ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ..

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ ಉಪಚಾರಗಳಲ್ಲಿ ೯. ಗಂಧವನ್ನು ಹಚ್ಚುವುದು, ೧೦. ಹೂವುಗಳನ್ನು ಅರ್ಪಿಸುವುದು, ೧೧. ಧೂಪವನ್ನು ತೋರಿಸುವುದು, ೧೨. ದೀಪವನ್ನು ಬೆಳಗುವುದು, ೧೩. ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ.

ಪಂಚೋಪಚಾರ ಮತ್ತು ಷೋಡಶೋಪ ಚಾರ ಪೂಜೆಯ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳುವ ಮೊದಲು ಸಂಕ್ಷಿಪ್ತವಾಗಿ ದೇವರ ಪೂಜೆಯ ಸಾಮಾನ್ಯ ಮಾಹಿತಿ ಯನ್ನು ತಿಳಿದುಕೊಳ್ಳೋಣ. ಇದರ ಅಂತರ್ಗತ ದೇವರ ಪೂಜೆಯ ಮಹತ್ವ, ವಿಧಗಳು, ಎಷ್ಟು ಸಲ ದೇವರ ಪೂಜೆ ಮಾಡಬೇಕು, ಯಾವ ಸಮಯದಲ್ಲಿ ಮಾಡಬೇಕು, ದೇವರ ಪೂಜೆಯನ್ನು ಯಾವಾಗ ಮಾಡಬಾರದು, ಯಾವ ದಿಕ್ಕಿನಲ್ಲಿ ಮಾಡಬೇಕು, ಪೂಜೆಯನ್ನು ಯಾರು ಮಾಡಬೇಕು ಮುಂತಾದ ಮಾಹಿತಿ ಯನ್ನು ತಿಳಿದುಕೊಳ್ಳೋಣ.
ದೇವರ ಪೂಜೆಯ ಸಾಮಾನ್ಯ ಮಾಹಿತಿ
೧. ವ್ಯಾಖ್ಯೆ
ದೇವತೆಗಳಿಗೆ ಶ್ರದ್ಧಾಯುಕ್ತ ಅಂತಃಕರ ಣದಿಂದ ವಿಧಿವತ್ತಾಗಿ (ಧರ್ಮಶಾಸ್ತ್ರವು ಹೇಳಿದ ನಿಯಮಗಳಿಗನುಸಾರ) ಉಪಚಾರ ಗಳನ್ನು ಮಾಡುವ ಕೃತಿಗೆ ‘ದೇವರ ಪೂಜೆ’ ಎನ್ನುತ್ತಾರೆ. ದೇವತೆಗಳ ಪ್ರತಿಮೆ ಅಥವಾ ಮೂರ್ತಿಗಳಿಗೆ ಶಾಸ್ತ್ರೋಕ್ತ ಪದ್ಧತಿಯಿಂದ ಅವರಿಗೆ ಅಪೇಕ್ಷಿತವಿರುವ ರೀತಿಯಲ್ಲಿ ಮಾಡಿದ ಪೂಜೆಯೇ ನಿಜವಾದ ಅರ್ಥದಲ್ಲಿ ‘ಪೂಜೆ’ಯಾಗುತ್ತದೆ. - ಈಶ್ವರ (ಕು. ಮಧುರಾ ಭೋಸಲೆಯವರ ಮಾಧ್ಯಮ ದಿಂದ, ೫.೧.೨೦೦೫, ರಾತ್ರಿ ೮.೧೩)
೨. ನಿರ್ಮಿತಿ
