೧೨ವರ್ಷಗಳಿಂದ ಅಸಹನೀಯ ರೋಗದಿಂದ ಬಳಲುತ್ತಿದ್ದರೂ ತಳಮಳದಿಂದ
ಸಾಧನೆಯನ್ನು ಮಾಡಿ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಬೆಳಗಾವಿಯ ಸೌ.ಮಾಧವಿ ಘಾಟೆ!
ಸಾಧಕರು ಸಾಧನೆಯನ್ನು ಮಾಡುತ್ತಿರುವುದರಿಂದ ಅವರಿಗೆ ತಮ್ಮ ಪ್ರಾರಬ್ಧಕ್ಕನುಸಾರ ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳನ್ನು ಧೈರ್ಯದಿಂದ ಹಾಗೂ ಸ್ಥಿರವಾಗಿ ಎದುರಿಸಲು ಸಾಧ್ಯವಾಗುತ್ತದೆ. ಆ ಸಮಸ್ಯೆಗಳು ಶಾರೀರಿಕ, ಮಾನಸಿಕ, ವ್ಯಾವಹಾರಿಕ ಅಥವಾ ಆಧ್ಯಾತ್ಮಿಕವಿರ ಬಹುದು. ಅವರಿಗೆ ಕಠಿಣ ಪ್ರಸಂಗಗಳನ್ನು ಎದುರಿಸಲು ಆಧ್ಯಾತ್ಮಿಕ ಬಲ ದೊರೆಯುತ್ತದೆ ಹಾಗೂ ಇವುಗಳೊಂದಿಗೆ ಅವರಿಗೆ ಒಳ್ಳೆಯ ಅನುಭೂತಿಗಳೂ ಬರುತ್ತವೆ. ಬೆಳಗಾವಿಯ ಸಾಧಕಿ ಸೌ.ಮಾಧವಿ ಘಾಟೆ. ಸೌ.ಘಾಟೆಕಾಕೂರವರಿಗೆ ಕಳೆದ ೧೨ವರ್ಷಗಳಿಂದ ಒಂದು ಅಸಹನೀಯ ಚರ್ಮರೋಗವಾಗಿದೆ. ಇದರಿಂದಾಗಿ ಕೈ ಹಾಗೂ ಕಾಲುಗಳ ಬೆರಳುಗಳಿಗೆ ಗಾಯವಾಗಿ ಹಾಗೂ ಈ ಗಾಯಗಳು ಎಲುಬಿನ ವರೆಗೆ ತಲುಪಿರುವುದರಿಂದ ಆ ಎಲುಬುಗಳು ಸವೆಯುತ್ತಿವೆ. ಇದರಿಂದಾಗಿ ಅವರಿಗೆ ತೀವ್ರ ವೇದನೆಯಾಗುತ್ತಿದೆ. ಹೀಗಿದ್ದರೂ ಅವರು ಸಾಧನೆ ಹಾಗೂ ಸತ್ಸೇವೆ ಮಾಡುವುದನ್ನು ಬಿಡಲಿಲ್ಲ. ಇದರಿಂದಾಗಿ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ ಹಾಗೂ ಅವರು ಶೇ.೬೦ ರ ಮಟ್ಟವನ್ನು ತಲುಪಿದ್ದಾರೆ. (ಮುಂದುವರಿದ ಭಾಗ, ಕಳೆದ ವಾರದ ಭಾಗಕ್ಕೆ: http://kannadasanatanprabhat.blogspot.com/2011/02/blog-post_4836.html)೧ಊ.ಪ.ಪೂ.ದೇಶಪಾಂಡೆ ಬಾಬಾರವರ ದೇಹತ್ಯಾಗದ ಹಿಂದಿನ ದಿನ ‘ರಾತ್ರಿಯಿಡೀ ಕುಳಿತು ಅಖಂಡ ಶ್ವಾಸದೊಂದಿಗೆ ನಾಮಜಪವಾಗಲಿ’ ಎಂದು ಪ್ರಾರ್ಥನೆಯಾಗುವುದು ಹಾಗೂ ಶ್ರೀಕೃಷ್ಣನ ಕೃಪೆಯಿಂದ ಹಾಗೆಯೇ ಜಪವಾಗುವುದು: ೨೩.