ಪ್ರಸ್ತುತ ಸಾಧಕರು ಶ್ರೀಕೃಷ್ಣನೊಂದಿಗೆ ಮಾತನಾಡಲು ಮತ್ತು ಅವನೊಂದಿಗಿರಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಪ್ರಯತ್ನಿಸುತ್ತಿರುವಾಗ ಸಾಧಕರಿಗೆ ಭಾವಜಾಗೃತಿಯಾ ಗುತ್ತದೆ ಮತ್ತು ಆನಂದವೂ ಸಿಗುತ್ತಿದೆ. ಭಾವಜಾಗೃತಿಗಾಗಿ ಮತ್ತು ವ್ಯಷ್ಟಿ ಸಾಧನೆಗಾಗಿ ಪ್ರಯತ್ನಿಸುವ ಸಾಧಕ ರೊಂದಿಗೆ ಮಾತನಾಡುವಾಗ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಕೆಲವು ಮಹತ್ವದ ಅಂಶಗಳು ಗಮನಕ್ಕೆ ಬಂದವು. ಅವುಗಳನ್ನು ಸ್ವಲ್ಪದರಲ್ಲಿ ಇಲ್ಲಿ ಕೊಡುತ್ತಿದ್ದೇನೆ. - ಸೌ. ಶ್ರದ್ಧಾ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಭಾವಜಾಗೃತಿಯೊಂದಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಅವಶ್ಯಕ
ಸಾಧಕರು ಭಾವಜಾಗೃತಿಗಾಗಿ ಪ್ರಯತ್ನಿ ಸುವಾಗ ಸ್ವಭಾವದೋಷ ನಿರ್ಮೂಲನೆ ಗಾಗಿ ಪ್ರಯತ್ನಿಸದಿದ್ದರೂ ನಡೆಯುತ್ತದೆ ಎಂದು ಎಲ್ಲೋ ಒಂದು ಕಡೆ ಮನಸ್ಸಿನಲ್ಲಿ ಅನಿಸುತ್ತಿರುತ್ತದೆ. ಇದರಿಂದ ಸಾಧಕರು ಸ್ವಭಾವದೋಷಗಳ ಬಗ್ಗೆ ಪ್ರಯತ್ನಿಸದೇ ಕೇವಲ ಭಾವಜಾಗೃತಿಗಾಗಿ ಪ್ರಯತ್ನಿಸುತ್ತಾರೆ ಮತ್ತು ನಮ್ಮಿಂದ ಉತ್ತಮ ಪ್ರಯತ್ನಗಳಾಗು ತ್ತಿವೆ ಎಂಬ ಭ್ರಮೆಯಲ್ಲಿರುತ್ತಾರೆ. ಈಶ್ವರ ನೊಂದಿಗೆ ಏಕರೂಪವಾಗಲು ದೋಷ ನಿವಾರಣೆಯಾಗುವುದು ಮತ್ತು ಗುಣವೃದ್ಧಿ ಯಾಗುವುದು ಎರಡೂ ಅವಶ್ಯಕವಾಗಿವೆ. ಇಂತಹ ರೀತಿಯಲ್ಲಿ ಪ್ರಯತ್ನಿಸಿದರೆ ನಮ್ಮ ಪ್ರಗತಿಯು ಬೇಗನೇ ಆಗುವುದು. ಇದ ಕ್ಕಾಗಿಯೇ ಪ.ಪೂ. ಡಾಕ್ಟರರು ನಮಗೆ ಅಷ್ಟಾಂಗ ಮಾರ್ಗದಿಂದ ಸಾಧನೆಯನ್ನು ಮಾಡಲು ಹೇಳಿದ್ದಾರೆ. ವ್ಯಷ್ಟಿ ಸಾಧನೆಯ ಒಂದೇ ಅಂಗದಿಂದ ಪ್ರಯತ್ನಿಸಿದರೆ ನಾವು ಒಂದೇ ಹಂತದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಯಿರುತ್ತದೆ ಹಾಗಾಗದಿರಲು ಭಾವಜಾಗೃತಿಯ ಜೊತೆಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಅವಶ್ಯ ವಾಗಿದೆ. ಈ ವಿಷಯದಲ್ಲಿ ಮುಂದೆ ಕೊಟ್ಟಿರುವ ವಿಷಯಗಳು ಬೋಧಪ್ರದವಾಗಿವೆ.
