ಉಪ್ಪು ಮತ್ತು ತುಪ್ಪದ ಹೊದಿಕೆಯ ಮೇಲಿನ ದೇವತೆಗಳ ಚಿತ್ರಗಳ ವಿಡಂಬನೆಯನ್ನು
ತಡೆದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು!
ಡೊಂಬಿವಲಿ (ಮಹಾರಾಷ್ಟ್ರ) : ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತೆ ಶ್ರೀಮತಿ ಮನಿಷಾ ಜೋಶಿಯವರು ಉಪ್ಪು ಮತ್ತು ತುಪ್ಪದ ಹೊದಿಕೆಯ ಮೇಲಿನ ಶ್ರೀ ಲಕ್ಷಿ ಮತ್ತು ಗಣೇಶ ಇವರ ಚಿತ್ರಗಳನ್ನು ಉತ್ಪಾದಕರು ತೆಗೆದು ಹಾಕುವಂತೆ ಮಾಡಿ ದರು. ಶ್ರೀಮತಿ ಜೋಶಿಯವರು ಅಂಗಡಿ ಯಿಂದ ‘ಲಕ್ಷಿ ಬ್ರಾಂಡ್ ಟೇಬಲ ಸಾಲ್ಟ್’ (ಉಪ್ಪು) ಖರೀದಿಸಿದಾಗ ಅದರ ಮೇಲೆ ಶ್ರೀ ಲಕ್ಷಿ ಯ ಚಿತ್ರವನ್ನು ನೋಡಿದರು. ಅನಂತರ ಅವರು ಉತ್ಪಾದನೆಯ ಹೊದಿಕೆ ಮೇಲಿದ್ದ ಉತ್ಪಾದಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರಿಗೆ ಅದರ ಬಗ್ಗೆ ಪ್ರಬೋಧನೆ ಮಾಡಿದರು. ಅನಂತರ ‘ಸಂತೋಷ ಟೇಬಲ್ ಸಾಲ್ಟ್ ಸಪ್ಲಾಯರ್’ ಸಂಸ್ಥೆಯವರು ತನ್ನ ಉತ್ಪಾದನೆಯ ಹೊದಿ ಕೆಯ ಮೇಲಿನ ಶ್ರೀ ಲಕ್ಷಿ ಯ ಚಿತ್ರವನ್ನು ತೆಗೆದು ಹಾಕಿದರು. ಅದೇ ರೀತಿ ‘ಗಣೇಶ ಫೂಡ್ಸ್ ಎಂಡ್ ಆಯಿಲ್ ಇಂಡಸ್ಟ್ರೀಸ್’ ಎಂಬ ಕಂಪನಿಯೂ ತಮ್ಮ ಉತ್ಪಾದನೆಯಾದ ಗೋಪಾಲಕೃಷ್ಣ ತುಪ್ಪದ ಹೊದಿಕೆಯ ಮೇಲಿನ ಶ್ರೀಕೃಷ್ಣನ ಚಿತ್ರವನ್ನು ತೆಗೆಯಿತು.
No comments:
Post a Comment