ತಮ್ಮ ಮನೆಯ ಅಥವಾ ಸಂಬಂಧಿಕರಲ್ಲಿನ ಮರಣೋನ್ಮುಖ ವ್ಯಕ್ತಿಗೆ ಬೇಗನೆ ಗತಿ ದೊರಕಲು ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿ ಅಥವಾ ಇತರರಿಗೆ ಹಾಗೆ ಮಾಡಲು ಹೇಳಿ!
ತಮ್ಮ ಮನೆಯಲ್ಲಿ ಯಾರಾದರೂ ವೃದ್ಧಾವಸ್ಥೆಯಿಂದಾಗಿ ಬಹುದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದರೆ ಅಥವಾ ಮರ ಣೋನ್ಮುಖನಾಗಿದ್ದರೆ ಅಥವಾ ಯಾರಾದರೂ ಔಷಧೋಪಚಾರಗಳಿಂದ ಏನೂ ಬದಲಾ ವಣೆಯಾಗದೇ ಅವನು ತೀವ್ರ ವೇದನೆ ಮತ್ತು ಮೂರ್ಛಾವಸ್ಥೆಯಲ್ಲಿದ್ದರೆ, ಅಂತಹ ಪ್ರಸಂಗದಲ್ಲಿ ಸಾಧಕರು ಅಥವಾ ಮನೆಯ ಲ್ಲಿರುವ ಇತರ ಸಂಬಂಧಿಕರು ೫ ನಿಮಿಷ ಗಳ ಕಾಲ ಶ್ರೀಕೃಷ್ಣನ ನಾಮಜಪ ಮಾಡಿ ಅವನಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು. ‘ಹೇ ಶ್ರೀಕೃಷ್ಣಾ, .... ಇವರ (ಸಾಧಕನ ಹೆಸರನ್ನು ಹೇಳಿ) ದೇಹಪ್ರಾರಬ್ಧ ಬೇಗನೇ ಮುಗಿದು ಅವರನ್ನು ಸ್ಥೂಲದೇಹ ದಿಂದ ಬಿಡುಗಡೆ ಮಾಡು ಮತ್ತು ಮುಂದಿನ ಗತಿ ದೊರೆಯಲಿ. ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.’
ದಿನವಿಡಿ ಪ್ರಾರ್ಥನೆ ಮತ್ತು ನಾಮಜಪವನ್ನು ಹೆಚ್ಚು ಹೆಚ್ಚು ಮಾಡ ಬೇಕು. ಇಂತಹ ಅನಾರೋಗ್ಯಪೀಡಿತ ವ್ಯಕ್ತಿಯ ರೋಗಕ್ಕೆ ಆಸ್ಪತ್ರೆಯಲ್ಲಿ ವಿಶೇಷ ಔಷಧೋಪಚಾರವೇನು ಇಲ್ಲದಿದ್ದರೆ ಅವರನ್ನು ಮನೆಗೆ ಕರೆತರಬೇಕು. ಏಕೆಂದರೆ ಆಸ್ಪತ್ರೆಯಲ್ಲಿ ಅನೇಕ ಅತೃಪ್ತ ಲಿಂಗದೇಹ ಗಳು ಸೂಕ್ಷ ರೂಪದಲ್ಲಿ ಅಲೆಯುತ್ತಿರುತ್ತವೆ ಮತ್ತು ಅವು ಅಲ್ಲಿಯ ರೋಗಿಗಳಿಗೆ ತೊಂದರೆ ನೀಡುತ್ತವೆ. ಇಂತಹ ರಜ- ತಮಾತ್ಮಕ ವಾತಾವರಣದಲ್ಲಿ ಉಳಿದರೆ ರೋಗಿಗೆ ತೊಂದರೆಯಾಗಬಹುದು ಮತ್ತು ಮೃತ್ಯು ಸಮಯದಲ್ಲಿ ಮುಂದಿನ ಗತಿ ದೊರೆಯಲೂ ಅಡಚಣೆಯಾಗಬಹುದು. ಆಸ್ಪತ್ರೆಗಿಂತ ನಾವಿರುವ ಮನೆ ಹೆಚ್ಚು ಸಾತ್ತ್ವಿಕವಾಗಿರುತ್ತದೆ. ಆದುದರಿಂದ ಮನೆ ಯಲ್ಲಿ ವ್ಯಕ್ತಿಯ ಮೃತ್ಯುವಾದರೆ ಅವರ ಲಿಂಗ ದೇಹಕ್ಕೆ ಮೃತ್ಯುವಿನ ಸಮಯದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯು ಕಡಿಮೆ ಪ್ರಮಾಣ ದಲ್ಲಾಗುತ್ತದೆ. ಸಾಧಕರು ಈ ಮೇಲಿನ ಅಂಶಗಳನ್ನು ಮನೆಯಲ್ಲಿರುವವರು ಸಾಧಕ ರಾಗಿದ್ದರೆ ಮಾತ್ರ ಅವರಿಗೆ ಹೇಳಬೇಕು, ಇಲ್ಲದಿದ್ದರೆ ತಾವೇ ಈ ಬಗ್ಗೆ ತಾರತಮ್ಯ ದಿಂದ ನಿರ್ಣಯವನ್ನು ತೆಗೆದುಕೊಳ್ಳಬೇಕು.
No comments:
Post a Comment