೨ ಅ. ಪೂಜೆಯ ವಿಧಿಗೆ ಸಂಬಂಧಿತ ಸಿದ ಕೃತಿಗಳು ಬ್ರಹ್ಮಾಂಡದಲ್ಲಿನ ಇಚ್ಛಾ ಶಕ್ತಿಯ ಸಹಾಯದಿಂದ ನಿರ್ಮಿತಿ ಯಾಗಿವೆ : ಪೂಜೆಯನ್ನು ಮಾಡುವುದು, ನೈವೇದ್ಯ ವನ್ನು ಅರ್ಪಿಸುವುದು ಮುಂತಾದ ಕರ್ಮ ಕಾಂಡಕ್ಕೆ ಸಂಬಂಧಿಸಿದ ಕೃತಿಗಳು ಬ್ರಹ್ಮಾಂಡದಲ್ಲಿನ ಇಚ್ಛಾಶಕ್ತಿಗೆ ಸಂಬಂಧಿಸಿರು ತ್ತವೆ. ಜೀವಕ್ಕೆ ಅದರ ಭಾವಕ್ಕನುಸಾರ ಆಯಾಯ ಕೃತಿಗಳಿಂದ ಆಯಾಯ ದೇವತೆಯ ಇಚ್ಛಾ ಶಕ್ತಿಗೆ ಸಂಬಂಧಿಸಿದ ಲಹರಿಗಳು ಸಿಗುತ್ತವೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧೨. ೨೦೦೮, ಬೆಳಗ್ಗೆ ೮.೩೫)
೩. ಮಹತ್ವ
೩ ಅ. ಮೂರ್ತಿಯ ಆಕಾರದಿಂದ ಅದರಲ್ಲಿ ತತ್ತ್ವವು ಬರುತ್ತದೆ ಮತ್ತು ಅದಕ್ಕೆ ಮಾಡಿದ ಪೂಜಾದಿ ಸಂಸ್ಕಾರಗಳಿಂದ ಅದರಲ್ಲಿನ ತತ್ತ್ವವು ಜಾಗೃತವಾಗುತ್ತದೆ, ಅಲ್ಲದೇ ನಾವು ಮಾಡುವ ಸಂಸ್ಕಾರಗಳಲ್ಲಿ ಭಾವವಿದ್ದರೆ ಅಂದರೆ ಪೂಜೆಯ ಕೃತಿಗಳನ್ನು ಭಾವಪೂರ್ಣವಾಗಿ ಮಾಡಿದರೆ ಮೂರ್ತಿ ಯಲ್ಲಿನ ತತ್ತ್ವವು ಇನ್ನೂ ಹೆಚ್ಚಾಗುತ್ತದೆ.
೩ ಆ. ದೇವತೆಗಳ ಕೃಪೆಯಾಗುತ್ತದೆ : ದೇವತೆಗಳ ಪೂಜೆಯನ್ನು ಮಾಡುವು ದರಿಂದ, ದೇವತೆಗಳು ಪ್ರಸನ್ನರಾಗಿ ಪೂಜಕ ನಿಗೆ ಕೃಪಾಶೀರ್ವಾದವನ್ನು ಮಾಡುತ್ತಾರೆ.
೩ ಇ. ಪೂಜಕನಲ್ಲಿರುವ ಚೈತನ್ಯವು ಹೆಚ್ಚಾಗುತ್ತದೆ : ದೇವತೆಗಳ ಪೂಜೆಯಿಂದ ಪೂಜಕನು ದೇವತೆಗಳ ತತ್ತ್ವವನ್ನು ಸೆಳೆದು ಕೊಳ್ಳುವುದರಿಂದ ಅವನಲ್ಲಿರುವ ರಜ-ತಮ ಗಳ ಪ್ರಮಾಣವು ಕಡಿಮೆಯಾಗಿ ಚೈತನ್ಯವು ಹೆಚ್ಚಾಗಲು ಸಹಾಯವಾಗುತ್ತದೆ.
೩ ಈ. ದಿನವಿಡೀ ಮಾಡಬೇಕಾದ ಕಾರ್ಯಗಳು ದೇವತೆಗಳ ಪೂಜೆಯಿಂದ ಸಿಗುವ ಸಾತ್ತ್ವಿಕ ಲಹರಿಗಳಿಂದ ಪ್ರಾರಂಭ ವಾಗುತ್ತವೆ : ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೧೦.೨೦೦೭, ಬೆಳಗ್ಗೆ ೯.೪೬)
೩ ಉ. ವಾತಾವರಣವು ಶುದ್ಧವಾಗು ತ್ತದೆ : ದೇವತೆಗಳ ಪೂಜೆಯಿಂದ ವಾತಾ ವರಣದಲ್ಲಿನ ಸಾತ್ತ್ವಿಕತೆಯು ಹೆಚ್ಚಾಗಿ ವಾತಾ ವರಣವು ಶುದ್ಧವಾಗುತ್ತದೆ.