೯.೨೦೧೦ ರಂದು ನನ್ನ ಮಗಳಾದ ಅಮೃತಾಳು ದೂರವಾಣಿ ಮಾಡಿ ‘ಅಮ್ಮ, ಪ.ಪೂ.ಡಾಕ್ಟರರ ದೂರವಾಣಿ ಕರೆ ಬಂದಿತ್ತು. ಪ.ಪೂ. ಬಾಬಾರವರ ಪ್ರಾಣವು ಆಜ್ಞಾಚಕ್ರದ ವರೆಗೆ ಬಂದಿದೆ. ಅದು ಸಹಸ್ರಾರವನ್ನು ತಲುಪಿದ ಕ್ಷಣವೇ ದೇಹತ್ಯಾಗ ವಾಗುವುದು’ ಎಂದು ಹೇಳಿದಳು. ಆಗ ನನ್ನಿಂದ ತಕ್ಷಣ ‘ಬಾಬಾ ನಿಮ್ಮಿಂದ ಪ್ರಕ್ಷೇಪಿತವಾಗುವ ಚೈತನ್ಯವು ನನ್ನಿಂದ ಗ್ರಹಿಸುವಂತಾಗಲಿ ಹಾಗೂ ಶ್ರೀಕೃಷ್ಣನ ಕೃಪೆಯಿಂದ ರಾತ್ರಿಯಿಡೀ ಕುಳಿತು ಶ್ವಾಸದೊಂದಿಗೆ ಅಖಂಡ ನಾಮಜಪವಾಗಲಿ’ ಎಂದು ಪ್ರಾರ್ಥನೆಯಾಯಿತು. ಗಾಯದಿಂದ ನೋವಾಗುತ್ತಿತ್ತು; ಆದರೆ ಕೃಷ್ಣನ ಕೃಪೆಯಿಂದ ಜಪಕ್ಕೆ ತೊಂದರೆಯಾಗಲಿಲ್ಲ. ಬೆಳಗ್ಗೆ ೫.೪೫ ಕ್ಕೆ ಪ.ಪೂ.ಬಾಬಾರವರು ದೇಹತ್ಯಾಗ ಮಾಡಿದುದರ ಬಗ್ಗೆ ಸೌ.ಅಮೃತಾ ಹಾಗೂ ಶ್ರೀ. ವಿಶಾಲನ ದೂರವಾಣಿ ಕರೆ ಬಂದಿತ್ತು. ನಿಜವಾಗಲೂ ಅವರು ತುಂಬ ದೇಹ ಯಾತನೆಯನ್ನು ಸಹಿಸಿದರು; ಆದರೆ ಅದರಿಂದ ಅವರ ಮುಕ್ತಿಯಾಯಿತು, ಇದಕ್ಕಾಗಿ ನಾನು ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞಳಾಗಿದ್ದೇನೆ.
೧ಎ.ಬೆಳಗ್ಗೆ ಕನಸಿನಲ್ಲಿ ‘ಪ.ಪೂ. ಡಾಕ್ಟರರು ಪ್ರವೇಶದ್ವಾರದ ಬಳಿ ಬಂದು ನಿಂತಿರುವುದು ಕಾಣಿಸುವುದು ಹಾಗೂ ಅವರು ನನ್ನನ್ನು ಯಮನಿಂದ ರಕ್ಷಿಸುತ್ತಿದ್ದಾರೆ’ ಎಂಬುದರ ಅರಿವಾಗುವುದು: ಅಕ್ಟೋಬರ್ ೨೦೧೦ರಂದು ಬೆಳಗ್ಗೆ ನನಗೆ ಕನಸು ಕಂಡಿತು. ಪ.ಪೂ.ಡಾಕ್ಟರರು ಬಾಗಿಲಿನ ಬದಿಯಲ್ಲಿ ನಿಂತಿದ್ದಾರೆ. ನಮ್ಮ ಮನೆಯ ಪ್ರವೇಶದ್ವಾರವು ದಕ್ಷಿಣಾಭಿಮುಖವಾಗಿದೆ. ಅವರು ಅದೇ ದಿಕ್ಕಿನಲ್ಲಿ ನಿಂತಿರುವುದು ಕಾಣಿಸಿತು. ಆಗ ನನಗೆ ‘ಪ.ಪೂ. ಡಾಕ್ಟರರು ನನ್ನನ್ನು ಯಮನಿಂದ ರಕ್ಷಿಸುತ್ತಿದ್ದಾರೆ’ ಎಂಬುದರ ಅರಿವಾಯಿತು.
