‘ಹಿಂದೂ ಸಂಸ್ಕೃತಿಯನ್ನು ದೂಷಿಸುವಂತಹ ದುರಾಚಾರಿ ವರ್ತನೆಯಿಂದಾಗಿ ಪಾಪದ ಕೊಡ ತುಂಬುತ್ತಿರುವುದರಿಂದ ಅವತಾರೀ ಕಾರ್ಯ ಮಾಡುವ ಅವಶ್ಯಕತೆಯಿದೆ’ ಎನ್ನುವ ಭವಿಷ್ಯವಾಣಿ ಹೇಳುವ ಪ.ಪೂ. ಡಾಕ್ಟರರ ಉದ್ಗಾರ!ಡಾ.ಆಠವಲೆ: ‘ಹಿಂದೂ ಸಂಸ್ಕೃತಿ’ಯನ್ನು ‘ಬ್ರಾಹ್ಮಣರ ಸಂಸ್ಕೃತಿ’ ಎಂದು ಹೇಳಿ ಹಿಂದೂಗಳನ್ನು ಹಿಂದೂ ಸಂಸ್ಕೃತಿಯಿಂದ ದೂರ ಕೊಂಡೊಯ್ದು ಸಂಸ್ಕೃತಿಹೀನ, ಕ್ರೈಸ್ತ ಅಥವಾ ಮುಸಲ್ಮಾನರ ಸಂಸ್ಕೃತಿ ಯುಕ್ತಗೊಳಿಸುವವರು ಧರ್ಮದ್ರೋಹಿಗಳಾಗಿದ್ದಾರೆ!’ (ಚೈತ್ರ ಶುಕ್ಲಚತುರ್ದಶಿ (೨೯.೩.೨೦೧೦))
೨.‘ಓರ್ವ ವಿದ್ವಾಂಸ’ರ ಭಾಷ್ಯೆ
೨ಅ.ಹಿಂದೂ ಸಂಸ್ಕೃತಿಯ ಮಹತ್ವ ಹಾಗೂ ಅದರಿಂದ ನಿರ್ಮಾಣವಾಗುವ ಜನ್ಮ ಹಿಂದೂಗಳು:
೧.ಭಾರತದ ಹಿಂದೂ ಸಂಸ್ಕೃತಿಯು ಕುಲಾಚಾರ, ರಾಷ್ಟ್ರಾಚಾರ, ಧರ್ಮಾಚಾರ, ಸದಾಚಾರ, ಸದ್ವರ್ತನೆ ಹಾಗೂ ಸತ್ಕರ್ಮ ಇತ್ಯಾದಿ ಧೋರಣೆಗಳಿಂದ ಅಲಂಕೃತಗೊಂಡಿದೆ.
೨.ಈ ಸಂಸ್ಕೃತಿಯ ಮೂಲಕ ಜೀವಕ್ಕೆ ಹುಟ್ಟಿನಿಂದಲೇ ಈ ಧೋರಣೆಗಳನ್ನು ಅಂಗೀಕರಿಸುವ ವೃತ್ತಿಯು ಆರಂಭವಾಗಿರುತ್ತದೆ. ಆದ್ದರಿಂದ ಆ ಜೀವವು ನೈಜವಾಗಿ ಪ್ರಬುದ್ಧವಾಗಲು ಸಾಧ್ಯವಾಗುತ್ತದೆ.
೩.ಪ್ರಬುದ್ಧವಾಗುವುದು ಎನ್ನುವುದರ ನಿಜವಾದ ಅರ್ಥವೇನೆಂದರೆ, ನೈತಿಕ ಹಾಗೂ ಅನೈತಿಕ ಕರ್ಮಗಳಲ್ಲಿನ ವ್ಯತ್ಯಾಸ ತಿಳಿದು ಸಾಧನೆಯ ಮಹತ್ವವು ಅರಿವಾಗಿ ಈಶ್ವರನತ್ತ ಹೇಗೆ ಹೋಗುವುದು ಎಂಬ ಬಗ್ಗೆ ಬುದ್ಧಿಯನ್ನು ಸಮರ್ಪಿಸಿಕೊಳ್ಳುವುದು.
೪.ಕುಲಾಚಾರದಲ್ಲಿ ಇಷ್ಟದೇವತೆಯ ಉಪಾಸನೆ ಮಾಡಲು ಕಲಿಸುತ್ತಾರೆ. ಇದನ್ನು ‘ಕರ್ಮಕಾಂಡ’ ಎಂಬ ಹೆಸರಿದೆ.
೫.ಕರ್ಮಕಾಂಡದಿಂದ ಉಪಾಸನಾಕಾಂಡವು ಆರಂಭವಾಗುತ್ತದೆ. ಉಪಾಸನಾಕಾಂಡದಿಂದಲೇ ಜೀವಕ್ಕೆ ಆಚಾರಧರ್ಮದ ಶಿಕ್ಷಣ ದೊರೆಯುತ್ತದೆ, ಇದನ್ನೇ ‘ಧರ್ಮ ಶಿಕ್ಷಣ’ ಎಂದು ಹೇಳುತ್ತಾರೆ.