ಓರ್ವ ಸಾಧಕಿಯು ಭಾವಜಾಗೃತಿಗಾಗಿ ಬಹಳ ಪ್ರಯತ್ನಿಸುತ್ತಿದ್ದಳು. ಆದರೆ ಸಾಧಕ ರೊಂದಿಗೆ ಮಾತನಾಡುವಾಗ ಅವಳ ಮಾತು ಸಾಧಕರಿಗೆ ನೋವಾಗುವಂತೆ ಇರುತ್ತಿತ್ತು. ಆ ಸಾಧಕಿಯಲ್ಲಿರುವ ಅಹಂನ ಅಂಶದ ಬಗ್ಗೆ ಈ ವಿಭಾಗದ ಇತರ ಸಾಧಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವಾಗುತ್ತಿತ್ತು. ಆ ಸಾಧಕಿಯೊಂದಿಗೆ ಸಭೆ ನಡೆಸಿ ಅವಳಿಗೆ ಅದರ ಅರಿವನ್ನು ಮಾಡಿಕೊಡಬೇಕಾ ಯಿತು. ಆಗ ಆ ಸಾಧಕಿಯ ಮನಸ್ಸಿನಲ್ಲಿ, ‘ನಾನು ಭಾವಜಾಗೃತಿಗಾಗಿ ಪ್ರಯತ್ನಿಸುತ್ತಿರು ವಾಗ ನನಗೆ ದೇವರು ಇಷ್ಟೊಂದು ಅನುಭೂತಿಗಳನ್ನು ನೀಡುತ್ತಿದ್ದಾನೆ. ಅವೆಲ್ಲವೂ ಸುಳ್ಳಾಗಿವೆಯೇ’ ಎಂಬ ಪ್ರತಿಕ್ರಿಯೆ ಬಂತು. ಪ್ರತ್ಯಕ್ಷದಲ್ಲಿ ವ್ಯಷ್ಟಿ ಸ್ತರದಲ್ಲಿ ಬರುವ ಅನು ಭೂತಿಗಳು ಮತ್ತು ಸಾಧಕಿಯ ಸಮಷ್ಟಿಯ ವರ್ತನೆ ಇವೆರಡೂ ಬೇರೆ ಬೇರೆ ಸಂಗತಿ ಗಳಾಗಿವೆ. ನಾವು ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದೇವೆ. ವ್ಯಷ್ಟಿ ಸ್ತರದಲ್ಲಿ ಭಾವ ವೃದ್ಧಿಗಾಗಿ ಪ್ರಯತ್ನಿಸಿದರೆ ಒಂದು ನಿಗದಿತ ಹಂತದ ತನಕ ನಾವು ತಲುಪಬಹುದು. ಆದರೆ ಅದರ ಮುಂದಿನ ಸಾಧನೆಯ ಪ್ರಯಾಣಕ್ಕಾಗಿ ಸಮಷ್ಟಿಯ ಮನಸ್ಸನ್ನು ಗೆಲ್ಲುವುದು ಆವಶ್ಯಕವಾಗಿದೆ. ಆಗಲೇ ಮುಂದಿನ ಪ್ರಗತಿಯಾಗುತ್ತದೆ. ಸಮಷ್ಟಿಯಲ್ಲಿ ನಾವು ಈ ರೀತಿ ವರ್ತಿಸಿದರೆ ದೇವರು ಎಂದಾದರೂ ಇಂತಹ ಸಾಧಕರನ್ನು ತನ್ನಲ್ಲಿ ಸೇರಿಸಿಕೊಳ್ಳುವನೇನು? ಹಾಗಾಗಿ ಭಾವ ಜಾಗೃತಿಯೊಂದಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಅತ್ಯಗತ್ಯವಾಗಿದೆ. ಇನ್ನೊಂದು ಉದಾಹರಣೆ ಯೆಂದರೆ ಓರ್ವ ಸಾಧಕನು ತನ್ನ ವ್ಯಷ್ಟಿ ವರದಿಯಲ್ಲಿ ತನಗೆ ಬಂದಿದ್ದ ಅನುಭೂತಿ ಯನ್ನು ಹೇಳಿದನು. ಅನಂತರ ಅವನಿಗೆ ಅವನ ಸ್ವಭಾವದೋಷ ಹಾಗೂ ತಪ್ಪುಗಳ ಬಗ್ಗೆ ವಿಚಾರಿಸಿದಾಗ ಆತನು ‘ನನಗೆ ನನ್ನ ಯಾವುದೇ ತಪ್ಪುಗಳು ಗಮನಕ್ಕೆ ಬರುವುದೇ ಇಲ್ಲ. ನಾನು