ನ್ಯಾಯಾಲಯ ತನ್ನ ಹದ್ದುಬಸ್ತಿನಲ್ಲಿರಬೇಕು!

ಜಾತ್ಯತೀತ ರಾಜಕಾರಣಿಗಳ ದುರಾಡಳಿತದಿಂದಲೇ ನ್ಯಾಯಾಲಯಕ್ಕೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬೇಕಾಗುತ್ತಿದೆ.
ಆದರೆ ಪ್ರಧಾನಮಂತ್ರಿಗಳು ಹೇಳುವುದು ಮಾತ್ರ...
ನ್ಯಾಯಾಲಯ ತನ್ನ ಹದ್ದುಬಸ್ತಿನಲ್ಲಿರಬೇಕು!
ಭಾಗ್ಯನಗರ: ನ್ಯಾಯಾಲಯಕ್ಕೆ ದೊರಕಿದ ನ್ಯಾಯದ ಸಮೀಕ್ಷೆಯ ಅಧಿಕಾರವನ್ನು ಸರಕಾರದ ಇತರ ವಿಭಾಗಗಳಿಗೆ ದೊರೆತ ಸಂವಿಧಾನಾತ್ಮಕ ಅಧಿಕಾರಗಳನ್ನು ಸಂಕೋಚಕ್ಕೀಡು ಮಾಡಲು ಉಪಯೋಗಿಸಬಾರದು. ನ್ಯಾಯ ವ್ಯವಸ್ಥೆಯು ತನ್ನ ಹದ್ದುಬಸ್ತಿನಲ್ಲಿರಬೇಕು ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗರವರು ಹೇಳಿದ್ದಾರೆ. ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ಸರಕಾರದ ಕಾರುಬಾರನ್ನು ಟೀಕಿಸಿದಕ್ಕಾಗಿ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
(ಸರಕಾರವು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದಿರುವುದರಿಂದಲೇ, ನ್ಯಾಯಾಲಯವು ಆಡಳಿತವನ್ನು ವಿವಿಧ ಪ್ರಕರಣಗಳಲ್ಲಿ ಟೀಕಿಸಿದೆ. ‘೨-ಜಿ ಸ್ಪೆಕ್ಟ್ರಂ’ ಹಗರಣದಲ್ಲಿ ೧ಲಕ್ಷ ೭೬ಸಾವಿರ ಕೋಟಿ ರೂಪಾಯಿಗಳ ಹಾನಿಯಾಗಿಯೂ ಈ ಪ್ರಕರಣದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಎಂದು ಸಿಂಗ ಮತ್ತು ಅವರ ಪಕ್ಷವು ಹೇಳಿಕೆ ನೀಡಿತ್ತು. ಕೆಲವು ದೇಶದ್ರೋಹಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ದೇಶವನ್ನು ದರೋಡೆಗೈದು  ವಿದೇಶಿ ಬ್ಯಾಂಕಿನಲ್ಲಿ ಇಟ್ಟಿರುವ ಕಪ್ಪು ಹಣದ ವಿಷಯದಲ್ಲಿಯೂ ಜಾತ್ಯತೀತ ರಾಜಕಾರಣಿಗಳು ‘ಕಪ್ಪು ಹಣದ ಅಂಶ ಕ್ಷುಲ್ಲಕವಾಗಿದೆ’, ಎಂದು ಹೇಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನ್ಯಾಯಾಲಯವು ಒಂದು ವೇಳೆ ‘೨-ಜಿ ಸ್ಪೆಕ್ಟ್ರಂ’ನ ವಿಚಾರಣೆಯನ್ನು ಕೇಂದ್ರೀಯ ತನಿಖಾದಳದಿಂದ ತನ್ನ ಕೈಗೆ ತೆಗೆದುಕೊಳ್ಳದಿದ್ದರೆ, ರಾಜಕಾರಣಿಗಳು ಈ ಪ್ರಕರಣವನ್ನೂ ‘ಬೊಫೋರ್ಸ್ ಪ್ರಕರಣ’ ಎಂದು ಹೇಳುತ್ತಿದ್ದರು. ಹಾಗಾಗಿ ನ್ಯಾಯಾಲಯಕ್ಕೆ ಎಚ್ಚರಿಕೆ ನೀಡುವುದರ ಬದಲು ಸಿಂಗರವರು ತಮ್ಮ ಭ್ರಷ್ಟ ಮತ್ತು ನಿಷ್ಕ್ರಿಯ ಆಡಳಿತವನ್ನು ಸುಧಾರಿಸಿ ಅದರಲ್ಲಿ ಪಾರದರ್ಶಕತೆಯನ್ನು ತರಬೇಕು! -ಸಂಪಾದಕರು) ಅವರು ಇಲ್ಲಿನ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿದ್ದರು.

No comments:

Post a Comment