ಕರ್ನಾಟಕ ರಾಜ್ಯದಲ್ಲಿ ಸಂಘಪರಿವಾರದ ಕೆಲವು ಕಾರ್ಯಕರ್ತರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಹಾಗೂ ಸನಾತನದ ಸಾಧಕರಿಗೆ ಧರ್ಮಪ್ರಸಾರ ಮಾಡುತ್ತಿರುವಾಗ ಬಂದಂತಹ
ಕಹಿ ಅನುಭವಗಳು
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ೪ ಡಿಸೆಂಬರ್ ೨೦೧೦ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲಿ ಪ್ರಸಾರ ಮಾಡುತ್ತಿರುವಾಗ ಸಂಘ ಪರಿವಾರದ ಸಂಘಟನೆಯ ಕೆಲವು ಕಾರ್ಯಕರ್ತರಿಂದ ಬಂದಂತಹ ಕಹಿ ಅನುಭವಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಪ್ರಸಂಗ ೧
ಬೆಂಗಳೂರಿನಲ್ಲಿ ಸಂಘದ ಕಾರ್ಯಕ್ರಮದಲ್ಲಿ ಸಂಘದ ಕೆಲವು ಸ್ವಯಂಸೇವಕರು ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಧರ್ಮಜಾಗೃತಿ ಸಭೆಯ ಆಮಂತ್ರಣ ಪತ್ರಿಕೆಯನ್ನು ಹಂಚಲು ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯಕರ್ತರನ್ನು ತೀವ್ರವಾಗಿ ವಿರೋಧಿಸಿ ಅವರನ್ನು ಹೊರದಬ್ಬುವುದು; ಆದರೆ ಓರ್ವ ಸ್ವಯಂ ಸೇವಕನು ಸಭೆಯ ಯಶಸ್ಸಿಗಾಗಿ ಕೊನೆಯ ವರೆಗೆ ಸಹಾಯ ಮಾಡುವುದು!ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯ ಆಯೋಜನೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಕಾರ್ಯಕರ್ತನೊಂದಿಗೆ ಸಂಪರ್ಕವಾಯಿತು. ಅವರು ಸಮಿತಿಯ ಕಾರ್ಯದಿಂದ ಬಹಳ ಪ್ರಭಾವಿತರಾದರು ಹಾಗೂ ಸಭೆಯ ಬಗ್ಗೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಬಗ್ಗೆ ತಿಳಿದುಕೊಂಡರು.
ಆ ಸಮಯದಲ್ಲಿಯೇ ರಾ.ಸ್ವ. ಸಂಘದ ವತಿಯಿಂದ ಅವರ ರಾಜ್ಯಸ್ತರದ ನೇತಾರರ ಉಪಸ್ಥಿತಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಮಿತಿಯ ಕಾರ್ಯದಲ್ಲಿ ಸಹಭಾಗಿಯಾಗಿದ್ದ ಸಂಘದ ಓರ್ವ ಕಾರ್ಯಕರ್ತನು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರನ್ನು ಆ ಕಾರ್ಯಕ್ರಮಕ್ಕೆ ಬರಲು ಆಮಂತ್ರಿಸಿದ್ದನು. ಅದರಂತೆ ಸಮಿತಿಯ ಶ್ರೀ.