ಆಧ್ಯಾತ್ಮಿಕ ಪ್ರಗತಿಗಾಗಿ ಕರ್ಮಯೋಗಿಗೆ ಭಕ್ತಿಯೋಗ, ಭಕ್ತಿಯೋಗಿಗೆ ಕರ್ಮಯೋಗವು ಪೂರಕವಾಗಿರುವುದು
‘ಕರ್ಮಯೋಗಿ ಸಾಧಕನಿಗೆ ತನ್ನ ಕರ್ಮದ ಮೇಲೆ ಬಹಳ ವಿಶ್ವಾಸವಿರುತ್ತದೆ. ಆದುದರಿಂದ ಅವನು ಎಲ್ಲ ಕೃತಿಗಳನ್ನು ತಳಮಳದಿಂದ ಮಾಡುತ್ತಾನೆ. ಆದರೂ ಅವನ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ. ಏಕೆಂದರೆ ಅವನು ತನ್ನ ಕರ್ಮದಲ್ಲಿ ಈಶ್ವರನ ಅಧಿಷ್ಠಾನವನ್ನಿಡಲು ಮರೆಯು ತ್ತಾನೆ. ಅದರಿಂದ ಅವನ ಎಲ್ಲ ಕರ್ಮಗಳು ಶುಷ್ಕವೆನಿಸುತ್ತವೆ. ಆದುದರಿಂದ ಅವನಿಗೆ, ‘ನಿನ್ನ ಕರ್ಮದಲ್ಲಿ ಈಶ್ವರನ ಸಹಾಯ ವನ್ನು ಪಡೆ. ಅವನನ್ನು ಕಣ್ಣೆದುರು ಇಟ್ಟು ಕೊಂಡು ಕರ್ಮ ಮಾಡು’ ಎಂದು ಹೇಳಬೇಕಾಗುತ್ತದೆ. ಭಕ್ತಿಯೋಗಿ ಸಾಧಕನು ಕರ್ಮ ಮಾಡುವಾಗ ಈಶ್ವರನನ್ನು ಸ್ಮರಿಸುತ್ತಾನೆ. ಅವನಿಗೆ ಪ್ರಾರ್ಥನೆ ಮಾಡುತ್ತಾನೆ. ಆದರೂ ಈ ಮಾರ್ಗದಲ್ಲಿಯ ಕೆಲವರ ಪ್ರಗತಿಯಾಗುವುದಿಲ್ಲ.
ಏಕೆಂದರೆ ಅವರಿಗೆ, ‘ತಾನು ಮಾಡಿದ್ದು ಯೋಗ್ಯವಿದೆಯೇ’ ಎಂದು ನಿರಂತರ ಅನಿಸುತ್ತದೆ. ಅವರಿಗೆ ಈಶ್ವರನ ಮೇಲಿನ ಶ್ರದ್ಧೆಯು ಕಡಿಮೆ ಯಾಗುತ್ತದೆ. ಆದುದರಿಂದ ಅವರಿಗೆ ಮೇಲಿನ ಅನುಮಾನವು ನಿರಂತರವಿರು ತ್ತದೆ. ಹಾಗಾಗಿ ಅವರು ಭಕ್ತಿ ಮಾಡುತ್ತಿ ದ್ದರೂ ಅವರಿಗೆ ಫಲ ದೊರಕುವುದಿಲ್ಲ. ಇದರಿಂದ ಅವನಿಗೆ, ‘ನಿನ್ನ ಪ್ರಾರ್ಥನೆ ಕೇಳಿ ಈಶ್ವರನೇ ಅದನ್ನು ಸೂಚಿಸಿದ್ದಾನೆ ಅಲ್ಲವೇ ? ಈಶ್ವರನ ಮೇಲೆ ಸಂಪೂರ್ಣ ಶ್ರದ್ಧೆಯನ್ನು ಇಟ್ಟು ಕರ್ಮವನ್ನು ಮಾಡು’ ಎಂದು ಹೇಳಬೇಕಾಗುತ್ತದೆ. ಕೆಲವು ಭಕ್ತಿ ಯೋಗಿ ಸಾಧಕರಿಗೆ ಈಶ್ವರನ ಮೇಲೆ ಸಂಪೂರ್ಣ ಶ್ರದ್ಧೆಯಿರುತ್ತದೆ. ‘ತಾವು ಹೇಗೆ ಪ್ರಾರ್ಥನೆ ಮಾಡುತ್ತೇವೆಯೋ, ಅದು ಹಾಗೆ ಖಂಡಿತವಾಗಿ ಆಗುತ್ತದೆ’, ಎಂದು ಅವರಿಗೆ ಅನಿಸುತ್ತದೆ. ಅವರಿಗೆ ಅದರ ಲಾಭವೂ ಆಗುತ್ತದೆ. ಆದರೆ ಅಪೇಕ್ಷಿತವಿರುವಷ್ಟು ಅವರ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ. ಏಕೆಂದರೆ ಅವರು ಕೇವಲ ತಮ್ಮ ಪ್ರಾರ್ಥನೆ ಮೇಲೆ ಅವಲಂಬಿಸಿ ಕರ್ಮ ಮಾಡಲು ಹಿಂಜರಿಯುತ್ತಾರೆ. ಆದುದರಿಂದ ಅವರಿಗೆ, ‘ನಾವು ಪ್ರತ್ಯಕ್ಷ ಈಶ್ವರನ ಸೇವೆ ಮಾಡದೇ ಅವನು ಪ್ರಸನ್ನನಾಗಲಾರನು. ಅದಕ್ಕೋಸ್ಕರ ಕರ್ಮ ಮಾಡಲೂ ಒತ್ತು ನೀಡು’ ಎಂದು ಹೇಳಬೇಕು. ಈ ರೀತಿ ಕರ್ಮಯೋಗಿಗೆ ಭಕ್ತಿಯೋಗ ಮತ್ತು ಭಕ್ತಿಯೋಗಿಗೆ ಕರ್ಮ ಯೋಗ ಪೂರಕವಾಗಿದೆ’. - ಶ್ರೀ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಕಾರ್ತಿಕ ಶು. ೬, ಕಲಿಯುಗ ವರ್ಷ ೫೧೧೨ (೧೨.೧೧.೨೦೧೦))
No comments:
Post a Comment