ಧಾರ್ಮಿಕ ಕೃತಿಗಳ ಶಾಸ್ತ್ರ

 ಧರ್ಮಸತ್ಸಂಗ
ದೇವರಪೂಜೆಯ ಉಪಕರಣ (ಶಾಸ್ತ್ರೀಯ ಮಹತ್ವ ಮತ್ತು ಸಂರಚನೆ)
ದೇವತಾಪೂಜೆಯು ನಮ್ಮೆಲ್ಲರಿಗೂ ಒಂದು ಶ್ರದ್ಧೆಯ ವಿಷಯವಾಗಿದೆ. ನಮ್ಮ ವಾಸ್ತುವಿನಲ್ಲಿ  ಪೂಜೆಯಮಂಟಪ ಮಾಡುತ್ತೇವೆ, ಅದನ್ನು ಅಲಂಕರಿಸುತ್ತೇವೆ. ಅದರಲ್ಲಿ ನಮ್ಮ ಇಚ್ಛಾನುಸಾರ ದೇವತೆಗಳ ಪ್ರತಿಮೆಯನ್ನಿಟ್ಟು ಅವರ ಪೂಜೆಯನ್ನು  ಮಾಡುತ್ತೇವೆ. ಪೂಜೆಗಾಗಿ ನಮ್ಮ ನಮ್ಮ ಕ್ಷಮತೆಗನುಸಾರ ಪೂಜೆಯ ಉಪಕರಣಗಳನ್ನು ತರುತ್ತೇವೆ ನಾವು ದೇವತಾಪೂಜೆಯ ಉಪಕರಣಗಳ ಬಗ್ಗೆ ನೋಡೋಣ.
ಕಲಶ
ಕಲಶವು ಹಿಂದೂ ಸಂಸ್ಕ ತಿಯ ಮಂಗಳ ಮಯ ಪ್ರತೀಕವಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಕಲಶದ ಉತ್ಪತ್ತಿಯಾಯಿತು. ಶ್ರೀ ವಿಷ್ಣುವು ಸಮುದ್ರ ಮಂಥನದ ಸಮಯದಲ್ಲಿ  ಅಮೃತ-ಕಲಶವನ್ನು ಧಾರಣೆ ಮಾಡಿದ್ದನು. ಕಲಶದಲ್ಲಿ ಎಲ್ಲ ದೇವತೆ ಗಳ ವಾಸ್ತವ್ಯವಿರುತ್ತದೆ. ಈ ಕಾರಣದಿಂದ  ಪೂಜೆಯಲ್ಲಿ ಕಲಶಕ್ಕೆ ಮಹತ್ವಪೂರ್ಣ ಸ್ಥಾನವಿದೆ. ಇದನ್ನು ಒಂದು ಸೂಕ್ಷ ಚಿತ್ರದ ಮೂಲಕ ತಿಳಿದುಕೊಳ್ಳೋಣ.
೧. ಕಲಶದ ಒಳಗೆ ವಿಶೇಷ ರೀತಿಯ ಟೊಳ್ಳಾದ  ಜಾಗವಿರುತ್ತದೆ.
೨. ಈ ಟೊಳ್ಳಿನಲ್ಲಿ ಸೂಕ್ಷ -ನಾದದ ತರಂಗಗಳು ನಿರ್ಮಾಣವಾಗುತ್ತವೆ.
೩. ಈ ತರಂಗಗಳು ಶ್ವೇತವರ್ಣದ್ದಾಗಿರುತ್ತವೆ.
೪. ದೇವತೆಯ ಸಗುಣ ತತ್ತ್ವವು  ಹಳದಿ ಬಣ್ಣದಲ್ಲಿ ಕಲಶದೆಡೆಗೆ ಆಕರ್ಷಿತ ವಾಗುತ್ತಿರುವುದು ಕಾಣಿಸುತ್ತಿದೆ.
೫. ಕಲಶದಲ್ಲಿ ಕಾಣಿಸುತ್ತಿರುವ ನೀಲಿ ಬಣ್ಣದ  ವಲಯವು ಆಪತತ್ತ್ವದ್ದಾಗಿದೆ.
೬. ಕಲಶದ ಮಾಧ್ಯಮದಿಂದ ಚೈತನ್ಯದ ವಲಯ ಮತ್ತು ಕಣವು ಪ್ರಕ್ಷೇಪಿತವಾಗುತ್ತದೆ.
ದೀಪ
ಪೂಜೆಯ ಉಪಕರಣಗಳಲ್ಲಿ ದೀಪವು ಒಂದು ಪ್ರಧಾನ ಉಪಕರಣವಾಗಿದೆ. ಪೂಜಾವಿಧಿಯಲ್ಲಿ ದೀಪಕ್ಕೆ ಸಂಬಂಧಿಸಿದ ಈ ಮಂತ್ರದ  ಉಚ್ಚಾರಣೆಯಿಂದ ದೀಪದ ಮಹತ್ವವು ಸ್ಪಷ್ಟವಾಗುತ್ತದೆ.
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುತ್ರಾಂಶ್ಚ ಮತಿಂ ಶಾಂತಿಂ ಪ್ರಯಚ್ಛಮೇ || 

ಅರ್ಥ : ‘ಹೇ, ದೀಪದೇವತೆಯೇ, ನೀನು ಬ್ರಹ್ಮ ಸ್ವರೂಪಳಾಗಿರುವಿರಿ. ನೀನು ತೇಜ ಪುಂಜ ಆಗಿರುವಿ. ನೀನು ಎಂದಿಗೂ ಕ್ಷೀಣಿಸುವುದಿಲ್ಲ. ನನಗೆ ಆರೋಗ್ಯ ಮತ್ತು ಸಂತಾನ ನೀಡು ಮತ್ತು ಸದ್ಬುದ್ಧಿ ಹಾಗೂ ಶಾಂತಿಯನ್ನು ನೀಡು.
ಪೂಜೆಯಲ್ಲಿನ ದೀಪದಲ್ಲಿ ಕೇವಲ ಎಣ್ಣೆ ಅಥವಾ ತುಪ್ಪವನ್ನು ಉಪಯೋಗಿಸಬೇಕು; ಇವೆರಡನ್ನು ಹೊರತು ಪಡಿಸಿ ಯಾವುದೇ ಜ್ವಲನ ಶೀಲದ್ರವ್ಯ ವನ್ನು ಉಪಯೋಗಿಸಬಾರದು ಎಂದು ಅಗ್ನಿ ಪುರಾಣ ದಲ್ಲಿ ಒಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಆಧ್ಯಾತ್ಮಿಕ ದೃಷಿಯಿಂದ ತುಪ್ಪದ ದೀಪವು ಎಣ್ಣೆಯ ದೀಪಕ್ಕಿಂತ ಅಧಿಕ ಸತ್ತ್ವಗುಣಿಯಾಗಿದೆ. ಇದು ಒಂದು ಮಹತ್ವಪೂರ್ಣ ಅಂಶವಾಗಿದೆ.

No comments:

Post a Comment