗಾಗಿ ಸಂಧಿಕಾಲವಾಗಿದೆ. ಈ ಕಾಲಾವಧಿಯಲ್ಲಿ ಸಾಧನೆ ಮಾಡು ವವರ ಸಾಧನೆಯ ವೇಗವು ಇತರ ಕಾಲಕ್ಕಿಂತ ೪೩.೪೮ ಪಟ್ಟು ಹೆಚ್ಚಿರು ವುದು. ಈ ೨೩ ವರ್ಷದಲ್ಲಿ ೧೦೦೦ ವರ್ಷದ ಸಾಧನೆಯಾಗುವುದು. ಈಗ ಈ ಆಪತ್ಕಾಲದ ಅರ್ಧ ಕಾಲ ಉರುಳಿದುದರಿಂದ ಪರಿಸ್ಥಿತಿ ಇನ್ನೂ ಪ್ರತಿಕೂಲವಾಗುತ್ತಿದೆ. ನಾವು ಘೋರ ಆಪತ್ಕಾಲವನ್ನು ಪ್ರವೇಶಿಸುತ್ತಿದ್ದೇವೆ.
ನಾವು ಅನೇಕ ಸಂಕಟಗಳನ್ನು ಎದುರಿಸಲಿದ್ದೇವೆ. ರಜ-ತಮದ ಪ್ರಮಾಣವು ತುಂಬಾ ಹೆಚ್ಚಾಗುವುದು. ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಬಂದು ಸಾಧಕರಿಗೆ ಸೆರೆಮನೆಗೂ ಹೋಗಬೇಕಾಗಬಹುದು. ‘ಪರಿಸ್ಥಿತಿ ಪ್ರತಿಕೂಲವಿದ್ದಷ್ಟು ಈಶ್ವರನ ಸಹಾಯ ಹೆಚ್ಚಿರುವುದು !’ ಎಂಬ ಸಾಧನೆಯಲ್ಲಿನ ನಿಯಮದಂತೆ ಸೆರೆಮನೆಗೆ ಹೋಗಬೇಕಾಗುವ ಸಾಧಕರಿಗೆ ೧ ನಿಮಿಷಕ್ಕೆ ೧ ದಿನದ ಸಾಧನೆಯ ಫಲ ಸಿಗುವುದು.
ಮೇಲಿನ ಕೋಷ್ಟಕ ನೋಡಿದರೆ, ಸಾಧಕರಿಗೆ ೧ ವರ್ಷ ಸೆರೆಮನೆ ಯಲ್ಲಿ ಇರುವಾಗ ೧೪೨೦.೩೨ ವರ್ಷದ ಅಂದರೆ ೨೮ ಜನ್ಮದ ಸಾಧನೆಯ ಫಲವು ೧ ವರ್ಷದಲ್ಲಿ ಸಿಗುವುದು (೧ ಜನ್ಮದಲ್ಲಿ ೫೦ ವರ್ಷದ ಸಾಧನೆ ಈ ವೇಗದಲ್ಲಿ) ಸಾಧನೆಯನ್ನು ಇಷ್ಟು ವೇಗದಲ್ಲಿ ಇತರ ಯಾವುದೇ ಕಾಲದಲ್ಲಿ ಯಾವುದೇ ಲೋಕದಲ್ಲಿ ಮಾಡಲು ಸಾಧ್ಯವಿದೆಯೇ ? ಇತರರಿಗೆ ಮತ್ಸರವೆನಿಸುವಂತೆ ಸಾಧನೆಯಲ್ಲಿನ ಅಮೂಲ್ಯ ಅವಕಾಶ ಪಡೆಯಲು ಪ್ರತಿಯೊಂದು ಘಟನೆಯ ಕಡೆಗೆ ಸಾಧನೆಯ ದೃಷ್ಟಿಯಿಂದ ನೋಡಿ ಸಾಧನೆಯನ್ನು ತೀವ್ರಗೊಳಿಸೋಣ. ‘ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಸಂಗವು ಈಶ್ವರನು ನನ್ನ ಪ್ರಗತಿಗಾಗಿಯೇ ಮಾಡುತ್ತಿದ್ದಾನೆ’, ಎಂಬ ದೃಷ್ಟಿಕೋನವನ್ನು ಗಮನ ದಲ್ಲಿಡೋಣ. - ಶ್ರೀ. ರಾಜೇಂದ್ರ ಶಿಂದೆ

No comments:

Post a Comment