೪. ವಿಧಗಳು
ಧರ್ಮಶಾಸ್ತ್ರದಲ್ಲಿ ದೇವರ ಪೂಜೆಯನ್ನು ಮಾಡುವ ಮುಂದಿನ ೪ ಪದ್ಧತಿಗಳನ್ನು ಹೇಳಲಾಗಿದೆ. ಮೊದಲನೆಯ ಎರಡು ಪದ್ಧತಿಗಳು ಸಾಮಾನ್ಯವಾಗಿ ನಾವು ಯಾವುದಕ್ಕೆ ದೇವರ ಪೂಜೆಯೆಂದು ಹೇಳುತ್ತೇವೆಯೋ ಅಂತಹ ಸ್ಥೂಲದಲ್ಲಿನ ದೇವರ ಪೂಜೆಯಾಗಿವೆ. ಅನಂತರದ ಎರಡು ಪದ್ಧತಿಗಳು ಸೂಕ್ಷ ದಲ್ಲಿನ ದೇವರ ಪೂಜೆಯಾಗಿವೆ.
೪ ಅ. ಪಂಚೋಪಚಾರ ಪೂಜೆ (ಮೂರ್ತಿ ಅಥವಾ ಚಿತ್ರಗಳ ಪೂಜೆ) : ಗಂಧ, ಹೂವು, ಧೂಪ, ದೀಪ ಮತ್ತು ನೈವೇದ್ಯ ಎಂಬ ಐದು ಉಪಚಾರಗಳನ್ನು ದೇವರಿಗೆ ಅರ್ಪಿಸುವುದು.
೪ ಆ. ಷೋಡಶೋಪಚಾರ ಪೂಜೆ (ಮೂರ್ತಿ ಅಥವಾ ಚಿತ್ರಗಳ ಪೂಜೆ) : ಇದರಲ್ಲಿ ಮೇಲಿನ ಪಂಚೋಪಚಾರ ಸಹಿತ ಹದಿನಾರು ಉಪಚಾರಗಳನ್ನು ಮಾಡುವುದು.
೪ ಇ. ಮಾನಸಪೂಜೆ : ಮನಸ್ಸಿನಲ್ಲಿ ಸಗುಣ ಮೂರ್ತಿಯನ್ನು ಕಲ್ಪಿಸಿಕೊಂಡು ಮನಸ್ಸಿನಿಂದಲೇ ದೇವರ ಪೂಜೆಯನ್ನು ಮಾಡುವುದು.
೪ ಈ. ಪರಾಪೂಜೆ : ನಿರ್ಗುಣ ಪರಬ್ರಹ್ಮನನ್ನು ಪರಾವಾಣಿಯಿಂದ ಪೂಜಿಸುವುದು.