ಚಂದ್ರು ಮೊಗೇರ ಹಾಗೂ ಶ್ರೀಮತಿ ಪುಷ್ಪ ಇವರಿಬ್ಬರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಿತಿಗೆ ಸಹಾಯ ಮಾಡುವ ಕಾರ್ಯಕರ್ತನು ಕಾರ್ಯಕ್ರಮದಲ್ಲಿ ಧ್ವನಿವರ್ಧಕದಲ್ಲಿ ಅವರ ಪರಿಚಯವನ್ನು ಮಾಡಿದನು. ಅನಂತರ ಸಮಿತಿಯ ಇಬ್ಬರು ಕಾರ್ಯಕರ್ತರು ಕರಪತ್ರವನ್ನು ಹಂಚಲು ಆರಂಭಿಸಿದರು. ಕರಪತ್ರದಲ್ಲಿ ಸನಾತನ ಸಂಸ್ಥೆಯ ವಕ್ತಾರೆ ಸೌ.ಸುಮಾ ಮಂಜೇಶರ ಹೆಸರನ್ನು ಓದಿ ಕೆಲವು ಸ್ವಯಂಸೇವಕರು ಗಲಾಟೆ ಮಾಡಲು ಆರಂಭಿಸಿದರು. ಈ ಸ್ವಯಂಸೇವಕರು ಶ್ರೀ. ಚಂದ್ರು ಹಾಗೂ ಸೌ.ಪುಷ್ಪರಿಗೆ ಕರಪತ್ರದ ವಿತರಣೆ ಮಾಡುವುದನ್ನು ನಿಲ್ಲಿಸಲು ಹೇಳಿದರು. ಆ ಸ್ವಯಂಸೇವಕರು ಸಿಟ್ಟಿನಿಂದ “ನೀವು ಸ್ವತಃ ಜನರನ್ನು ಒಗ್ಗೂಡಿಸಿ ಹಾಗೂ ಅವರ ಮುಂದೆ ನಿಮ್ಮ ವಿಷಯವನ್ನು ಮಂಡಿಸಿ ಹಾಗೂ ನಾವು ಒಗ್ಗೂಡಿಸಿದಂತಹ ಜನರ ಮುಂದೆ ವಿಷಯವನ್ನಿಡ ಬೇಡಿರಿ" ಎಂದು ಹೇಳಿದರು. ಆ ಸ್ವಯಂ ಸೇವಕರು ಸಮಿತಿಯ ಇಬ್ಬರು ಕಾರ್ಯಕರ್ತರನ್ನು ಸಭಾಗೃಹದಿಂದ ಹೊರಗೆ ತಳ್ಳಿದರು. (‘ಅತಿಥಿ ದೇವೋಭವ|’ ಇದು ಭಾರತೀಯ ಸಂಸ್ಕೃತಿಯಾಗಿದೆ. ಅದನ್ನು ಮರೆತು ಹಿಂದುತ್ವದ ಕಾರ್ಯವನ್ನು ಮಾಡುವವರನ್ನು ವಿರೋಧಿಸುವ ಇಂತಹ ಸ್ವಯಂಸೇವಕರಿಗೆ ಸಂಘದ ವರಿಷ್ಠ ನೇತಾರರು ಸುಸಂಸ್ಕೃತಿ, ಸಭ್ಯತೆಯನ್ನು ಕಲಿಸುವರೇ?- ಸಂಪಾದಕರು)
ಸಮಿತಿಯ ಕಾರ್ಯಕ್ಕೆ ಸಹಾಯ ಮಾಡುವ ಸ್ವಯಂಸೇವಕನು ಧೈರ್ಯವಾಗಿ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುವುದು: ಇದೇ ಸಮಯದಲ್ಲಿ ಸಮಿತಿಗೆ ಸಹಾಯ ಮಾಡುವ ಸಂಘದ ಸ್ವಯಂ ಸೇವಕನು ಶ್ರೀ.ಚಂದ್ರು ಹಾಗೂ ಸೌ.ಪುಷ್ಪರಲ್ಲಿ ‘ನೀವು ಹಿಂದೂ ಧರ್ಮಜಾಗೃತಿ ಸಭೆಯ ಕಾರ್ಯವನ್ನು ಮುಂದುವರಿಸಿ. ಅವರೇನಾದರೂ ತೊಂದರೆ ಕೊಟ್ಟರೆ ನೋಡಿಕೊಳ್ಳೋಣ.’ ಎಂದನು. (ತನ್ನ ಸಂಘಟನೆಯ ಕಾರ್ಯಕ್ರಮದಲ್ಲಿ ಹಿಂದುತ್ವಕ್ಕಾಗಿ ನಿರಪೇಕ್ಷವಾಗಿ ಕಾರ್ಯ ಮಾಡುವ ಸಮಿತಿಯ ಪಕ್ಷವನ್ನು ಎತ್ತಿ ಹಿಡಿಯುವ ಇಂತಹ ಕಾರ್ಯಕರ್ತರೇ ಪ್ರಭಾವಿ ಹಿಂದೂ ಸಂಘಟನೆಯನ್ನು ಮಾಡುವರು ಹಾಗೂ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ತಮ್ಮ ಸಹಯೋಗ ನೀಡುವರು! -ಸಂಕಲನಕಾರರು) ಸಂಘದ ಕಾರ್ಯ ಕ್ರಮದಲ್ಲಿ ಈ ರೀತಿ ನಡೆದರೂ ಸಮಿತಿಗೆ ಸಹಾಯ ಮಾಡುವ ಈ ಸ್ವಯಂ ಸೇವಕನು ಹಿಂದೂ ಧರ್ಮಜಾಗೃತಿ ಸಭೆಯ ಯಶಸ್ಸಿಗಾಗಿ ತನ್ನ ಸಹಾಯವನ್ನು ಮುಂದುವರಿಸಿದನು ಹಾಗೂ ಇಂದೂ ಸಮಿತಿಯ ಕಾರ್ಯಕರ್ತರನ್ನು ಆಗಾಗ ಸಂಪರ್ಕಿಸುತ್ತಿದ್ದಾನೆ.

