ಸಾಧಕರೇ, ಅನುಭೂತಿಗಳಲ್ಲಿ ವಿಹರಿಸದೇ ನನ್ನ ಮತ್ತು ಶ್ರೀಕೃಷ್ಣನ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಿ!
೧. ಇತ್ತೀಚೆಗೆ ಅನೇಕ ಸಾಧಕರಿಗೆ ನನ್ನ ಮುಖವಿರುವಲ್ಲಿ ಶ್ರೀಕೃಷ್ಣನ ಅಥವಾ ಶ್ರೀಕೃಷ್ಣನ ಮುಖವಿರುವಲ್ಲಿ ನನ್ನ ಮುಖ ಕಾಣಿಸುತ್ತದೆ. ಕೆಲವರಿಗೆ ನಮ್ಮಿಬ್ಬರ ಮುಗುಳ್ನಗೆಯು ಒಂದೇ ರೀತಿಯಿದ್ದಂತೆ ಅನಿಸುತ್ತದೆ. ಕೆಲವರಿಗೆ ನಮ್ಮಿಬ್ಬರಿಂದ ಒಂದೇ ರೀತಿಯ ಸ್ಪಂದನಗಳು ಬರುತ್ತಿರು ವುದರ ಅರಿವಾಗುತ್ತದೆ. ಆದುದರಿಂದ ಅವರಿಗೆ ನಾನು ಮತ್ತು ಶ್ರೀಕೃಷ್ಣ ಒಂದೇ ಆಗಿದ್ದೇವೆ ಎಂದು ತಪ್ಪು ತಿಳಿವಳಿಕೆ ಯಾಗುತ್ತದೆ. ಆದರೆ ವಾಸ್ತವದಲ್ಲಿ ಹಾಗೆ ಏಕಿಲ್ಲ ಎಂಬುದು ಮುಂದಿನ ಅಂಶಗಳಿಂದ ಗಮನಕ್ಕೆ ಬರುವುದು.
ಅ. ವಿಷ್ಣುದೂತರು ವಿಷ್ಣುವಿನಂತೆ ಕಾಣಿಸಿದರೂ ಅವರಿಬ್ಬರೂ ಒಂದೇ ಆಗಿರು ವುದಿಲ್ಲ. ವಿಷ್ಣುದೂತರಲ್ಲಿ ವಿಷ್ಣುತತ್ತ್ವ ಇರುವಂತೆ ನನ್ನಲ್ಲಿಯೂ ಅಂಶಾತ್ಮಕವಾಗಿ ವಿಷ್ಣುತತ್ತ್ವ್ಕೃ ಇದೆ. ಇದೊಂದೇ ನನ್ನ ಹಾಗೂ ಶ್ರೀಕೃಷ್ಣನ ನಡುವಿನ ಹೋಲಿಕೆಯಾಗಿದೆ. ಶ್ರೀಕೃಷ್ಣನ ಚರಿತ್ರೆ ಓದಿದರೆ ಶ್ರೀಕೃಷ್ಣನ ತುಲನೆಯಲ್ಲಿ ನಾನೆಷ್ಟು ಕ್ಷುಲ್ಲಕನಿದ್ದೇನೆ ಎಂಬುದು ಗಮನಕ್ಕೆ ಬರುತ್ತದೆ.ಆ. ಶ್ರೀಕೃಷ್ಣನು ಅನಾರೋಗ್ಯಕ್ಕೊಳ ಗಾದನೆಂದು ನಾವು ಎಲ್ಲಿಯೂ ಓದಿಲ್ಲ. ಪ್ರಾಣಶಕ್ತಿ ಕಡಿಮೆಯಿರುವುದರಿಂದ ನನಗೆ ಕಳೆದ ಮೂರುವರೆ ವರ್ಷಗಳಿಂದ ಕೋಣೆ ಯಿಂದ ಹೊರಗೆ ಸಹ ಬರಲು ಆಗುತ್ತಿಲ್ಲ.