೫. ಕೆಲವು ದೇವತೆಗಳ ಪೂಜೆಯ ವೈಶಿಷ್ಟ  ಮತ್ತು ಅದರ ಹಿಂದಿನ ಕಾರಣಗಳು
ಪಂಚೋಪಚಾರ ಮತ್ತು ಷೋಡಶೋ ಪಚಾರ ಪೂಜೆಯಿಂದ ದೇವತೆಗಳು ಪ್ರಸನ್ನ ರಾಗುತ್ತಾರೆ. ಹಿಂದೂ ಧರ್ಮದ ಒಂದು ವೈಶಿಷ್ಟ ವೆಂದರೆ, ಕೆಲವು ದೇವತೆಗಳಿಗೆ ವಿಶಿಷ್ಟ ಉಪಾಸನೆಯ ಪದ್ಧತಿಗಳು ಪ್ರಿಯವಾಗಿರುತ್ತವೆ. ಅವುಗಳಿಂದ ಪೂಜೆಯನ್ನು ಮಾಡಿದರೆ ಆ ದೇವತೆಗಳು ಪ್ರಸನ್ನರಾಗುತ್ತಾರೆ. ಹಿಂದೂ ಧರ್ಮದ ಈ ವೈಶಿಷ್ಟ ವನ್ನು ತೋರಿಸುವಂತಹ ಕೆಲವು ದೇವತೆಗಳ ಪೂಜೆಯ ವೈಶಿಷ್ಟ  ಗಳನ್ನು ಕಾರಣಸಹಿತ ಮುಂದೆ ನೀಡಲಾಗಿದೆ. ಅಧ್ಯಾತ್ಮದ ಬಗ್ಗೆ ಇಷ್ಟು ಸವಿಸ್ತಾರವಾದ ಚಿಂತ ನೆಯು ಹಿಂದೂ ಧರ್ಮದಲ್ಲಿ ಮಾತ್ರ ಸಿಗುತ್ತದೆ.
ದೀಪಪ್ರಿಯಃ ಕಾರ್ತವೀರ್ಯೋ ಮಾರ್ತಂಡೋ ನತಿವಲ್ಲಭಃ |
ಸ್ತುತಿಪ್ರಿಯೋ ಮಹಾವಿಷ್ಣುರ್ಗಣೇಶ ಸ್ತರ್ಪಣಪ್ರಿಯಃ ||
ದುರ್ಗಾರ್ಚನಪ್ರಿಯಾ ನೂನಮಭಿಷೇಕ ಪ್ರಿಯಃ ಶಿವಃ |
ತಸ್ಮಾತ್ತೇಷಾಂ ಪ್ರತೋಷಾಯ ವಿದಧ್ಯಾತ್ತತ್ತದಾದರಾತ್ ||
ದೀಪಪ್ರಿಯಃ................. ವಿದಧ್ಯಾತ್ತತ್ತದಾದರಾತ್ ||
- ಮಂತ್ರಮಹೋದಧಿ ೧೭.೧೧೬- ೧೧೭ ಮತ್ತು ನಾರದಪುರಾಣ, ಪೂರ್ವ. ೭೬.೧೧೫-೧೧೬
ಅರ್ಥ : ಕಾರ್ತವೀರ್ಯನಿಗೆ ದೀಪ, ಸೂರ್ಯನಿಗೆ ನಮಸ್ಕಾರ, ಶ್ರೀವಿಷ್ಣುವಿಗೆ ಸ್ತುತಿ, ಶ್ರೀ ಗಣೇಶನಿಗೆ ತರ್ಪಣ, ಶ್ರೀ ದುರ್ಗಾ ದೇವಿಗೆ ಅರ್ಚನೆ ಮತ್ತು ಶಿವನಿಗೆ ಅಭಿಷೇಕವು ಪ್ರಿಯವಾಗಿದೆ. ಆದುದರಿಂದ ಅವರಿಗೆ ಪ್ರಿಯವಾದ ಕಾರ್ಯದಿಂದಲೇ ಅವರನ್ನು ಪ್ರಸನ್ನಗೊಳಿಸಬೇಕು.
ಅ. ಕಾರ್ತವೀರ್ಯ : ಇವನು ಬ್ರಹ್ಮಚಾರಿಯಾಗಿದ್ದಾನೆ. ಬ್ರಹ್ಮಚರ್ಯದ ದೈದೀಪ್ಯಮಾನ ತೇಜದಿಂದ ಅಲಂಕೃತವಾಗಿ ರುವ ದೇವರ ಪೂಜೆಗೆ ದೀಪದ ಆಯೋಜನೆ ಯನ್ನು ಮಾಡಲಾಗಿದೆ.
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪ ಚಾರ ಪೂಜೆಯ ಹಿಂದಿನ ಶಾಸ್ತ್ರ’)
(ಮುಂದುವರಿಯುವುದು)

No comments:

Post a Comment