ಪ್ರಸಂಗ ೨
‘ಹಿಂದೂ ಜನಜಾಗೃತಿ ಸಮಿತಿಯು ಸಂಘವನ್ನು ವಿರೋಧಿಸುತ್ತದೆ’ ಎಂದು ಹೇಳಿ ಸ್ವಯಂಸೇವಕರು ದೇವಸ್ಥಾನದಲ್ಲಿದ್ದ ಧರ್ಮಶಿಕ್ಷಣ ಫಲಕವನ್ನು ತೆಗೆಯಲು ಪುರೋಹಿತರಿಗೆ ಹೇಳುವುದು, ಸಂಘದ ಸ್ವಯಂಸೇವಕರ ಕೃತಿಯನ್ನು ಓರ್ವ ಹಿಂದೂ ಧರ್ಮಾಭಿಮಾನಿ ವಿರೋಧಿಸುವುದು ಹಾಗೂ ಸಮಿತಿಯ ಕಾರ್ಯವನ್ನು ಬೆಂಬಲಿಸುವುದು; ಆದರೆ ಧರ್ಮದ್ರೋಹಿ ಪುರೋಹಿತರು ಫಲಕವನ್ನು ತೆಗೆದು ಬಿಸಾಡುವುದುಮಂಡ್ಯದ ಸಂತೆ ಬೀದಿಯ ಒಂದು ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಪ್ರಕಾಶಿಸಿದಂತಹ ಒಂದು ಧರ್ಮಶಿಕ್ಷಣ ಫಲಕವನ್ನು ಹಾಕಲಾಗಿತ್ತು. ಅಲ್ಲಿಯ ಸಂಘದ ಓರ್ವ ಸ್ವಯಂಸೇವಕನು ‘ಈ ಸಂಸ್ಥೆಯು ನಮ್ಮ ವಿರೋಧಿಯಾಗಿದೆ. ಅವರ ಫಲಕವನ್ನು ಇಲ್ಲಿ ಹಾಕಬಾರದು’ ಎಂದು ಹೇಳಿ ಅಲ್ಲಿಯ ಪುರೋಹಿತರಿಗೆ ಫಲಕವನ್ನು ತೆಗೆಯಲು ಬೆದರಿಕೆಯನ್ನು ಹಾಕಿದನು. (ಸಂಘದ ಈ ಸ್ವಯಂಸೇವಕ ಗೆ ಧರ್ಮಶಿಕ್ಷಣದ ಫಲಕವು ತಪ್ಪೆಂದು ಕಾಣಿಸುತ್ತಿದ್ದರೆ, ‘ಅವನ ಹಿಂದುತ್ವವು ಹಿಂದೂಗಳನ್ನು ಸೇರಿಸುವುದಲ್ಲ, ಬೇರ್ಪಡಿಸುವುದಾಗಿದೆ’, ಎಂದು ಹೇಳಬೇಕಾಗುವುದು. ಸಂಘ ಪರಿವಾರದ ವರಿಷ್ಠರು ಈ ವೃತ್ತಿಯ ಸ್ವಯಂಸೇವಕನಿಗೆ ಹಿಂದೂ ಸಂಘಟನೆಯ ಆವಶ್ಯಕತೆಯನ್ನು ತಿಳಿಸಿ ಹೇಳುವರೇ?- ಸಂಪಾದಕರು) ಸಂಘದ ಸ್ವಯಂಸೇವಕನ ಈ ಕೃತಿಗೆ ಅಲ್ಲಿಯ ಓರ್ವ ಧರ್ಮಾಭಿಮಾನಿಯು ‘ನೀವು ಪ್ರತಿಯೊಂದು ವಿಷಯದಲ್ಲಿ ರಾಜಕಾರಣವನ್ನು ತರಬೇಡಿ. ಈ ಸಮಿತಿಯು ಧರ್ಮಜಾಗೃತಿಯ ಎಷ್ಟು ದೊಡ್ಡ ಕಾರ್ಯವನ್ನು ಮಾಡುತ್ತಿದೆ. ಅದು ಮಾಡುತ್ತಿರುವ ಕಾರ್ಯವನ್ನು ನೀವು ಮಾಡಬಲ್ಲಿರಾ? ಮಾಡಿ ತೋರಿಸಿ!’ ಎಂದರು. (ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳಲ್ಲಿ ಸಮಿತಿಯ ಕಾರ್ಯದ ಬಗ್ಗೆ ಇರುವಂತಹ ವಿಶ್ವಾಸ ಹಾಗೂ ಈಶ್ವರನ ಅಧಿಷ್ಠಾನದಿಂದಲೇ ಸಮಿತಿಯು ಈ ಕಾರ್ಯವನ್ನು ಮಾಡುತ್ತಿದೆ, ಇದನ್ನು ಸಂಘಪರಿವಾರದ ಸಂಘಟನೆಯು ಗಮನದಲ್ಲಿಡುವುದೇ?- ಸಂಪಾದಕರು) ಆದರೂ ಪುರೋಹಿತರು ಆ ಫಲಕವನ್ನು ಅಲ್ಲಿಂದ ತೆಗೆದರು. (ಧರ್ಮಶಿಕ್ಷಣ ಫಲಕವೆಂದರೆ ಹಿಂದೂಗಳಿಗೆ ಧರ್ಮಾಚರಣೆಯನ್ನು ಕಲಿಸುವ ದೂತ! ಇಂತಹ ಫಲಕವನ್ನು ತೆಗೆಯುವಂತಹ ಪುರೋಹಿತರ ಹಾಗೂ ಇದನ್ನು ಹೇಳಿದಂತಹ ಸ್ವಯಂ ಸೇವಕನ ಮೇಲೆ ಈಶ್ವರನ ಕೃಪೆಯಾಗಬಹುದೇ? ಹಾಗೆಯೇ ಅವರು ಎಂದಾದರೂ ಸಮಾಜದವರಿಂದ ಧರ್ಮಾಚರಣೆಯನ್ನು ಮಾಡಿಸಿಕೊಳ್ಳಬಹುದೇ?- ಸಂಪಾದಕರು) ಆ ಧರ್ಮಾಭಿಮಾನಿಯು ಈಗಲೂ ಸಮಿತಿಯ ಕಾರ್ಯಕರ್ತರ ಸಂಪರ್ಕದಲ್ಲಿದ್ದಾರೆ. ಸಮಿತಿಯ ಕಾರ್ಯಕರ್ತರಿಗೆ ಅವರು ‘ನೀವು ಶ್ರೇಷ್ಠವಾದ ಕಾರ್ಯ ಮಾಡುತ್ತಿರುವಿರಿ. ನೀವು ನಿಮ್ಮ ಕಾರ್ಯವನ್ನು ಮುಂದುವರಿಸಿರಿ. ನಾವೆಲ್ಲರೂ ಸೇರಿ ರಾಷ್ಟ್ರ ಹಾಗೂ ಧರ್ಮ ಕಾರ್ಯವನ್ನು ವಿರೋಧಿಸುವವರ ವಿರೋಧವನ್ನು ಎದುರಿಸೋಣ. ನಾನು ಕೂಡ ನನ್ನ ಒಂದು ಸಂಘಟನೆಯನ್ನು ರೂಪಿಸುತ್ತಿದ್ದೇನೆ. ನಾವೆಲ್ಲ ಸೇರಿ ಧರ್ಮ ವಿರೋಧಕರಿಗೆ ಪಾಠಕಲಿಸೋಣ ಹಾಗೂ ಧರ್ಮಕಾರ್ಯವನ್ನು ಮಾಡೋಣ’ ಎಂದರು.
No comments:
Post a Comment