ಆನಂದ ಹಾಗೂ ಭಾವಾವಸ್ಥೆ ಯಲ್ಲಿ ಇರುತ್ತೇನೆ’ ಎಂದನು. ಅನಂತರ ನಾನು ಅವನಿಗೆ ಮುಂದಿನಂತೆ ಹೇಳಿದೆ. ‘ಇಂತಹ ಸ್ಥಿತಿಯಲ್ಲಿ ಹೆಚ್ಚು ಅಂತರ್ಮುಖತೆ ಯಿರುತ್ತದೆ. ಇದರಿಂದ ಸ್ವಂತದ ತಪ್ಪುಗಳು ಇನ್ನೂ ಹೆಚ್ಚು ಗಮನಕ್ಕೆ ಬರಬೇಕು’ ಮುಂದಿನ ವರದಿಯಲ್ಲಿ ಆ ಸಾಧಕನಿಗೆ ಮೊದಲು ತಪ್ಪುಗಳನ್ನು ಹೇಳಲು ತಿಳಿಸಲಾಯಿತು. ಆ ಸಮಯದಲ್ಲಿ ಅವನು ತಪ್ಪುಗಳು ಗಮನಕ್ಕೆ ಬರುತ್ತಿವೆ ಎಂದು ಹೇಳಿದನು. ಹಾಗೆಯೇ ಬಹಿರ್ಮುಖತೆಯು ಹೆಚ್ಚಿದ್ದ ಕಾರಣ ಸ್ವಂತದ ತಪ್ಪುಗಳತ್ತ ನೋಡುವ ಭಾಗವು ಕಡಿಮೆಯಿತ್ತು ಮತ್ತು ನಾನು ಪ್ರಯತ್ನಿಸು ತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದೆ ಎಂದು ಆ ಸಾಧಕನು ಒಪ್ಪಿಕೊಂಡನು.

ಸೇವೆಯಲ್ಲಿ ಭಾವ ನಿರ್ಮಾಣವಾಗಲು ಇರಿಸಬೇಕಾದ ದೃಷ್ಟಿಕೋನ
‘ಭಾವವು ಸ್ಥಿರವಾಗಿ ಉಳಿಯಬೇಕು’ ಎಂಬುದಕ್ಕಾಗಿ ಸಾಧಕರಿಗೆ ಸೇವೆಯನ್ನು ಮಾಡುವುದು ಬೇಡ, ಸತತ ನಾಮ ಜಪಿ ಸುತ್ತಾ ಅಥವಾ ದೇವರೊಂದಿಗೆ ಮಾತ ನಾಡುತ್ತಿರೋಣ ಎಂದು ಅನಿಸುತ್ತದೆ. ಸೇವೆ ಯನ್ನು ಮಾಡಿದರೆ ನಾವು ಕಾರ್ಯದಲ್ಲಿ ಸಿಲುಕಿಕೊಳ್ಳುತ್ತೇವೆ’ ಎಂದು ಅವರಿಗೆ ಹೆದ ರಿಕೆಯಾಗುತ್ತದೆ. ಆದುದರಿಂದ ಕಾರ್ಯದ ವಿಷಯದಲ್ಲಿ ಅವರ ಮನಸ್ಸಿನಲ್ಲಿ ದ್ವಂದ್ವವಿ ರುತ್ತದೆ. ಇಲ್ಲಿ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಅ. ಪ್ರತ್ಯಕ್ಷದಲ್ಲಿ ಎಲ್ಲಿ ದೇವರ ಬಗ್ಗೆ ಪ್ರೇಮವಿರುತ್ತದೆಯೋ ಅಲ್ಲಿ ದೇವರ ಪ್ರತಿ ಯೊಂದು ವಿಷಯದ ಬಗ್ಗೆಯೂ ಮನಸ್ಸಿ ನಲ್ಲಿ ಪ್ರೇಮವಿರಬೇಕಾಗುತ್ತದೆ. ನಾನು ಸ್ವತಃ ಸಂಕುಚಿತ ವಿಶ್ವದಲ್ಲಿರಬಾರದು ಮತ್ತು ನನ್ನ ಮನಸ್ಸಿನಲ್ಲಿ ದೇವರ ಬಗ್ಗೆ ಪ್ರೇಮ ಹೆಚ್ಚಾಗ ಬೇಕು’ ಎಂದು ದೇವರು ನನಗೆ ಈ ಸೇವೆ ಯನ್ನು ನೀಡಿದ್ದಾನೆ. ಎಂಬ ವಿಚಾರವನ್ನು ಇಟ್ಟುಕೊಂಡರೆ ಕಾರ್ಯವು ಬೇರೆಯಾಗಿದೆ ಎಂಬ ವಿಚಾರವು ಮನಸ್ಸಿನಲ್ಲಿ ಉಳಿಯುವುದಿಲ್ಲ.