೬.ಈ ಪ್ರಕ್ರಿಯೆಯಲ್ಲಿ ಜೀವವು ಧರ್ಮಧೋರಣೆಯುಕ್ತವಾಗುತ್ತದೆ; ಅಂದರೆ ಅದಕ್ಕೆ ಧಾರ್ಮಿಕ ನೈತಿಕಮೌಲ್ಯಗಳ ಆಚರಣೆ ಸದೃಶ್ಯ ಮಹತ್ವ ಹಾಗೂ ಆ ಪ್ರಕಾರ ಕೃತಿ ಮಾಡುವುದರ ಮಹತ್ವವು ತಿಳಿಯುತ್ತದೆ.
೭.ಇಲ್ಲಿಂದಲೇ ಅದರ ಸತ್ತ್ವಗುಣಯುಕ್ತ ಕರ್ಮವು ಆರಂಭವಾಗುತ್ತದೆ, ಇದನ್ನು ‘ಸಾಧನೆ’ಯೆಂದು ಹೇಳುತ್ತಾರೆ.
೮.ಮಾನವ ಧರ್ಮವೆಂದರೆ ಸಾಮಾಜಿಕತೆಯಲ್ಲ, ಅದು ಮಾನವನಲ್ಲಿನ ಈಶ್ವರತ್ತ್ವವನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ.
೯.ಹಿಂದೂ ಧರ್ಮದಲ್ಲಿನ ಆಚಾರಗಳು ಸಾಧನೆಗೆ ಪೋಷಕ ಹಾಗೂ ಪೂರಕ ವಾಗಿರುವುದರಿಂದ ಈಶ್ವರಪ್ರಾಪ್ತಿಗಾಗಿ ಆಚಾರಗಳ ಪಾಲನೆ ಮಾಡುವುದೇ ಮಾನವನ ನಿಜವಾದ ಧರ್ಮವಾಗಿದೆ, ಇದಕ್ಕೆ ‘ಮಾನವ ಧರ್ಮ’ವೆಂದು ಹೇಳಲಾಗುತ್ತದೆ.
೨ ಆ. ಧರ್ಮಾಚಾರದ ಮಹತ್ವ
೧.ಧರ್ಮಾಚಾರದಿಂದಲೇ ಚಿತ್ತದಲ್ಲಿ ಸದಾಚಾರಯುಕ್ತ ಸಂಸ್ಕಾರವಾಗಲು ಸಹಾಯವಾಗುತ್ತದೆ. ಇದರಿಂದಲೇ ಜೀವವು ಸದ್ಗುಣ ಸಂಪನ್ನವಾಗುತ್ತದೆ.
೨.ಸದ್ವರ್ತನೆಯಿಂದ ಸತ್ಕರ್ಮ ನಡೆಯುತ್ತದೆ. ಸತ್ಕರ್ಮವೇ ವಾಯುಮಂಡಲವನ್ನು ಶುದ್ಧೀಕರಿಸಲು ಪೂರಕವಾಗುತ್ತದೆ.
೩.ಹಿಂದೂ ಧರ್ಮವು ಜೀವವನ್ನು ಸತ್ಕರ್ಮಿಯನ್ನಾಗಿಸುತ್ತದೆ.
೨ಇ.‘ಬ್ರಾಹ್ಮಣ’ ಈ ಸಂಜ್ಞೆಯ ಅರ್ಥ ಮತ್ತು ಅದರ ಕರ್ಮ
೧.ಪ್ರತಿಯೊಬ್ಬ ಹಿಂದೂವು ಸಾಧನೆಯ ಶಕ್ತಿಯೊಂದಿಗೆ ಮುಂದೆ ಮುಂದೆ ಪ್ರವಾಸ ಮಾಡುತ್ತಿರುತ್ತಾನೆ. ಈ ಮಾರ್ಗಕ್ರಮಣದಲ್ಲಿ ಅವನು ತಪಶ್ಚರ್ಯಯುಕ್ತ ಜೀವನ ನಡೆಸು ತ್ತಾನೆ. ಇದನ್ನು ‘ಬ್ರಹ್ಮಕರ್ಮ’ ಎಂದು ಹೇಳುತ್ತಾರೆ.
೨.ತೇಜದ ಈ ಪ್ರಾಬಲ್ಯವೇ ಅವ ನನ್ನು ನಿಜವಾದ ಅರ್ಥದಲ್ಲಿ ‘ಬ್ರಾಹ್ಮಣ’ ನನ್ನಾಗಿಸುತ್ತದೆ.
