ರಾಷ್ಟ್ರದ ದರೋಡೆ ಮಾಡುತ್ತಿರುವ ಹಗರಣವಾದಿ ಜಾತ್ಯತೀತ ರಾಜಕಾರಣಿಗಳ ಮತ್ತೊಂದು ಹಗರಣ!
ಹೊಸದೆಹಲಿ: ‘ಭಾರತೀಯ ಬಾಹ್ಯಾ ಕಾಶ ಸಂಶೋಧನ ಸಂಸ್ಥೆ’ಯೊಂದಿಗೆ (ಇಸ್ರೋ) ಸಂಬಂಧಿತ ‘ಎಸ್ ಬ್ಯಾಂಡ್ ಸ್ಪೆಕ್ಟ್ರಂ’ನ ವಿತರಣೆ ಮಾಡುವಾಗ ಕೇಂದ್ರ ಸರಕಾರವು ಎರಡು ಲಕ್ಷ ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿದೆಯೆಂದು ಪ್ರತಿ ಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷದವರು ಮಹಾಲೇಖಪಾಲರ ವರದಿಯ ನಂತರ ಈ ರೀತಿ ಆರೋಪಿಸಿದ್ದಾರೆ. (ಕೇಂದ್ರದ ಜಾತ್ಯತೀತ ಸರಕಾರವು ಲಕ್ಷಗಟ್ಟಲೆ ಕೋಟಿ ರೂಪಾಯಿಗಳ ಹಗರಣ ಮಾಡಿ ರಾಷ್ಟ್ರದ ಸಂಪತ್ತನ್ನು ದರೋಡೆ ಮಾಡುತ್ತಿದೆ. ಭಾರತೀಯರು ಸಂಘಟಿತರಾಗಿ ಈ ಭ್ರಷ್ಟಾಚಾರಿಗಳನ್ನು ವಿಚಾರಿಸದಿರುವುದರಿಂದ ಈ ಭ್ರಷ್ಟ ರಾಜಕಾರಣಿಗಳು ಪ್ರತಿದಿನ ಲಕ್ಷಗಟ್ಟಲೆ ಕೋಟಿ ರೂಪಾಯಿಗಳ ಹಗರಣ ಮಾಡಿ ವಿದೇಶದ ಬ್ಯಾಂಕ್ ನಲ್ಲಿ ರಾಷ್ಟ್ರದ ೩೦೦ಲಕ್ಷ ಕೋಟಿ ರೂಪಾಯಿಗಳನ್ನು ಇಟ್ಟಿದ್ದಾರೆ. ನಾಗರಿಕರೇ, ಸಂಘಟಿತರಾಗಿ ಈ ಭ್ರಷ್ಟಾಚಾರಿಗಳಿಗೆ ಬುದ್ಧಿ ಕಲಿಸಿ ಅವರನ್ನು ಆಡಳಿತದಿಂದ ತೊಲಗಿಸಿ, ರಾಷ್ಟ್ರ ಮತ್ತು ಧರ್ಮ ಪ್ರೇಮಿ ರಾಜಕಾರಣಿಗಳ ಕೈಗೆ ಆಡಳಿತವನ್ನು ನೀಡದಿದ್ದರೆ ಇಂದು ಶೇ.೪೦ರಷ್ಟು ಭಾರತೀಯರು ಹಸಿವೆಯಿಂದ ಬಳಲುತ್ತಿ ರುವಾಗ ನಾಳೆ ಈ ಸಂಖ್ಯೆ ೮೦ಕೋಟಿ ಯಾಗಲು ಸಮಯ ತಗಲಲಾರದು. - ಸಂಪಾದಕರು) ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು ನೇರ ಪ್ರಧಾನ ಮಂತ್ರಿ ಕಾರ್ಯಾಲಯದೊಂದಿಗೆ ಸಂಬಂಧಿತವಿರುವುದರಿಂದ ವಿರೋಧಿ ಪಕ್ಷವು ಈ ಅಂಶಗಳಿಗೆ ಪ್ರಧಾನಮಂತ್ರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ಬೇಡಿಕೆಯಿಟ್ಟಿದೆ.
No comments:
Post a Comment