ಆ. ಕಾರ್ಯದಲ್ಲಿ ಸಿಲುಕುತ್ತೇವೆ ಎಂದು ಬಹಳ ಹೆದರಿಕೆಯಾಗುತ್ತಿದ್ದಲ್ಲಿ ‘ದೇವರೇ ಈ ಸೇವೆಯ ಕಾರ್ಯದಲ್ಲಿನ ನಿನ್ನ ರೂಪವು ಹೇಗಿದೆ ಎಂದು ಅನುಭವಿಸಲು ಸಿಗಲಿ’ ಅಥವಾ ಕಾರ್ಯದಲ್ಲಿ ನೀನು ಹೇಗಿರುತ್ತಿ ಎಂದು ನನಗೆ ಅನುಭವಿಸಲು ಸಿಗಲಿ ಎಂಬ ಆಶಯವಿರುವ ವಿವಿಧ ರೀತಿಯ ಪ್ರಾರ್ಥನೆ ಗಳನ್ನು ನಾವು ಮಾಡಬಹುದು.
ಇ. ಸಾಧನೆಯಲ್ಲಿ ಪರಿಪೂರ್ಣತೆಯು ಬರಲು ನಮ್ಮಲ್ಲಿ ಸಮಷ್ಟಿ ಭಾವ ನಿರ್ಮಾಣ ವಾಗುವುದು ಬಹಳ ಅವಶ್ಯವಾಗಿರುತ್ತದೆ. ಅದಕ್ಕಾಗಿ ಎರಡು ಮುಖ್ಯ ಘಟಕಗಳನ್ನು ಅಂಗೀಕರಿಸುವುದು ಅವಶ್ಯವಾಗಿರುತ್ತದೆ. ಮೊದಲನೆಯದಾಗಿ ಗುರುಕಾರ್ಯದ ತೀವ್ರ ತಳಮಳ ಮತ್ತು ಎರಡನೆಯದಾಗಿ ಸಹ ಸಾಧಕರ ಕುರಿತಾದ ಪ್ರೀತಿ. ಅದಕ್ಕಾಗಿ ನಾವು ಪ್ರಯತ್ನಿಸಬೇಕು.
ಈ. ನಮಗೆ ಹರಿ ಮತ್ತು ಆತನ ಲೀಲೆ (ಸದ್ಯದ ಸಮಷ್ಟಿ ಕಾರ್ಯ) ಈ ಎರಡರ ಅನುಭವವನ್ನು ಪಡೆಯಲಿಕ್ಕಿದೆ ಎಂಬ ವಿಚಾರ ಮಾಡಿದರೆ ನಾವು ಕಾರ್ಯದಲ್ಲಿ ಸಿಲುಕಿಕೊಳ್ಳುವ ಪ್ರಮೇಯವೇ ಇಲ್ಲ.
