ಅಂಕೋಲಾದಲ್ಲಿ ಪುರಾತನ ದೇವಸ್ಥಾನವನ್ನು ಕೆಡಹುವುದರ ವಿರುದ್ಧ ಹಿಂದೂಗಳ ಆಂದೋಲನ

ಮುಂದುವರಿದ ರಾಜ್ಯ ಭಾಜಪ ಸರಕಾರದ ಹಿಂದೂದ್ರೋಹ!
 ಅಂಕೋಲಾ: ಸರಕಾರವು ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಮಾಸ್ತಿ ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮಾಡುವ ನೆಪದಲ್ಲಿ ಪುರಾತನ ಕಾಲದಿಂದ ಇರುವ ಮಹಾಸತಿ ದೇವಸ್ಥಾನವನ್ನು ಕೆಡವಲು ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಸ್ಥಳೀಯ ಹಿಂದೂಗಳು ಆಂದೋಲನ ಪ್ರಾರಂಭಿಸಿದ್ದರು. ಇತ್ತೀಚೆಗಷ್ಟೇ ನೂರಾರು ಹಿಂದೂಗಳು ಸರಕಾರದ ಕ್ರಮವನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ‘ರಸ್ತೆ ತಡೆ’ ಆಂದೋಲನ ನಡೆಸಿದರು.
ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ.ರಮಾನಂದ ನಾಯಕ ಇವರು ಮಾತನಾಡುತ್ತಾ, ‘ನೂರಾರು ವರ್ಷ ಗಳಿಂದ ರಾಜ್ಯದ ಸಾವಿರಾರು ಭಕ್ತರ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರವಾಗಿರುವ ಮಹಾಸತಿ ದೇವಸ್ಥಾನವನ್ನು ಕೆಡವಲು ನಮ್ಮೆಲ್ಲರ ತೀವ್ರ ವಿರೋಧವಿದೆ. ಹಿಂದೂಗಳ ವಿರೋಧವಿರುವಾಗಲೂ ಸರಕಾರವು ದೇವಸ್ಥಾನಗಳನ್ನು ಕೆಡಹುವ ಕಾರ್ಯ ಕೈಗೊಂಡರೆ ಬರುವ ಕಾಲದಲ್ಲಿ ನಮ್ಮ ಹೋರಾಟವು ಇನ್ನೂ ತೀವ್ರವಾಗಿ ನಡೆಯುವುದು ಮತ್ತು ನಾವು ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

No comments:

Post a Comment