ಪ್ರತಿಯೊಬ್ಬರ ದೃಷ್ಟಿಯಲ್ಲಿ ಪೂಜೆ, ಅರ್ಚನೆ ಇತ್ಯಾದಿಗಳು ಮಹತ್ವಪೂರ್ಣ ದ್ದಾಗಿರುತ್ತವೆ. ಇದರಿಂದ ಪ್ರತಿಯೊಂದು ಮನೆ ಯಲ್ಲಿಯೂ ಪೂಜಾಮಂಟಪವು ಇರುವುದು ಅನಿವಾರ್ಯವಾಗಿದೆ. ಬಹಳಷ್ಟು ಮನೆಗಳಲ್ಲಿ, ಅಂಗಡಿಗಳಲ್ಲಿ, ಅಷ್ಟೇ ಅಲ್ಲದೇ ಅನೇಕ ಕಾರ್ಖಾನೆಗಳಲ್ಲಿ ಮತ್ತು ಸಂಸ್ಥಾಪನೆಗಳಲ್ಲೂ ಚಿಕ್ಕದಾದರೂ ಒಂದು ಪೂಜಾಮಂಟಪವು ಅವಶ್ಯವಾಗಿ ಕಾಣಿಸುತ್ತದೆ. ಈ ವಾರ ನಾವು ಪೂಜಾಮಂಟಪದ ಬಗ್ಗೆ ತಿಳಿದುಕೊಳ್ಳೋಣ.ಪೂಜಾ ಮಂಟಪವು ಯಾವ ದಿಕ್ಕಿನಲ್ಲಿರಬೇಕು ?ಪೂಜಾ ಮಂಟಪವು ಯಾವ ದಿಕ್ಕಿನಲ್ಲಿರಬೇಕು ?
ಪೂಜಾಮಂಟಪವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿರುವುದು ಅತ್ಯಂತ ಯೋಗ್ಯವಾಗಿದೆ. ಆದಷ್ಟು ಪೂಜಾಮಂಟಪವು ದಕ್ಷಿಣ ಉತ್ತರ ದಿಕ್ಕಿನಲ್ಲಿರಬಾರದು. ಪೂಜಾಮಂಟಪದ ದ್ವಾರವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿರಬೇಕು. ಹೀಗಿದ್ದರೆ ಆ ದಿಕ್ಕಿನಲ್ಲಿ ಟೊಳ್ಳು ನಿರ್ಮಾಣ ವಾಗುತ್ತದೆ. ಈ ಟೊಳ್ಳಿನಲ್ಲಿ ದೇವತೆಗಳಿಂದ ಪ್ರಕ್ಷೇಪಿತವಾಗುವ ತರಂಗಗಳು ಆಕರ್ಷಿತ ವಾಗುತ್ತವೆ. ಈ ವಿಷಯವನ್ನು ಒಂದು ಸೂಕ್ಷ ಚಿತ್ರದ ಮೂಲಕ ತಿಳಿದುಕೊಳ್ಳೋಣ.ಸೂಕ್ಷ ಚಿತ್ರ
ವಾಯುಮಂಡಲದಲ್ಲಿ ದೇವತೆಯ ನಿರ್ಗುಣ ತರಂಗಗಳು ಇರುತ್ತವೆ. ಪೂಜಾ ಮಂಟಪವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿದ್ದರೆ ಈ ನಿರ್ಗುಣ ತರಂಗಗಳು ಸಗುಣ ಚೈತನ್ಯ ದಲ್ಲಿ ರೂಪಾಂತರಗೊಂಡು ಅವು ಪೂಜಾ ಮಂಟಪದೆಡೆಗೆ ಆಕರ್ಷಿತವಾಗುತ್ತವೆ ಮತ್ತು ಪೂಜಾಮಂಟಪದ ಟೊಳ್ಳಿನಲ್ಲಿ ಕಾರ್ಯ ನಿರತವಾಗುತ್ತದೆ. ತದನಂತರ ಈ ಸಗುಣ ಚೈತನ್ಯವು ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಪೂಜಕ ನಿಗೂ, ವಾಸ್ತುವಿಗೂ ಇದರಿಂದ ಲಾಭವಾಗುತ್ತದೆ. ಇದ ರೊಂದಿಗೆ ಸಗುಣ ಚೈತನ್ಯವು ವಲಯಗಳ ರೂಪದಲ್ಲಿಯೂ ಪ್ರಕ್ಷೇಪಿತವಾಗುತ್ತದೆ ಮತ್ತು ಪೂಜಾಮಂಟಪದಿಂದ ಪ್ರಕ್ಷೇಪಿತ ವಾಗುವ ಕೆಂಪು ಬಣ್ಣದ ಶಕ್ತಿಯ ಕಣಗಳೂ ಕಾಣಿಸುತ್ತವೆ.
ಪೂಜಾಮಂಟಪವು ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ ಇರಬಾರದು ಏಕೆ ?
ದಕ್ಷಿಣ-ಉತ್ತರ ದಿಕ್ಕುಗಳಲ್ಲಿ ಸಂಪುಟಿತವಾಗಿರುವ ಇಚ್ಛಾಶಕ್ತಿಯು ಕಾರ್ಯನಿರತವಾಗಿರುತ್ತದೆ. ಇದರ ಸಂಚಾರವು ಕೆಳಗಿನ ದಿಕ್ಕಿನತ್ತ ಅಧಿಕವಿರುತ್ತದೆ. ಇದರಿಂದಲೇ ಪುನಃ ವಾತಾವರಣದಲ್ಲಿರುವ ತೊಂದರೆ ದಾಯಕ ರಜ-ತಮ ತರಂಗಗಳು ಕಾರ್ಯನಿರತವಾಗು ತ್ತವೆ. ಈ ರಜ-ತಮ ತರಂಗಗಳಿಂದಾಗಿ ದೇವಿದೇವತೆ ಗಳಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆಗೆ ಅಡಚಣೆ ಯುಂಟಾಗುತ್ತದೆ ಮತ್ತು ಪೂಜಕನಿಗೆ ಬಹಳ ಕಡಿಮೆ ಲಾಭವಾಗುತ್ತದೆ. ಪೂಜೆ-ಅರ್ಚನೆಯಲ್ಲಿ ಸದಾ ಸತ್ತ್ವ ಗುಣದ ಸ್ಪಂದನಗಳನ್ನು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತ ವಾಗುವ ವಸ್ತುಗಳನ್ನು ಉಪಯೋಗಿಸಬೇಕು. ಇದರಿಂದ ಪೂಜಾಮಂಟಪವನ್ನು ಮಾಡಲು ಯಾವ ಧಾತು ಅಥವಾ ಪದಾರ್ಥವನ್ನು ಉಪಯೋಗಿಸಲಾಗಿದೆ ಎಂಬುದ ರಿಂದ ಹಿಡಿದು ಅವುಗಳ ಬಣ್ಣ, ಆಕಾರ ಇತ್ಯಾದಿಗಳೂ ಮಹತ್ವದ್ದೆಂದು ತಿಳಿಯುವುದು (ಮುಂದುವರಿಯುವುದು)

No comments:
Post a Comment