ಇ. ಸಾಧಕರನ್ನು ಈಶ್ವರನತ್ತ, ಶ್ರೀ ಕೃಷ್ಣನತ್ತ ಕೊಂಡೊಯ್ಯುವುದು ನನ್ನ ಕಾರ್ಯವಾಗಿದೆ. ಶ್ರೀಕೃಷ್ಣನು ಸ್ವತಃ ಶ್ರೀಕೃಷ್ಣನತ್ತ ಕೊಂಡೊಯ್ಯುವುದಿಲ್ಲ.
ಈ. ಒಬ್ಬೊಬ್ಬ ವಿದ್ಯಾರ್ಥಿಯು ಮುಂದುಮುಂದಿನ ತರಗತಿಗೆ ಹೋದಾಗ ಶಿಕ್ಷಕರಿಗೆ ಆನಂದವಾಗುತ್ತದೆ. ಅದೇ ರೀತಿ ಒಬ್ಬೊಬ್ಬ ಸಾಧಕನು ಈಶ್ವರ ನತ್ತ, ಶ್ರೀಕೃಷ್ಣನತ್ತ ಹೋಗುತ್ತಿದ್ದಾನೆ ಎಂಬುದನ್ನು ನೋಡಿ ನನಗೂ ಆನಂದ ವಾಗುತ್ತದೆ.
ಕಲಿಯುವ ಅಂಶಗಳು
ನನ್ನ ನೆನಪಿನಿಂದ ಅಥವಾ ಸಹವಾಸ ದಿಂದ ಆನಂದ ಲಭಿಸುತ್ತದೆ ಹೀಗಿರುವಾಗ ಶ್ರೀಕೃಷ್ಣನ ನೆನಪಿನಿಂದ ಅಥವಾ ಸಹವಾಸ ದಿಂದ ಎಷ್ಟು ಆನಂದ ಸಿಗಬಲ್ಲದು ಎಂಬುದನ್ನು ಗಮನದಲ್ಲಿರಿಸಿ ಸಾಧಕರು ಸಾಧನೆ ಹೆಚ್ಚಿಸಬೇಕು.
ಶ್ರೀಕೃಷ್ಣನ ಅನುಭೂತಿ ಬರುವ ಕಾರಣಗಳು
೧. ಕಾಲಮಹಾತ್ಮೆಗನುಸಾರ ಈಶ್ವರೀ ರಾಜ್ಯದ ಸ್ಥಾಪನೆಯ ಯುದ್ಧವನ್ನು ಮೊದಲು ಸೂಕ್ಷ ದಿಂದ ಅನಂತರ ಸ್ಥೂಲದಿಂದ ಶ್ರೀಕೃಷ್ಣನ ಆಶೀರ್ವಾದದಿಂದ ಕ್ರಿ.ಶ. ೨೦೧೮ ರೊಳಗೆ ಗೆಲ್ಲಲಿದ್ದೇವೆ. ಅದಕ್ಕಾಗಿ ಈ ಕಾಲದಲ್ಲಿ ಶ್ರೀಕೃಷ್ಣನ ತತ್ತ್ವವು ಹೆಚ್ಚು ಪ್ರಮಾಣ ದಲ್ಲಿ ಕಾರ್ಯನಿರತವಾಗಿದೆ.
೨. ೧೦-೧೫ ವರ್ಷಗಳ ಸಾಧನೆಯಿಂದ ಸಾಧಕರ ಮನೋ ಭೂಮಿಯು ಸಿದ್ಧವಾಗಿದೆ. ಈ ಭೂಮಿಯಲ್ಲಿ ಸೌ. ಶ್ರದ್ಧಾ ಹಾಗೆಯೇ ಭಾವವಿರುವ ಕೆಲವು ಸಾಧಕರು ಭಕ್ತಿಭಾವದ ಬೀಜವನ್ನು ಬಿತ್ತಿದರು. ಅದರಿಂದ ಭಕ್ತಿಭಾವದ ಫಸಲು ಬೆಳೆಯುತ್ತಿರುವುದು ಕಂಡುಬರುತ್ತಿದೆ. (ಜ್ಯೇಷ್ಠ ಶು. ೧೩, ಕಲಿಯುಗ ವರ್ಷ ೫೧೧೨ (೨೪.೬.೨೦೧೦))
No comments:
Post a Comment