೧.೧ಏ.ಕನಸಿನಲ್ಲಿ ಕಾಗೆಯು ಕಾಲನ್ನು ಮುಟ್ಟಿ ಹೋದಂತೆ ಕಾಣಿಸುವುದು ಹಾಗೂ ಇದು ಅಪಶಕುನವಾಗಿರುವುದರಿಂದ ಯಮನು ನನ್ನ ಮೃತ್ಯು ಸಮೀಪಕ್ಕೆ ಬಂದಿರುವುದರ ಬಗ್ಗೆ ಹೇಳುವುದು: ನನಗೆ ಕನಸಿನಲ್ಲಿ ನನ್ನ ಆಯುರ್ವೇದಿಕ ಉಪಚಾರವು ನಡೆಯುತ್ತಿರುವ ಆಸ್ಪತ್ರೆಯು ಕಾಣಿಸಿತು. ಅದರ ಪ್ರವೇಶ ದ್ವಾರದಲ್ಲಿ ನಾವು ಮೂವರು ಸಾಧಕಿಯರು ಕುಳಿತಿದ್ದೆವು. ಅಷ್ಟರಲ್ಲಿಯೇ ನನಗೆ ಎದುರಿನ ಮನೆಯ ಮೇಲೆ ಬಹಳ ಕಾಗೆಗಳು ಬಂದಿರುವುದು ಕಾಣಿಸಿತು. ಆಗ ನಾನು ಸಾಧಕಿಯರಿಗೆ ‘ನೋಡಿ, ಎಷ್ಟೊಂದು ಕೆಟ್ಟ ಶಕ್ತಿಗಳು ಬಂದಿವೆ’ ಎಂದು ಹೇಳಿದೆನು. ಅಷ್ಟರಲ್ಲಿಯೇ ಆ ಕಾಗೆಗಳ ಪೈಕಿ ಒಂದು ಕಾಗೆಯು (ಅದರ ಕುತ್ತಿಗೆಯು ಕೆಂಪು ಬಣ್ಣದಿತ್ತು) ನನ್ನ ಕಾಲನ್ನು ಮುಟ್ಟಿ ಹೋಯಿತು. ‘ನನಗೆ ಅದು ಅಪಶಕುನ ವೆಂದು’ ತಿಳಿದಿತ್ತು. ಆದುದರಿಂದ ಬೆಳಗ್ಗೆ ಏಳುತ್ತಲೇ ನಾನು ಯಜಮಾನರಿಗೆ ನನ್ನ ‘ಮೃತ್ಯು ಸಮೀಪಿಸಿದೆ’ ಎಂದು ಹೇಳಿದೆನು.
