ಶೂದ್ರವರ್ಣಕ್ಕನುಸಾರ ಮಾಡಿದ ಶಾರೀರಿಕ ಸೇವೆಯಿಂದ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ,

ಶೂದ್ರವರ್ಣಕ್ಕನುಸಾರ ಮಾಡಿದ ಶಾರೀರಿಕ ಸೇವೆಯಿಂದ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ, ಎಂಬ ಪ.ಪೂ. ಡಾಕ್ಟರರ ಉದ್ಗಾರವನ್ನು ಸಾರ್ಥಕ ಪಡಿಸಿದ ರಾಮನಾಥಿ ಆಶ್ರಮದಲ್ಲಿನ ಕಟ್ಟಡಕಾಮಗಾರಿ ವಿಭಾಗ!
ರಾಮನಾಥಿ ಆಶ್ರಮದಲ್ಲಿನ ದುರಸ್ತಿ ವಿಭಾಗದಲ್ಲಿ ಸೇವೆ ಮಾಡುತ್ತಿರುವ ೭ ಸಾಧಕರು ಶೇ. ೬೦ ರ ಮಟ್ಟವನ್ನು ತಲುಪಿ ಆಶ್ರಮದಲ್ಲಿನ ಒಟ್ಟು ಎಲ್ಲ ವಿಭಾಗದ ಪ್ರಗತಿಯ ಆಲೇಖದಲ್ಲಿ ಸಾಂಖ್ಯಿಕ ಪ್ರಗತಿಯ ಉಚ್ಚಾಂಕವನ್ನು ತಲುಪಿ ದ್ದಾರೆ. ಈ ವಿಭಾಗದಲ್ಲಿನ ಒಟ್ಟು ೧೭ ಸಾಧಕರಲ್ಲಿ ೭  ಸಾಧಕರು (ಸರ್ವಶ್ರೀ ಬಾಬಾ ನಾಯಿಕ, ಕೆರೆಮಣಿ ಬಾಬಾ, ನಾನಾ ಆಗ್ರೇ, ಸುರೇಶ ಕದಮ, ಭೂಷಣ ಮಿಠಬಾವಕರ, ಶ್ರೀಹರಿ ಮಾಮಲೇದಾರ, ದಶರಥ ಗೋಸಾವಿ)
ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡಿದ್ದಾರೆ. ಶೂದ್ರವರ್ಣದ ಸೇವೆ ಮಾಡುವಾಗ ಕಂಡದ್ದು ಸೇವೆಯೆಂದು ಮಾಡಿದರೆ ಅಹಂ ಕಡಿಮೆಯಾಗುತ್ತದೆ ಮತ್ತು ಸೇವೆಯಲ್ಲಿ ಬುದ್ಧಿಯ ಅಡಚಣೆ ಕಡಿಮೆಯಾಗುವುದರಿಂದ ತಕ್ಷಣ ಭಾವ ನಿರ್ಮಾಣವಾಗಿ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ, ಎಂಬ ಪ.ಪೂ. ಡಾಕ್ಟರರ ಮಾತನ್ನು ಕಟ್ಟಡಕಾಮಗಾರಿ ವಿಭಾಗವು ಸಿದ್ಧ ಪಡಿಸಿ ತೋರಿಸಿದೆ. ಅವರಿಂದ ನಾವೆಲ್ಲ ಸಾಧಕರು ಕಲಿಯುವುದು ಬಹಳಷ್ಟಿದೆ. ಯಾವುದೇ ಸೇವೆಯಿರಲಿ, ಅದರಲ್ಲಿ ಮಗ್ನರಾದರೆ ಪ್ರಗತಿಯಾಗುತ್ತದೆ, ಎಂಬುದನ್ನು ಈ ಸಾಧಕರು ತಮ್ಮ ವರ್ತನೆಯಿಂದ ನಮ್ಮೆಲ್ಲ ಸಾಧಕರಿಗೆ ಕಲಿಸಿದ್ದಾರೆ. ‘ಅವರ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ಶೀಘ್ರ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಲು ಬೇಕಾದ ಆಧ್ಯಾತ್ಮಿಕ ಬಲವನ್ನು ಶ್ರೀಕೃಷ್ಣನು ನಮಗೆ ಕರುಣಿಸಲಿ’, ಎಂದು ಅವನ ಚರಣಗಳಲ್ಲಿ ಪ್ರಾರ್ಥನೆ! - ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೊವಾ, (ಭಾದ್ರ ಪದ ಕೃಷ್ಣ ತೃತಿಯಾ, ಕಲಿಯುಗ ವರ್ಷ ೫೧೧೨ (೨೬.೯. ೨೦೧೦))

No comments:

Post a Comment