ಸಾಧಕರೇ, ಸನಾತನದ ಸಂತರನ್ನು ಮಹಾರಾಜಗಿರಿಯಲ್ಲಿ ಸಿಲುಕಿಸಬೇಡಿ!

ಶ್ರೀ. ರಾಜೇಂದ್ರ ಶಿಂದೆಯವರು ಸಂತ ರಾದ ನಂತರ ಅವರೊಂದಿಗೆ ಸಾಧಕರ ವರ್ತನೆಯು ಬದಲಾಯಿತು. ಅವರು ಬರುವಲ್ಲಿ ಹೊರಗಿನ ಸಂತರು ಬಂದಾಗ ರಂಗೋಲಿ ಬಿಡಿಸುವಂತೆ ರಂಗೋಲಿ ಬಿಡಿಸುವುದು, ಬಾಗಿಲಿಗೆ ಹೂವಿನ ಹಾರ ಹಾಕುವುದು, ಅವರು ಕುಳಿತುಕೊಳ್ಳುವ ಖುರ್ಚಿಯ ಎದುರು ಕಾಲಿಡಲು ಬಟ್ಟೆ ಇಡುವುದು, ಅವರ ಪಾದಪೂಜೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸುವುದು, ಹೀಗೆ ಸಾಧಕರು ವರ್ತಿಸಲು ಪ್ರಾರಂಭಿಸಿದ್ದಾರೆ. ಹೀಗೆ ವರ್ತಿಸಿದರೆ ಸಾಧಕರಿಗೆ ಮತ್ತು ಸಂತರಿಗೆ ಮುಂದಿನಂತೆ ಹಾನಿಯಾಗುವುದು.
೧. ಸಾಧಕರಿಗಾಗಿ ಆಗುವ ಹಾನಿ
ಅ. ಸಂತರೊಂದಿಗೆ ಅಂತರವಿಟ್ಟು ಮಾತನಾಡುವುದರಿಂದ ಆತ್ಮೀಯತೆ ನಿರ್ಮಾಣವಾಗುವುದಿಲ್ಲ.
ಆ. ಸಂತರು ‘ನನ್ನ ಬಟ್ಟೆ, ಊಟದ ತಟ್ಟೆ-ಲೋಟ ಇತ್ಯಾದಿ ತೊಳೆಯ ಬಾರದು’, ಎಂದು ಹೇಳಿದರೂ ಒತ್ತಾಯ ದಿಂದ ತೊಳೆಯುವುದರಿಂದ ಸಾಧಕರಿಂದ ಆಜ್ಞಾಪಾಲನೆಯಾಗುವುದಿಲ್ಲ.
೨. ಸಂತರಿಗೆ ಆಗುವ ಹಾನಿ
ಅ. ಕೆಲವು ಕಾಲದಲ್ಲಿಯೇ ಸಂತರಲ್ಲಿ ಅಹಂಭಾವ ನಿರ್ಮಾಣವಾಗಿ ಅವರ ಮಟ್ಟ ಕಡಿಮೆಯಾಗುವ ಸಾಧ್ಯತೆಯಿದೆ.
ಆ. ಅವರಿಗೆ ಸಹಜಾವಸ್ಥೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ.
ಮೇಲಿನಂತೆ ಸಂತರೊಂದಿಗೆ ಮಾನಸಿಕ ಸ್ತರದಲ್ಲಿರುವುದಕ್ಕಿಂತ ಆಧ್ಯಾತ್ಮಿಕ ಸ್ತರದಲ್ಲಿ ಅವರ ಲಾಭವನ್ನು ಪಡೆಯುವುದು ಅಪೇಕ್ಷಿತವಾಗಿದೆ. ಬರುವ ೧-೨ ವರ್ಷ ಗಳಲ್ಲಿ ಸನಾತನದ ೮-೧೦ ಸಾಧಕ ರಾದರೂ ಸಂತರಾಗುವರು. ಅವರ ಬಗ್ಗೆಯೂ ಈ ಅಂಶಗಳನ್ನು ಗಮನದಲ್ಲಿಡ ಬೇಕು. - ಡಾ. ಆಠವಲೆ (ಕಾರ್ತಿಕ ಶುಕ್ಲ ೧೦, ಕಲಿಯುಗ ವರ್ಷ ೫೧೧೨ (೧೬.೧೧.೨೦೧೦))

No comments:

Post a Comment