೨.ಸೌ.ಘಾಟೆಕಾಕೂರವರ ಸೇವಾಭಾವ
೨ಅ.ಗುರುಪೂರ್ಣಿಮೆಯ ಸಮಯದಲ್ಲಿ ಮನೆಯಲ್ಲಿದ್ದು ಮಾಡುವ ಸೇವೆಯನ್ನು ಕೇಳಿಯೂ ಸಿಗದಿರುವುದು, ನಂತರ ಬೆರಳು ಹಾಗೂ ಕಾಲಿನ ಅನಾರೋಗ್ಯದಿಂದ ಬಹಳ ತೊಂದರೆಯಾಗಲು ಆರಂಭವಾಗುವುದು, ಆಗ ‘ಸೇವೆಯನ್ನು ಮಾಡಲು ಆಗಲಿಲ್ಲ ಎಂಬ ದುಃಖವಾಗಬಾರದೆಂದು ಗುರುಗಳು ಸೇವೆಯನ್ನು ನೀಡಲಿಲ್ಲ’ ಎಂದೆನಿಸುವುದು: ನಾನು ಶ್ರೀ.ಶಂಕರ ನರೂಟೆ ಹಾಗೂ ಶ್ರೀ.ಪರಶುರಾಮ ಗೋರಲರಿಗೆ ‘ನನಗೆ ಹೊರಗೆ ಹೋಗಲು ಆಗುವುದಿಲ್ಲ, ಮನೆಯಲ್ಲಿ ಕುಳಿತು ಮಾಡಬಹುದಾದ ಸೇವೆಯನ್ನು ನೀಡಿರಿ’ ಎಂದು ಹೇಳಿದೆನು. ಆಗ ಅವರು ‘ಸರಿ’ ಎಂದರು; ಆದರೆ ಯಾವ ಸೇವೆಯೂ ಸಿಗಲಿಲ್ಲ. ಆಗ ಮನಸ್ಸಿನಲ್ಲಿ ‘ಖಂಡಿತವಾಗಿಯೂ ಏನಾದರೂ ಕಾರಣ ವಿರಬಹುದು, ಇಲ್ಲದಿದ್ದರೆ ಅವರು ಸೇವೆಯನ್ನು ಕೊಡುತ್ತಿದ್ದರು’ ಎಂದು ಅನಿಸುತ್ತಿತ್ತು. ನಂತರ ಕೆಲವು ದಿನಗಳಲ್ಲಿ ನನಗೆ ಬೆರಳು ಹಾಗೂ ಕಾಲಿನ ಅನಾರೋಗ್ಯದಿಂದ ಎಷ್ಟು ತೊಂದರೆಯಾಗತೊಡಗಿತೆಂದರೆ ನನಗೆ ಏನೂ ಹೊಳೆಯುತ್ತಿರಲಿಲ್ಲ. ಆಗ ಸೇವೆಯನ್ನು ನೀಡದಿದ್ದ ಬಗ್ಗೆ ಕೃತಜ್ಞತೆಯು ವ್ಯಕ್ತವಾಯಿತು. ಸೇವೆಯನ್ನು ನೀಡಿದ್ದರೆ ಮಾಡಲು ಆಗುತ್ತಿಲ್ಲ ಎಂದು ದುಃಖವಾಗುತ್ತಿತ್ತು ಹಾಗೂ ನಿಯಮಿತವಾಗಿ ನಡೆಯುವ ನಾಮವು ಕಡಿಮೆಯಾಗುತ್ತಿತ್ತು. ಸತತವಾಗಿ ನಾಮಜಪ ಮಾಡಲೆಂದು ನನಗೆ ಗುರು ದೇವರು ಸೇವೆಯನ್ನು ನೀಡಲಿಲ್ಲ.
೨ಅ.ಗುರುಪೂರ್ಣಿಮೆಯ ಸಮಯದಲ್ಲಿ ಮನೆಯಲ್ಲಿದ್ದು ಮಾಡುವ ಸೇವೆಯನ್ನು ಕೇಳಿಯೂ ಸಿಗದಿರುವುದು, ನಂತರ ಬೆರಳು ಹಾಗೂ ಕಾಲಿನ ಅನಾರೋಗ್ಯದಿಂದ ಬಹಳ ತೊಂದರೆಯಾಗಲು ಆರಂಭವಾಗುವುದು, ಆಗ ‘ಸೇವೆಯನ್ನು ಮಾಡಲು ಆಗಲಿಲ್ಲ ಎಂಬ ದುಃಖವಾಗಬಾರದೆಂದು ಗುರುಗಳು ಸೇವೆಯನ್ನು ನೀಡಲಿಲ್ಲ’ ಎಂದೆನಿಸುವುದು: ನಾನು ಶ್ರೀ.ಶಂಕರ ನರೂಟೆ ಹಾಗೂ ಶ್ರೀ.