ಮಂಗಳೂರು :ಫೆಬ್ರವರಿ ೧೩ ರಂದು ಬಾಲಂಭಟ್ ಸಭಾಭವನದಲ್ಲಿ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದ ವರ್ಧಂತ್ಯೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ‘ಸನಾತನ ಪ್ರಭಾತ’ದ ಶ್ರೀ. ಪ್ರಶಾಂತ ಹರಿಹರ ಮತ್ತು ಧರ್ಮಾಭಿಮಾನಿ ಶ್ರೀ. ಹನುಮಂತ ಕಾಮತ ಉಪಸ್ಥಿತರಿದ್ದರು.
ಈ ಸಮಯದಲ್ಲಿ ಸನಾತನ ಪ್ರಭಾತದ ಮಾಹಿತಿಯುಳ್ಳ ದೃಶ್ಯಗಳನ್ನು ಪ್ರೋಜೆಕ್ಟರ್ ಮೂಲಕ ತೋರಿಸಲಾಯಿತು. ಈ ಸಮಯದಲ್ಲಿ ಉಪಸ್ಥಿತರಿದ್ದ ವಾಚಕರು ಸನಾತನ ಪ್ರಭಾತ ತಮ್ಮ ಮನೆಗೆ ಬಂದ ನಂತರ ಆದಂತಹ ಬದಲಾವಣೆಗಳನ್ನು ಹಾಗೂ ಕಾಲಾನುಸಾರ ಆವಶ್ಯಕವಿರುವ ಇಂತಹ ವರ್ತಮಾನಪತ್ರಿಕೆಗಳ ಆವಶ್ಯಕತೆಯ ಬಗ್ಗೆಯೂ ಮುಕ್ತವಾಗಿ ವಿಚಾರವನ್ನು ಮಂಡಿಸಿದರು. ಶ್ರೀ.ಹನುಮಂತ ಕಾಮತರವರು ದೀಪಪ್ರಜ್ವಲಿಸಿ ಸಭೆಯನ್ನು ಉದ್ಘಾಟಿಸಿದರು.ಶ್ರೀ. ಕಾಮತರವರು ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಾ, ‘ಇಂದು ಯಾವುದೇ ಪತ್ರಿಕೆಗಳು ದೇವಸ್ಥಾನಗಳನ್ನು ಬೀಳಿಸುವ ಬಗ್ಗೆ ಮುದ್ರಿಸಲಿಲ್ಲ. ‘ಸನಾತನ ಪ್ರಭಾತ’ ಮಾತ್ರ ಈ ಬಗ್ಗೆ ಜನಜಾಗೃತಿ ಮಾಡಿತು. ಇಂದಿನ ಮಕ್ಕಳಿಗೆ ದೇವತೆಗಳ ಹೆಸರು ಗೊತ್ತಿರುವುದಿಲ್ಲ. ಆದರೆ ನಟ ನಟಿಯರ ಹೆಸರು ಗೊತ್ತಿರುತ್ತದೆ. ಮಕ್ಕಳು ಪ್ರತಿದಿನ ಕಡಿಮೆ ಪಕ್ಷ ಒಂದು ಗಂಟೆಯಾದರೂ ಸನಾತನ ಪ್ರಭಾತ ಓದಲು ಹೇಳಬೇಕು’ ಎಂದರು
ಶ್ರೀ. ಪ್ರಶಾಂತ ಹರಿಹರರವರು ಮಾತನಾಡುತ್ತಾ, ‘ಇಂದು ಸನಾತನ ಪ್ರಭಾತವು ರಾಜಕಾರಣಿಗಳ ಮತ್ತು ಪೊಲೀಸರ ಒತ್ತಡವನ್ನು ಎದುರಿಸಿ ೧೨ ವರ್ಷಗಳನ್ನು ಪೂರೈಸಿದೆ. ಇಂದು ಯಾವುದೇ ದಿನಪತ್ರಿಕೆಯು ಅನುಭವಿಸದಿರುವಷ್ಟು ಹಿಂಸೆಯನ್ನು ಸನಾತನ ಪ್ರಭಾತ ಅನುಭವಿಸಿದೆ. ಇಂದು ನಿರ್ಭಂಧದ ಕಾರ್ಮೋಡದಲ್ಲಿರುವ ‘ಸನಾತನ ಪ್ರಭಾತ’ ಕೇವಲ ಶ್ರೀಕೃಷ್ಣನ ಕೃಪೆಯಿಂದ ಧರ್ಮಜಾಗೃತಿಯ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ’ ಎಂದರು.

No comments:
Post a Comment