ಚರಾಚರದಲ್ಲಿರುವ ಶ್ರೀಕೃಷ್ಣನ ಅನುಭೂತಿಯನ್ನು ಪಡೆಯಲು ಪರಾಕಾಷ್ಠೆಯ ಪ್ರಯತ್ನಗಳನ್ನು ಮಾಡೋಣ
ದೇವರು ಕಾಣಿಸಿದನು ಅಥವಾ ಮಾತನಾಡತೊಡಗಿದನು ಎಂದಾದ ತಕ್ಷಣ ನಾವು ಮಾಡುತ್ತಿರುವ ಪ್ರಯತ್ನಗಳು ಬೇಕಾದಷ್ಟಾಯಿತು ಎಂದು ಅನಿಸಿ ಸಾಧಕರ ಪ್ರಯತ್ನ ಗಳ ವೇಗವು ಕುಂಠಿತಗೊಳ್ಳುತ್ತದೆ ಅಥವಾ ಮುಂದಿನ ಸ್ತರದಲ್ಲಿ ಏನು ಪ್ರಯತ್ನ ಮಾಡ ಬೇಕಾಗಿದೆ ಎಂದು ಗಮನಕ್ಕೆ ಬಾರದ ಕಾರಣ ಸ್ವಲ್ಪ ದಿನಗಳಲ್ಲಿ ಅವರ ಸಾಧನೆ ಯಲ್ಲಿನ ಉತ್ಸಾಹವು ಕಡಿಮೆಯಾಗ ತೊಡಗುತ್ತದೆ. ನಮಗೆ ನಿರ್ಗುಣಕ್ಕೆ ಹೋಗ ಬೇಕೆಂದು ಪ.ಪೂ. ಡಾಕ್ಟರರು ಶ್ರೀಕೃಷ್ಣನಲ್ಲಿ ಭಾವವನ್ನು ಹೆಚ್ಚಿಸಲು ಹೇಳಿದರು. ಆದುದ ರಿಂದ ಶ್ರೀಕೃಷ್ಣನೊಂದಿಗೆ ಇರುವುದು, ಅವ ನೊಂದಿಗೆ ಮಾತನಾಡುವುದು ಮುಂತಾದ ಅನುಭೂತಿಗಳು ನಮಗೆ ಬರುತ್ತಿವೆ. ಇವು ಪ.ಪೂ. ಡಾಕ್ಟರರು ಮತ್ತು ಶ್ರೀಕೃಷ್ಣನ ಕೃಪೆಯೇ ಆಗಿದೆ. ಶ್ರೀಕೃಷ್ಣನು ಸತತವಾಗಿ ಜೊತೆಯಲ್ಲಿರುತ್ತಾನೆ ಮತ್ತು ಶ್ರೀಕೃಷ್ಣನನಿಗೆ ಪ್ರಿಯವಾದಂತಹ ವಿಷಯಗಳನ್ನು ಸತತ ವಾಗಿ ಮಾಡುತ್ತಿರುವುದು ಇದನ್ನು ಹೆಚ್ಚು ಉತ್ತಮವಾಗಿ ಹೇಗೆ ಮಾಡ ಬಹುದು ಎಂಬ ವಿಚಾರ ಮಾಡಿದಲ್ಲಿ ನಮಗೆ ಕೂಡಲೇ ಉತ್ತರ ಸಿಗುತ್ತದೆ. ನಮಗೆ ನಮ್ಮ ಸಾಧನೆಯ ಪ್ರವಾಸದಲ್ಲಿ ವ್ಯಷ್ಟಿ ಭಾವದಿಂದ ಸಮಷ್ಟಿ ಭಾವದೆಡೆಗೆ ಹೋಗಬೇಕಾಗಿದೆ. ಕಾರ್ಯದಲ್ಲಿ, ಸಹಸಾಧಕರಲ್ಲಿ, ಪ್ರತಿ ಯೊಂದು ವಿಷಯದಲ್ಲಿ, ಚರಾಚರ ದಲ್ಲಿರುವ ಶ್ರೀಕೃಷ್ಣ ಪರಮಾತ್ಮನ ಅನು ಭೂತಿಯನ್ನು ಪಡೆಯಲಿಕ್ಕಿದೆ. ನಾವು ಅಲ್ಲಿಯ ತನಕ ಪ್ರವಾಸ ಮಾಡಬೇಕಾಗಿದೆ. ಇದರಿಂದ ನಮಗೆ ಕೇವಲ ಶ್ರೀಕೃಷ್ಣನು ಕಾಣಿಸುತ್ತಾನೆ ಅಥವಾ ಮಾತನಾಡುತ್ತಾನೆ ಇಷ್ಟಕ್ಕೇ ಸೀಮಿತರಾಗಿರದೇ ಶ್ರೀಕೃಷ್ಣ ಪರಮಾತ್ಮನ ಅಸ್ತಿತ್ವದ ಅನುಭೂತಿ ಬರುವ ತನಕ ಪರಾಕಾಷ್ಟೆಯ ಪ್ರಯತ್ನಗಳನ್ನು ಮಾಡ ಬೇಕಾಗಿದೆ. ಇಂತಹ ಪ್ರಯತ್ನಗಳನ್ನು ಶ್ರೀಕೃಷ್ಣ ಪರಮಾತ್ಮನು ಸಾಧಕರಾದ ನಮ್ಮೆಲ್ಲರಿಂದ ಮಾಡಿಸಿಕೊಳ್ಳಲಿ ಎಂದು ಅವನ ಚರಣ ಗಳಲ್ಲಿ ಪ್ರಾರ್ಥನೆ.

No comments:
Post a Comment