೩. ಸದ್ವರ್ತನೆ, ಕುಲಾಚಾರಿ, ನೀತಿವಂತ ಹಾಗೂ ಸದಾಚಾರ ಈ ಅಂಗಗಳಿಂದ ನಿರ್ಮಾಣವಾಗುವ ಜೀವವನ್ನು ‘ಬ್ರಾಹ್ಮಣ’ ರೂಪದಲ್ಲಿ ನೋಡಲಾಗುತ್ತದೆ.
೪.ಮನಸ್ಸಿನಲ್ಲಿರುವ ತೇಜಯುಕ್ತ ವಿಚಾರಗಳು ಅವನಿಗೆ ಕ್ಷಾತ್ರತೇಜವನ್ನು ಪೂರೈಸುತ್ತವೆ ಹಾಗೂ ತೇಜಕ್ಕೆ ಸಂಬಂಧಿಸಿದ ಬುದ್ಧಿಯಲ್ಲಿನ ನಿರ್ಣಯಕ್ಷಮತೆಯು ಅವನಿಗೆ ಬ್ರಾಹ್ಮತೇಜವನ್ನು ನೀಡುತ್ತದೆ.
೨ಈ.ಬ್ರಾಹ್ಮಣ ಸಂಸ್ಕೃತಿಯನ್ನು ತುಚ್ಛವಾಗಿ ಪರಿಗಣಿಸುವುದರಿಂದ ಧರ್ಮದ್ರೋಹ ಮಾಡಿದ ಪಾಪ ತಗಲುತ್ತದೆ
೧.ಕೆಲವು ಸಮಾಜಕಂಟಕ ಹಾಗೂ ಧರ್ಮಕಂಟಕರು ಬ್ರಾಹ್ಮಣ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳದೆ ಹಿಂದೂಗಳನ್ನು ಈ ಸ್ತರದಲ್ಲಿ ಅಣಕಿಸುವ, ಹಿಂದೂ ಸಂಸ್ಕೃತಿಯನ್ನು ದೂಷಿಸುವ ಕಾರ್ಯಮಾಡುತ್ತಿದ್ದಾರೆ. ಇದನ್ನು ‘ಧರ್ಮದ್ರೋಹ’ವೆಂದು ಹೇಳಲಾಗಿದೆ.
೨.ಇಂತಹ ದುರಾಚಾರದಿಂದ ೧೦೦ ಅಪರಾಧಗಳು ಪೂರ್ಣಗೊಂಡಾಗ ಪಾಪದ ಪ್ರಮಾಣವು ಮಿತಿಮೀರಿ ಹೋಗುವುದರಿಂದ ಅವತಾರವು ಜನ್ಮ ತಾಳ ಬೇಕಾಗುತ್ತದೆ.
೨ಉ.ಹಿಂದೂಗಳಿಗಾಗಿ ಅವತಾರಿಗಳು ಕಾರ್ಯ ಮಾಡಲೇ ಬೇಕಾಗುವಂತಹ ಪರಿಸ್ಥಿತಿ ಬರುವುದು
೧.ಅವತಾರಿಗಳು ಕಾರ್ಯ ಮಾಡಲು ಆರಂಭಿಸುವ ಸಮಯ ದೂರವಿಲ್ಲ; ಏಕೆಂದರೆ ಧರ್ಮದ್ರೋಹಿಗಳು ಈಗ ಹಿಂದೂಗಳನ್ನು ಕ್ರೈಸ್ತ ಹಾಗೂ ಮುಸಲ್ಮಾನರನ್ನಾಗಿ ಮಾಡುವ ಷಡ್ಯಂತ್ರ ರೂಪಿಸಿ ಅದನ್ನು ಶೀಘ್ರದಲ್ಲಿಯೇ ಕಾರ್ಯಗತಗೊಳಿಸಲು ಆರಂಭಿಸಿದ್ದಾರೆ.
೨.ಹಿಂದೂಗಳಲ್ಲಿ ಧಾರ್ಮಿಕ ಮೌಲ್ಯವು ನಾಶ ಹೊಂದುವ ಪ್ರಮೇಯ ಬಂದೆರಗಿದ್ದರೂ ಹಿಂದೂಗಳು ಇನ್ನೂ ನಿದ್ರೆಯಲ್ಲಿಯೇ ಇದ್ದಾರೆ. ಆದುದರಿಂದ ಈಗ ಧರ್ಮದ ಉದ್ಧಾರಕ್ಕಾಗಿ ಅವತಾರವೇ ಕಾರ್ಯ ಮಾಡಬೇಕಾಗಿದೆ.
(ಸೌ.ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ಅಧಿಕ ವೈಶಾಖ ಕೃ. ೨, ಕಲಿಯುಗ ವರ್ಷ ೫೧೧೨ (೩೦.೪.೨೦೧೦), ಬೆಳಗ್ಗೆ ೯.೪೬)
No comments:
Post a Comment