ಪರಶುರಾಮ ಗೋರಲರಿಗೆ ‘ನನಗೆ ಹೊರಗೆ ಹೋಗಲು ಆಗುವುದಿಲ್ಲ, ಮನೆಯಲ್ಲಿ ಕುಳಿತು ಮಾಡಬಹುದಾದ ಸೇವೆಯನ್ನು ನೀಡಿರಿ’ ಎಂದು ಹೇಳಿದೆನು. ಆಗ ಅವರು ‘ಸರಿ’ ಎಂದರು; ಆದರೆ ಯಾವ ಸೇವೆಯೂ ಸಿಗಲಿಲ್ಲ. ಆಗ ಮನಸ್ಸಿನಲ್ಲಿ ‘ಖಂಡಿತವಾಗಿಯೂ ಏನಾದರೂ ಕಾರಣ ವಿರಬಹುದು, ಇಲ್ಲದಿದ್ದರೆ ಅವರು ಸೇವೆಯನ್ನು ಕೊಡುತ್ತಿದ್ದರು’ ಎಂದು ಅನಿಸುತ್ತಿತ್ತು. ನಂತರ ಕೆಲವು ದಿನಗಳಲ್ಲಿ ನನಗೆ ಬೆರಳು ಹಾಗೂ ಕಾಲಿನ ಅನಾರೋಗ್ಯದಿಂದ ಎಷ್ಟು ತೊಂದರೆಯಾಗತೊಡಗಿತೆಂದರೆ ನನಗೆ ಏನೂ ಹೊಳೆಯುತ್ತಿರಲಿಲ್ಲ. ಆಗ ಸೇವೆಯನ್ನು ನೀಡದಿದ್ದ ಬಗ್ಗೆ ಕೃತಜ್ಞತೆಯು ವ್ಯಕ್ತವಾಯಿತು. ಸೇವೆಯನ್ನು ನೀಡಿದ್ದರೆ ಮಾಡಲು ಆಗುತ್ತಿಲ್ಲ ಎಂದು ದುಃಖವಾಗುತ್ತಿತ್ತು ಹಾಗೂ ನಿಯಮಿತವಾಗಿ ನಡೆಯುವ ನಾಮವು ಕಡಿಮೆಯಾಗುತ್ತಿತ್ತು. ಸತತವಾಗಿ ನಾಮಜಪ ಮಾಡಲೆಂದು ನನಗೆ ಗುರು ದೇವರು ಸೇವೆಯನ್ನು ನೀಡಲಿಲ್ಲ.
೨ಆ.ಮನಸ್ಸಿನಲ್ಲಿ ಹಿಂದೂ ಧರ್ಮ ಜಾಗೃತಿ ಸಭೆಯ ವಿಚಾರ ಬರುವುದು ಹಾಗೂ ಅದಕ್ಕೆ ಸಂಬಂಧಿಸಿದ ಸೇವೆ ದೊರೆಯುವುದು: ಅಕ್ಟೋಬರ್ ೨೦೧೦ ರಲ್ಲಿ ನನಗೆ ಪ್ರತಿದಿನ ‘ದೇವರೇ, ಬೆಳಗಾವಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆಯಿದೆ. ಯಾವುದೇ ಸೇವೆಯನ್ನು ಮಾಡಲು ಆಗದಂತಹ ಅವಸ್ಥೆಯಲ್ಲಿ ನಾನಿದ್ದೇನೆ. ನಾನು ಪ್ರಾರ್ಥನೆ ಹಾಗೂ ನಾಮಜಪವನ್ನು ಮಾಡುತ್ತೇನೆ’ ಎಂದೆನಿಸುತ್ತಿತ್ತು. ಎರಡೇ ದಿನಗಳಲ್ಲಿ ಶ್ರೀ.ಪ್ರಸಾದ ಹಳದಣಕರರು ದೂರವಾಣಿಯ ಮೂಲಕ ‘ಕಳೆದ ೬ತಿಂಗಳ ದೈನಿಕದಲ್ಲಿನ ಧರ್ಮ ಹಾಗೂ ರಾಷ್ಟ್ರ ದ್ರೋಹದ ಕುರಿತಾದ ಅನೇಕ ಘಟನೆಗಳ ಲೇಖನವನ್ನು ಕತ್ತರಿಸಿ ಕಡತವನ್ನು ಮಾಡುವ ಸೇವೆಯನ್ನು ನೀವು ಮಾಡಬಹುದೇ?’ ಎಂದು ಕೇಳಿದರು. ಈ ಸೇವೆಗಾಗಿ ಪ.ಪೂ.ಡಾಕ್ಟರರ ಚರಣಗಳಲ್ಲಿ ಕೃತಜ್ಞತೆಯು ವ್ಯಕ್ತವಾಯಿತು. ಪ್ರಕೃತಿಯು ಸಹಕರಿಸಿದಂತೆ ಸೇವೆಯನ್ನು ಮಾಡುತ್ತಿದ್ದೆನು. ೩೧.೧೦.೨೦೧೦ ರಂದು ಪ.ಪೂ. ಡಾಕ್ಟರರು ಸೇವೆಯನ್ನು ಪೂರ್ಣಗೊಳಿಸಿದರು. - ಸೌ. ಮಾಧವಿ ಘಾಟೆ, ಬೆಳಗಾವಿ.
