ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಬಂದ ಅನುಭೂತಿಗಳು

ದಿನಾಂಕ ೨೬.೯.೨೦೧೦ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿ ಯಿಂದ ಮಂಗಳೂರಿನಲ್ಲಿ ಹಿಂದೂ ಧರ್ಮಜಾಗೃತಿ ಸಭೆಯನ್ನು ಹೇಗೆ ತೆಗೆದುಕೊಳ್ಳಬೇಕು ? ಎನ್ನುವ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳ ಲಾಗಿತ್ತು. ಆ ಸಮಯದಲ್ಲಿ ಅಲ್ಲಿನ ಕಾರ್ಯಕರ್ತರಿಗೆ ಬಂದ ಅನುಭೂತಿ ಯನ್ನು ಇಲ್ಲಿ ನೀಡುತ್ತಿದ್ದೇವೆ.
ಸಭಾಗೃಹದಲ್ಲಿ ಶ್ರೀಕೃಷ್ಣ ಕಾಣಿಸುವುದು : ಸಭಾಗೃಹದಲ್ಲಿ ಸಾಕ್ಷಾತ ಶ್ರೀಕೃಷ್ಣ ಪರಮಾತ್ಮನೇ ಇರುವುದರ ಅನುಭವ ವಾಗುತ್ತಿತ್ತು. ಕಣ್ಣು ಮುಚ್ಚಿದರೆ ಶ್ರೀಕೃಷ್ಣನೇ ಕಾಣಿಸುತ್ತಿದ್ದನು. ಶ್ಲೋಕ, ಪ್ರಾರ್ಥನೆ ಮಾಡುವಾಗ ಭಾವಜಾಗೃತಿಯಾಗುತ್ತಿತ್ತು. - ಸೌ. ಲತಾ ಫತೇಪುರ, ಬಾದಾಮಿ.

ಶ್ರೀಕೃಷ್ಣನ ನೀಲಿ ಹೆಜ್ಜೆಗಳು ಕಾಣಿಸುವುದು : ಮೊದಲನೆಯ ದಿನದಿಂದ ಪ್ರತೀ ಬಾರಿ ಪ್ರಾರ್ಥನೆ, ಶ್ಲೋಕದ ಸಮಯದಲ್ಲಿ ಶ್ರೀಕೃಷ್ಣಪರಮಾತ್ಮನ ಪ್ರವೇಶವಾದಂತೆ ಮತ್ತು ವ್ಯಾಸಪೀಠದಲ್ಲಿ ಆಸೀನರಾಗಿದ್ದಾರೆಂದು ಅನಿಸುತ್ತಿತ್ತು. ಹಾಗೆಯೇ ಶ್ರೀಕೃಷ್ಣನ ನೀಲಿ ಹೆಜ್ಜೆಯ ಗುರುತು ಪಸರಿಸಿದಂತೆ ಅನಿಸಿ ಅನಂದವಾಗುತ್ತಿತ್ತು. ಸಾಧಕರಿಗೆ ತೊಂದರೆ ಅಗುತ್ತಿದ್ದಾಗ  ರಾಜನದಾದಾರವರು ಪ್ರಾರ್ಥನೆ ಮಾಡಿಸುವಾಗ ಮೊದಲು ತುಂಬಾ ಒಳ್ಳೆಯ ದೆನಿಸುತ್ತಿತ್ತು. ಚೈತನ್ಯವು ಪ್ರತಿಯೊಂದು ಭಾಗಕ್ಕೂ ಹರಿಯುತ್ತಿರುವಂತೆ ಅನಿಸುತ್ತಿತ್ತು ಮತ್ತು ಮೈ ನಡುಗುತ್ತಿತ್ತು. ಕ್ರಮೇಣ ಕುಳಿತು ಕೊಳ್ಳಲು ಕಷ್ಟವಾಗಿ ಎದ್ದು ಹೋಗೋಣ ವೆಂದು ಅನಿಸುತ್ತಿತ್ತು. ಅಳು ಬರುತ್ತಿತ್ತು. ಕೊನೆಗೆ ಸಂಪೂರ್ಣ ಶಕ್ತಿ ಕಡಿಮೆಯಾಗಿ ಆಯಾಸವಾಯಿತು ಆದರೆ ಒಳಗೆ ಆನಂದ ವಾಗುತ್ತಿತ್ತು. - ಕು. ನಾಗಮಣಿ, ಶಿವಮೊಗ್ಗ.
ಸಾಮೂಹಿಕ ಪ್ರಾರ್ಥನೆಯಿಂದ ತೊಂದರೆಯು ದೂರವಾಗುವುದು : ಕಾರ್ಯಾಗಾರದಲ್ಲಿ ಮಾರ್ಗದರ್ಶನ ನಡೆಯುತ್ತಿದ್ದಾಗ ತೀವ್ರ ತೊಂದರೆ ಆಗು ತ್ತಿತ್ತು. ಮನಸ್ಸು ಮತ್ತು ಬುದ್ಧಿಯ ಮೇಲೆ ಅವರಣ ಬಂದು ಏನೂ ತಿಳಿಯುತ್ತಿರಲಿಲ್ಲ. ತುಂಬಾ ಕಿರಿಕಿರಿ ಆಗುತ್ತಿತ್ತು. ಗೊಂದಲ ಮಯ ವಾತಾವರಣದ ಅನುಭವ ಅಗುತ್ತಿತ್ತು. ನಂತರ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ ಬಳಿಕ ವಾತಾವರಣ ಶಾಂತವಾದ ಅನುಭವವಾಯಿತು. - ಸೌ. ಲಕ್ಷಿ  ಪೈ ಮಂಗಳೂರು.
ಕು. ಮಧುರಾ ಭೋಸಲೆಯವರ ಸ್ಥಾನದಲ್ಲಿ ಶ್ರೀಕೃಷ್ಣ ಕಾಣಿಸುವುದು : ಕು. ಮಧುರಾ ಭೋಸಲೆಯವರ ಮಾರ್ಗ ದರ್ಶನದಲ್ಲಿ ಶ್ರೀಕೃಷ್ಣ ಪರಮಾತ್ಮನ ದರ್ಶನ ವಾಗುವುದು. ಅನಂತರ ಮನಸ್ಸು ನಿರ್ಮಲ ಮತ್ತು ಉತ್ಸಾಹಿಯಾಗುವುದು. ಮಧ್ಯಾಹ್ನ ದಿಂದ ನನಗೆ ತಲೆ ನೋವಾಗುತ್ತಿತ್ತು ಮತ್ತು ಭಾರ ಅನಿಸುತ್ತಿತ್ತು. ಕು. ಮಧುರಾರವರ ಮಾರ್ಗದರ್ಶನದಲ್ಲಿ ನನಗೆ ತುಂಬಾ ಪ್ರಕಾಶ ಮತ್ತು ಚೈತನ್ಯ ಬರುತ್ತಿರುವುದರ ಅರಿವಾ ಯಿತು. ಅನಂತರ ಹೆಚ್ಚು ಉತ್ಸಾಹಿ ಮತ್ತು ಹಗುರವಾದೆನು. - ಸೌ. ಕೋಮಲಾ ಶ್ರೀವತ್ಸನ್, ಚೆನ್ನೆ

No comments:

Post a Comment