ಸಾಧಕರೇ, ದೇವತೆಗಳ ಚಿತ್ರವನ್ನು ದೇಹದ ಮೇಲೆ ಹಚ್ಚುವ ಉಪಾಯವೆಂದರೆ ‘ನಾವು ಶಸ್ತ್ರಾಸ್ತ್ರಗಳ
ಸಹಿತಯುದ್ಧಕ್ಕೆ ಹೋಗುತ್ತಿದ್ದೇವೆ’, ಎಂಬ ಭಾವವಿಡಬೇಕು!
‘ಸಾಧಕರು ಮಾಡುತ್ತಿರುವ ಚೈತನ್ಯ ಮಯ ಸೇವೆಯು ಒಂದು ರೀತಿಯ ಯುದ್ಧವೇ ಆಗಿದೆ. ಏಕೆಂದರೆ ಈ ಮಾಧ್ಯಮದಿಂದ ಸಾಧಕರು ತಮ್ಮ ಮತ್ತು ವಾಯುಮಂಡಲದ ಶುದ್ಧಿ ಮಾಡುತ್ತಾರೆ ಹಾಗೂ ಸೇವೆಯಿಂದ ಸಾಧಕರ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿ ಸುವ ಕ್ಷಮತೆಯು ಹೆಚ್ಚಾಗುತ್ತದೆ. ಆ ಚೈತನ್ಯ ದಿಂದ ಕೆಟ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಕೆಟ್ಟ ಶಕ್ತಿಗಳ ಕಪ್ಪು ಶಕ್ತಿಯು ಬಹಳಷ್ಟು ಪ್ರಮಾಣದಲ್ಲಿ ನಾಶವಾಗಿ ಅವರೂ ನಾಶವಾ ಗುತ್ತಾರೆ. ಅದುದರಿಂದ ಅವರು ಆ ಸಾಧಕ ರಿಗೆ ವಿವಿಧ ರೀತಿಯ ತೊಂದರೆ ನೀಡಿ ಅವರ ಸಾಧನೆ ಮತ್ತು ಸೇವೆಯಲ್ಲಿ ತೊಂದರೆ ನೀಡುತ್ತಾರೆ. ಆದುದರಿಂದ ಯಾವುದೇ ಸೇವೆ ಅಥವಾ ಸತ್ ಬಗೆಗಿನ ಕೃತಿಯು ಕೆಟ್ಟ ಶಕ್ತಿಗಳ ವಿರುದ್ಧದ ಯುದ್ಧವಾಗಿರುತ್ತದೆ.
ಯುದ್ಧಕ್ಕಾಗಿ ರಣಭೂಮಿಗೆ ಹೋಗುವಾಗ ವೀರ ಮತ್ತು ವೀರಾಂಗನೆಯರು ಪ್ರತಿಸಲ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡೇ ಹೋಗುತ್ತಾರೆ. ನಿಜವಾದ ಯೋಧರು ಶಸ್ತ್ರಗಳನ್ನು ಒಯ್ಯದೇ ಯುದ್ಧ ಭೂಮಿಯಲ್ಲಿ ಹೋಗುವ ವಿಚಾರ ವನ್ನು ಮಾಡುವುದಿಲ್ಲ. ಏಕೆಂದರೆ ಹೀಗೆ ಮಾಡುವುದು ತನ್ನ ಪ್ರಾಣವನ್ನು ಕಳೆದುಕೊಳ್ಳು ವಂತಾಗಿದೆ. ಅದಕ್ಕಾಗಿ ಸಾಧಕರು ಪ.ಪೂ. ಡಾಕ್ಟರರು ಹೇಳಿದಂತೆ ಎಲ್ಲರಿಗಾಗಿರುವ ಉಪಾಯವನ್ನು ನಿರಂತರ ಮಾಡುವುದು ಆವ ಶ್ಯಕವಾಗಿದೆ. ಅದರಂತೆ ದೇವತೆಗಳ ಚಿತ್ರಗ ಳನ್ನು ದೇಹದ ಮೇಲೆ ಹಚ್ಚುವುದರಿಂದ ಸಾಧನೆಯಲ್ಲಿನ ಅಡಚಣೆಗಳು ಸ್ವಪ್ರಯತ್ನ ವಿಲ್ಲದೇ ದೂರವಾಗಿ ನಮ್ಮ ರಕ್ಷಣೆಯೂ ಆಗುತ್ತದೆ. ಆದುದರಿಂದ ಸಾಧಕರು ಪ್ರತಿದಿನ ದೇವತೆಗಳ ಚಿತ್ರಗಳನ್ನು ವಿವಿಧ ಚಕ್ರಗಳ ಮೇಲೆ ಹಚ್ಚಲು ಪ್ರಾಮುಖ್ಯ ಸ್ಥಾನ ನೀಡ ಬೇಕು. ಅದರಲ್ಲಿ ಎಂದಿಗೂ ಮುಂದೂಡುವಿಕೆ ಅಥವಾ ಆಲಸ್ಯ ಮಾಡಬಾರದು, ಇಲ್ಲದಿದ್ದರೆ ನಮ್ಮ ಹಾನಿಗೆ ನಾವೇ ಕಾರಣರಾಗುತ್ತೇವೆ.’ - ಸೌ. ರಾಜಶ್ರೀ ಖೊಲ್ಲಂ (ಕಾರ್ತಿಕ ಶುಕ್ಲ ಅಷ್ಟಮಿ, ಕಲಿಯುಗ ವರ್ಷ ೫೧೧೨ (೧೪.೧೧.೨೦೧೦))
No comments:
Post a Comment