೩.ಆಸ್ಪತ್ರೆಯಲ್ಲಿ ಸೌ.ಘಾಟೆ ಕಾಕೂರವರಿಗೆ ಬಂದಂತಹ ಅನುಭೂತಿಗಳು
೧.ಆಸ್ಪತ್ರೆಯಲ್ಲಿ ಪ.ಪೂ.ಡಾಕ್ಟರ ಹಾಗೂ ಪ.ಪೂ.ಭಕ್ತರಾಜ ಮಹಾರಾಜರ ಛಾಯಾಚಿತ್ರವನ್ನು ಅಲ್ಲಿನ ಕಪಾಟಿನ ಮೇಲೆ ಆಸನವನ್ನು ಹಾಕಿಡುವುದು ಹಾಗೂ ರಾತ್ರಿ ಕನಸಿನಲ್ಲಿ ಪ.ಪೂ. ಡಾಕ್ಟರರು ಬಂದು ಕುಳಿತುಕೊಂಡಿರುವುದು ಕಾಣಿಸುವುದು : ಏಪ್ರಿಲ್ ೨೦೧೦ ರಂದು ನನ್ನನ್ನು ಶುಶ್ರೂಶೆಗಾಗಿ ಈಶ್ವರಪುರ (ಇಸ್ಲಾಂಪುರ)ದಲ್ಲಿನ ಆಯುರ್ವೇದಿಕ ಆಸ್ಪತ್ರೆಗೆ ಸೇರಿಸಲಾಯಿತು. ಪ.ಪೂ. ಡಾಕ್ಟರರ ಕೃಪೆಯಿಂದ ಆಸ್ಪತ್ರೆಯಲ್ಲಿ ಕಾಲಿಡುವಾಗಲೇ ನನಗೆ ಚಂದನದ ಸುಗಂಧದ ಅನುಭೂತಿ ಬಂದಿತು. ನಾನು ಉಪಾಯದ ಎಲ್ಲ ಸಾಧನಗಳನ್ನು ಹಾಗೂ ಪ.ಪೂ.ಡಾಕ್ಟರರ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದೆನು. ಮೂಲೆಯಲ್ಲಿ ಆಸ್ಪತ್ರೆಯವರ ಕಪಾಟಿತ್ತು. ನಾನು ಅದರ ಮೇಲೆ ಬಟ್ಟೆಯನ್ನು ಹಾಸಿ ಎರಡೂ ಛಾಯಾಚಿತ್ರಗಳನ್ನು ಇಟ್ಟೆನು. ಆ ರಾತ್ರಿ ನಾನೊಂದು ಕನಸು ಕಂಡೆನು. ಅದರಲ್ಲಿ ಪ.ಪೂ.ಡಾಕ್ಟರರು ಕೋಣೆಗೆ ಬಂದರು. ನಾನು ಅವರಿಗೆ ಕುಳಿತುಕೊಳ್ಳಲು ಹೇಳಿದೆನು. ಅವರು ಕಾಲುಗಳನ್ನು ಅತ್ಯಂತ ಚಿಕ್ಕದಾಗಿ ಮಡಚಿ ಮೂಲೆಯ ಕಪಾಟಿನ ಮೇಲೆ ಕುಳಿತರು. ‘ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ’ ಎಂದು ಹೇಳಿದರು. ಆಗ ಎಚ್ಚರವಾದಾಗ ‘ಗುರುರಾಯಾ, ನೀವು ನನಗಾಗಿ ಬಂದಿದ್ದೀರಿ ಹಾಗೂ ಚಿಕ್ಕ ಕಪಾಟಿನ ಮೇಲೆ ಕುಳಿತಿದ್ದೀರಿ’ ಎಂದೆನಿಸಿ ಬಹಳ ಕೃತಜ್ಞತೆಯೆನಿಸಿತು.
೨.ಮರುದಿನ ಪ.ಪೂ. ದೇಶಪಾಂಡೆ ಬಾಬಾರವರು ಆಸ್ಪತ್ರೆಯಲ್ಲಿ ತಿರುಗಾಡುತ್ತಿರುವಂತೆ ಕಾಣಿಸಿದರು. ಮೂರನೇ ದಿನ ಪುನಃ ಪ.ಪೂ.ಡಾಕ್ಟರರು ತಿರುಗಾಡುತ್ತಿರುವಂತೆ ಕಾಣಿಸಿದರು. ನನಗೆ ಸತತವಾಗಿ ಅವರ ಅಸ್ತಿತ್ವದ ಅರಿವಾಗುತ್ತಿತ್ತು. ಬರುವಂತಹ ಎಲ್ಲ ವೈದ್ಯರು ವಿದ್ಯಾರ್ಥಿ ಗಳಾಗಿದ್ದರು. ನನಗೆ ನನ್ನ ಗುರುದೇವರು ಅವರಿಗೆ ಸಾಧನೆಯನ್ನು ಹೇಳುವ ಅವಕಾಶವನ್ನೂ ದೊರಕಿಸಿಕೊಟ್ಟರು.
೩.ಬೇಸಿಗೆಯಲ್ಲಿ ಕೋಣೆಯಲ್ಲಿ ಪಂಖವಿಲ್ಲದಿದ್ದರೂ ಅಲ್ಲಿ ತಣ್ಣನೆಯ ಗಾಳಿ ಬಂದು ನಿದ್ದೆ ಬರುವುದು: ಮೇ ೨೦೧೦ ರಂದು ಬೆಳಗಾವಿಯಲ್ಲಿ ನಾನು ಬೆಳಗ್ಗಿನಿಂದ ಸಂಜೆಯ ವರೆಗೆ ಶುಶ್ರೂಶೆಗಾಗಿ ಉಳಿಯುತ್ತಿದ್ದ ಆಸ್ಪತ್ರೆಯ ಕೋಣೆಯಲ್ಲಿ ಬೇಸಿಗೆಯಲ್ಲಿಯೂ ತಂಪಾದಗಾಳಿ ಬರುತ್ತಿತ್ತು ಹಾಗೂ ನನಗೆ ನಿದ್ದೆ ಬರುತ್ತಿತ್ತು. ಆಗ ‘ಗುರುದೇವಾ, ನೀವು ನನ್ನ ಬಗ್ಗೆ ಎಷ್ಟು ಕಾಳಜಿಯನ್ನು ವಹಿಸುತ್ತಿದ್ದೀರಿ. ನನಗೆ ಪಂಖವಿಲ್ಲದಿದ್ದರೆ ಕುಳಿತುಕೊಳ್ಳಲು ಸಹ ಆಗುವುದಿಲ್ಲ ಎಂಬುದನ್ನು ತಿಳಿದುಕೊಂಡು ಬೇಸಿಗೆಯಲ್ಲಿ ತಂಪಾದ ಗಾಳಿ ಬರುವ ಕೋಣೆಯನ್ನು ನೀಡಿದಿರಿ ಎಂದೆನಿಸಿ ಕೃತಜ್ಞತೆಯಿಂದ ನನಗೆ ಭಾವಜಾಗೃತಿಯಾಗುತ್ತಿತ್ತು.
No comments:
Post a Comment